ಪ್ರಸ್ತುತ ದಿನಗಳಲ್ಲಿ ಬಹಳಷ್ಟು ಜನರು ತಮಗೆ ಹಿಡಿಸಿದ ಯೋಜನೆಗಳಲ್ಲಿ ಹಣವನ್ನು ಹೂಡಿಕೆ ಮಾಡುತ್ತಾರೆ. ಈ ರೀತಿ ಹಣವನ್ನು ಇಡುವುದರ ಮೂಲಕ ಸಾಕಷ್ಟು ಲಾಭಗಳನ್ನು ಪಡೆಯುತ್ತಾರೆ. ಭವಿಷ್ಯತ್ತು ಭದ್ರವಾಗಿರುತ್ತದೆ ಮತ್ತು ಸಮಸ್ಯೆಗಳು ಎದುರಾದರೆ ಪರಿಹರಿಸಿಕೊಳ್ಳಲು ಹಣ ಇರುತ್ತದೆ. ಅದು ಮಾತ್ರವಲ್ಲದೇ ಯಾವುದೇ ರಿಸ್ಕ್ ಕೂಡಾ ಇರುವುದಿಲ್ಲ. ಹಣವನ್ನು ಹೂಡಿಕೆ ಮಾಡುವುದು ಒಳ್ಳೆಯ ಲಾಭ ಪಡೆಯುವುದಕ್ಕಾಗಿ.
ಆದರೆ, ಲಾಭ ಎನ್ನುವುದು ನಾವು ಆಯ್ಕೆ ಮಾಡುವ ಯೋಜನೆಗೆ ತಕ್ಕಂತೆ ಇರುತ್ತದೆ. ಒಳ್ಳೆಯ ಲಾಭವನ್ನು ಪಡೆಯಬೇಕು ಎಂದುಕೊಳ್ಳುವವರು ಪಬ್ಲಿಕ್ ಪ್ರಾವಿಡೆಂಟ್ ಫಂಡ್ ನಲ್ಲಿ (PPF) ಹಣವನ್ನು ಇಡಬಹುದು. ಸಾರ್ವಜನಿಕ ಭವಿಷ್ಯ ನಿಧಿ ಅಥವಾ PPF ನಲ್ಲಿ ಹೂಡಿಕೆ ಮಾಡುವುದು ಹೂಡಿಕೆದಾರರಲ್ಲಿ ಅದರ ಹಲವಾರು ಪ್ರಯೋಜನಗಳು ಮತ್ತು ವೈಶಿಷ್ಟ್ಯಗಳ ಕಾರಣದಿಂದಾಗಿ ಸಾಕಷ್ಟು ಜನಪ್ರಿಯವಾಗಿದೆ.
ದೀರ್ಘಾವಧಿಯ ಸಂಪತ್ತನ್ನು ನಿರ್ಮಿಸಲು ಇದು ಅತ್ಯುತ್ತಮ ಮಾರ್ಗಗಳಲ್ಲಿ ಒಂದಾಗಿದೆ ಎಂದು ಪರಿಗಣಿಸಲಾಗಿದೆ. ಇದಲ್ಲದೆ, ಆದಾಯ, ತೆರಿಗೆ ಪ್ರಯೋಜನಗಳು ಮತ್ತು ಸುರಕ್ಷತೆಯ ಮಿಶ್ರಣವು ಹೂಡಿಕೆದಾರರಿಗೆ ಉಳಿತಾಯ ಮತ್ತು ಹೂಡಿಕೆ ಎರಡಕ್ಕೂ ಆದ್ಯತೆಯ ಆಯ್ಕೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಈ ಸ್ಕೀಮ್ ನಲ್ಲಿ ಹಣ ಹೂಡಿಕೆ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಇದರಲ್ಲಿ ಯಾವುದೇ ರೀತಿಯ ರಿಸ್ಕ್ ಇಲ್ಲ.
