ಸದ್ಯ ರಾಜ್ಯದಲ್ಲಿ ರೇಷನ್ ಕಾರ್ಡ್ (Rationcard) ವಿಚಾರ ಹೆಚ್ಚು ಚರ್ಚೆ ಆಗುತ್ತಿದೆ. ಇದಕ್ಕೆ ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ ಯೋಜನೆ ಹಣ ಮತ್ತು ಗೃಹಲಕ್ಷ್ಮಿ ಯೋಜನೆ (Annabhagya and Grahalakshmi Scheme) ಕೂಡ ಕಾರಣ ಆಗಿರಬಹುದು ಅದನ್ನು ಹೊರತುಪಡಿಸಿ ರೇಷನ್ ಕಾರ್ಡ್ ಕುರಿತಾದ ಮತ್ತೊಂದು ಮುಖ್ಯವಾದ ವಿಚಾರವನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
ಅದೇನೆಂದರೆ, ಸರ್ಕಾರವು ಸಾವಿರಾರು BPL ರೇಷನ್ ಕಾರ್ಡ್ ಗಳನ್ನು ರದ್ದು ಮಾಡುತ್ತಿದೆ(Ration card Cancel), ಇದಕ್ಕೆ ಕಾರಣ ಏನೆಂದರೆ 2016ರ ರೇಷನ್ ಕಾರ್ಡ್ ಮಾನದಂಡಗಳನ್ನು ಮೀರಿ ಅನೇಕ ಕುಟುಂಬಗಳು ರೇಷನ್ ಕಾರ್ಡ್ ಹೊಂದಿರುವುದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಗಳ (Food and Civil Supply department officers) ಗಮನಕ್ಕೆ ಬಂದಿದೆ ಹಾಗಾಗಿ ಅಂತಹ ರೇಷನ್ ಕಾರ್ಡ್ ಡಳ ಪರಿಶೀಲನೆ ನಡೆಸಿ ರ’ದ್ದುಪಡಿಸುವ ಕಾರ್ಯವನ್ನು ಸರ್ಕಾರ ಮಾಡುತ್ತಿದೆ.
SSLC ಪಾಸ್ ಆದವರಿಗೆ 4,237 ಸರ್ಕಾರಿ ಬಸ್ ಕಂಡಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ.! ಆಸಕ್ತರು ತಪ್ಪದೇ ಅರ್ಜಿ ಸಲ್ಲಿಸಿ.!
BPL & AAY ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ (Below Poverty line families) ನೀಡುತ್ತಿರುವ ರೇಷನ್ ಕಾರ್ಡ್ ಗಳಾಗಿವೆ. ಈ ರೇಷನ್ ಕಾರ್ಡ್ ಗಳನ್ನು ಹೊಂದಿರುವ ಕುಟುಂಬಗಳಿಗೆ ಸರ್ಕಾರದಿಂದ ಸಾಕಷ್ಟು ಸೌಲಭ್ಯಗಳನ್ನು ನೀಡಲಾಗುತ್ತಿದೆ. ವೈದ್ಯಕೀಯ ಶುಲ್ಕಗಳು ಸೇರಿದಂತೆ ಶೈಕ್ಷಣಿಕಗಳಲ್ಲಿ ವಿನಾಯಿತಿ, ಸರ್ಕಾರದ ಕಲ್ಯಾಣ ಯೋಜನೆಗಳಲ್ಲಿ ಆದ್ಯತೆ ಸೇರಿದಂತೆ ಉಚಿತ ಪಡಿತರ ಮತ್ತು ಇನ್ನಿತರ ಪ್ರಯೋಜನಗಳು ಸಿಗುತ್ತಿವೆ.
ಆದರೆ ಉಳ್ಳವರು ಕೂಡ ಈ ರೀತಿ ಸರ್ಕಾರಕ್ಕೆ ಮಾಹಿತಿ ಮರೆಮಾಚಿ BPL ರೇಷನ್ ಕಾರ್ಡ್ ಗಳನ್ನು ಹೊಂದಿರುವುದು ಗಮನಕ್ಕೆ ಬಂದಿದೆ. ಮತ್ತೊಂದು ವಿಚಾರ ಏನೆಂದರೆ ರೇಷನ್ ಕಾರ್ಡ್ ಪಡೆದ ಮೇಲೆ ಕುಟುಂಬವು ಆರ್ಥಿಕವಾಗಿ ಉತ್ತಮವಾಗಿರುವ ಸಾಧ್ಯತೆಗಳು ಇವೆ.
ಪ್ರತಿ ತಿಂಗಳು ವಿದ್ಯಾರ್ಥಿಗಳಿಗೆ ಸಿಗಲಿದೆ 1500/- ವಿದ್ಯಾರ್ಥಿ ವೇತನ ಆಸಕ್ತರು ಅರ್ಜಿ ಸಲ್ಲಿಸಿ.!
