ಬೇಸಿಗೆಯ ಬಿಸಿಲು ಜೋರಾಗಿದೆ. ಬಿಸಿಲಿನ ಈ ತಾಪ ಎಷ್ಟಿದೆ ಎಂದರೆ ಮನೆ ಒಳಗೆ ಆರಾಮಾಗಿ ಇರಲು ಆಗುತ್ತಿಲ್ಲ ಅಷ್ಟು ಹಬೆ, ಮನೆ ಹೊರಗೆ ಕೂಡ ಬಿಸಿಲಿನ ಶಾಖ. ಈ ಬಿಸಿಲಿನ ಬೇಗೇಗೆ ಜನ ತತ್ತರಿಸಿ ಹೋಗುತ್ತಿದ್ದಾರೆ ಹಾಗೂ ಇದರಿಂದ ಸುಧಾರಿಸಿಕೊಳ್ಳಲು ಮನೆ ಮತ್ತು ಕಚೇರಿಗಳಲ್ಲಿ ಫ್ಯಾನ್, ಕೂಲರ್, AC, ತಂಪು ಪಾನೀಯಗಳು, ಎಳನೀರು, ಮಜ್ಜಿಗೆ ಹಣ್ಣಿನ ರಸಗಳು, ಐಸ್ ಕ್ರೀಮ್ ನ ಮೊರೆ ಹೋಗಿದ್ದಾರೆ.
ಆದರೂ ಜನದಟ್ಟಣೆ ಇರುವ ಜಾಗಗಳಲ್ಲಿ ಬೇಸಿಗೆಯನ್ನು ಸಹಿಸುವುದು ಕಷ್ಟವಾಗಿದೆ. ಸಾಮಾನ್ಯವಾಗಿ ಈ ಬೇಸಿಗೆಯಲ್ಲಿ ಮಕ್ಕಳಿಗೆ ರಜೆ ಇರುವುದರಿಂದ ಪ್ರವಾಸಕ್ಕೆ ಹೋಗುವವರ ಸಂಖ್ಯೆ ಹೆಚ್ಚಾಗಿರುತ್ತದೆ, ಇದು ಮದುವೆ ಸೀಸನ್ ಕೂಡ ಹೌದು. ಆದರೆ ಪ್ರಯಾಣದ ಸಮಯದಲ್ಲೂ ಕೂಡ ಬೇಸಿಗೆಗೆ ಹೆದರಿಯೇ ಇವುಗಳಿಗೆ ಹೋಗುವುದನ್ನು ತಪ್ಪಿಸಿಕೊಳ್ಳುವುದು ಮತ್ತು ಪ್ಲಾನಿಂಗ್ ಗಳನ್ನು ಮುಂದೂಡುವಂತೆ ಆಗುತ್ತಿದೆ, ಅಥವಾ AC ವಾಹನಗಳನ್ನೇ ಬಳಕೆ ಮಾಡುವಂತೆ ಆಗಿದೆ.
AC ಕಾರಿನಲ್ಲಿ ಪ್ರಯಾಣಿಸುವವರಿಗೆ ಕೊಂಚ ಇದರಿಂದ ರಿಲೀಫ್ ಸಿಗುತ್ತದೆ. ಬಿಸಿಲಿನ ಪ್ರಯಾಣದಲ್ಲಿ ತಂಪಿನ ಅನುಭವ ಪಡೆಯಲು ಜನ ತಮ್ಮ ಕಾರಿನಲ್ಲಿ AC ಆನ್ ಇಟ್ಟು ಪ್ರಯಾಣ ಮಾಡುತ್ತಾರೆ. ಅದರಲ್ಲೂ ನಮ್ಮ ದೇಶದಲ್ಲಿಯೂ ಕೂಡ ಹೆಚ್ಚಾಗಿ ಕಾರುಗಳಲ್ಲಿ AC ಬಳಸುತ್ತಾರೆ, ಈ AC ವರ್ಕ್ ಆಗಲು ಇಂಧನದ ಸೋರ್ಸ್ ಯಾವುದು ಎಂದರೆ ಕಾರಿನಲ್ಲಿರುವ AC ಪೆಟ್ರೋಲ್ ನಿಂದ ಉತ್ಪತ್ತಿಯಾಗುವ ಶಕ್ತಿಯಿಂದ ಇದು ಕೆಲಸ ಮಾಡುತ್ತದೆ.
ಈ ಸುದ್ದಿ ಓದಿ:- 2006 ರ ನಂತರ ಜನಿಸಿದ ಎಲ್ಲಾ ಹೆಣ್ಣು ಮಕ್ಕಳಿಗೂ ಗುಡ್ ನ್ಯೂಸ್. ಸರ್ಕಾರದವತಿಯಿಂದ ಸಿಗಲಿದೆ 1 ಲಕ್ಷ.!
ಹಾಗಾದರೆ AC ಬಳಸುವುದರಿಂದ ಎಷ್ಟು ಪೆಟ್ರೋಲ್ ಬಳಕೆಯಾಗುತ್ತದೆ? ಒಂದು ಗಂಟೆ AC ಆನ್ ಮಾಡಿ ಇಟ್ಟರೆ ಎಷ್ಟು ಪೆಟ್ರೋಲ್ ಖರ್ಚಾಗುತ್ತದೆ ಎನ್ನುವ ಕುತೂಹಲ ಹುಟ್ಟುತ್ತದೆ. ಇದರ ಬಗ್ಗೆ ತಿಳಿದುಕೊಳ್ಳಲು ಬೇಕು ಕೂಡ. ಇದು ಎಲ್ಲಾ ಕಾರುಗಳಿಗೆ ಒಂದೇ ರೀತಿಯಾಗಿ ಅನ್ವಯ ಆಗುವುದಿಲ್ಲ. AC ಎಷ್ಟು ಪೆಟ್ರೋಲ್ ಬಳಸುತ್ತಿದೆ ಎಂಬುದು ಕಾರಿನ ಎಂಜಿನ್ ಗಾತ್ರ, AC ಕಾರ್ಯಕ್ಷಮತೆ, ಹೊರಗಿನ ತಾಪಮಾನ, ಕಾರಿನ ವೇಗ, ಕಾರಿನ ಬ್ರಾಂಡಾ ಮುಂತಾದ ಅಂಶಗಳ ಮೇಲೆ ಅವಲಂಬಿತವಾಗುತ್ತದೆ.
ಸರ್ವೆಯೊಂದರ ಪ್ರಕಾರ 1 ಗಂಟೆ AC ಬಳಸಿದರೆ 1.2 ಲೀಟರ್ ಪೆಟ್ರೋಲ್ ಖರ್ಚಾಗುತ್ತದೆ. ಕಾರಿನಲ್ಲಿ AC ಬಳಸುವುದರಿಂದ ಕಾರಿನ ಮೈಲೇಜ್ 5% – 10% ರಷ್ಟು ಕಡಿಮೆಯಾಗುತ್ತದೆ ಎಂದು ಆಟೋಮೊಬೈಲ್ ಕ್ಷೇತ್ರದ ತಜ್ಞರು ಹೇಳುತ್ತಾರೆ. ಇದೇ ಮಾದರಿಯ ಮತ್ತೊಂದು ವರದಿ ಕಾರು ಚಾಲನೆ ವಾಗ AC ಆನ್ ಮಾಡಿದರೆ ಸಾಮಾನ್ಯಕ್ಕಿಂತ 20% ಹೆಚ್ಚು ಪೆಟ್ರೋಲ್ ತೆಗೆದುಕೊಳ್ಳುತ್ತದೆ.
AC ಯಲ್ಲಿ ಕಂಪ್ರೆಸರ್ ನ್ನು ಚಲಾಯಿಸಲು ಬಹಳಷ್ಟು ಪೆಟ್ರೋಲ್ ಬಳಸಲಾಗುತ್ತದೆ. AC ಗೆ ಶಕ್ತಿ ತುಂಬಲು ಎಂಜಿನ್ ಹೆಚ್ಚು ಶ್ರಮ ಪಡುತ್ತದೆ. ಇತ್ಯಾದಿ ಕಾರಣಗಳಿಂದ ಇಂಧನ ಬಳಕೆ ಹೆಚ್ಚಾಗುತ್ತದೆ. ಒಮ್ಮೆ AC ಆನ್ ಮಾಡಿದ ಮೇಲೆ ಎಷ್ಟೇ ವೇಗದಲ್ಲಿ ಕಾರು ಓಡಿಸಿದರೂ, ಟ್ರಾಫಿಕ್ ಜಾಮ್ ನಲ್ಲಿ ನಿಲ್ಲಿಸಿ ಓಡಿಸಿದರೂ AC ಗೆ ಪೆಟ್ರೋಲ್ ಬಳಕೆ ಆಗುತ್ತಲೇ ಇರುತ್ತದೆ, ಇದು ಫ್ಯೂಲ್ ಖಾಲಿ ಮಾಡುತ್ತಲೇ ಇರುತ್ತದೆ.
ಈ ಸುದ್ದಿ ಓದಿ:- ಟೆರೇಸ್ ಮೇಲೆ ಗಾರ್ಡನ್ ಮಾಡಲು ಬಯಸುತ್ತಿದ್ದೀರಾ.? ಈ ವಿಷಯಗಳು ಗೊತ್ತಿದ್ದರೆ ಉತ್ತಮ.!
ಹಾಗಾಗಿ ಒಂದು ಸಲಹೆ ಏನೆಂದರೆ ತುರ್ತು ಎನಿಸಿದಾಗ ಮಾತ್ರ AC ಬಳಸುವುದು ಉತ್ತಮ. ಕಾರನ್ನು ನೆರಳಿನಲ್ಲಿ ನಿಲ್ಲಿಸಿ, ಕಾರಿನ ಕಿಟಕಿ ಮತ್ತು ಬಾಗಿಲುಗಳನ್ನು ಸಾಧ್ಯವಾದಷ್ಟು ಗಾಳಿಗೆ ತೆರೆದಿಟ್ಟು, ನೀವು ಹೊಂದಿಕೊಳ್ಳುವುದು ನಿಮ್ಮ ಆರೋಗ್ಯ ಹಾಗೂ ಆರ್ಥಿಕ ವೆಚ್ಚದ ಕಾರಣದಿಂದಲೂ ಅನುಕೂಲಕಾರಿ.
ಕಾರಿನ ಟೈರ್ ಗಳು ಗಾಳಿಯಿಂದ ತುಂಬಿವೆಯೇ ಎನ್ನುವುದನ್ನು ಪ್ರತಿ ಪ್ರಯಾಣದ ಮೊದಲು ಖಚಿತಪಡಿಸಿಕೊಳ್ಳಿ, ಕಾರಿನಿಂದ ಅನಗತ್ಯ ವಸ್ತುಗಳನ್ನು ತೆಗೆದು ಹೊರಗೆ ಹಾಕಿ, ನಿರಂತರ ವೇಗದಲ್ಲಿ ಕಾರನ್ನು ಓಡಿಸಿ ಇವು ಇಂಧನ ಬಳಕೆಯನ್ನು ಕಡಿಮೆಗೊಳಿಸುತ್ತದೆ.