ಪ್ರತಿಯೊಬ್ಬರಿಗೂ ಕೂಡ ತಮಗೂ ಸ್ವಂತ ಮನೆ ಕಟ್ಟಿಸಬೇಕು ಎನ್ನುವ ಆಸೆ ಇರುತ್ತದೆ. ಇದಕ್ಕಾಗಿ ಅವರು ಬಹಳ ಕಷ್ಟಪಟ್ಟು ಹಣ ಕೂಡಿರುತ್ತಾರೆ. ಕೆಲವರಿಗೆ ಸ್ವಂತ ಜಾಗ ಕೂಡ ಇರುವುದಿಲ್ಲ, ಜಾಗವನ್ನು ಖರೀದಿಸಿ ನಂತರ ಮನೆ ಕಟ್ಟುವ ಆಸೆ ಪಡುತ್ತಾರೆ. ಈ ರೀತಿ ಜಾಗ ಖರೀದಿಸಿದ ಮೇಲೆ ಮನೆ ಕಟ್ಟಿಸಲು ಆಗುತ್ತಿಲ್ಲ ಸಮಸ್ಯೆ ಆಗುತ್ತಿದೆ ಎಂದರೆ ಅಥವಾ ಎಲ್ಲಾ ಅನುಕೂಲತೆ ಇದ್ದರೂ ಕೂಡ ಮನೆ ಕಟ್ಟಿಸುವ ಕಾರ್ಯ ಮುಂದೆ ಮುಂದೆ ಹೋಗುತ್ತಿದೆ ಎಂದು ಅನಿಸುತ್ತಿದ್ದರೆ.
ಇದಕ್ಕೆ ದೃಷ್ಟಿ ದೋಷ ಕಾರಣ ಇರಬಹುದು, ಕೆಲವೊಮ್ಮೆ ಆ ಜಾಗದಲ್ಲಿರುವ ದೋಷ ಎಂದು ಕೂಡ ಹೇಳುತ್ತಾರೆ. ನಿಮಗೂ ಕೂಡ ಈ ರೀತಿ ಸಮಸ್ಯೆ ಆಗಿದ್ದರೆ ಈಗ ನಾವು ಹೇಳುವ ವಿಧಾನಗಳನ್ನು ಪಾಲಿಸಿ, ಕೆಲವೇ ದಿನಗಳಲ್ಲಿ ನಿಮ್ಮ ಮನೆ ಕಟ್ಟುವ ಕನಸು ನನಸಾಗುತ್ತದೆ. ಈಗಾಗಲೇ ಸೈಟ್ ಖರೀದಿಸಿದ್ದೀರಿ ಅದರಲ್ಲಿ ಮನೆ ಕಟ್ಟಿಸಬೇಕು ಅಥವಾ ಮನೆ ಕಟ್ಟುವ ಕಾರ್ಯ ಆರಂಭ ಆಗಿದೆ ಆದರೆ ಅದು ಸ್ಥಗಿತಗೊಂಡಿದೆ ಎಂದರೆ ಅದನ್ನು ನೀವು ಹಾಗೆ ಬಿಟ್ಟು ಬಿಡಬಾರದು.
ಅಕ್ಟೋಬರ್ ನಿಂದ ಇಂತಹ ವಾಹನಗಳು ಸೀಜ್, ಕೇಂದ್ರ ಸರ್ಕಾರದಿಂದ ಮಹತ್ವದ ಘೋಷಣೆ.!
ನಿಮಗೂ ಹಾಗೂ ಆ ಜಾಗಕ್ಕೂ ಇರುವ ಬಾಂಧವ್ಯ ಗಟ್ಟಿಗೊಳ್ಳಬೇಕು ಎಂದರೆ ನೀವು ಬಿಡುವು ಮಾಡಿಕೊಂಡು ಆ ಸ್ಥಳಕ್ಕೆ ಪದೇಪದೇ ಹೋಗುತ್ತಿರಬೇಕು. ಈ ರೀತಿ ಹೋದಾಗಲೆಲ್ಲ ನಾಲ್ಕು ಮೂಲೆಗೂ ಕೂಡ ದೃಷ್ಟಿ ದೋಷ ನಿವಾರಣೆ ಆಗಲಿ ಎಂದು ನಿವಾಳಿಸಿ ಬಿಳಿ ಸಾಸಿವೆಯನ್ನು ಹಾಕಬೇಕು.
ಈ ರೀತಿ ಹೋಗುವಾಗ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿ ನಿಮ್ಮ ಕಷ್ಟವನ್ನು ಹೇಳಿಕೊಂಡು ಅಲ್ಲಿ ಹೂವು, ಅಕ್ಷತೆ ಅಥವಾ ತೀರ್ಥ ಈ ರೀತಿ ಪ್ರಸಾದವನ್ನು ಪಡೆದು ಅದನ್ನು ತೆಗೆದುಕೊಂಡು ಹೋಗಿ ನಿಮ್ಮ ಸೈಟ್ ಅಥವಾ ಕನ್ಸ್ಟ್ರಕ್ಷನ್ ಅರ್ಧಕ್ಕೆ ನಿಂತಿರುವ ಮನೆಗೆ ಹಾಕಿ ಬರುವುದರಿಂದ ಬಹಳ ಬೇಗ ದೋಷಗಳು ನಿವಾರಣೆಯಾಗಿ ನಿಮ್ಮ ಕಾರ್ಯ ಚುರುಕುಗೊಳ್ಳುತ್ತದೆ.
