ವೈವಾಹಿಕ ಪ್ರಕರಣಗಳಲ್ಲಿ ಪೊಲೀಸ್ ಸ್ಟೇಷನ್ ನಲ್ಲಿ ಮುಚ್ಚಳಿಕೆ ಬರೆದು ಕಳೆದುಕೊಟ್ಟಿದ್ದಾರೆ ಎನ್ನುವ ಮಾತನ್ನು ನಾವೆಲ್ಲರೂ ಕೇಳಿದ್ದೇವೆ. ಸಾಮಾನ್ಯವಾಗಿ ಪುರುಷರು ಈ ರೀತಿ ತಮ್ಮ ಪತ್ನಿಯ ಮೇಲೆ ದೂರು ಕೊಡುವಾಗ ಆಕೆಯಿಂದ ಈ ರೀತಿಯ ತ’ಪ್ಪುಗಳಾಗುತ್ತಿವೆ, ಇದರಿಂದ ಇಂತಹ ಸಮಸ್ಯೆಗಳು ಆಗುತ್ತಿವೆ, ಹಾಗಾಗಿ ಆಕೆಗೆ ಬುದ್ಧಿ ಹೇಳಿ ತಿದ್ದುಕೊಂಡು ನಡೆದುಕೊಂಡು ಹೋಗುವಂತೆ ತಿಳಿ ಹೇಳಿ ಎಂದು ಸಲಹೆಗಳನ್ನು ಕೇಳುತ್ತಾರೆ.
ಆದರೆ ಮಹಿಳೆಯರಲ್ಲಿ ಹೆಚ್ಚಿನ ಪ್ರಕರಣಗಳಲ್ಲಿ ಈ ರೀತಿಯ ತಾಳ್ಮೆ ಇರುವುದು ಕಡಿಮೆ. ನೇರವಾಗಿ ಅವರು ಮಹಿಳಾ ಮತ್ತು ಕಲ್ಯಾಣ ಆಯೋಗಕ್ಕೆ ಅಥವಾ ಪೊಲೀಸ್ ಠಾಣೆಗೆ ಹೋಗಿ ಗಂಡನಿಂದ ದೌ’ರ್ಜ’ನ್ಯವಾಗುತ್ತಿದೆ ಎಂದು ಕೇಸ್ ಕೊಡುತ್ತಾರೆ. ಪೊಲೀಸ್ ಸ್ಟೇಷನ್ ನಲ್ಲಿ ಯಾರು ಯಾವುದೇ ರೀತಿಯ ಅದರಲ್ಲೂ ವಿಶೇಷವಾಗಿ ಮಹಿಳೆಯರು ದೂರು ಸಲ್ಲಿಸಿದಾಗ ಅದನ್ನು ತೆಗೆದುಕೊಳ್ಳುವುದಿಲ್ಲ ಎನ್ನುವ ಮಾತೇ ಇಲ್ಲ.
ಪೊಲೀಸರಿಗೆ ಯಾವುದೇ ಪ್ರಕರಣಗಳನ್ನು ಜಡ್ಜ್ಮೆಂಟ್ ಮಾಡುವ ಅಧಿಕಾರ ಇಲ್ಲದೆ ಇದ್ದರೂ ಕಂಪ್ಲೇಂಟ್ ಕೊಟ್ಟವರು ಹಾಗೂ ಆರೋಪಿಗಳು ಇಬ್ಬರನ್ನು ಕರೆಸಿ ನಡುವೆ ಸಂದಾನ ಮಾಡುವ ಪ್ರಯತ್ನವನ್ನು ಖಂಡಿತ ಮಾಡುತ್ತಾರೆ, ಆ ಮಟ್ಟದ ಅಧಿಕಾರ ಕಾನೂನಿನ ಮೂಲಕ ಅವರಿಗೆ ನೀಡಲಾಗಿದೆ. ಹೀಗಾಗಿ ದೂರು ಕೊಟ್ಟ ಸಮಯದಲ್ಲಿ ಅವರ ಸಂಗಾತಿಗಳನ್ನು ಪೊಲೀಸ್ ಠಾಣೆಗೆ ಕರೆಸುತ್ತಾರೆ.
ಆಗ ಇಬ್ಬರ ನಡುವೆ ಸಂಬಂಧ ಸುಧಾರಿಸಿಕೊಂಡು ಹೋಗಲಿ ಎನ್ನುವ ಕಾರಣಕ್ಕಾಗಿ ಬುದ್ಧಿ ಮಾತು ಹೇಳಿ ಗಂಡನ ತ’ಪ್ಪು ಇದ್ದಾಗ ಗಂಡನಿಂದ ಇನ್ನೂ ಮುಂದೆ ಹೀಗೆ ಮಾಡುವುದಿಲ್ಲ ಎಂದು ಮುಚ್ಚಳಿಕೆ ಬರೆಸಿಕೊಳ್ಳುತ್ತಾರೆ. ಒಂದು ವೇಳೆ ಕುಡುಕನಾಗಿದ್ದರೆ ದುಡಿಯದೇ ಇದ್ದರೆ ಅಥವಾ ಕುಟುಂಬವನ್ನು ಸರಿಯಾಗಿ ನೋಡಿಕೊಳ್ಳದಿದ್ದರೆ ಇನ್ನು ಮುಂದೆ ಕುಟುಂಬ ನಿರ್ವಹಣೆಗೆ ಹಣ ಕೊಡುತ್ತೇನೆ, ಹೆಂಡತಿಗೆ ಹೊಡೆಯುವುದಿಲ್ಲ ಎಂದೆಲ್ಲಾ ಮುಚ್ಚಳಿಕೆಯಲ್ಲಿ ಬರೆದು ಸಹಿ ಮಾಡಿ ಕೊಟ್ಟಿರುತ್ತಾನೆ.
ಸಂಧಾನ ಮುರಿದು ಬಿದ್ದರೂ ಕೂಡ ಇನ್ನು ಮುಂದೆ ಅವರ ಜೊತೆ ಬದುಕಲು ಸಾಧ್ಯವೇ ಇಲ್ಲ ಎನ್ನುವಂತಹ ಪ್ರಕರಣಗಳಲ್ಲಿ ನಾನು ಇವರ ಜೊತೆ ಬಾಳುವುದಿಲ್ಲ ಬೇರೆ ಹೋಗುತ್ತೇನೆ ಎಂದು ಮುಚ್ಚಳಿಕೆ ಬರೆದು ಕೊಟ್ಟು ಮಹಿಳೆಯರು ಹೋಗಿರುತ್ತಾರೆ ಅಥವಾ ಪುರುಷರೇ ಹೆಂಡತಿ ಬೇಡ ಎಂದು ಮುಚ್ಚಳಿಕೆ ಕೊಟ್ಟು ಹೋಗಿರುತ್ತಾರೆ.
ಆಗ ಅದರ ಆಧಾರದ ಮೇಲೆ ಮರು ಮದುವೆ ಆಗಬಹುದಾ ಎಂದು ಕೇಳುತ್ತಾರೆ ಇದಕ್ಕೆ ಸ್ಪಷ್ಟನೆಯನ್ನು ಈ ಅಂಕಣದಲ್ಲಿ ಕೊಡಲು ಇಚ್ಚಿಸುತ್ತೇವೆ. ಅದೇನೆಂದರೆ, ಈ ರೀತಿ ಮುಚ್ಚಳಿಕೆಯಲ್ಲಿ ಹೆಂಡತಿ ಬೇಡ ಅಥವಾ ಗಂಡ ಬೇಡ ಎಂದು ಬರೆದುಕೊಟ್ಟ ಕಾರಣಕ್ಕೆ ಅವರ ಮತ್ತೆ ಮದುವೆ ಆಗುವುದಕ್ಕೆ ಸಾಧ್ಯವಿಲ್ಲ ಕೋರ್ಟ್ ಗೆ ಹೋಗಿ ಕೋರ್ಟಿಂದ ಅದನ್ನು ತೀರ್ಮಾನ ಮಾಡಿಕೊಳ್ಳಬೇಕು.
ಈ ರೀತಿ ಮುಚ್ಚಳಿಕೆ ಬರೆದು ಕೊಟ್ಟಾಗಲು ಕೂಡ ಕೋರ್ಟ್ ನಲ್ಲಿ ಮತ್ತೊಮ್ಮೆ ಕೇಳುತ್ತಾರೆ. ನಿಮ್ಮಿಂದ ಬಲವಂತವಾಗಿ ಮುಚ್ಚಳಿಕೆ ಬರೆಸಿಕೊಂಡಿದ್ದಾರಾ ಅಥವಾ ನಿಮ್ಮ ಮೇಲೆ ಒತ್ತಾಯಪೂರ್ವವಾಗಿ ಈ ರೀತಿ ಬಳಸಿಕೊಂಡಿದ್ದಾರಾ ಎಂದು ಮತ್ತೊಮ್ಮೆ ಕೇಳುತ್ತಾರೆ ಹಾಗೆ ಸೆಕ್ಷನ್ 25 ಎವಿಡೆನ್ಸ್ ಆಕ್ಟ್ ಪ್ರಕಾರ ಪೊಲೀಸ್ ಸ್ಟೇಷನ್ ನಲ್ಲಿ ಕೊಟ್ಟಿರುವ ಈ ಮುಚ್ಚಳಿಕೆಗಳಿಗೆ ಕೋರ್ಟ್ ನಲ್ಲಿ ಮಾನ್ಯತೆ ಇರುವುದಿಲ್ಲ.
ಹಾಗಾಗಿ ಮುಚ್ಚಳಿಕೆ ