ಜಾತಿ ಮತ್ತು ಆದಾಯ ಪ್ರಮಾಣ ಪತ್ರ (Caste and Income Certificate) ಎನ್ನುವುದು ಈಗ ಒಂದು ಅತ್ಯಗತ್ಯ ದಾಖಲೆ ಆಗಿದೆ. ಶಾಲೆಗೆ ಹೋಗುವ ಮಕ್ಕಳು, ಗೃಹಿಣಿ, ರೈತರ ಹೀಗೆ ಪ್ರತಿಯೊಬ್ಬರಿಗೂ ಸರ್ಕಾರದ ಯೋಜನೆಗಳ ಅನುದಾನ ಸಿಗಬೇಕು ಎಂದರೆ ಜಾತಿ ಪ್ರಮಾಣ ಪತ್ರ ಹಾಗೂ ಆದಾಯ ಪ್ರಮಾಣ ಪತ್ರ ಇರಬೇಕು.
ಈಗಾಗಲೇ ನಾವು ಪಡೆದಿದ್ದರೂ ಒಂದು ಜೆರಾಕ್ಸ್ ಕೂಡ ಇಲ್ಲದಂತೆ ಒಮ್ಮೊಮ್ಮೆ ಕಳೆದುಕೊಂಡು ಬಿಡುತ್ತೇವೆ. ಈ ಅಂಕಣದಲ್ಲಿ ಇಂದು ಆ ರೀತಿ ನೀವೆನಾದರೂ ಜಾತಿ ಮತ್ತು ಆದಾಯ ಪ್ರಮಾಣ ಕಳೆದುಕೊಂಡಿದ್ದರೆ ಸುಲಭವಾಗಿ ಹೇಗೆ ಪಡೆಯಬಹುದು ಎನ್ನುವುದನ್ನು ತಿಳಿಸಿಕೊಡುತ್ತಿದ್ದೇವೆ.
* ನಿಮ್ಮ ಮೊಬೈಲ್ ನಲ್ಲಿ chrome ಗೆ ಹೋಗಿ Nadakacheri ಎಂದು ಟೈಪ್ ಮಾಡಿ ಸರ್ಚ್ ಕೊಡಿ
* ನಾಡಕಚೇರಿ ಅಧಿಕೃತ ವೆಬ್ಸೈಟ್ ಲಿಂಕ್ ಸಿಗುತ್ತದೆ ಕ್ಲಿಕ್ ಮಾಡಿ ನಿಮ್ಮ ಮೊಬೈಲ್ ನಂಬರ್ ಮೂಲಕ login ಆಗಬೇಕಾಗುತ್ತದೆ, ನಿಮ್ಮ ಮೊಬೈಲ್ ಸಂಖ್ಯೆ ಹಾಕಿ get OTP ಮೇಲೆ ಕ್ಲಿಕ್ ಮಾಡಿದರೆ ಆ ಮೊಬೈಲ್ ಸಂಖ್ಯೆಗೆ OTP ಬರುತ್ತದೆ, ಅದನ್ನು ನಮೂದಿಸಿ ಲಾಗಿನ್ ಆಗಿ.
1,500 ಗ್ರಾಮ ಲೆಕ್ಕಾಧಿಕಾರಿ ಹುದ್ದೆಗೆ ನೇಮಕಾತಿ.! PUC ಪಾಸ್ ಆದವರು ಅರ್ಜಿ ಸಲ್ಲಿಸಬಹುದು.!
* ನಾಡಕಛೇರಿ ವೆಬ್ಸೈಟ್ ಮುಖಪುಟ ಓಪನ್ ಆಗುತ್ತದೆ, ಎಡಬಾಗದಲ್ಲಿ New request ಆಪ್ಷನ್ ಕಾಣುತ್ತದೆ ಅದನ್ನು ಸೆಲೆಕ್ಟ್ ಮಾಡಿ, Caste Certificate ಎನ್ನುವ ಆಪ್ಷನ್ ಕಾಣುತ್ತದೆ ಅದನ್ನು ಕ್ಲಿಕ್ ಮಾಡಿ, Nadakcheri 5.0 version ಓಪನ್ ಆಗುತ್ತದೆ.
* ಕರ್ನಾಟಕ ಸರ್ಕಾರ ನಾಡ ಕಚೇರಿ ಎನ್ನುವ ಮತ್ತೊಂದು ಇಂಟರ್ಫೇಸ್ ಓಪನ್ ಆಗುತ್ತದೆ, ಇದರಲ್ಲಿ ಹೊಸ ವಿನಂತಿ ಎನ್ನುವ ಆಪ್ಷನ್ ಇರುತ್ತದೆ ಅದನ್ನು ಸೆಲೆಕ್ಟ್ ಮಾಡಿ, ಜಾತಿ ಪ್ರಮಾಣ ಪತ್ರ ಎನ್ನುವ ಆಪ್ಷನ್ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ, ಕೆಲವು ವಿವರಗಳು ಇರುತ್ತವೆ ಅದನ್ನು ಓದಿಕೊಂಡು ಮುಂದುವರೆಸಿ ಎನ್ನುವುದನ್ನು ಸೆಲೆಕ್ಟ್ ಮಾಡಿ.
