ಪೋಸ್ಟ್ ಆಫೀಸ್ ನಾ ಈ ಯೋಜನೆಯಲ್ಲಿ ಕೇವಲ 2 ಲಕ್ಷ ಹೂಡಿಕೆ ಮಾಡಿದ್ರೆ ಸಾಕು 4 ಲಕ್ಷ ಲಾಭ ಪಡೆಯಬಹುದು. ನಿಮ್ಮ ಹಣ ದುಪ್ಪಟ್ಟು ಮಾಡಲು ಇದಕ್ಕಿಂತ ಉತ್ತಮ ಅವಕಾಶ ಮತ್ತೊಂದಿಲ್ಲ ನೋಡಿ.!

ಉದ್ಯೋಗ ಮಾಡಿ ಹಣ ಸಂಪಾದಿಸುವುದು ಮಾತ್ರವಲ್ಲದೇ ಆ ಹಣವನ್ನು ಸುರಕ್ಷಿತವಾಗಿ ಇರುವ ಲಾಭ ಕೊಡುವ ಕಡೆ ಹೂಡಿಕೆ ಮಾಡಿ ಅದರಿಂದಲೂ ಕೂಡ ಹಣ ಗಳಿಸಬಹುದು. ಈಗಿನ ಕಾಲದಲ್ಲಿ ಹೆಚ್ಚಿನ ಜನ ಈ ರೀತಿ ಉಳಿತಾಯದ ಹಣವನ್ನು ಹೂಡಿಕೆ ಮಾಡುವ ಮೂಲಕ ಹೆಚ್ಚು ಹಣ ಗಳಿಸುತ್ತಾರೆ. ಆದರೆ ಇಂತಹ ಆಯ್ಕೆಗಳು ಬಂದಾಗ ಸುರಕ್ಷಿತವಾಗಿರುವ ಮತ್ತು ನಿಮ್ಮ ಬಂಡವಾಳಕ್ಕೆ ಭದ್ರತೆ ಇರುವ ಯೋಜನೆಗಳನ್ನು ಹಾಕಿಕೊಳ್ಳಬೇಕು.

ಶೇರ್ ಮಾರ್ಕೆಟ್ ಗಳಲ್ಲಿ ಮತ್ತು ಸ್ಟಾಕ್ಗಳಲ್ಲಿ ಹಣ ಹೂಡಿ ಶೀಘ್ರವಾಗಿ ಲಾಭ ಪಡೆಯಬಹುದು ಆದರೆ ಸುರಕ್ಷತೆ ಬಗ್ಗೆ ಯಾವುದೇ ಗ್ಯಾರಂಟಿ ಇರುವುದಿಲ್ಲ. ಆದ್ದರಿಂದ ಹೆಚ್ಚಿನ ಜನರು ಅಂಚೆ ಕಛೇರಿಗಳ ಯೋಜನೆಗಳಲ್ಲಿ ಹೂಡಿಕೆ ಮಾಡಲು ಇಚ್ಚಿಸುತ್ತಾರೆ. ಯಾಕೆಂದರೆ ಅಂಚೆ ಕಚೇರಿ ಕೇಂದ್ರ ಸರ್ಕಾರದ ಅಧೀನದಲ್ಲಿರುವುದರಿಂದ ಸರ್ಕಾರವೇ ಈ ಹಣಕ್ಕೆ ಗ್ಯಾರಂಟಿ ಆಗಿರುತ್ತದೆ.

ಅಂಚೆ ಕಛೇರಿಯಲ್ಲಿ ಎಲ್ಲಾ ವರ್ಗದವರಿಗೂ ಕೂಡ ಅವರ ಆದಾಯಕ್ಕೆ ತಕ್ಕಂತೆ ಮತ್ತು ಅವರ ವಯಸ್ಸಿಗೆ ತಕ್ಕಂತೆ ಅನುಕೂಲವಾಗುವಂತಹ ಯೋಜನೆಗಳಿವೆ. ಬಹಳ ಮುಂದಲೋಚನೆಯಿಂದ ಅಚೆಕಛೇರಿಯಲ್ಲಿ ಯೋಜನೆಗಳನ್ನು ರೂಪಿಸಲಾಗಿದೆ. ಉದಾಹರಣೆಗೆ ಸುಕನ್ಯಾ ಸಮೃದ್ಧಿ ಯೋಜನೆ, ಹಿರಿಯ ನಾಗರಿಕರ ಯೋಜನೆ, ಪ್ರಧಾನಮಂತ್ರಿ ಅಂಚೆ ಕಚೇರಿ ಉಳಿತಾಯ ಯೋಜನೆ ಇನ್ನು ಮುಂತಾದ ಯೋಜನೆಗಳನ್ನು ವಿವರಿಸಬಹುದು.

