ಮನೆ ಕಟ್ಟಿಸುವ ಸಮಯದಲ್ಲಿ ಈ ರೀತಿ ಪ್ಲಾನ್ ಮಾಡಿದರೆ ಹಣ ಉಳಿತಾಯ ಮಾಡಬಹುದು.!

ಮನೆ ಕಟ್ಟಿಸಬೇಕು ಎನ್ನುವುದು ಪ್ರತಿಯೊಬ್ಬರ ಕನಸು. ಆದರೆ ಎಲ್ಲರಿಗೂ ಕೂಡ ಒಂದೇ ರೀತಿಯ ಶಕ್ತಿ ಇರುವುದಿಲ್ಲ. ಕೆಲವರು ಅಂದುಕೊಂಡ ತಕ್ಷಣ ಅರಮನೆ ಬೇಕಾದರೂ ಇಳಿಸುತ್ತಾರೆ ಆದರೆ ಕೆಲವರಿಗೆ ಅದು ಜೀವಮಾನದ ಸಾಧನೆ ಆಗಿರುತ್ತದೆ ಮತ್ತು ಈ ರೀತಿ ಮನೆಗಾಗಿ ಒಂದೊಂದು ರೂಪಾಯಿಯನ್ನು ಕೂಡಿಟ್ಟು ಜೋಪಾನ ಮಾಡುವ ವರ್ಗವೇ ಹೆಚ್ಚಿನ ಸಂಖ್ಯೆಯಲ್ಲಿ ಇದೆ.

WhatsApp Group Join Now
Telegram Group Join Now

ಸಾಮಾನ್ಯ ಮತ್ತು ಮಧ್ಯಮ ವರ್ಗದ ಕುಟುಂಬಗಳು ಆದಷ್ಟು ಕಡಿಮೆ ಖರ್ಚಿನಲ್ಲಿ ವಾಸಿಸಲು ಯೋಗ್ಯವಾದ ಒಂದು ಮನೆ ಮಾಡಿಕೊಂಡರೆ ಸಾಕು ಎಂದೇ ಲೆಕ್ಕಾಚಾರ ಹಾಕುತ್ತಿರುತ್ತಾರೆ. ಇದರ ಬಗ್ಗೆ ನಮಗೆ ತಿಳುವಳಿಕೆ ಇದ್ದರೆ ಮಾತ್ರ ತುಂಬಾ ಕಾನ್ಫಿಡೆಂಟ್ ಆಗಿ ಕೆಲಸ ಆರಂಭಿಸಬಹುದು.

ನೀವು ಪ್ಲಾನ್ ಮಾಡಿಕೊಂಡ ರೀತಿಯ ಮನೆ ಕಟ್ಟಿಸಬಹುದು ನೀವು ಕೂಡ ಈ ರೀತಿ ಯೋಚಿಸುತ್ತಿದ್ದರೆ ನಿಮಗೆ ಅನುಕೂಲವಾಗುವ ಕೆಲವು ಸಂಗತಿಗಳನ್ನು ಈ ಲೇಖನದಲ್ಲಿ ಹಂಚಿಕೊಳ್ಳುತ್ತಿದ್ದೇವೆ. ನೀವೇನಾದರೂ ಈ ರೀತಿ ಟೆಕ್ನಿಕ್ ಬಳಸಿದರೆ ನಿಮ್ಮ ಮನೆ ಕಟ್ಟಿಸುವ ಖರ್ಚು ಕಡಿಮೆ ಆಗುತ್ತದೆ ಈ ವಿಚಾರವಾಗಿ ನಿಮಗೆ ಹೆಚ್ಚು ಉಳಿತಾಯವೂ ಆಗುತ್ತದೆ.

ಈ ಸುದ್ದಿ ಓದಿ:- 1 ಏಪ್ರಿಲ್ 2024 ರಿಂದ LPG ಬಳಕೆದಾರರಿಗೆ ಬಂಪರ್ ಗುಡ್ ನ್ಯೂಸ್, ಸರ್ಕಾರದಿಂದ ಜನಸಾಮಾನ್ಯರಿಗೆ 3 ಗ್ಯಾಸ್ ಸಿಲಿಂಡರ್ ಉಚಿತ.!