* ಮುಂದಿನ ಹಂತದಲ್ಲಿ ರೇಷನ್ ಕಾರ್ಡ್ ಹೊಂದಿದ್ದೀರಿಯೇ ಎಂದು ಕೇಳುತ್ತದೆ, ಹೌದು ಅಥವಾ ಇಲ್ಲ ನಿಮ್ಮ ಆಯ್ಕೆಯನ್ನು ಸೆಲೆಕ್ಟ್ ಮಾಡಿ. ರೇಷನ್ ಕಾರ್ಡ್ ಇದ್ದರೆ ಹೌದು ಎಂದು ಸೆಲೆಕ್ಟ್ ಮಾಡಿ ರೇಷನ್ ಕಾರ್ಡ್ RD ಸಂಖ್ಯೆ ನಮೂದಿಸಿ, ಇಲ್ಲವಾದಲ್ಲಿ ಇಲ್ಲ ಎಂದು ಸೆಲೆಕ್ಟ್ ಮಾಡಿ ನಿಮ್ಮ ಆಧಾರ್ ಕಾರ್ಡ್ ನಂಬರ್ ಹಾಕುವ ಮೂಲಕ ಜಾತಿ ಪ್ರಮಾಣ ಪತ್ರ ಪಡೆದುಕೊಳ್ಳಬಹುದು.
BPL ರೇಷನ್ ಕಾರ್ಡ್ ಹೊಂದಿರುವವರಿಗೆ ಬಿಗ್ ಶಾ’ಕ್ ಕೊಟ್ಟ ಸರ್ಕಾರ.! ಸದ್ದಿಲ್ಲದೇ ರದ್ದಾಗುತ್ತಿವೆ ಲಕ್ಷಾಂತರ ಕಾರ್ಡುಗಳು.
* ನೀವೇನಾದರೂ ರೇಷನ್ ಕಾರ್ಡ್ ನಂಬರ್ ಹಾಕಿದ್ದರೆ ಮುಂದುವರೆಸಿ ಮೇಲೆ ಕ್ಲಿಕ್ ಮಾಡಿದಾಗ ನಿಮ್ಮ ಕುಟುಂಬದ ಯಾವ ಸದಸ್ಯರ ಹೆಸರಿನಲ್ಲಿದೆ ಜಾತಿ ಪ್ರಮಾಣ ಪತ್ರ ಇದೆ ತೋರುತ್ತದೆ, ಅದರಲ್ಲಿ ನೀವು ಯಾರ ಹೆಸರಿನಲ್ಲಿ ಜಾತಿ ಪ್ರಮಾಣ ಪತ್ರ ತೆಗೆದುಕೊಳ್ಳಬೇಕು ಅದನ್ನು ಸೆಲೆಕ್ಟ್ ಮಾಡಿಕೊಳ್ಳಿ.
* ಪೇಜ್ ಸ್ಕ್ರೋಲ್ ಮಾಡಿದರೆ ಕೆಳಗೆ ಪೂರ್ವ ವೀಕ್ಷಣೆ ಎನ್ನುವ ಆಪ್ಷನ್ ಕಾಣುತ್ತದೆ ಅದನ್ನು ಕ್ಲಿಕ್ ಮಾಡಿ
* ಮೌಸ್ ಬಲ ಭಾಗದಲ್ಲಿ ಪ್ರೆಸ್ ಮಾಡಿ ಎಲ್ಲವನ್ನು ಸೆಲೆಕ್ಟ್ ಮಾಡಿ, ಕೀಬೋರ್ಡ್ ನಲ್ಲಿ Cntrl+P ಹೊಡೆಯಿರಿ ಪ್ರಿಂಟ್ ಗೆ ರೆಡಿ ಇರುತ್ತದೆ.
* ತಕ್ಷಣ more setting ಎನ್ನುವುದನ್ನು ಸೆಲೆಕ್ಟ್ ಮಾಡಿ Backgroung graphic and selection only ಈ ಎರಡರ ಮೇಲೂ ಟಿಕ್ ಮಾಡಿ, ಈಗ ನಿಮ್ಮ ಜಾತಿ ಪ್ರಮಾಣ ಪತ್ರ ಪ್ರಿಂಟ್ ಗೆ ರೆಡಿ ಆಗಿರುತ್ತದೆ ಪ್ರಿಂಟ್ ಕೊಟ್ಟು ತೆಗೆದುಕೊಳ್ಳಬಹುದು.
SSLC ಪಾಸ್ ಆದವರಿಗೆ 4,237 ಸರ್ಕಾರಿ ಬಸ್ ಕಂಡಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ.! ಆಸಕ್ತರು ತಪ್ಪದೇ ಅರ್ಜಿ ಸಲ್ಲಿಸಿ.!
* ಆದಾಯ ಪ್ರಮಾಣ ಪತ್ರವನ್ನು ಕೂಡ ನೀವು ಇದೇ ಮಾದರಿಯಲ್ಲಿ ಪಡೆದುಕೊಳ್ಳಬಹುದು. ನೀವು ಹೊಸ ವಿನಂತಿ ಎನ್ನುವುದನ್ನು ಸೆಲೆಕ್ಟ್ ಮಾಡಿದ ಮೇಲೆ ಜಾತಿ ಪ್ರಮಾಣ ಪತ್ರದ ಬದಲು ಆದಾಯ ಪ್ರಮಾಣ ಪತ್ರ ಎಂದು ಸೆಲೆಕ್ಟ್ ಮಾಡಿ ಇದೇ ಮಾದರಿ ಮುಂದುವರಿಸಿದರೆ ಆದಾಯ ಪ್ರಮಾಣ ಪತ್ರವನ್ನು ಕೂಡ ಇದೇ ರೀತಿ ಪ್ರಿಂಟ್ ಪಡೆದುಕೊಳ್ಳಬಹುದು.