ಹೊಸ ವೋಟರ್ ಐಡಿ ಗೆ ಅರ್ಜಿ ಸಲ್ಲಿಸಲು ತಿದ್ದುಪಡಿ ಮಾಡಿಸಲು ಕಡೇ ಅವಕಾಶ, ಮೊಬೈಲ್ ನಲ್ಲೇ ಅಪ್ಲೈ ಮಾಡವ ವಿಧಾನ ಇಲ್ಲಿದೆ ನೋಡಿ.!

ಲೋಕಸಭಾ ಚುನಾವಣೆ – 2024 (Parliment Election – 2024) ಹತ್ತಿರವಾಗಿದೆ. ನೀವು 18 ವರ್ಷ ಪೂರೈಸಿ ಈ ಬಾರಿ ಮತದಾನ (Voting) ಮಾಡುವ ಹಕ್ಕನ್ನು ಪಡೆಯಬೇಕು ಎನ್ನುವುದಾದರೆ ಮತದಾರರ ಗುರುತಿನ ಚೀಟಿಗೆ (Voter ID) ಅರ್ಜಿ ಸಲ್ಲಿಸಿ ಮತದಾರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು.

WhatsApp Group Join Now
Telegram Group Join Now

ಒಂದು ವೇಳೆ ಈಗಾಗಲೇ ನೀವು ವೋಟರ್ ಐಡಿ ಹೊಂದಿದ್ದರು ನಿಮ್ಮ ವೋಟರ್ ಐಡಿ ಕಳೆದುಕೊಂಡಿದ್ದರೆ ಅಥವಾ ಅದರಲ್ಲಿ ಯಾವುದಾದರೂ ತಿದ್ದುಪಡಿ (Correction) ಇದ್ದರೆ ಅದನ್ನು ಕೂಡ ಸರಿಪಡಿಸಿಕೊಳ್ಳಬೇಕು ಎಂದಿದ್ದರೆ.

ಈ ಸುದ್ದಿ ಓದಿ:- ವಿಧವಾ ವೇತನ ಹಣ ಇನ್ಮುಂದೆ ಬ್ಯಾಂಕ್ ಖಾತೆಗೆ ಜಮೆ ಆಗಲು ಈ ರೀತಿ ಅರ್ಜಿ ಸಲ್ಲಿಸಿ.!

ಈಗ ಕಡೆ ಬಾರಿ ಅವಕಾಶ ನೀಡಲಾಗಿದೆ ಮತ್ತು ಮೊಬೈಲ್ ನಲ್ಲಿ ಆನ್ಲೈನ್ ಮೂಲಕ (through online) ಇವುಗಳನ್ನು ಸರಿಪಡಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಯಾವ ವಿಧಾನ ಅನುಸರಿಸಬೇಕು? ಪ್ರಕ್ರಿಯೆ ಹೇಗೆ ನಡೆಯುತ್ತದೆ ಎನ್ನುವ ಪೂರ್ತಿ ಮಾಹಿತಿಗಾಗಿ ಲೇಖವನವನ್ನು ಕೊನೆಯವರೆಗೂ ಓದಿ.

1. ಮೊಬೈಲ್ ನಲ್ಲಿ ಅರ್ಜಿ ಸ್ಟೇಟಸ್ ಚೆಕ್ ಮಾಡುವ ವಿಧಾನ

* https://voterportal.eci.gov.in/ ಲಿಂಕ್ ಕ್ಲಿಕ್ ಮಾಡಿ, Voter Service Portal ಗೆ ಬರುತ್ತೀರಿ. ಈ ವೆಬ್ ಸೈಟ್ ನಲ್ಲಿ ವೋಟರ್ ಐಡಿ ಗೆ ಸಂಬಂಧಪಟ್ಟ ಹಾಗೆ ಹಲವಾರು ಆಪ್ಷನ್ ಗಳನ್ನು ನೀಡಲಾಗಿರುತ್ತದೆ.
* track apllication Status ಎಂಬ ಆಯ್ಕೆ ಕ್ಲಿಕ್ ಮಾಡುವ ಮೂಲಕ ನೀವು ಈಗಾಗಲೇ ಅರ್ಜಿ ಸಲ್ಲಿಸಿದರೆ ನಿಮ್ಮ ಅರ್ಜಿ ಸ್ಟೇಟಸ್ ಏನಾಗಿದೆ ಎನ್ನುವುದನ್ನು ತಿಳಿದುಕೊಳ್ಳಬಹುದು.

* EPIC No, Mobile No, E-mail ID ಇತ್ಯಾದಿಗಳಲ್ಲಿ ಯಾವುದಾದರೂ ಒಂದನ್ನು ಹಾಕಿ ನಂತರ Password ನಮೂದಿಸಬೇಕು (ಸಾಮಾನ್ಯವಾಗಿ ಮೊಬೈಲ್ ಸಂಖ್ಯೆಯೇ ಪಾಸ್ವರ್ಡ್ ಆಗಿರುತ್ತದೆ)
* ಮುಂದಿನ ಹಂತದಲ್ಲಿ ನೀಡಲಾಗಿರುವ ಕ್ಯಾಪ್ಚಾ ಕೋಡ್ (Captcha Code) ಸರಿಯಾಗಿ ನಮೂದಿಸಿ ರಿಕ್ವೆಸ್ಟ್ ಓಟಿಪಿ (Request OTP) ಕ್ಲಿಕ್ ಮಾಡಿ, ಬಂದಿರುವ OTP ಎಂಟ್ರಿ ಮಾಡಿ ಮುಂದಿನ ಹಂತಕ್ಕೆ ಹೋಗಿ ಪೂರ್ತಿ ಮಾಹಿತಿ ಪಡೆಯಬಹುದು.