* ಮನೆಯನ್ನು ಯಾವಾಗಲೂ ಚೌಕಕಾರದಲ್ಲಿ ಕಟ್ಟಿಸುವುದು ಕಡಿಮೆ ಖರ್ಚಿನಲ್ಲಿ ಮುಗಿಯುವ ಡಿಸೈನ್ ಆಗಿದೆ ಒಂದು ವೇಳೆ ನೀವು ರೌಂಡ್ ಅಥವಾ ಟ್ರೈ ಆಂಗಲ್ ಅಥವಾ ನಿಮ್ಮದೇ ಆದ ಆಸಕ್ತಿಗಳನ್ನು ಹೊಂದಿದ್ದರೆ ಆಗ ಕನ್ಸ್ಟ್ರಕ್ಷನ್ ಚಾರ್ಜಸ್ ಹೆಚ್ಚಾಗುತ್ತದೆ.

* ನೀವೇನಾದರೂ ಮೆಟೀರಿಯಲ್ ಗಳನ್ನು ತರಸಬೇಕು ಎಂದುಕೊಂಡರೆ ಹತ್ತಿರದಲ್ಲಿರುವ ಜಾಗಗಳಿಂದ ಖರೀದಿ ಮಾಡಬೇಕು ಆಗ ಸಾಗಣೆ ವೆಚ್ಚ ಕೂಡ ಉಳಿಯುತ್ತದೆ. ಸರಿಯಾದ ಸಮಯಕ್ಕೆ, ಆದಷ್ಟು ಬೇಗ, ಅವಶ್ಯಕತೆ ಇದ್ದಾಗ ತೊಂದರೆ ಇಲ್ಲದೆ ಮೆಟೀರಿಯಲ್ ತರಿಸಿಕೊಳ್ಳಬಹುದು

* ಮೆಟೀರಿಯಲ್ ಗಳನ್ನು ತರಿಸುವುದು ಮಾತ್ರವಲ್ಲದೆ ಅವುಗಳನ್ನು ಸ್ಟೋರ್ ಮಾಡುವಾಗ ಕೂಡ ಮನೆ ಕಟ್ಟುವ ಜಾಗದ ಪಕ್ಕದಲ್ಲಿ ಹಾಕಿಕೊಳ್ಳುವುದರಿಂದ ಆಗಲು ಟೈಮ್ ಮತ್ತು ಲೇಬರ್ ಚಾರ್ಜ್ ಉಳಿಯುತ್ತದೆ ಎನ್ನುವುದು ಕೂಡ ಮುಖ್ಯವಾದ ಪಾಯಿಂಟ್ ಆಗಿದೆ. ಮತ್ತು ಮೆಟೀರಿಯಲ್‌ಗಳನ್ನು ಹಾಕುವಾಗ ಅದು ವೇಸ್ಟ್ ಆಗದ ರೀತಿ ಜಾಗದಲ್ಲಿ ನೋಡಿಕೊಂಡು ಹಾಕಬೇಕು.

ಈ ಸುದ್ದಿ ಓದಿ:- ಗೃಹಲಕ್ಷ್ಮಿ, ಅನ್ನಭಾಗ್ಯ, ಯುವನಿಧಿ ಹಣ ಬರದೆ ಇದ್ದವರು ಹೀಗೆ ಮಾಡಿ ಒಟ್ಟಿಗೆ ಎಲ್ಲಾ ಹಣ ಜಮೆ‌ ಆಗುತ್ತೆ.!

ಉದಾಹರಣೆಗೆ, ಮಳೆ ಬಂದಾಗ ಕೊಚ್ಚಿ ಹೋಗುವುದು, ಜೋರಾದ ಗಾಳಿ ಬೀಸಿದಾಗ ಹಾನಿ ಆಗುವುದು ಅಥವಾ ಹತ್ತಿರದಲ್ಲಿ ಡ್ರೈನೇಜ್ ಗಳು, ಗುಂಡಿಗಳು ಇದ್ದರೆ ಅವುಗಳಿಗೆ ಮೆಟೀರಿಯಲ್ ಬೀಳುವುದು ಅಥವಾ ಕಳ್ಳತನವಾಗುವ ಜಾಗದಲ್ಲಿ ಹಾಕುವುದು ಇದೆಲ್ಲವೂ ಸಣ್ಣ ವಿಷಯ ಆದರೂ ನಷ್ಟವನ್ನುಂಟು ಮಾಡುವ ವಿಷಯಗಳಾಗಿವೆ.

msand ಹಾಕಿಸುವಾಗ ಟಾರ್ಪಲ್ ಹಾಕಿ ಹಾಕಿಸುವುದು ಅಥವಾ ಮಳೆ ಬಂದಾಗ ಮೆಟೀರಿಯಲ್ ಗಳಿಗೆ ಹಾನಿ ಆಗದಂತೆ ಜಾಗ್ರತೆ ವಹಿಸುವುದು ಇದೆಲ್ಲವೂ ಕೂಡ ಮುಖ್ಯವಾಗುತ್ತದೆ.
* ಮೋಲ್ಡ್ ಮಾಡಿಸುವಾಗ ಕನ್ಸಲ್ಟ್ ಭೀಮ್ ಗಳನ್ನು ಹಾಕಿಸುವುದರಿಂದ ಖರ್ಚು ಕಡಿಮೆ ಮಾಡಬಹುದು.

