ಮಹಿಳೆಯರಿಗೂ ಕೂಡ ಆರ್ಥಿಕ ಸ್ವಾತಂತ್ರ್ಯ ಬೇಕಾಗಿರುತ್ತದೆ. ಆಕೆಗೂ ಮುಂದೆ ಎದುರಾಗ ಬಹುದಾದ ಸಂ’ಕ’ಷ್ಟ’ದ ಸಮಯಗಳಲ್ಲಿ ಅನುಕೂಲವಾಗಲು ಒಂದಷ್ಟು ಮೊತ್ತದ ಹಣ ಇರಲೇಬೇಕು. ಆದರೆ ಈ ಹಣವನ್ನು ಆಕೆ ತನ್ನ ಜೊತೆಗೆ ಇಟ್ಟುಕೊಂಡು ಕಾಪಾಡಿಕೊಳ್ಳುವುದು ಅಸಾಧ್ಯ ಅಥವಾ ಮನೆಯಲ್ಲಿ ಇಟ್ಟರೂ ಕೂಡ ಯಾವುದು ಖರ್ಚಿಗೆ ಅದು ಹೋಗಬಹುದು ಅಥವಾ ಅದರಲ್ಲಿ ಯಾವುದೇ ರೀತಿಯ ಹಣ ಬೆಳವಣಿಗೆ ಆಗುವುದಿಲ್ಲ.
ಹಾಗಾಗಿ ಒಂದು ಬಾರಿ ಆಕೆಗೆ ಯಾವುದಾದರೂ ಮೂಲದಿಂದ ಹಣ ಬಂದಾಗ ಅದನ್ನು ಒಂದು ಒಳ್ಳೆಯ ಯೋಜನೆಯಲ್ಲಿ ಹೂಡಿಕೆ ಮಾಡುವುದು ಜಾಣತನ. ಸರ್ಕಾರವು ಕೂಡ ಈಗ ಮಹಿಳೆಯರಿಗಾಗಿ ಒಂದು ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಲ್ಲಿ ಮಹಿಳೆ ಹೂಡಿಕೆ ಮಾಡುವ ಹಣಕ್ಕೆ ಬಡ್ಡಿರೂಪದ ಹಣ ಮಾತ್ರವಲ್ಲದೆ, ಆ ಹಣಕ್ಕೂ ಕೂಡ ಚಕ್ರಬಡ್ಡಿ ಸಿಗುತ್ತದೆ. ಈ ಯೋಜನೆ ಬಗ್ಗೆ ಕೆಲ ಪ್ರಮುಖ ಅಂಶಗಳನ್ನು ಈ ಅಂಕಣದಲ್ಲಿ ತಿಳಿಸಿದ್ದೇವೆ ಕೊನೆಯವರೆಗೂ ಓದಿ.
ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!
ಯೋಜನೆಯ ಹೆಸರು:- ಮಹಿಳಾ ಸಮ್ಮಾನ್ ಸೇವಿಂಗ್ ಸ್ಕೀಮ್ (Mahila Samman Saving Scheme)…
ಯೋಜನೆಯ ಕುರಿತಾದ ಪ್ರಮುಖ ಅಂಶಗಳು:-
● ಈ ಯೋಜನೆಯ ಹೆಸರೇ ತಿಳಿಸುವಂತೆ ಇದು ಮಹಿಳೆಯರಿಗೆ ಮಾತ್ರ ಇರುವ ಯೋಜನೆಯಾಗಿದೆ ಮತ್ತು ಇದು ಭಾರತದ ಮಹಿಳೆಯರಿಗಾಗಿ ಮಾತ್ರ ಇರುವ ಯೋಜನೆಯಾಗಿದೆ.
● 18 ವರ್ಷ ಪೂರೈಸಿದ ಯಾವುದೇ ಮಹಿಳಾ ಈ ಯೋಜನೆಯಡಿ ಹೂಡಿಕೆ ಮಾಡಲು ಖಾತೆ ತೆರೆಯಬಹುದು, ಆದರೆ 18 ವರ್ಷದ ಒಳಗಿನವರಿಗಿದ್ದರೆ ಪೋಷಕರು ನಿಮ್ಮ ಹೆಸರಿನಲ್ಲಿ ಈ ಖಾತೆ ತೆರೆಯಬಹುದು.
● ಈ ಯೋಜನೆಯ ಗರಿಷ್ಠ ಮಿತಿ 2 ಲಕ್ಷ, 2 ಲಕ್ಷದವರೆಗೆ ನೀವು ಎಷ್ಟು ಹಣವನ್ನು ಬೇಕಾದರೂ, ಎಷ್ಟು ಬಾರಿಯಾದರೂ ಹೂಡಿಕೆ ಮಾಡಬಹುದು.
● ನೀವು ಪ್ರೀಮಿಯಂ ರೀತಿಯಲ್ಲಿ ಪ್ರತಿ ತಿಂಗಳು ಪಾವತಿಸಲು ಸಾಧ್ಯವಿಲ್ಲ, ಒಂದೇ ಬಾರಿಗೆ ಒಂದು ಮೊತ್ತವನ್ನು ಈ ಯೋಜನೆಯಲ್ಲಿ ಹೂಡಿಕೆ ಮಾಡಬೇಕು ಆದರೆ ನೀವು 2 ಲಕ್ಷದ ಮಿತಿಯೊಳಗಿದ್ದರೆ ಯೋಜನೆ ಅಂದರೆ ಉದಾಹರಣೆಗೆ ನೀವು ಮೊದಲಿಗೆ 50,000ರೂ. ಹೂಡಿಕೆ ಮಾಡಿ ನಂತರ ನೀವು. 50,000ರೂ. ಹೂಡಿಕೆ ಮಾಡಲು ಬಯಸಿದರೆ ಮತ್ತೊಂದು ಖಾತೆ ತೆರೆಯಬೇಕಾಗುತ್ತದೆ ಆದರೆ ಈ ಎರಡು ಖಾತೆಗಳನ್ನು ತೆರೆಯುವ ನಡುವಿನ ಅಂತರ ಮೂರು ತಿಂಗಳಾಗಿರಬೇಕು.