ಕುಟುಂಬಸ್ಥರಲ್ಲಿ ಯಾರಾದರೂ ಆದಾಯ ತೆರಿಗೆ ಪಾವತಿದಾರರಾಗಿದ್ದರೆ ಅಥವಾ ಸರ್ಕಾರಿ ಉದ್ಯೋಗಿಗಳಾಗಿದ್ದರೆ ಅಥವಾ ಸರ್ಕಾರದ BPL ರೇಷನ್ ಕಾರ್ಡ್ ಮಾನದಂಡಗಳನ್ನು ಮೀರಿ ಹೆಚ್ಚು ಆಸ್ತಿ ಹೊಂದಿದ್ದಲ್ಲಿ ಆ ಕುಟುಂಬಸ್ಥರು BPL ರೇಷನ್ ಕಾರ್ಡ್ ಪಡೆಯಲು ಸಾಧ್ಯವಿಲ್ಲ. ಈಗ ನಮ್ಮ ಎಲ್ಲಾ ದಾಖಲೆಗಳಿಗೂ ಆಧಾರ್ ಕಾರ್ಡ್ ಲಿಂಕ್ ಆಗಿರುವುದರಿಂದ ನಮ್ಮ ಸಂಪೂರ್ಣ ಡಾಟಾ ಸರ್ಕಾರದ ಬಳಿ ಇರುತ್ತದೆ.
ಇದನ್ನು ಗಮನದಲ್ಲಿ ಇಟ್ಟುಕೊಂಡು ಅಧಿಕಾರಿಗಳು ಪರಿಶೀಲನೆ ಮಾಡಿ ಇಂತಹ ರೇಷನ್ ಕಾರ್ಡ್ ಗಳನ್ನು ರದ್ದುಪಡಿಸುತ್ತಿವೆ. ಒಂದು ವೇಳೆ ನಿಮಗೆ ಈ ರೀತಿ ಸಮಸ್ಯೆ ಆಗಬಾರದು ಎಂದರೆ ನಿಮ್ಮ BPL ರೇಷನ್ ಕಾರ್ಡನ್ನು APL ಕಾರ್ಡ್ ಆಗಿ ಬದಲಾಯಿಸಲು ಅರ್ಜಿ ಸಲ್ಲಿಸಿ ರೇಷನ್ ಕಾರ್ಡ್ ರದ್ದಾಗದಂತೆ ನೋಡಿಕೊಳ್ಳಬಹುದು. APL ರೇಷನ್ ಕಾರ್ಡ್ ಹೊಂದಿರುವವರಿಗೂ ಕೂಡ ಗೃಹಲಕ್ಷ್ಮಿ ಹಣ ನೀಡಲಾಗುತ್ತಿದೆ ಮತ್ತು ಸರ್ಕಾರ ಇತ್ತೀಚಿಗೆ ತಂದಿರುವ ಆಯುಷ್ಮಾನ್ ಹೆಲ್ತ್ ಕಾರ್ಡ್ ನಲ್ಲಿ ಅವರಿಗೂ ವಿನಾಯಿತಿ ಇದೆ.
2024 ರಲ್ಲಿ 2BHK / 3BHK ಮನೆ ಕಟ್ಟಲು ತಗಲುವ ವೆಚ್ಚ ಎಷ್ಟು ನೋಡಿ.!
ಇಲ್ಲವಾದಲ್ಲಿ ನೀವು ಈ ರೀತಿ ಸರ್ಕಾರಿ ನೌಕರಿ ಹೊಂದಿರುವ ಅಥವಾ ಆದಾಯ ತೆರಿಗೆ ಪಾವತಿದಾರರಾಗಿರುವವರ ಹೆಸರನ್ನು ನಿಮ್ಮ ರೇಷನ್ ಕಾರ್ಡ್ ನಿಂದ ತೆಗೆದುಹಾಕಿಸಬೇಕಾಗುತ್ತದೆ ಈ ರೀತಿ ಮಾಡಿದಾಗ ಕೂಡ ನೀವು ನಿಮ್ಮ BPL ರೇಷನ್ ಕಾರ್ಡ್ ಉಳಿಸಿಕೊಳ್ಳಬಹುದು. ಕೂಡಲೇ ಈ ಬಗ್ಗೆ ಗಮನ ಕೊಡಿ ಇದರೊಂದಿಗೆ ಕೆಲ ದಿನಗಳ ಹಿಂದೆ ವೈಟ್ ಬೋರ್ಡ್ ಕಾರ್ಡ್ ಹೊಂದಿರುವವರ BPL ರೇಷನ್ ಕಾರ್ಡ್ ರದ್ದಾಗುತ್ತದೆ ಎನ್ನುವ ಸುದ್ದಿ ಹಬ್ಬಿತು.
ಸದ್ಯಕ್ಕೆ ಸರ್ಕಾರ ಆ ರೀತಿ ಯಾವುದೇ ಕಾರ್ಯಗಳಿಗೂ ಮುಂದಾಗಿಲ್ಲ ಎನ್ನುವುದು ತಿಳಿದುಬಂದಿದೆ. ಇನ್ನು ರೇಷನ್ ಕಾರ್ಡ್ ಗಳ ಬದಲು ಸ್ಮಾರ್ಟ್ ಕಾರ್ಡ್ (SmartCard Instead of Rationcard) ನೀಡುವ ಯೋಜನೆ ಬಗ್ಗೆ ಕೂಡ ಇನ್ನು ಸರ್ಕಾರದಲ್ಲಿ ಯಾವುದೇ ಅಧಿಕೃತ ಅಪ್ಡೇಟ್ ಹೊರ ಬಿದ್ದಿಲ್ಲ.