ಈ ಎಲ್ಲಾ ಯೋಜನೆಗಳ ಜೊತೆ ಅಂಚೆಕಛೇರಿಯ ಕಿಸಾನ್ ವಿಕಾಸ್ ಪತ್ರ ಈ ಯೋಜನೆ ಕೂಡ ಅಷ್ಟೇ ಫೇಮಸ್ ಆಗಿದೆ. ಈ ಯೋಜನೆಯಡಿಯಲ್ಲಿ ಠೇವಣಿ ಇಟ್ಟರೆ ಗ್ರಾಹಕರು ಬಹಳ ಬೇಗ ಹೂಡಿಕೆ ಡಬಲ್ ಹಣ ಗಳಿಸುತ್ತಾರೆ. ಹಾಗಾಗಿ ಈ ಅಂಕಣದಲ್ಲಿ ಕೃಷಿ ವಿಕಾಸ್ ಪತ್ರ ಯೋಜನೆಯ ಬಗ್ಗೆ ಮಾಹಿತಿ ತಿಳಿಸುವ ಪ್ರಯತ್ನವನ್ನು ಮಾಡುತ್ತಿದ್ದೇವೆ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಬಹುದು ಅಥವಾ ಅಂಚೆ ಇಲಾಖೆ ಅಧಿಕೃತ ವೆಬ್ಸೈಟ್ ಗೆ ಭೇಟಿ ಕೊಟ್ಟು ಮಾಹಿತಿ ಪಡೆದುಕೊಳ್ಳಬಹುದು.

ಕಿಸಾನ್ ವಿಕಾಸ್ ಪತ್ರ ಯೋಜನೆ ಪ್ರಮುಖ ಅಂಶಗಳು:-
● ಕಿಸಾನ್ ವಿಕಾಸ್ ಪತ್ರ ಈ ಯೋಜನೆಯಲ್ಲಿ ಪ್ರತಿ ತ್ರೈವಾಸಿಕಕೊಮ್ಮೆ ಬಡ್ಡಿದರ ಪರಿಷ್ಕರಣೆ ಆಗುತ್ತದೆ.
● ಪ್ರಸ್ತುತವಾಗಿ 7.2% ಪಟ್ಟಿಧರ ನಿಗದಿಯಾಗಿದೆ.
● ಈ ಯೋಜನೆಯಲ್ಲಿ ಒಮ್ಮೆಲೇ ಹಣ ಹೂಡಿಕೆ ಮಾಡಿದರೆ ಹತ್ತು ವರ್ಷಗಳಲ್ಲಿ ನಿಮ್ಮ ಹಣ ಡಬಲ್ ಆಗುತ್ತದೆ.
● ನೀವು ಕಿಸಾನ್ ವಿಕಾಸ್ ಪತ್ರ ಯೋಜನೆಯಡಿ 2 ಲಕ್ಷ ಹಣ ಹೂಡಿಕೆ ಮಾಡಿದರೆ 10 ವರ್ಷಕ್ಕೆ ನೀವು ಒಟ್ಟು 4 ಲಕ್ಷವನ್ನು ರಿಟರ್ನ್ಸ್ ಪಡೆಯುತ್ತೀರಿ.

● 18 ವರ್ಷ ಮೇಲ್ಪಟ್ಟ ಯಾರು ಬೇಕಾದರೂ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.
● ಕನಿಷ್ಠ 1,000 ದಿಂದ ಹೂಡಿಕೆ ಮಾಡಬಹುದು ಗರಿಷ್ಠ ಮಿತಿ ಇರುವುದಿಲ್ಲ.
● ಭಾರತೀಯ ನಾಗರಿಕರಿಗೆ ಮಾತ್ರ ಕಿಸಾನ್ ವಿಕಾಸ್ ಪತ್ರ ಯೋಜನೆಯಡಿ ಹೂಡಿಕೆ ಮಾಡಬಹುದು.

● ಕಿಸಾನ್ ವಿಕಾಸ್ ಪತ್ರ ಯೋಜನೆಯನ್ನು ಖರೀದಿಸುವ ವೇಳೆ ನಿಮಗೆ ನಾಮಿನಿ ಸೌಲಭ್ಯವನ್ನು ಕೊಡಲಾಗುತ್ತದೆ. ಒಂದು ವೇಳೆ ಯೋಜನೆಯ ಮೆಚ್ಯುರಿಟಿ ಅವಧಿಗೆ ಮುನ್ನ ವ್ಯಕ್ತಿ ಮೃ’ತಪಟ್ಟರೆ ನಾಮಿನಿಯಲ್ಲಿ ಸೂಚಿಸಿದ ವಾರಸುದಾರರಿಗೆ ಕಾನೂನು ಪ್ರಕಾರವಾಗಿ ಸಲ್ಲಬೇಕಾದ ಹಣ ತಲುಪುತ್ತದೆ.
● ಕಿಸಾನ್ ವಿಕಾಸ್ ಪತ್ರ ಯೋಜನೆಯಡಿ ನೀವು ಹಣ ಹೂಡಿಕೆ ಮಾಡಲು ಅರ್ಜಿ ಸಲ್ಲಿಸುವ ವೇಳೆ ಫಾರಂ ಜೊತೆಗೆ ಈ ಕೆಳಗೆ ತಿಳಿಸಿರುವ ದಾಖಲೆಗಳನ್ನು ಕೂಡ ನೀಡಬೇಕು.

● ಆಧಾರ್ ಕಾರ್ಡ್
● ಪ್ಯಾನ್ ಕಾರ್ಡ್ (ಆಧಾರ್ ಲಿಂಕ್ ಆಗಿರಬೇಕು) ●ವೋಟರ್ ಐಡಿ
● ವಿಳಾಸ ದೃಡೀಕರಣ ಪ್ರಮಾಣ ಪತ್ರ
● KYC ಅಪ್ಡೇಟ್ ಆಗಿರಬೇಕು
● ಹೂಡಿಕೆ ಮಾಡುವ ಮೊತ್ತದ ನಗದು ಹಣ ಅಥವಾ ಚೆಕ್.

Leave a Comment

%d bloggers like this: