ಭಾರತ ದೇಶದ ನಾಗರಿಕರ ವಿದೇಶದಲ್ಲಿ ವಿದ್ಯಾಭ್ಯಾಸದ ಕಾರಣಕ್ಕಾಗಿ ಅಥವಾ ವಿದೇಶಿ ಪ್ರಯಾಣ ಮಾಡುವ ಕಾರಣದಿಂದ ಅಥವಾ ವಿದೇಶದ ಯಾವುದೇ ಕಂಪನಿ ಮೇಲೆ ಮ್ಯೂಚುವಲ್ ಫಂಡ್, ಸ್ಟಾಕ್ ಇನ್ಯಾವುದೇ ರೀತಿಯ ಹೂಡಿಕೆ ಮಾಡಲು ಇಚ್ಛಿಸುವ ಕಾರಣದಿಂದಾಗಿ ನಮ್ಮ ದೇಶದಿಂದ ಹಣವನ್ನು ವಿದೇಶಕ್ಕೆ ಕಳುಹಿಸಿದರೆ ಅದರ ಮೇಲೆ ತೆರಿಗೆ ಬೀಳುತ್ತದೆ ಇದನ್ನು TCS ಎಂದು ಕರೆಯಲಾಗುತ್ತದೆ.
ಇದು ಪ್ರತಿ ವರ್ಷದ ಆರಂಭದಲ್ಲಿ ಅಥವಾ ಮಧ್ಯಂತರದಲ್ಲಿ ಬದಲಾವಣೆ ಆಗುತ್ತಿರುತ್ತದೆ. ಈಗ ಸದ್ಯಕ್ಕೆ ದೇಶದಲ್ಲಿ ಮತ್ತೊಮ್ಮೆ TCS ದರ ಬದಲಾಗಿದ್ದು, ಅಕ್ಟೋಬರ್ 1 ರಿಂದಲೇ ಹೊಸ ದರ ಜಾರಿಗೆ ಬರುತ್ತದೆ ಎನ್ನುವುದನ್ನು ಆದಾಯ ತೆರಿಗೆ ಇಲಾಖೆ ತಿಳಿಸಿದೆ. RBI ನ ಉದಾರಿಕೃತ ರವಾನೆ ಯೋಜನೆ (LRS ) ಮಿತಿ ಬಗ್ಗೆಆಗೂ ಅದಕ್ಕಿಂತ ಹೆಚ್ಚಿನ ರವಾನೆಗೆ ಎಷ್ಟು ಟ್ಯಾಕ್ಸ್ ಬೀಳುತ್ತದೆ ಎನ್ನುವುದರ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
ಇನ್ಮುಂದೆ ಈ ಮೊತ್ತಕ್ಕಿಂತ ಹೆಚ್ಚು ನಗದು ಹಣದ ವ್ಯವಹಾರ ಮಾಡುವಂತಿಲ್ಲ RBI ಎಚ್ಚರಿಕೆ.!
● ಈಗಿರುವ ನಿಯಮದಂತೆ RBI ನ ಉದಾರೀಕೃತ ರವಾನೆ ಯೋಜನೆ (LRS) ಅಡಿಯಲ್ಲಿ ಒಬ್ಬ ಭಾರತದ ಪ್ರಜೆ ಒಂದು ಆರ್ಥಿಕ ವರ್ಷದಲ್ಲಿ $ 250,000 ಮೊತ್ತವನ್ನು ವಿದೇಶಕ್ಕೆ ಕಳುಹಿಸಬಹುದು. ಆದರೆ ಈ ಮಿತಿಗಿಂತಲೂ ದೊಡ್ಡ ಮೊತ್ತವನ್ನು ಖರ್ಚು ಮಾಡಿದರೆ, ಅದರ ಮೇಲೆ TCS ಅನ್ವಯವಾಗುತ್ತದೆ. ಅಂತರರಾಷ್ಟ್ರೀಯ ಕ್ರೆಡಿಟ್ ಕಾರ್ಡ್ಗಳನ್ನು ಬಳಸುವವರಿಗೆ TCS ಗೆ ಶುಲ್ಕ ಆಪ್ಲೈ ಆಗುವುದಿಲ್ಲ. ಹೊಸ ನಿಯಮಗಳ ಪ್ರಕಾರ, ಅಕ್ಟೋಬರ್ 1 ರಿಂದ, ವೈದ್ಯಕೀಯ ಮತ್ತು ಶಿಕ್ಷಣವನ್ನು ಹೊರತುಪಡಿಸಿ ಯಾವುದೇ ಉದ್ದೇಶಕ್ಕಾಗಿ 7 ಲಕ್ಷ ರೂ.ಗಿಂತ ಹೆಚ್ಚಿನ ಮೊತ್ತವನ್ನು ಕಳುಹಿಸಲು 20% TCS ವಿಧಿಸಲಾಗುತ್ತದೆ.