* ಒಂದು ಸಾರಿ ಪ್ಲಾನ್ ಮಾಡಿದ ಮೇಲೆ ಪದೇ ಪದೇ ಅದನ್ನು ಬದಲಾಯಿಸುತ್ತಿದ್ದರೆ ಆಗಲು ಕೂಡ ಅನಗತ್ಯ ಖರ್ಚು ಜಾಸ್ತಿ ಆಗುತ್ತದೆ
* ಮನೆಗೆ ಸಂಪ್ ಮಾಡಿಸುವಾಗ ಕೂಡ ಎಷ್ಟು ಅಳತೆಗೆ ಮಾಡಿಸಬೇಕು ಎನ್ನುವ ಪ್ಲಾನಿಂಗ್ ಗೊತ್ತಿರಬೇಕು ಮನೆಯಲ್ಲಿ ಎಷ್ಟು ಜನ ಇರುತ್ತಾರೆ, ಎಷ್ಟು ಫ್ಲೋರ್ ಕಟ್ಟಿಸುತ್ತೇವೆ ಎನ್ನುವುದರ ಮೇಲೆ ಇದು ನಿರ್ಧಾರ ಆಗುತ್ತದೆ. ಈ ರೀತಿ ಸಣ್ಣ ಪುಟ್ಟ ವಿಚಾರವನ್ನು ಕೂಡ ಗಮನದಲ್ಲಿ ಇಟ್ಟುಕೊಂಡು ಪ್ಲಾನ್ ಮಾಡುವುದರಿಂದ ಅನಗತ್ಯ ಖರ್ಚು ಕಡಿಮೆ ಮಾಡಬಹುದು.

ಈ ಸುದ್ದಿ ಓದಿ:- ಖಾಸಗಿ ಶಾಲೆಯಲ್ಲಿ ಉಚಿತ ಅಡ್ಮಿಷನ್’ಗೆ ಅರ್ಜಿ ಆಹ್ವಾನ.! ಯಾವುದೇ ಫೀಸ್ ಇಲ್ಲದೆ ನಿಮ್ಮ ಮಕ್ಕಳಿಗೆ ಉನ್ನತ ಶಿಕ್ಷಣವನ್ನು ಉಚಿತವಾಗಿ ಕೊಡಿಸಿ.!

* ಮೊಲ್ಡ್ ಹಾಕಿಸುವಾಗ ಮೊದಲೇ ನೀಟಾಗಿ ಫಿನಿಶಿಂಗ್ ಬಂದರೆ ರಿ ಫಿನಿಶಿಂಗ್ ಗೆ ಮೆಟೀರಿಯಲ್ ಖರ್ಚು ಮಾಡುವ ಅವಶ್ಯಕತೆ ಬರುವುದಿಲ್ಲ. ಹಾಗಾಗಿ ಕೆಲಸ ಮಾಡುವಾಗ ಗಮನ ಕೊಟ್ಟು ಮಾಡಿಸಬೇಕು.
* ಮನೆಗೆ ಸ್ಟ್ರೆಂಥ್ ಬರುವುದು ಫೌಂಡೇಶನ್ ಕಾಲಮ್ ಹಾಗೂ ಭೀಮ್ ಗಳಿಂದ ಗೋಡೆಗಳನ್ನು ಕವರ್ ಮಾಡಲು ಮಾಡಿಸಲಾಗುತ್ತದೆ. ಆದ್ದರಿಂದ 6 ಇಂಚಿನ ವಾಲ್ ಗಳು ಎಷ್ಟು ಅಗತ್ಯತೆ ಇದೆ ಅಲ್ಲಿ ಮಾತ್ರ ಹಾಕಿಸಿದರೆ ಸಾಕು ಉಳಿದ ಕಡೆ 4 ಇಂಚಿನ ವಾಲ್ ಮಾಡಿಸಿದರು ನಡೆಯುತ್ತದೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now