● ಈ ಯೋಜನೆಯ ಮೆಚ್ಯುರಿಟಿ ಅವಧಿ 2 ವರ್ಷಗಳು, ಎರಡು ವರ್ಷಗಳ ಒಳಗಡೆ ನೀವು ಹಣವನ್ನು ಹಿಂಪಡೆಯುವುದಾದರೆ ಒಂದು ವರ್ಷ ತುಂಬಿದ ಬಳಿಕ ನಿಮ್ಮ ಹೂಡಿಕೆ 40% ಹಿಂಪಡೆಯಬಹುದು ಅಥವಾ ಯಾವುದಾದರೂ ಮೆಡಿಕಲ್ ಎಮರ್ಜೆನ್ಸಿ ಇದ್ದಾಗ ನೀವು ಅದಕ್ಕೆ ಪೂರಕ ದಾಖಲೆಗಳನ್ನು ಒದಗಿಸಿದರೆ ಪೂರ್ತಿ ಹಣವನ್ನು ಹಿಂಪಡೆಯಬಹುದು.
● ಈ ಯೋಜನೆಯ ಬಡ್ಡಿದರ 7.5% ಇರುತ್ತದೆ.
● ನಾಮಿನಿ ಫೆಸಿಲಿಟಿ ಕೂಡ ಲಭ್ಯವಿದ್ದು ಹೂಡಿಕೆದಾರರು ಮೃ’ತಪಟ್ಟಲ್ಲಿ ಕಾನೂನು ಪ್ರಕಾರವಾಗಿ ಸಲ್ಲಬೇಕಾದ ಮೊತ್ತ ನಾಮಿನಿಗೆ ಸೇರುತ್ತದೆ.
● ಉದಾಹರಣೆಯೊಂದಿಗೆ ಈ ಯೋಜನೆ ಎಷ್ಟು ಲಾಭ ಎನ್ನುವುದನ್ನು ತಿಳಿಸುತ್ತಿದ್ದೇವೆ. ನೋಡಿ ನೀವು ನಿಮ್ಮ ಹೆಸರಿನಲ್ಲಿ 1 ಲಕ್ಷಕ್ಕೆ ಈ ಯೋಜನೆಯಡಿ ಹೂಡಿಕೆ ಮಾಡಿದ್ದೀರಾ ಎಂದುಕೊಳ್ಳೋಣ.
1,00,000×0.75% = 7500
7500÷4 = 1,875 ಅಂದರೆ ನಿಮಗೆ ಪ್ರತಿ ಮೂರು ತಿಂಗಳಿಗೆ 1,875 ರೂ. ಬರುತ್ತದೆ. ಮುಂದಿನ ಮೂರು ತಿಂಗಳಿಗೆ ನಿಮ್ಮ ಹೂಡಿಕೆ ಇಷ್ಟೇ ಇದ್ದರೂ ಬಡ್ಡಿದರ ಹೆಚ್ಚಾಗುತ್ತದೆ ಯಾಕೆಂದರೆ ಈ ಮೊದಲ ಮೂರು ತಿಂಗಳಿನಲ್ಲಿ ಬಂದ 1,875ರೂ. ಲಾಭ ಕೂಡ ಹೂಡಿಕೆ ಎಂದು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ.
1,01,875×0.75% = 1,910ರೂ. ಎರಡನೇ ತ್ರೈಮಾಸಿಕದಲ್ಲಿ ಸಿಗುತ್ತದೆ. ನಂತರ ಇದು ಕೂಡ ಹೂಡಿಕೆ ಸೇರುತ್ತದೆ ಒಟ್ಟು ಎರಡು ವರ್ಷದ ನಂತರ ನೀವು 1 ಲಕ್ಷ ರೂಪಾಯಿಗೆ 1,16,022ರೂ. ಪಡೆಯುತ್ತೀರಿ. ನೀವು 2 ಲಕ್ಷ ಹೂಡಿಕೆ ಮಾಡಿದರೆ 2 ವರ್ಷಕ್ಕೆ ಸಿಗುವ ಬಡ್ಡಿ ರೂಪದ ಹಣ32,044ರೂ.
● ಎಲ್ಲಾ ಸರ್ಕಾರಿ ವಲಯದ ಹಾಗೂ ಖಾಸಗಿ ವಲಯದ ಬ್ಯಾಂಕ್ ಗಳಲ್ಲೂ ಕೂಡ ಈ ಯೋಜನೆಯನ್ನು ಖರೀದಿಸಬಹುದು. ಗುರುತಿನ ಪುರಾವೆ ಹಾಗೂ ವಿಳಾಸ ಪುರಾವೆಗೆ ದಾಖಲೆಗಳನ್ನು ಕೊಟ್ಟು ಯೋಜನೆಯನ್ನು ಖರೀದಿಸಬಹುದು. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಬ್ಯಾಂಕ್ ಸಂಪರ್ಕಿಸಿ.