ಸರ್ಕಾರಿ ಉದ್ಯೋಗದಲ್ಲಿ ಇದ್ದವರಿಗೆ ಅವರು ಕೆಲಸದಿಂದ ನಿವೃತ್ತಿ ಪಡೆದ ನಂತರ ಸರ್ಕಾರ ವತಿಯಿಂದ ಅವರಿಗೆ ಒಂದು ನಿಗದಿತ ಮೊತ್ತವನ್ನು ಪಿಂಚಣಿಯಾಗಿ ನೀಡಲಾಗುತ್ತದೆ. ಈ ಪಿಂಚಣಿ (Pension) ನೀಡುವ ಹಾಗೂ ನಿಗದಿಪಡಿಸುವ ಬಗ್ಗೆ ಪಿಂಚಣಿ ನೀತಿ ಕೂಡ ಇದೆ. ಸರ್ಕಾರ ಆಗಾಗ ಅನ್ವಯಿಸುವ ನಿಯಮಗಳಿಗೆ ಒಳಪಟ್ಟು ಅದರ ಪ್ರಕಾರ ನಡೆದುಕೊಂಡರೇ ಮಾತ್ರ ಪಿಂಚಣಿಯನ್ನು ಪಡೆಯಬಹುದು.
ಈಗ ಬದಲಾಗಿರುವ ನಿಯಮದ ಪ್ರಕಾರ ಸರ್ಕಾರಿ ಉದ್ಯೋಗಿಯಿಂದ ನಿವೃತ್ತಿ ಹೊಂದಿರುವುದು ಪಿಂಚಣಿ ಪಡೆದುಕೊಳ್ಳಬೇಕಾದರೆ ತಪ್ಪದೇ ಜೀವನ ಪ್ರಮಾಣ ಪತ್ರವನ್ನು ಸಲ್ಲಿಸಬೇಕು. ಪ್ರತಿ ವರ್ಷ ನವೆಂಬರ್ 1ರಿಂದ ನವೆಂಬರ್ 30ರವರೆಗೆ ಈ ಜೀವನ ಪ್ರಮಾಣ ಪತ್ರವನ್ನು ಸಲ್ಲಿಸಲು ಕಾಲಾವಕಾಶ ಮಾಡಿಕೊಡಲಾಗುತ್ತದೆ, ಅದಕ್ಕಾಗಿ ಈ ಸಮಯದಲ್ಲಿ ಮತ್ತೊಂದು ಪ್ರಮುಖವಾದ ವಿಚಾರದ ಬಗ್ಗೆ ಮಾಹಿತಿಯನ್ನು ತಿಳಿಸುತ್ತಿದ್ದೇವೆ.
ಅದೇನೆಂದರೆ ಇನ್ನು ಮುಂದೆ ಜೀವನ ಪ್ರಮಾಣ ಪತ್ರವನ್ನು ಸಲ್ಲಿಸಿದಾಗ, ನಿಮ್ಮ PPO ಸಂಖ್ಯೆಯನ್ನು ಕೂಡ ಒದಗಿಸಬೇಕಾಗುತ್ತದೆ. PPO ಎನ್ನುವುದು 12 ಅಂಕಿಯ ಒಂದು ವಿಶಿಷ್ಟವಾದ ಸಂಖ್ಯೆಯಾಗಿದೆ. ಇದರಲ್ಲಿರುವ ಮೊದಲ 5 ಅಂಕೆಗಳು PPO ನೀಡುವ ಪ್ರಾಧಿಕಾರದ ಕೋಡ್ ಸಂಖ್ಯೆಯಾಗಿರುತ್ತದೆ ಮತ್ತು ಇದರಲ್ಲಿರುವ 6ನೇ ಮತ್ತು 7ನೇ ಸಂಖ್ಯೆಗಳು PPO ನೀಡಿರುವ ವರ್ಷವನ್ನು ಪ್ರತಿನಿಧಿಸುತ್ತದೆ. ನಂತರ ಇರುವ 8 ರಿಂದ 11 ರವರೆಗಿನ ಅಂಕಿಗಳು PPO ಸಂಖ್ಯೆಯನ್ನು ಸೂಚಿಸುತ್ತವೆ.
ಕೊನೆಯ ಅಂಕೆಯು ಚೆಕ್ ಅಂಕೆಗಳನ್ನು ಪ್ರತಿನಿಧಿಸುತ್ತಿದೆ. PPO ಎಂದರೆ ಕೇಂದ್ರ ಪಿಂಚಣಿ ಲೆಕ್ಕಪತ್ರ ಕಚೇರಿ (CPAO) ಗಾಗಿ ಸಂವಹನ ಉಲ್ಲೇಖ ಸಂಖ್ಯೆ ಎನ್ನುವ ಅರ್ಥವಾಗಿದೆ. ಪ್ರಸ್ತುತವಾಗಿ ಕೇಂದ್ರ ಸರ್ಕಾರದಿಂದ 69 ಲಕ್ಷಕ್ಕೂ ಹೆಚ್ಚು ನಿವೃತ್ತ ನೌಕರರು ಪಿಂಚಣಿ ಪಡೆತುತ್ತಿದ್ದಾರೆ.