ತೆರಿಗೆ ಕಟ್ಟುವವರಿಗೆ ಅಕ್ಟೋಬರ್ ನಿಂದ ಹೊಸ ರೂಲ್ಸ್ ಜಾರಿ.!
ನೀವು ನಿಮ್ಮ ಮನೆಯಲ್ಲಿ ಪೂಜೆ ಮಾಡಿರುವ ಹೂವು ಅಕ್ಷತೆ ಇವುಗಳನ್ನು ಕೂಡ ತೆಗೆದುಕೊಂಡು ಹೋಗಿ ನಿಮ್ಮ ಸೈಟ್ ಅಥವಾ ಮನೆಗಳಿಗೆ ಹಾಕಬಹುದು, ಇದರಿಂದ ಕೂಡ ದೇವರ ಆಶೀರ್ವಾದ ಸಿಗುತ್ತದೆ, ನಿಮ್ಮ ಕಾರ್ಯ ಬೇಗ ಪೂರ್ತಿಯಾಗುತ್ತದೆ. ಈ ರೀತಿಯ ಪರಿಹಾರಗಳನ್ನು ಮಾಡಿ ಎರಡು ತಿಂಗಳ ಒಳಗೆ ಮನೆ ಕಟ್ಟಿಕೊಂಡಿರುವ ಉದಾಹರಣೆಗಳು ಕೂಡ ಇದೆ. ಇದಕ್ಕೆ ಹೆಚ್ಚೇನು ಖರ್ಚಾಗುವುದಿಲ್ಲ ಭಗವಂತನ ಮೇಲೆ ಅಗಾಧವಾದ ನಂಬಿಕೆ ಇಟ್ಟು ಇದನ್ನು ಮಾಡಿ ಸಾಕು.
ಇಂತಹ ಭೂಮಿಗೆ ಸಂಬಂಧಪಟ್ಟ ಆಸ್ತಿಗೆ ಸಂಬಂಧಪಟ್ಟ ದೋಷಗಳಿಗೆ ಹೆಚ್ಚಿನವರು ಭೂ ವರಹನಾಥ ಸ್ವಾಮಿ ದೇವಸ್ಥಾನಕ್ಕೆ ಭೇಟಿ ಕೊಡುತ್ತಾರೆ. ಭೂವರಹ ಸ್ವಾಮಿ ದೇವಸ್ಥಾನದ ವಿಶೇಷತೆ ಏನೆಂದರೆ ಗಂಡ ಹೆಂಡತಿ ಇಬ್ಬರೂ ಕೂಡ ಹೋಗಿ ಇಲ್ಲಿ ಪೂಜೆ ಮಾಡಿಸಬೇಕು, ಒಂದು ವೇಳೆ ಒಟ್ಟಿಗೆ ಹೋಗಲು ಆಗದೆ ಇದ್ದರೆ ಸೈಟ್ ಯಾರ ಹೆಸರಿನಲ್ಲಿ ಇದೆ ಅವರು ಹೋಗಿ ಪೂಜೆ ಮಾಡಿಸಬೇಕು.
ಇನ್ಮುಂದೆ ಈ ಮೊತ್ತಕ್ಕಿಂತ ಹೆಚ್ಚು ನಗದು ಹಣದ ವ್ಯವಹಾರ ಮಾಡುವಂತಿಲ್ಲ RBI ಎಚ್ಚರಿಕೆ.!
ಸೈಟ್ ಖರೀದಿ ಮಾಡಬೇಕು ಎಂದರೆ ಮಣ್ಣನ್ನು ತೆಗೆದುಕೊಂಡು ಹೋಗಿ ಪೂಜೆ ಮಾಡಿಸಿಕೊಂಡು ಬರಬೇಕು, ಅಥವಾ ಮನೆ ಕಟ್ಟಬೇಕು ಎಂದರೆ ಇಟ್ಟಿಗೆಯನ್ನು ತೆಗೆದುಕೊಂಡು ಪೂಜೆ ಮಾಡಿಸಿಕೊಂಡು ಮನೆಗೆ ತಂದು 48 ದಿನಗಳವರೆಗೆ ಪ್ರತಿದಿನವೂ ಕೂಡ ಅದಕ್ಕೆ ಅಲ್ಲಿ ತಿಳಿಸುವ ಪ್ರಕಾರ ಪೂಜೆ ಮಾಡಬೇಕು ಮತ್ತು 12 ಬಾರಿ ಭೂವರಹ ಸ್ವಾಮಿಯ ಮಂತ್ರವನ್ನು ಜಪಿಸಿ ಪೂಜೆ ಮಾಡಬೇಕು, ಹೀಗೆ ಮಾಡುವುದರಿಂದ ಬಹಳ ಬೇಗ ನಿಮ್ಮ ಮನೆ ಕಟ್ಟುವ ಕನಸು ನನಸಾಗುತ್ತದೆ.