ಸರ್ಕಾರದ ಭರವಸೆಯೊಂದಿಗೆ ನಿಮ್ಮ ಹಣ ಕೂಡಾ ಭದ್ರವಾಗಿರುತ್ತದೆ. ಪಿಪಿಎಫ್ ಸ್ಕೀಮ್ ನಲ್ಲಿ ಹಣವನ್ನು ಹೂಡಿಕೆ ಮಾಡಿದ್ದರೆ ಅಥವಾ ಮಾಡಲು ಬಯಸುತ್ತಿದ್ದರೆ, ಅದಕ್ಕೆ ಸಂಬಂಧಿಸಿದಂತಹ ಸಂಪೂರ್ಣವಾದ ಮಾಹಿತಿ ಇಲ್ಲಿದೆ. 5000 ರೂಪಾಯಿಗಳ ಡಿಪಾಸಿಟ್ ನೊಂದಿಗೆ 42 ಲಕ್ಷ ರೂಪಾಯಿಗಳವರೆಗೆ ಈ ಸ್ಕೀಮ್ ನಿಂದ ಪಡೆಯಲು ಸಾಧ್ಯವಿದೆ.
ಈ ಸ್ಕೀಮ್ ನಲ್ಲಿ ಲಾಂಗ್ ಟರ್ಮ್ ಹೂಡಿಕೆ ಮಾಡುವುದಾದರೆ, ಉತ್ತಮವಾದ ಲಾಭವನ್ನು ಪಡೆಯಬಹುದು. ಪ್ರತಿ ವರ್ಷ ಒಂದೂವರೆ ಲಕ್ಷದವರೆಗೂ ಇದರಲ್ಲಿ ಹೂಡಿಕೆ ಮಾಡಬಹುದು. ಕಾಂಪೌಂಡ್ ಫಂಡ್ ಸಿಗುತ್ತದೆ. ಇದೊಂದು ರಿಸ್ಕ್ ಫ್ರೀ ಇನ್ವೆಸ್ಟ್ಮೆಂಟ್. ಹತ್ತಿರದಲ್ಲಿರುವ ಪೋಸ್ಟ್ ಆಫೀಸ್ ಅಥವಾ ಯಾವುದಾದರೂ ರಾಷ್ಟ್ರೀಯ ಬ್ಯಾಂಕ್ ನಲ್ಲಿ ಈ ಯೋಜನೆಯನ್ನು ನೀವು ತೆರೆಯಬಹುದು. 2023 ಜನವರಿ ಒಂದರಿಂದ ಸರ್ಕಾರವು ಈ ಸ್ಕೀಮ್ ನ ಬಡ್ಡಿ ದರವನ್ನು 7.1 ಪ್ರತಿಶತಕ್ಕೆ ಹೆಚ್ಚಿಸಿದೆ. ಪಿಪಿಎಫ್ ಸ್ಕೀಂ ಮೆಚುರಿಟಿ 15 ವರ್ಷಗಳಾಗಿವೆ.
ಕಾಂಟ್ರಿಬ್ಯೂಷನ್ ವಿಸ್ತರಿಸುವುದು ಸಾಧ್ಯವಿದೆ. ತೆರಿಗೆ ವಿನಾಯಿತಿ ಪ್ರಯೋಜನವನ್ನು ಕೂಡಾ ಪಡೆಯಬಹುದು. ಸೆಕ್ಷನ್ 80C ಅಡಿಯಲ್ಲಿ ಟ್ಯಾಕ್ಸ್ ಎಕ್ಸಮ್ಷನ್ ಬೆನಿಫಿಟ್ ನೀಡಲಾಗುತ್ತದೆ. ಈ ಯೋಜನೆಯ ಅಡಿಯಲ್ಲಿ ಪ್ರತಿ ತಿಂಗಳು 5,000ಗಳ ಹೂಡಿಕೆ ಮಾಡಿದರೆ ಒಂದು ವರ್ಷದಲ್ಲಿ ನಿಮ್ಮ ಹೂಡಿಕೆ ₹ 60,000 ಗಳಾಗುತ್ತೆ. ಈ ಸ್ಕೀಮ್ ನಲ್ಲಿ 15 ವರ್ಷಗಳ ಕಾಲ ಹೂಡಿಕೆ ಮಾಡಿದರೆ ಮೆಚುರಿಟಿಯಾಗುವ ವೇಳೆಗೆ ₹ 16,27,284 ಆಗಿರುತ್ತದೆ.