ಈ ಮೇಲೆ ತಿಳಿಸಿದಂತೆ ಪಿಂಚಣಿ ಪಡೆಯಲು ಜೀವನ ಪ್ರಮಾಣ ಪತ್ರ ಸಲ್ಲಿಸ ಬೇಕಾಗಿರುವುದು ಕಡ್ಡಾಯವಾಗಿರುವುದರಿಂದ ಹೆಸರು, ಮೊಬೈಲ್ ಸಂಖ್ಯೆ ಮತ್ತು ಆಧಾರ್ ಸಂಖ್ಯೆಯ ಬಗ್ಗೆ ಕೂಡ ಮಾಹಿತಿಯನ್ನು ನೀಡಬೇಕು. ಮತ್ತು ಇದರೊಂದಿಗೆ ಸೆಲ್ಫ್ ಡಿಕ್ಲೇರ್ಡ್, PPO ಸಂಖ್ಯೆ, ಪಿಂಚಣಿ ಖಾತೆ ಸಂಖ್ಯೆ, ಬ್ಯಾಂಕ್ ಸಂಬಂಧಿತ ಮಾಹಿತಿ ಮತ್ತು ಪಿಂಚಣಿ ಮಂಜೂರಾತಿ ಪ್ರಾಧಿಕಾರದ ಹೆಸರನ್ನು ಕೂಡಾ ನೀಡಬೇಕು.
ಈ ವಿಚಾರವಾಗಿ ಬಹು ಮುಖ್ಯವಾದ ವಿಷಯವೇನೆಂದರೆ ಒಂದು ವೇಳೆ PPO ಸಂಖ್ಯೆಯಲ್ಲಿ ಸಲ್ಲಿಸುವಾಗ ನೀವು ಒಂದು ಸಣ್ಣ ತಪ್ಪು ಮಾಡಿದರೂ ಪಿಂಚಣಿ ನಿಂತು ಹೋಗುತ್ತದೆ. ನೀವಿನ್ನು ಈ PPO ಸಂಖ್ಯೆ ಪಡೆದಿಲ್ಲ ಎಂರೆ ಲೈಫ್ ಸರ್ಟಿಫಿಕೇಟ್ ಸಲ್ಲಿಸುವುದು ಕೂಡ ಆಗುತ್ತಿರುವುದರಿಂದ ಪಿಂಚಣಿಗೆ ಸಮಸ್ಯೆಯಾಗುತ್ತದೆ ನೀವು ಈಗ PPO ಸಂಖ್ಯೆ ಪಡೆಯಲು ಬಯಸಿದರೆ ಅದಕ್ಖಾಗಿ EPFO ಸದಸ್ಯ ಸೇವಾ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು.
CPAO ವೆಬ್ಸೈಟ್ www.cpao.nic.in ಭೇಟಿಕೊಟ್ಟು ರಿಜಿಸ್ಟರ್ ಆಗಿ ನಂತರ ಲಾಗಿನ್ ಮತ್ತು ಪಾಸ್ವರ್ಡ್ ಮೂಲಕ CPAO ನಿಂದ PPO ನ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಈ PPO ಸಂಖ್ಯೆಯಿಂದ ಪಿಂಚಣಿದಾರರಿಗೆ ಇನ್ನಷ್ಟು ಮಾಹಿತಿಗಳು ಸಿಗುತ್ತವೆ. ಪಿಂಚಣಿದಾರನು PPO ಸಂಖ್ಯೆಯ ಮೂಲಕ ತನ್ನ ಪಿಂಚಣಿಯನ್ನು ಟ್ರ್ಯಾಕ್ ಮಾಡಬಹುದು.
EPF ಗೆ ಲಿಂಕ್ ಮಾಡಲಾದ ಬ್ಯಾಂಕ್ ಖಾತೆ ಸಂಖ್ಯೆಯನ್ನು ಬಳಸಿಕೊಂಡು ಪಿಂಚಣಿದಾರರು ತಮ್ಮ PF ಸಂಖ್ಯೆಯನ್ನು ಸಹ ಕಂಡುಹಿಡಿಯಬಹುದು. ಬಹುತೇಕರಿಗೆ ಈ ಮಾಹಿತಿ ಬಗ್ಗೆ ಅರಿವಿಲ್ಲ ಹಾಗಾಗಿ ತಪ್ಪದೆ ಈ ಉಪಯುಕ್ತ ಮಾಹಿತಿಯನ್ನು ಪಿಂಚಣಿ ಪಡೆಯುವ ಎಲ್ಲರಿಗೂ ಶೇರ್ ಮಾಡಿ.