ರೈತರಿಗೆ (Farmers) ತಮ್ಮ ಕೃಷಿ (Agricultural purpose) ಚಟುವಟಿಕೆಗಳಿಗೆ ವಿದ್ಯುತ್ (Electricity) ಅವಶ್ಯಕತೆ ಇದೆ, ಅದರಲ್ಲೂ ತೋಟಗಾರಿಕೆ (Horticulture) ಕೃಷಿ ಮಾಡುವ ರೈತರುಗಳು ವಿದ್ಯುತ್ ಮೇಲೆ ಬಹಳಷ್ಟು ಅವಲಂಬಿತರಾಗಿದ್ದಾರೆ. ಸರ್ಕಾರಗಳು ಕೂಡ ಉಚಿತವಾಗಿ ರೈತರಿಗೆ ಕೃಷಿ ಚಟುವಟಿಕೆಗೆ ವಿದ್ಯುತ್ ನೀಡುತ್ತಿತ್ತು, ವಿದ್ಯುತ್ ಪೂರಕ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳುವ ರೈತರಿಗೆ ಸಬ್ಸಿಡಿ ರೂಪದಲ್ಲಿ ಸಹಾಯಧನ ಕೂಡ ನೀಡಿ ಪ್ರೋತ್ಸಾಹಿಸುತ್ತಿದೆ.
ಈಗ ದೇಶದಾದ್ಯಂತ ಸೋಲಾರ್ ಚಾಲಿತ ಪಂಪ್ಸೆಟ್ ಅಳವಡಿಕೆ ಹೆಚ್ಚಾಗುತ್ತಿದೆ. ಈ ರೀತಿ ಸೋಲಾರ್ ಚಾಲಿತ ಪಂಪ್ಸೆಟ್ (Solar pumpset) ವ್ಯವಸ್ಥೆಯು ರೈತನಿಗೆ ವಿದ್ಯುತ್ ಅವಲಂಬನೆಯನ್ನು ತಗ್ಗಿಸುತ್ತದೆ ಎಂದೇ ಹೇಳಬಹುದು. ಯಾಕೆಂದರೆ ತಮ್ಮ ಜಮೀನುಗಳಲ್ಲಿ ಸೋಲಾರ್ ಪ್ಯಾನಲ್ ಗಳನ್ನು ಅಳವಡಿಸಿಕೊಂಡಿರುವುದರಿಂದ ಅವರ ಕೃಷಿ ಬಳಕೆಗೆ ಬೇಕಾದಷ್ಟು ವಿದ್ಯುತ್ ತಯಾರಾಗುತ್ತದೆ.
ಸೋಲಾರ್ ಶಕ್ತಿಯನ್ನು ವಿದ್ಯುತ್ ಶಕ್ತಿಯಾಗಿ ಪರಿವರ್ತನೆ ಮಾಡಿಕೊಂಡು ತಮ್ಮ ಕೃಷಿ ಚಟುವಟಿಕೆಗಳಿಗೆ ರೈತರು ಅದನ್ನು ಬಳಸಿಕೊಳ್ಳಬಹುದು. ಈ ಸೋಲಾರ್ ಅಳವಡಿಕೆ ಕೂಡ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ಯೋಜನೆಗಳನ್ನು (government Scheme) ರೂಪಿಸಿದೆ.
ಈ ಯೋಚನೆಗಳಲ್ಲಿ ಸೋಲಾರ್ ಪ್ಯಾನಲ್ ಅಳವಡಿಸಿಕೊಳ್ಳುವ ಘಟಕ ವೆಚ್ಚ ಅಥವಾ ಯಂತ್ರೋಪಕರಣಗಳ ಖರೀದಿಗೆ ಸರ್ಕಾರದಿಂದ ನೆರವು ಲಭ್ಯವಾಗುತ್ತಿದೆ. ಈಗ ತೋಟಗಾರಿಕೆ ಇಲಾಖೆ ವತಿಯಿಂದ ಕೂಡ ಕರ್ನಾಟಕದ ರೈತರಿಗೆ ಇಂತಹದೊಂದು ಅನುಕೂಲತೆ ಸಿಗುತ್ತಿದೆ, ತೋಟಗಾರಿಕೆ ಕೃಷಿಯಲ್ಲಿ ತೊಡಗಿಕೊಂಡಿರುವ ರೈತರುಗಳು ಸೋಲಾರ್ ಪಂಪ್ಸೆಟ್ ಅಳವಡಿಸಿಕೊಳ್ಳುವುದಕ್ಕೆ ಇಚ್ಚಿಸಿದ್ದಲ್ಲಿ ಈ ಯೋಜನಾ ವೆಚ್ಚದ 50%ರಷ್ಟು ಖರ್ಚಿನಲ್ಲಿ ಇದನ್ನು ಪೂರೈಸಿಕೊಳ್ಳಬಹುದು.
ಹಾಗಾಗಿ ರೈತರು ಯಾವುದೇ ಕಾರಣಕ್ಕೂ ಇಂತಹ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ. 2023-24 ನೇ ಆರ್ಥಿಕ ವರ್ಷದ ನೂತನ ಯೋಜನೆಯಲ್ಲಿ ಸೋಲಾರ್ ಪಂಪ್‌ಸೆಟ್ ಅಳವಡಿಕೆಗೆ ಹಾಗೂ ಯಂತ್ರೋಪಕರಣಗಳ ಖರೀದಿಗೆ ಸಿಗುತ್ತಿರುವ ಅನುದಾನದ (subsidy) ಕುರಿತು ಕೆಲ ಮಾಹಿತಿಯನ್ನು ತಿಳಿಸಿ ಕೊಡುತ್ತಿದ್ದೇವೆ.