ಈ ಸುದ್ದಿ ಓದಿ:-ಪತ್ನಿ ಹೆಸರಲ್ಲಿ ಗೃಹ ಸಾಲ ಮಾಡುವುದರಿಂದ ಏನೆಲ್ಲಾ ಲಾಭ ಗೊತ್ತಾ.?

2. ವೋಟರ್ ಐಡಿ ಕಳೆದು ಹೋಗಿದ್ದರೆ ಮತ್ತೆ ಪಡೆಯುವ ವಿಧಾನ:-

* E-epic downloads ಎನ್ನುವ ಆಪ್ಷನ್ ಕ್ಲಿಕ್ ಮಾಡುವ ಮೂಲಕ ಒರಿಜಿನಲ್ ವೋಟರ್ ಐಡಿ ಕಳೆದು ಹೋಗಿದ್ದರೆ ಹೊಸದಾಗಿ ವೋಟರ್ ಐಡಿ ಡೌನ್ಲೋಡ್ ಮಾಡಿಕೊಳ್ಳಬಹುದು
(ಈ ಮೇಲೆ ತಿಳಿಸಿದ ಹಂತಗಳನ್ನು ಅನುಸರಿಸಿ ಡೌನ್ಲೋಡ್ ಮಾಡಿಕೊಳ್ಳಬಹುದು).

3. ಹೊಸದಾಗಿ ನೋಂದಾಯಿಸಿಕೊಳ್ಳಲು:-

* ಸ್ಕ್ರೀನ್ ಮೇಲೆ New Registration for General Electrorals ಎನ್ನುವ ಆಪ್ಷನ್ ಕ್ಲಿಕ್ ಮಾಡಿ ಮುಂದುವರಿಯಬಹುದು.
* ಏನೆಲ್ಲ ದಾಖಲೆಗಳನ್ನು ನೀಡಬೇಕು ಯಾವ ವಿಧಾನದಲ್ಲಿ ಅರ್ಜಿ ಸಲ್ಲಿಸಬೇಕು ಮತ್ತು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದಕ್ಕೆ ಫಾರಂ ಇತ್ಯಾದಿ ಆಪ್ಷನ್ ಗಳು ಇರುತ್ತವೆ. ಇವುಗಳನ್ನು ಓದಿ ಅದೇ ರೀತಿಯಾಗಿ ಮುಂದುವರೆದು ಪ್ರಕ್ರಿಯೆ ಪೂರ್ತಿ ಗೊಳಿಸಬಹುದು.

ಈ ಸುದ್ದಿ ಓದಿ:-LIC ನೇಮಕಾತಿ ಅಧಿಸೂಚನೆ, ಆಸಕ್ತರು ಇಂದೇ ಅರ್ಜಿ ಸಲ್ಲಿಸಿ.!

4. ತಿದ್ದುಪಡಿ ಮಾಡಿಸಲು:-

* Form No 8 ನಲ್ಲಿ ನಿಮಗೆ ತಿದ್ದುಪಡಿ ಅವಕಾಶ ಇದೆ, ಸ್ಕ್ರೀನ್ ಮೇಲೆ ಸ್ಕ್ರೋಲ್ ಮಾಡಿದರೆ Shifting of residence / Correction of Entries in existing Electroral roll or replacement of EPIC ಈ ಆಪ್ಷನ್ ಮೇಲೆ ಕ್ಲಿಕ್ ಮಾಡಿ ಸೂಚನೆಯಂತೆ ಮುಂದುವರೆಯಿರಿ.

5. ಮತದಾರರ ಪಟ್ಟಿಯಲ್ಲಿ ಹೆಸರನ್ನು ಪರೀಕ್ಷಿಸಲು:-

* ಸ್ಕ್ರೋಲ್ ಮಾಡುತ್ತಾ ಹೋದರೆ ನನ್ನ ಅಗತ್ಯತೆಗಳು ಎನ್ನುವ ವಿಭಾಗದಲ್ಲಿ ಹಲವಾರು ಸೇವೆಗಳ ಲಿಸ್ಟ್ ಇರುತ್ತದೆ ಇದರಲ್ಲಿ ಮತದಾರ ಪಟ್ಟಿ ವೀಕ್ಷಣೆ ಎನ್ನುವ ಆಪ್ಷನ್ ಕ್ಲಿಕ್ ಮಾಡುವ ಮೂಲಕ ಇದನ್ನು ತಿಳಿದುಕೊಳ್ಳಬಹುದು.

* ಈ ಆಪ್ಷನ್ ಮೇಲೆ ಕ್ಲಿಕ್ ಮಾಡಿದರೆ ರಾಜ್ಯ, ಜಿಲ್ಲೆ, ವಿಧಾನಸಭಾ ಕ್ಷೇತ್ರ ಗ್ರಾಮ ಪಂಚಾಯಿತಿ ಇತ್ಯಾದಿ ಮಾಹಿತಿ ಕೇಳುತ್ತದೆ. ಸರಿಯಾಗಿ ಸಲ್ಲಿಕೆ ಮಾಡಿದರೆ ಸ್ಕ್ರೀನ್ ಮೇಲೆ ನೀವು ಸೆಲೆಕ್ಟ್ ಮಾಡಿದ ಗ್ರಾಮ ಪಂಚಾಯಿತಿಯ ಪೂರ್ತಿ ಮತದಾರರ ಪಟ್ಟಿ ಬಂದಿರುತ್ತದೆ ಅದರಲ್ಲಿ ನಿಮ್ಮ ಹೆಸರು ಇದೆಯೇ ಎಂದು ತಿಳಿದುಕೊಳ್ಳಬಹುದು.

https://youtu.be/tfEbOg68o48?si=sByESOI3Mmq2Embx

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now