ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆಯು ಶಿಕ್ಷಣ ಹಕ್ಕು ಕಾಯ್ದೆ (RTE) ಮೂಲಕ ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರವೇಶಕ್ಕೆ ಸಂಬಂಧಪಟ್ಟ ಹಾಗೆ ಪ್ರಕಟಣೆ ಹೊರಡಿಸಿ, 2024-25 ನೇ ಶೈಕ್ಷಣಿಕ ಸಾಲಿನಲ್ಲಿ ತಮ್ಮ ಮಕ್ಕಳಿಗೆ ಪ್ರವೇಶಾತಿ ಕೋರುವ ಪೋಷಕರಿಂದ ಅರ್ಜಿ ಆಹ್ವಾನಿಸಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕೃತ ವೆಬ್ಸೈಟ್ ನಲ್ಲಿ ಅರ್ಜಿಗೆ ಈಗಾಗಲೇ ಆನ್ಲೈನ್ ಲಿಂಕ್ ಅನ್ನು ಸಹ ಬಿಡುಗಡೆ ಮಾಡಲಾಗಿದ್ದು, ಕರ್ನಾಟಕ ರಾಜ್ಯದಲ್ಲಿ ಗ್ರಾಮೀಣ ಭಾಗಗಳಲ್ಲಿ ಅಥವಾ ಸರ್ಕಾರಿ ಶಾಲೆಗಳು ಎಲ್ಲಿ ಇರುವುದಿಲ್ಲವೋ ಅಂತಹ ಸ್ಥಳಗಳಿಂದ ಪೋಷಕರು ತಮ್ಮ ಮಕ್ಕಳಿಗೆ ಸ್ಥಳೀಯವಾಗಿ ಇರುವ ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಹಕ್ಕು ಕಾಯಿದೆ ಮೂಲಕ.
ಈ ಸುದ್ದಿ ಓದಿ:- ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಆಹ್ವಾನ, ತಿದ್ದುಪಡಿ ಹೊಸ ಸದಸ್ಯರ ಸೇರ್ಪಡೆ ಇನ್ನಿತರ ಬದಲಾವಣೆಗೆ ಈ 3 ದಾಖಲೆ ಕಡ್ಡಾಯ.!
ಉಚಿತವಾಗಿ ಪ್ರವೇಶ ಪ್ರಕ್ರಿಯೆಗೆ ಅರ್ಜಿ ಸಲ್ಲಿಸಿ ನೀಡಿರುವ ನಿಬಂಧಗಳನ್ನು ಪೂರೈಸಿ, ಸೀಟ್ ಪಡೆದುಕೊಳ್ಳಬಹುದು. ಸರ್ಕಾರವೇ ಆ ಮಗುವಿನ ಶಿಕ್ಷಣದ ವೆಚ್ಚವನ್ನು ಭರಿಸುತ್ತದೆ. ಇದಕ್ಕೆ ಅರ್ಜಿ ಸಲ್ಲಿಸುವುದು ಹೇಗೆ? ಏನೆಲ್ಲಾ ದಾಖಲೆಗಳು ನೀಡಬೇಕು ಎಂಬ ಪೂರ್ತಿ ಮಾಹಿತಿಗಾಗಿ ಲೇಖನವನ್ನು ಕೊನೆಯವರೆಗೂ ಓದಿ.
ಯಾರು ಅರ್ಜಿ ಸಲ್ಲಿಸಬಹುದು:-
* RTE ಕಾಯ್ದೆ ಅನ್ವಯ 1ನೇ ತರಗತಿ ಪ್ರವೇಶಕ್ಕೆ ಅನುದಾನಿತ ಹಾಗೂ ಖಾಸಗಿ ಶಾಲೆಗಳಲ್ಲಿ ತಮ್ಮ ಮಕ್ಕಳನ್ನು ಅಡ್ಮಿಷನ್ ಮಾಡಿಸಲು ಬಯಸುವ ಪೋಷಕರು ಈಗ ಅರ್ಜಿ ಸಲ್ಲಿಸಬಹುದು.
* LKG ಪ್ರವೇಶ ಪಡೆಯಲು ಮಗುವಿಗೆ ಕನಿಷ್ಠ 4 ವರ್ಷ ತುಂಬಿರಬೇಕು ಮತ್ತು 1ನೇ ತರಗತಿಗೆ ಪ್ರವೇಶ ಪಡೆಯುವುದಕ್ಕಾಗಿ ಅರ್ಜಿ ಸಲ್ಲಿಸಿದರೆ ಮಗುವಿಗೆ ಕನಿಷ್ಠ 5 ವರ್ಷ 5 ತಿಂಗಳು ಮತ್ತು ಗರಿಷ್ಠ 7 ವರ್ಷ ವಯಸ್ಸಿನೊಳಗಿರಬೇಕು.
