ಹೀಗೆ ಮಾಡಿದ್ರೆ ಕೈಕಾಲು ಜೋಮು, ನರ ಸೆಳೆತ, ನರ ದೌರ್ಬಲ್ಯ ಇಡೀ ಜನ್ಮದಲ್ಲಿ ಬರಲ್ಲ.!

 

WhatsApp Group Join Now
Telegram Group Join Now

ಕೆಲವರಿಗೆ ಕೈ ಕಾಲು ಜೋಮು ಹಿಡಿಯುತ್ತದೆ. ಈ ರೀತಿ ಜೋಮು ಹಿಡಿದಾಗ ಕೈಕಾಲುಗಳನ್ನು ಚಲನೆ ಮಾಡಲು ಆಗುವುದಿಲ್ಲ, ನಡೆಯುವುದಕ್ಕೂ ಆಗುವುದಿಲ್ಲ. ನೆಲದ ಮೇಲೆ ಕಾಲು ಊರಿದರೂ ಕೂಡ ವಿಪರೀತವಾದ ನೋವಾಗುತ್ತದೆ. ಆರಂಭದಲ್ಲಿ ಕೈ ಕಾಲು ಜೋಮು ಹಿಡಿಯುವುದು ಸ್ವಲ್ಪ ಹೊತ್ತು ಇರುತ್ತದೆ, ನಂತರ ಬಿಟ್ಟು ಹೋಗುತ್ತದೆ.

ಆದರೆ ಪದೇ ಪದೇ ಈ ರೀತಿ ಆಗುತ್ತಿದ್ದರೆ ಇದು ನರದೌರ್ಬಲ್ಯ ಇರಬಹುದು ನರಗಳ ವೀಕ್ನೆಸ್ ಉಂಟಾಗಿ ಕೈಕಾಲುಗಳ ಶಕ್ತಿ ಕುಂದುತ್ತದೆ. ಈ ರೀತಿ ಆಗಬಾರದು ಎಂದರೆ ಆರಂಭದಲ್ಲಿಯೇ ಇದರ ಬಗ್ಗೆ ಎಚ್ಚರ ವಹಿಸಬೇಕು ನಮಗೆ ಯಾಕೆ ಈ ರೀತಿ ಕೈ ಕಾಲು ಜೋಮು ಹಿಡಿಯುತ್ತದೆ ಅಥವಾ ನರಗಳ ಸೆಳೆತ ಇರುತ್ತದೆ ವಿಪರೀತವಾದ ನೋವು ಬರುತ್ತದೆ ಎಂದರೆ ಇದಕ್ಕೆಲ್ಲ ನಮ್ಮ ತಪ್ಪಾದ ದಿನಚರ್ಯದ ಆಚರಣೆಯೇ ಕಾರಣ ಎಂದು ಆಯುರ್ವೇದ ಹೇಳುತ್ತದೆ.

ನಾವು ತಿನ್ನುವ ಆಹಾರದಲ್ಲಿರುವ ಪೋಷಕಾಂಶಗಳು ನಮ್ಮ ದೇಹವನ್ನು ಸೇರಿ ಸರಿಯಾಗಿ ಜೀರ್ಣವಾಗಿ ಆ ಮೂಲಕ ರಕ್ತವನ್ನು ತಲುಪಿ ಇದರಿಂದ ದೇಹದ ಎಲ್ಲಾ ಅಂಗಾಂಗಗಳು, ನರಗಳಿಗೂ ರಕ್ತ ಸಂಚಾರವಾಗಬೇಕು ಈ ಪ್ರಕ್ರಿಯೆ ಸರಾಗವಾಗಿದ್ದಾಗ ದೇಹವು ಬಹಳ ಚೆನ್ನಾಗಿ ಆಕ್ಟಿವ್ ಆಗಿರುತ್ತದೆ ಮತ್ತು ಆರೋಗ್ಯವಾಗಿರುತ್ತದೆ.