ಪ್ರಯೋಜನ:-
● ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ 50% ರಷ್ಟು ಸಹಾಯಧನ ದೊರೆಯಲಿದೆ.
● ಇತರೆ ವರ್ಗದವರಿಗೆ 40% ರಷ್ಟು ಸಬ್ಸಿಡಿ ದೊರೆಯಲಿದೆ.
● ಸೋಲಾರ್ ಆಧರಿತ 3HP ಸೋಲಾರ್ ಪಂಪ್‌ಸೆಟ್‌ಗಳಿಗೆ 2ಲಕ್ಷ ವೆಚ್ಚವಾದರೆ 50%ರಂತೆ 1 ಲಕ್ಷ ರೂಪಾಯಿ ಸಹಾಯಧನ ಸಿಗಲಿದೆ.
● 3 HP ಸೋಲಾರ್ ಗಿಂತ ಮೇಲ್ಪಟ್ಟ ಸೋಲಾರ್ ಪಂಪ್‌ಸೆಟ್‌ಗಳಿಗೆ 3 ಲಕ್ಷ ಖರ್ಚಿಗೆ 1.5ಲಕ್ಷ ರೂಪಾಯಿ ಸಹಾಯಧನ ದೊರೆಯಲಿದೆ.
ಅರ್ಹತೆಗಳು:-
● ಕರ್ನಾಟಕದ ರೈತರಾಗಿರಬೇಕು
● ರೈತರು ತಮ್ಮ ಹೆಸರಿನಲ್ಲಿ ಭೂಮಿ ಹೊಂದಿದ್ದು ಕೃಷಿಯಲ್ಲಿ ತೊಡಗಿಕೊಂಡಿರಬೇಕು.
● ಜಮೀನಲ್ಲಿ ಈಗಾಗಲೇ ಪಂಪ್ಸೆಟ್ ವ್ಯವಸ್ಥೆ ಇರಬೇಕು
● ಯೋಜನೆಗೆ ಅರ್ಜಿ ಸಲ್ಲಿಸಲು ಕೇಳಿರುವ ಎಲ್ಲಾ ದಾಖಲೆಗಳನ್ನು ಕೂಡ ಹೊಂದಿರಬೇಕು.
● ರೈತರು ಅಧಿಕೃತ ಸಂಸ್ಥೆಯಿಂದ ಮಾತ್ರ ಸೋಲಾರ್ ಪಂಪ್‌ಸೆಟ್ ಖರೀದಿಸಿರಬೇಕು.
ಬೇಕಾಗುವ ದಾಖಲೆಗಳು:-
● ಆಧಾರ್ ಕಾರ್ಡ್ ಪ್ರತಿ
● ಬ್ಯಾಂಕ್ ಪಾಸ್‌ಬುಕ್ ಪ್ರತಿ
● FIDಸಂಖ್ಯೆ
● RTC
● ಜಾತಿ ಮತ್ತು ಆದಾಯ ಪ್ರಮಾಣ ಪತ್ರ
● ಇತ್ತೀಚಿನ ಭಾವಚಿತ್ರ
● ಮೊಬೈಲ್ ಸಂಖ್ಯೆ
LIC ಈ ಸ್ಕೀಮ್ ನಲ್ಲಿ 2,000 ಹೂಡಿಕೆ ಮಾಡಿದ್ರೆ ಸಾಕು 43 ಲಕ್ಷ ಸಿಗುತ್ತೆ.! ಹೆಚ್ಚು ಹಣ ಗಳಿಸುವ ಸೂಪರ್ ಸ್ಕೀಮ್ ಇದು.!
ಅರ್ಜಿ ಸಲ್ಲಿಸುವ ವಿಧಾನ:-
● ಅರ್ಜಿ ಸಲ್ಲಿಸಲು ಅರ್ಹ ರೈತರು ಸ್ಥಳೀಯ ತಾಲೂಕಿನ ತೋಟಗಾರಿಕಾ ಇಲಾಖೆ ಕಚೇರಿಯನ್ನು ಸಂಪರ್ಕಿಸಬೇಕಾಗುತ್ತದೆ.
● ಅರ್ಜಿ ಫಾರಂನಲ್ಲಿ ವಿವರಗಳನ್ನು ತುಂಬಿ ಸಹಿ ಮಾಡಬೇಕು
ಜೊತೆಗೆ ಕೇಳಲಾದ ಎಲ್ಲಾ ಪೂರಕ ದಾಖಲೆಗಳನ್ನು ಕೂಡ ಲಗತ್ತಿಸಿರಬೇಕು.
● ತೋಟಗಾರಿಕಾ ಇಲಾಖೆ ಅಧಿಕಾರಿಗಳು ನಿಮ್ಮ ಜಮೀನಿಗೆ ಬಂದು ಪರೀಕ್ಷೆಯಲ್ಲಿ ಮಾಡುತ್ತಾರೆ.
● ನಂತರ ಅರ್ಜಿ ಅನುಮೋದನೆ ಆದ ಮೇಲೆ ನಿಮ್ಮ ಖಾತೆಗೆ ಹಣ ವರ್ಗಾವಣೆ ಆಗಲಿದೆ.