ಮುಖದಲ್ಲಿ ಮೊಡವೆ ಆದರೆ ನಾವು ಚೆನ್ನಾಗಿ ಕಾಣುವುದಿಲ್ಲ. ಕೆಲವೊಮ್ಮೆ ಮೊಡವೆಗಳು ನೋವಿನಿಂದ ಕೂಡ ಕೂಡಿರುತ್ತದೆ, ಹೀಗಾಗಿ ಮೊಡವೆ ಬಂದಾಗ ಎಲ್ಲರೂ ಇರಿಟೇಟ್ ಆಗುತ್ತಾರೆ. ಮೊಡವೆ ಯಾಕೆ ಬರುತ್ತದೆ ಎಂದರೆ ಹದಿಹರೆಯದವರಲ್ಲಿ ನಿಧಾನವಾಗಿ ದೇಹದಲ್ಲಿ ಹಾರ್ಮೋನ್ ಉತ್ಪತ್ತಿ ಶುರು ಆಗುವುದರಿಂದ ಈ ವೇರಿಯೇಶನ್ ಸಮಯದಲ್ಲಿ ಸರ್ವೇ ಸಾಮಾನ್ಯವಾಗಿ ಮುಖದಲ್ಲಿ ಒಂದು ಅಥವಾ ಎರಡು ಮೊಡವೆ ಬಂದೇ ಬರುತ್ತದೆ.
ಆಯಿಲ್ ಸ್ಕಿನ್ ಇರುವವರೆಗೂ ಕೂಡ ಮೊಡವೆ ಬರುತ್ತದೆ. ನಮ್ಮ ಮುಖ ಹಾಗೂ ಕುತ್ತಿಗೆ ಭಾಗದಲ್ಲಿರುವ ಗ್ರಂಥಿ ಸ್ರವಿಸುವ ಹಾರ್ಮೋನ್ ಮತ್ತು ಅದಕ್ಕೆ ಹೊರಗಿನಿಂದ ಧೂಳು ಅಥವಾ ಎಣ್ಣೆ ಅಂಶದಿಂದ ಇರಿಟೇಟ್ ಆದಾಗ ಈ ರೀತಿ ಮೊಡವೆ ಆಗುತ್ತದೆ. ಇದರೊಂದಿಗೆ ಇನ್ನು ಅನೇಕರಿಗೆ ಗೊತ್ತಿಲ್ಲದ ವಿಚಾರ ಏನೆಂದರೆ, ಮಲಬದ್ಧತೆ ಇರುವವರೆಗೂ ಕೂಡ ಮೊಡವೆ ಆಗುತ್ತದೆ.
ಮೊಡವೆ ಬಂದಾಗ ಮಾಡಿಕೊಳ್ಳುವ ಹೊರಗಿನ ಪರಿಹಾರದೊಂದಿಗೆ ನಾವು ಒಳಗಿನಿಂದ ಕೂಡ ಶುದ್ದಿ ಆದಾಗ ನಮ್ಮ ರಕ್ತ, ಹೊಟ್ಟೆ ಕ್ಲೀನ್ ಆದಾಗ ಮುಖ ಗ್ಲೋ ಬರುತ್ತದೆ, ಮೊಡವೆ ಆಗುವುದಿಲ್ಲ. ಹಾಗಾದರೆ ಇದನ್ನು ಹೇಗೆ ಮಾಡುವುದು ಎನ್ನುವುದರ ಕುರಿತು ಕೆಲ ಪ್ರಮುಖ ಮಾಹಿತಿಯನ್ನು ತಿಳಿಸಿ ಕೊಡುತ್ತಿದ್ದೇವೆ.
ಮೊಡವೆ ಬರಬಾರದು ಎಂದರೆ ಏನು ಮಾಡಬೇಕು, ಮೊಡವೆ ಬಂದಾಗ ತಕ್ಷಣ ಕ್ಲಿಯರ್ ಆಗಬೇಕು ಎಂದರೆ ಏನು ಮಾಡಬೇಕು, ಅದರ ಬಗ್ಗೆ ಕೆಲವು ಟಿಪ್ ಗಳನ್ನು ಕೊಡುತ್ತಿದ್ದೇವೆ. ಇವುಗಳನ್ನು ಪಾಲಿಸಿ ಕ್ಲಿಯರ್ ಅಂಡ್ ಗ್ಲೋ ಸ್ಕಿನ್ ಪಡೆಯಿರಿ.
ಬಾಯಿ ಹುಣ್ಣು ಆದರೆ ಎದರಬೇಡಿ ಇಲ್ಲಿದೆ ಸುಲಭ ಪರಿಹಾರ.! ಡಾಕ್ಟರ್ ಅಂಜನಪ್ಪ ಅವರ ಸಲಹೆ ಒಮ್ಮೆ ಕೇಳಿ.!
● ನಾವು ಹೆಚ್ಚಾಗಿ ಎಣ್ಣೆ ಪದಾರ್ಥಗಳನ್ನು ಸೇವನೆ ಮಾಡುತ್ತಿದ್ದರೆ ಪಿತ್ತ ಹಾಗೂ ಕಫ ಪ್ರಕೃತಿಯವರಿಗೆ ಅದು ರಿಯಾಕ್ಟ್ ಆಗಿ ಮುಖದ ಮೇಲೆ ಪಿಂಪಲ್ ಆಗುತ್ತದೆ, ಜೊತೆಗೆ ಆ ಪಿಂಪಲ್ ಅನ್ನು ನಾವು ಪಕ್ವವಾಗುವ ಮುನ್ನವೇ ಚಿವುಟುವುದರಿಂದ ಅದು ಹಾಗೆ ಕಲೆಯಾಗಿ ಉಳಿದುಕೊಂಡು ಬಿಡುತ್ತದೆ, ಹಾಗಾಗಿ ಆಯಿಲ್ ಅಂಶ ಕಡಿಮೆ ಮಾಡಬೇಕು.