2024-25ನೇ ಸಾಲಿಗೆ ಆರ್ಟಿಇ ಪ್ರವೇಶ ವೇಳಾಪಟ್ಟಿ:-
* ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 22 ಏಪ್ರಿಲ್, 2024.
* ಅರ್ಜಿಗಳ ಪರಿಶೀಲನೆ ನಂತರ ಲಾಟರಿ ಪ್ರಕ್ರಿಯೆಯಲ್ಲಿ ಅರ್ಹರ ಪಟ್ಟಿಯನ್ನು ಬಿಡುಗಡೆ ಮಾಡುವ ದಿನಾಂಕ – 26 ಏಪ್ರಿಲ್, 2024
* ಆನ್ಲೈನ್ ಮೂಲಕ ಮೊದಲ ಸುತ್ತಿನ ಸೀಟು ಹಂಚಿಕೆ ಬಿಡುಗಡೆ – 30 ಏಪ್ರಿಲ್, 2024
* ಮೊದಲ ಸುತ್ತಿನಲ್ಲಿ ಸೀಟು ಪಡೆದವರು ಶಾಲೆಗಳಲ್ಲಿ ದಾಖಲಾತಿ ಪಡೆಯಲು ಕೊನೆ ದಿನಾಂಕ – 13 ಮೇ, 2024
* ಆನ್ಲೈನ್ ತಂತ್ರಾಂಶದಲ್ಲಿ 2ನೇ ಸುತ್ತಿನ ಸೀಟು ಹಂಚಿಕೆ ಬಿಡುಗಡೆ ದಿನಾಂಕ – 22 ಮೇ, 2024.
ಈ ಸುದ್ದಿ ಓದಿ:- ಹೊಸ ವೋಟರ್ ಐಡಿ ಗೆ ಅರ್ಜಿ ಸಲ್ಲಿಸಲು ತಿದ್ದುಪಡಿ ಮಾಡಿಸಲು ಕಡೇ ಅವಕಾಶ, ಮೊಬೈಲ್ ನಲ್ಲೇ ಅಪ್ಲೈ ಮಾಡವ ವಿಧಾನ ಇಲ್ಲಿದೆ ನೋಡಿ.!
ಅರ್ಜಿ ಸಲ್ಲಿಸುವ ವಿಧಾನ:-
1. ಆಫ್ಲೈನ್ ವಿಧಾನ:-
* ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಛೇರಿಗಳಲ್ಲಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗಳಲ್ಲಿ ಉಚಿತವಾಗಿ ಅರ್ಜಿ ಸಲ್ಲಿಸಬಹುದು
2. ಆನ್ಲೈನ್ ವಿಧಾನ:-
* ಸರ್ಕಾರದ ಪಾವತಿ ಕೇಂದ್ರಗಳಾದ ಬೆಂಗಳೂರು ನಗರದಲ್ಲಿ ಬೆಂಗಳೂರು – ಒನ್, ಇತರೆ ನಗರ ಪ್ರದೇಶಗಳಲ್ಲಿ ಕರ್ನಾಟಕ -ಒನ್, ತಾಲ್ಲೂಕು ಮತ್ತು ಹೋಬಳಿ ಮಟ್ಟದಲ್ಲಿ ಅಟಲ್ಜೀ ಜನಸ್ನೇಹಿ ಕೇಂದ್ರಗಳ ಮೂಲಕ ಆನ್ಲೈನ್ನಲ್ಲಿ ಅರ್ಜಿ ಹಾಕಬಹುದು.
* ಪೋಷಕರು ಸ್ವಂತ ಮೊಬೈಲ್ ಫೋನ್ ಮತ್ತು ಇಂಟರ್ನೆಟ್ ಸೌಲಭ್ಯ ಲಭ್ಯವಿದ್ದಲ್ಲಿ https://sdcedn.karnataka.gov.in/rteadmission/RTE/page1.aspx ಈ ಲಿಂಕ್ ಬಳಸಿ ನೇರವಾಗಿ ಅರ್ಜಿ ಹಾಕಬಹುದು.
ಬೇಕಾಗುವ ದಾಖಲೆಗಳು:-
* ಮಗುವಿನ ಜನನ ಪ್ರಮಾಣ ಪತ್ರ
* ಪ್ರವೇಶ ಕೋರುವ ಮಗು ಮತ್ತು ತಂದೆ ಅಥವಾ ತಾಯಿಯ ಆಧಾರ್ ಕಾರ್ಡ್
* ಜಾತಿ ಮತ್ತು ಆದಾಯ ದೃಢೀಕರಣ ಪತ್ರ ಕಡ್ಡಾಯ.
* ರೇಷನ್ ಕಾರ್ಡ್
* ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ
* ಇನ್ನಿತರ ಪ್ರಮುಖ ದಾಖಲೆಗಳು.