ಆದರೆ ಇಂದಿನ ಆಧುನಿಕ ಯುಗದ ಅಬ್ಬರಕ್ಕೆ ಸಿಲುಕಿ ಎಲ್ಲರೂ ತಪ್ಪಾದ ಜೀವನ ಶೈಲಿ ಹಾಗೂ ಅನಾರೋಗ್ಯಕರ ಆಹಾರ ಪದ್ಧತಿ ರೂಢಿಸಿಕೊಂಡಿದ್ದಾರೆ. ಒಂದು ವೇಳೆ ನಾವು ಸೇವಿಸುವ ಆಹಾರದಲ್ಲಿ ಪೌಷ್ಟಿಕಾಂಶದ ಯುಕ್ತ ಆಹಾರ ಇದ್ದರೂ ಅದು ದೇಹವನ್ನು ಸೇರುವುದಕ್ಕೆ ನಾವು ಸರಿಯಾದ ಜೀವನಶೈಲಿ ಅಳವಡಿಸಿಕೊಂಡಿಲ್ಲ.

ತಡವಾಗಿ ಆಹಾರ ಸೇವನೆ ಮಾಡುವುದು, ತಡವಾಗಿ ಮಲಗುವುದು, ತಡವಾಗಿ ಏಳುವುದು, ವ್ಯಾಯಾಮ ಇಲ್ಲದೆ ಇರುವುದು. ಈ ರೀತಿ ಯಾವಾಗ ಯಾವುದೋ ಕೆಲಸ ಮಾಡುವುದರಿಂದ ಪ್ರಕೃತಿಗೆ ದೇಹ ಹೊಂದಿಕೊಳ್ಳದೆ ದೇಹದಲ್ಲಿ ಬಿಡುಗಡೆ ಆಗಬೇಕಾದ ಹಾರ್ಮೋನ್ ಗಳು ಇಂಬ್ಯಾಲೆನ್ಸ್ ಆಗಿ ದೇಹಕ್ಕೆ ವಾತ ಪಿತ್ತ ಕಫ ವಿಕಾರಗಳು ಉಂಟಾಗುತ್ತಿದೆ.

ಇದರಲ್ಲಿ ವಾತ ವಿಕಾರದಿಂದಲೇ ಈ ರೀತಿ ನರಗಳಲ್ಲಿ ಸಮಸ್ಯೆ ಕಂಡು ಬರುತ್ತದೆ. ಹೀಗಾಗಬಾರದು ಎಂದರೆ ನಾವು ಸೂರ್ಯಾಸ್ತದ ಎರಡು ತಾಸುಗಳ ಒಳಗೆ ಊಟ ಮುಗಿಸಬೇಕು, ಊಟ ಆದ ಒಂದೆರಡು ತಾಸಿನ ತಕ್ಷಣ ಮಲಗಬೇಕು, ಬೆಳಗ್ಗೆ ಸೂರ್ಯೋದಯಕ್ಕೂ ಮುಂಚೆ ಏಳಬೇಕು ಎದ್ದ ತಕ್ಷಣ ಬಿಸಿ ನೀರು ಕುಡಿಯಬೇಕು, ಕಾಫಿ ಚಹಾ ತುಂಬಾ ಮಧ್ಯಪಾನ ಇಂತಹ ದುಶ್ಚಟಗಳಿಂದ ದೂರ ಇರಬೇಕು, ಅವೈಜ್ಞಾನಿಕವಾಗಿ ತಯಾರದ ಆಹಾರಗಳನ್ನು ದೂರ ಇಡಬೇಕು.

ಈ ರೀತಿ ಮಾಡುವುದರಿಂದ ಅಜೀರ್ಣತೆ ಹಾಗೂ ಮಲಬದ್ಧತೆ ತಡೆಗಟ್ಟಬಹುದು. ಅಜೀರ್ಣತೆ ಮತ್ತು ಮಲಬದ್ಧತೆ ಇದು ಮನುಷ್ಯನ ಎಲ್ಲಾ ಕಾಯಿಲೆಗಳ ಮೂಲ ಆಗಿದೆ. ಒಂದು ವೇಳೆ ಈಗಾಗಲೇ ನೀವು ಇಂತಹ ಸಮಸ್ಯೆ ಇಂದ ಬಳಸುತ್ತಿದ್ದರೆ ಇನ್ನು ಮುಂದೆ ನಿಮ್ಮ ತಪ್ಪನ್ನು ತಿದ್ದುಕೊಳ್ಳಿ ಮತ್ತು ಈಗ ನಾವು ಹೇಳುವ ಈ ಎರಡು ಮನೆಮದ್ದುಗಳು ನಿಮಗೆ ಈ ಪ್ರಕ್ರಿಯೆಯಲ್ಲಿ ಅನುಕೂಲವಾಗಲಿವೆ.