● ಈ ಮೊದಲೇ ಹೇಳಿದಂತೆ ಮಲಬದ್ಧತೆ ಸಮಸ್ಯೆ ಇರುವವರು ಪ್ರತಿದಿನ ರಾತ್ರಿ ಒಂದು ಚಮಚ ತ್ರಿಫಲ ಚೂರ್ಣವನ್ನು ಒಂದು ಚಮಚ ಜೇನುತುಪ್ಪದ ಜೊತೆ ತಿನ್ನುವುದರಿಂದ ಮಲಬದ್ಧತೆ ಪರಿಹಾರವಾಗಿ, ರಕ್ತ ಶುದ್ಧಿಯಾಗಿ ದೇಹ ಒಳಗಿನಿಂದ ಕ್ಲೀನ್ ಆಗುವುದರಿಂದ ಕೂಡ ಮೊಡವೆ ಆಗುವುದು ತಪ್ಪುತ್ತದೆ.
● ಈ ರೀತಿ ಮಲಬದ್ಧತೆ ಸಮಸ್ಯೆ ಇರುವವರು ಹೆಚ್ಚು ಫೈಬರ್ ಯುಕ್ತ ಆಹಾರ ಸೇವಿಸಬೇಕು. ಹಸಿ ತರಕಾರಿ, ಪೋಷಕಾಂಶಯುಕ್ತ ಆಹಾರಗಳು, ಸರಿಯಾದ ಆಹಾರ ಪದ್ಧತಿ ಪಾಲಿಸಬೇಕು ಮತ್ತು ಚೆನ್ನಾಗಿ ನೀರು ಕುಡಿಯಬೇಕು.
● ಕಹಿಬೇವನ್ನು ಸೇವನೆ ಮಾಡಬೇಕು ಒಂದೆರಡು ಎಲೆಯನ್ನು ತಿನ್ನಬಹುದು ಅಥವಾ ನೀರಿನಲ್ಲಿ ಕುದಿಸಿ ಕುಡಿಯಬಹುದು ಇದು ಆಗುವುದಿಲ್ಲ ಎನ್ನುವವರು ತುಳಸಿ ಲವಂಗ ಕಾಳು ಮೆಣಸು ಶುಂಠಿ ಅರಿಶಿಣ ಹಾಕಿ ಕಷಾಯ ಮಾಡಿ ಕುಡಿಯಿರಿ.
● ಈಗಾಗಲೇ ಪಿಂಪಲ್ ಬಂದು ಆಗಿದೆ, ಅದು ಒಂದೆರಡು ದಿನದಲ್ಲಿ ಕ್ಲಿಯರ್ ಆಗಬೇಕು ಎಂದರೆ ಚಕ್ಕೆ ಪುಡಿಗೆ ಹಾಲಿನ ಕೆನೆ ಜೊತೆ ಮೊಡವೆ ಇರುವ ಕಡೆ ಹಚ್ಚಿಕೊಳ್ಳುವುದರಿಂದ ಬೇಗ ಮಡವೆ ಹಾಗೂ ಕಲೆ ಗುಣವಾಗುತ್ತದೆ.
● ಮೊಡವೆ ಆಗಿರುವುದರಿಂದ ವಿಪರೀತವಾದ ನೋವು ಬರುತ್ತಿದ್ದರೆ ಟೀ ಬ್ಯಾಗ್ ಅನ್ನು ಟೀ ನಲ್ಲಿ ಡಿಪ್ ಮಾಡಿ ಅದರ ಶಾಖ ಕೊಡುವುದರಿಂದ ನೋವು ಕಡಿಮೆ ಆಗುತ್ತದೆ.
● ವಾತ ಪ್ರಕೃತಿ ಇರುವವರು ಡ್ರೈ ಸ್ಕ್ರೀನ್ ಹೊಂದಿರುತ್ತಾರೆ, ಅವರು ಡ್ರೈ ಆಗಿರುವ ಪದಾರ್ಥಗಳನ್ನು ಮುಖ ತೊಳೆಯಲು ಬಯಸಬಾರದು. ಕಡಲೆ ಹಿಟ್ಟು ಬಳಸುವುದಾದರೆ ಕಡಲೆ ಹಿಟ್ಟಿನ ಜೊತೆ ಮೊಸರು ಬಳಸಿ ಫೇಸ್ ವಾಷ್ ಮಾಡಬೇಕು.
● ಓಟ್ಸ್ ಅನ್ನು ಚೆನ್ನಾಗಿ ಗ್ರೈಂಡ್ ಮಾಡಿ ಸ್ಕ್ರಬ್ ರೀತಿ ಮುಖಕ್ಕೆ ಬಳಸುವುದರಿಂದ ಮೊಡವೆ ಬರುವ ಸಾಧ್ಯತೆ ಕಡಿಮೆ ಆಗುತ್ತದೆ. ಹೀಗೆ ಹೊರಗಿನಿಂದ ಜೊತೆಗೆ ಒಳಗಿನಿಂದಲೂ ಕೂಡ ಶುದ್ದಿ ಆಗುವುದರಿಂದ, ಕೇರ್ ಮಾಡುವುದರಿಂದ ಈ ಸಮಸ್ಯೆ ಪರಿಹಾರ ಆಗುತ್ತದೆ.