ರೇಷನ್ ಕಾರ್ಡ್ (Ration card) ಈಗ ಒಂದು ಅತ್ಯಗತ್ಯ ದಾಖಲೆಯಾಗಿದೆ. ಕೇಂದ್ರ ಸರ್ಕಾರದ ಯೋಜನೆಗಳಾಗಲಿ, ರಾಜ್ಯ ಸರ್ಕಾರದ ಯೋಜನೆಗಳೇ (Government Schemes) ಆಗಲಿ ಇವುಗಳ ಫಲಾನುಭವಿಗಳಾಗಲು ರೇಷನ್ ಕಾರ್ಡ್ ಇರುವುದು ಮುಖ್ಯ.
ಇದರಲ್ಲಿ BPL ರೇಷನ್ ಕಾರ್ಡ್ ಇರುವವರಿಗೆ ಸರ್ಕಾರದಿಂದ ಅನೇಕ ವಿಷಯಗಳಲ್ಲಿ ವಿನಾಯಿತಿ ಕೂಡ ಇದೆ ಮತ್ತು ಸದ್ಯಕ್ಕೆ ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಗ್ಯಾರಂಟಿ ಯೋಜನೆಗಳಾದ (Gyarantee Schemes) ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆ (Gruhalakshmi and Annabhagya) ಹಣವು ಕೂಡ ಸಿಗುತ್ತಿದೆ.
ಭಾರತ್ ಗೌರವ ಯೋಜನೆ, ಪ್ರತಿಯೊಬ್ಬರಿಗೂ ಸಿಗಲಿದೆ 5000/- ಈ ರೀತಿ ಅರ್ಜಿ ಹಾಕಿ.!
ಆದರೆ ಇಲ್ಲಿ ಆಗಿರುವ ಒಂದು ಸಮಸ್ಯೆ ಏನಂದರೆ, ರೇಷನ್ ಕಾರ್ಡ್ ಹೊಂದಿರುವುದು ಮಾತ್ರವಲ್ಲದೇ ರೇಷನ್ ಕಾರ್ಡ್ ನಲ್ಲಿರುವ ಮಾಹಿತಿ ಸರಿಯಾಗಿರಬೇಕು ಹಾಗಿದ್ದರೆ ಮಾತ್ರ ಅವರಿಗೆ ಈ ಮೇಲೆ ತಿಳಿಸಿದ ಎಲ್ಲ ಸೌಲಭ್ಯಗಳು ಸಿಗುತ್ತವೆ. ಆದರೆ ಸಮಸ್ಯೆ ಏನೆಂದರೆ ಅನೇಕ ಕುಟುಂಬಗಳ ರೇಷನ್ ಕಾರ್ಡ್ ನಲ್ಲಿ ಅನೇಕ ತಿದ್ದುಪಡಿ ಮಾಡಿಸಬೇಕಿದೆ ಇದುವರೆಗೂ ಯಾರು ಅದರ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ, ಆದರೆ ಈಗ ಎಲ್ಲರಿಗೂ ಅದರ ಮಹತ್ವ ಅರಿವಾಗಿದೆ.
ಈಗಾಗಲೇ ಸರ್ಕಾರ ಸಾಕಷ್ಟು ಬಾರಿ ಇವುಗಳ ತಿದ್ದುಪಡಿಗೆ (ration card Correction permission) ಅವಕಾಶ ಮಾಡಿಕೊಟ್ಟಿದೆ. ಆದರೂ ಪ್ರತಿ ಬಾರಿ ಸರ್ವರ್ ಹೊಡೆತದಿಂದ ಮತ್ತು ಮತ್ತಿತರ ಕಾರಣಗಳಿಂದಾಗಿ (Server and some technical issues) ಇನ್ನು ಅನೇಕರ ರೇಷನ್ ಕಾರ್ಡ್ ತಿದ್ದುಪಡಿ ಆಗುವುದು ಬಾಕಿ ಉಳಿದಿದೆ ಮತ್ತು ಸರ್ಕಾರಕ್ಕೆ ಪದೇಪದೇ ಈ ಬಗ್ಗೆ ಮನವಿ ಸಲ್ಲಿಸಲಾಗುತ್ತಿದೆ.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ನೇಮಕಾತಿ ಆಸಕ್ತರು ಅರ್ಜಿ ಸಲ್ಲಿಸಿ.! ವೇತನ 35,000/-
ಅಂತಿಮವಾಗಿ ಮತ್ತೊಂದು ಅವಕಾಶ ಸಿಗುತ್ತಿದ್ದು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವತಿಯಿಂದ ತಿದ್ದುಪಡಿಗೆ ಅವಕಾಶ ಸಿಗುವುದರ ಕುರಿತ ಮತ್ತೊಂದು ಅಪ್ಡೇಟ್ ಹೊರಬಿದ್ದಿದೆ.ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ವೆಬ್ ಸೈಟ್ ಗಳಿಗೆ ಹೋಗಿ ಕೂಡ ಮಧ್ರಾಹ್ನ 12:00 – 01:00ರ ವರೆಗೆ ಅರ್ಜಿಯನ್ನು ಸಲ್ಲಿಸಿ ಸರಿಪಡಿಸಿಕೊಳ್ಳಲು ಅವಕಾಶ ನೀಡಲಾಗುತ್ತಿದೆ. ಶೀಘ್ರದಲ್ಲೇ ಯಾವ ದಿನಾಂಕದಿಂದ ಎನ್ನುವುದು ಕೂಡ ಅನೌನ್ಸ್ ಆಗಲಿದೆ.