● ಶಿಕ್ಷಣದ ಕಾರಣಕ್ಕಾಗಿ ವಿದೇಶಕ್ಕೆ ಹಣವನ್ನು ಕಳುಹಿಸಿದಾಗ 7 ಲಕ್ಷಕ್ಕಿಂತ ಕಡಿಮೆ ಮೊತ್ತವಾಗಿದ್ದರೆ ಅದರ ಮೇಲೆ ಯಾವುದೇ TCS ಅನ್ನು ವಿಧಿಸಲಾಗುವುದಿಲ್ಲ. ಆದರೆ ಈ ಮೊತ್ತವು 7 ಲಕ್ಷಕ್ಕಿಂತ ಹೆಚ್ಚಿಮಾಗಿದ್ದರೆ, ಆಗ ಆ ಮೊತ್ತದ 5% TCS ಅನ್ವಯವಾಗುತ್ತದೆ. ಆದಾಗ್ಯೂ, ಈ ಮೊತ್ತವನ್ನು ವಿದ್ಯಾಭ್ಯಾಸದ ಕಾರಣಕ್ಕಾಗಿ ಅನುಮೋದಿತ ಹಣಕಾಸು ಸಂಸ್ಥೆಯಿಂದ ಎಜುಕೇಶನ್ ಲೋನ್ ಆಗಿ ಪಡೆದಿದ್ದರೆ, ಅಂತಹ ಸಂದರ್ಭದಲ್ಲಿ 0.5% TCS ಮಾತ್ರ ಅನ್ವಯವಾಗುತ್ತದೆ.
● ಒಬ್ಬ ವ್ಯಕ್ತಿಯು ಒಂದು ಹಣಕಾಸು ವರ್ಷದಲ್ಲಿ ವಿದೇಶಿ ಸ್ಟಾಕ್ಗಳು, ಮ್ಯೂಚುವಲ್ ಫಂಡ್ಗಳು, ಕ್ರಿಪ್ಟೋಕರೆನ್ಸಿ ಅಥವಾ ಆಸ್ತಿಯ ಮೇಲೆ 7 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಹಣವನ್ನು ಹೂಡಿಕೆ ಮಾಡಿದರೆ, ಆ ಮೊತ್ತಕ್ಕೆ 20% TCS ಅನ್ವಯವಾಗುತ್ತದೆ. ವಿದೇಶಿ Stock ಮಾನ್ಯತೆಯೊಂದಿಗೆ ಇರುವ ದೇಶೀಯ ಮ್ಯೂಚುವಲ್ ಫಂಡ್ ಗಳಿಗೆ ಈ ಬಗೆಯ TCS ಅಪ್ಲೈ ಆಗುವುದಿಲ್ಲ.
● ಯಾರೇ ಒಬ್ಬ ಭಾರತದ ಪ್ರಜೆಯ ಡೆಬಿಟ್ ಮತ್ತು ಫಾರೆಕ್ಸ್ ಕಾರ್ಡ್ಗಳ ಮೂಲಕ 7 ಲಕ್ಷ ರೂ.ಗಿಂತ ಹೆಚ್ಚಿನ ವಹಿವಾಟು ನಡೆಸಿದರೆ ಅವರಿಗೆ 20% TCS ಅನ್ವಯವಾಗುತ್ತದೆ. ಆದರೆ ಕ್ರೆಡಿಟ್ ಕಾರ್ಡ್ ಮೂಲಕ ಮಾಡಿದಂತಹ ವಹಿವಾಟುಗಳಿಗೆ ಈ ರೀತಿ TCS ಅನ್ನು ವಿಧಿಸಲಾಗುವುದಿಲ್ಲ.
ನಿಮ್ಮ ಊರಿನಲ್ಲಿ ಸರ್ಕಾರಿ ಭೂಮಿ ಗುರುತಿಸುವುದು ಹೇಗೆ.? ನಿಮ್ಮ ಜಮೀನು ಸರಕಾರದ್ದೇ ಆಗುತ್ತೆ ಹೇಗೆ ಗೊತ್ತಾ.?
● ನಮ್ಮ ದೇಶದ ಯಾರೇ ಒಬ್ಬ ವ್ಯಕ್ತಿಯು ಇನ್ನು ಮುಂದೆ 7 ಲಕ್ಷ ರೂಪಾಯಿಗಿಂತ ಕಡಿಮೆ ಮೌಲ್ಯದ ವಿದೇಶಿ ಪ್ರವಾಸದ ಪ್ಯಾಕೇಜ್ ಅನ್ನು ಖರೀದಿಸಿದರೆ ಅದರ ಮೇಲೆ ಆತನಿಗೆ 5% TCS ಅಪ್ಲೈ ಆಗುತ್ತದೆ. 7 ಲಕ್ಷಕ್ಕಿಂತ ಹೆಚ್ಚಿನ ಮೌಲ್ಯದ ಟೂರ್ ಪ್ಯಾಕೇಜ್ಗಳನ್ನು ಖರೀದಿಸುವವರೀಗೆ ಆ ಮೊತ್ತದ 20% TCS ಅನ್ವಯಿಸುತ್ತದೆ. ಇದೆಲ್ಲವೂ ಕೂಡ ಅಕ್ಟೋಬರ್ ಒಂದರಿಂದಲೇ ಜಾರಿಯಾಗುತ್ತದೆ.