* ನಿಮಗೆ ಕೈ ಕಾಲು ಜೋಮು ಹಿಡಿಯುವುದು, ವಿಪರೀತವಾಗಿ ಅದರಿಂದ ನೋವು ಕೊಡುತ್ತಿದ್ದರೆ ಅತಿಬಲ ಸೊಪ್ಪು ಅಮೃತ ಬಳ್ಳಿ ಸೊಪ್ಪು ಎರಡನ್ನು ಚೆನ್ನಾಗಿ ಪೇಸ್ಟ್ ಮಾಡಿ ಎಳ್ಳೆಣ್ಣೆ ಜೊತೆ ಬಿಸಿ ಮಾಡಿ ಬಿಸಿ ಮಾಡುವಾಗ ಒಂದು ಬೆಳ್ಳುಳ್ಳಿಯನ್ನು ಕೂಡ ಜಜ್ಜಿ ಅದಕ್ಕೆ ಹಾಕಿ ಬಿಸಿ ಮಾಡಿ ಚೆನ್ನಾಗಿ ಕೈಕಾಲುಗಳಿಗೆ ಮಸಾಜ್ ಮಾಡಬೇಕು.

ರಾತ್ರಿ ಪೂರ್ತಿ ಹಾಗೇ ಬಿಟ್ಟು ಬೆಳಗ್ಗೆ ಎದ್ದು ಬಿಸಿ ನೀರನ್ನು ಕಾಯಿಸಿ ಅದಕ್ಕೆ ಒಂದು ಹಿಡಿ ಸೈಂಧವ ಲವಣವನ್ನು ಹಾಕಿ ಅದರೊಳಗೆ ಜೋಮು ಹಿಡಿಯುವ ಕೈ ಅಥವಾ ಕಾಲನ್ನು ಹಾಕಬೇಕು ನಿಯಮಿತವಾಗಿ ಈ ರೀತಿ ಮಾಡುತ್ತಾ ಬಂದರೆ ಸಂಪೂರ್ಣವಾಗಿ ಸಮಸ್ಯೆ ಪರಿಹಾರ ಆಗುತ್ತದೆ.

* ಅಜೀರ್ಣ ಹಾಗೂ ಮಲಬದ್ಧತೆ ಗುಣವಾಗಲು ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಬೆಟ್ಟದ ನೆಲ್ಲಿಕಾಯಿ ಜ್ಯೂಸ್ ಕುಡಿಯಬೇಕು
* ಎರಡು ಚಮಚ ನಿಂಬೆರಸಕ್ಕೆ, ಆರು ಚಿಟಿಕೆ ಸೈಂಧವ ಲವಣ, ಮೂರು ಚಿಟಿಕೆ ಇಂಗು ಸೇರಿಸಿ ಊಟ ತಿನ್ನುವ ಒಂದು ತಾಸಿನ ಮೊದಲು ತಿನ್ನುವುದರಿಂದ ಕೂಡ ಅಜೀರ್ಣ ಮಲಬದ್ಧತೆ ಗುಣವಾಗುತ್ತದೆ. ಈ ಮನೆ ಮದ್ದುಗಳಿಂದ ಸಮಸ್ಯೆ ಗುಣವಾಗದೆ ಇದ್ದರೆ ಹತ್ತಿರದಲ್ಲಿರುವ ಆಯುರ್ವೇದ ಕೇಂದ್ರಕ್ಕೆ ಹೋಗಿ ಪಂಚಕರ್ಮ ಚಿಕಿತ್ಸೆ ತೆಗೆದುಕೊಳ್ಳಬೇಕು.

https://youtu.be/tqjS0EUpS0E?si=-84U5S8T5ajd5bk9

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now