ಯಾವೆಲ್ಲಾ ತಿದ್ದುಪಡಿಗೆ ಅವಕಾಶ:-
* ಮರಣ ಹೊಂದಿರುವ ಸದಸ್ಯರ ಹೆಸರು ತೆಗೆದು ಹಾಕಲು
* ರೇಷನ್ ಕಾರ್ಡ್ ಗೆ ಹೊಸ ಸದಸ್ಯರ ಹೆಸರು ಸೇರ್ಪಡೆ ಮಾಡಿಕೊಳ್ಳುವುದು
* ಮನೆಯ ಮುಖ್ಯಸ್ಥರ ಹೆಸರು ಬದಲಾವಣೆ ಮಾಡದೆ ಇರುವುದು
* ಹೆಸರಿನಲ್ಲಿ ತಿದ್ದುಪಡಿ ಇರುವುದು
* ರೇಷನ್ ಕಾರ್ಡ್ ಗೆ ಆಧಾರ್ ಲಿಂಕ್ ಹಾಗೂ ಇ-ಕೆವೈಸಿ ಮಾಡಿಸದೆ ಇರುವುದು
* ನ್ಯಾಯಬೆಲೆ ಅಂಗಡಿ ಬದಲಾವಣೆ ಮಾಡಿಸುವುದು
ತಿದ್ದುಪಡಿ ಮಾಡಿಸುವುದು ಹೇಗೆ.!
* ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್, ಬಾಪೂಜಿ ಕೇಂದ್ರಗಳಿಗೆ ಅಥವಾ ನ್ಯಾಯಬೆಲೆ ಅಂಗಡಿಗಳಿಗೆ ಹೋಗಿ ತಿದ್ದುಪಡಿ ಮಾಡಿಸಿಕೊಳ್ಳಬಹುದು. ಆದರೆ ಆ ಸಮಯದಲ್ಲಿ ತಿದ್ದುಪಡಿಗೆ ಸಂಬಂಧಪಟ್ಟ ಹಾಗೆ ಪೂರಕ ದಾಖಲೆಗಳನ್ನು ಸಲ್ಲಿಸಬೇಕು
* ಪಬ್ಲಿಕ್ ಗೂ ಕೂಡ ಪರ್ಮಿಷನ್ ಕೊಡುವ ಸಾಧ್ಯತೆ ಇದೆ. ಆದರೆ ಇನ್ನು ಅಧಿಕೃತವಾಗಿ ಘೋಷಣೆಯಾಗಿಲ್ಲ, ಆ ರೀತಿ ಅವಕಾಶ ಇದ್ದರೆ ನೀವೇ ಆಹಾರ ಇಲಾಖೆ ವೆಬ್ಸೈಟ್ನಲ್ಲಿ ತಿದ್ದುಪಡಿ ಮಾಡಿಕೊಳ್ಳಬಹುದು.
ಆಶ್ರಯ ಯೋಜನೆ ಸ್ವಂತ ಮನೆ ಇಲ್ಲದವರಿಗೆ ಉಚಿತ ಸೈಟ್ ಹಂಚಿಕೆ ಆಸಕ್ತರು ಅರ್ಜಿ ಸಲ್ಲಿಸಿ.!
ಆದರೆ ಇನ್ನೂ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸ್ವೀಕಾರ ಮಾಡುವುದರ ಬಗ್ಗೆ ಅನುಮತಿ ಸಿಕ್ಕಿಲ್ಲ. ಈಗಾಗಲೇ ಅನುಮೋದನೆ ಆಗಿರುವ ರೇಷನ್ ಕಾರ್ಡ್ ಗಳ ವಿತರಣೆ ಮಾಡುವುದು ಬಾಕಿ ಇದೆ, ಆ ಬಳಿಕ ಸರ್ಕಾರ ಇದರ ಬಗ್ಗೆ ಮಾಹಿತಿ ಅವಕಾಶ ಕೊಡಬಹುದು. ಸದ್ಯಕ್ಕೆ ಯಾರೆಲ್ಲಾ ತಿದ್ದುಪಡಿಗಾಗಿ ಕಾಯುತ್ತಿದ್ದಾರೆ ಅವರಿಗೆ ತಪ್ಪದೆ ಈ ಮಾಹಿತಿಯನ್ನು ತಲುಪಿಸಿ.