ಮೆಚುರಿಟಿಯನ್ನು ಐದು ವರ್ಷಗಳ ಬ್ಲಾಕ್ ಪೀರಿಯಡ್ ನಿಂದ ಎರಡು ಸಾರಿ ಹೆಚ್ಚಿಸಿಕೊಳ್ಳಬಹುದು. ಹತ್ತು ವರ್ಷಕ್ಕೆ ಡೆಪಾಸಿಟ್ ವಿಸ್ತರಿಸಿದರೆ 25 ವರ್ಷಗಳ ನಂತರ ₹ 41, 57, 566 ಆಗುತ್ತದೆ. ನಿಮ್ಮ ಡೆಪಾಸಿಟ್ ಕಾಂಟ್ರಿಬ್ಯೂಷನ್ 15,12,500 ಆಗಿದ್ದು ಬಡ್ಡಿ ಆದಾಯ ರೂಪಾಯಿ 26, 45,066 ಸೇರುತ್ತದೆ.
PPF ನಲ್ಲಿ ಹೂಡಿಕೆ ಮಾಡುವುದು ಹೇಗೆ?
PPF ನಲ್ಲಿ ಹೂಡಿಕೆ ಮಾಡಲು, ಒಬ್ಬ ವ್ಯಕ್ತಿಯು ಮೊದಲು PPF ಖಾತೆಯನ್ನು ಪೋಸ್ಟ್ ಆಫೀಸ್ ಅಥವಾ ಬ್ಯಾಂಕ್‌ನಲ್ಲಿ ತೆರೆಯಬೇಕಾಗುತ್ತದೆ. ಅವರ ಹೆಸರಿನಲ್ಲಿ ಹೂಡಿಕೆ ಮಾಡುವುದರ ಜೊತೆಗೆ, ಅಪ್ರಾಪ್ತ ವಯಸ್ಕರ ಪರವಾಗಿ ಪಿಪಿಎಫ್‌ನಲ್ಲಿ ಹೂಡಿಕೆ ಮಾಡಬಹುದು.
PPF ಖಾತೆಯು 15 ವರ್ಷಗಳ ಸ್ಥಿರ ಅವಧಿಯೊಂದಿಗೆ ಬರುತ್ತದೆ. ಆದಾಗ್ಯೂ, ಹೂಡಿಕೆದಾರರು ಇದನ್ನು 5 ವರ್ಷಗಳ ಅವಧಿಗೆ ವಿಸ್ತರಿಸಬಹುದು. ಇದಲ್ಲದೆ, ITA (ಆದಾಯ ತೆರಿಗೆ ಕಾಯಿದೆ) ಯ ಸೆಕ್ಷನ್ 80C ಯ ಪ್ರಕಾರ, ಸಾರ್ವಜನಿಕ ಭವಿಷ್ಯ ನಿಧಿಯಲ್ಲಿ ಮಾಡಿದ ಹೂಡಿಕೆಗಳು ಕಡಿತಕ್ಕೆ ಅರ್ಹವಾಗಿವೆ. PPF ನಲ್ಲಿ ಹೂಡಿಕೆ ಮಾಡುವ ವಿಧಾನವು ಅನುಕೂಲಕರ ಮತ್ತು ಸರಳವಾಗಿದೆ ಮತ್ತು ಹೂಡಿಕೆದಾರರು ಆಫ್‌ಲೈನ್ ಅಥವಾ ಆನ್‌ಲೈನ್ ಮಾರ್ಗದ ಮೂಲಕ ಅರ್ಜಿ ಸಲ್ಲಿಸಬಹುದು.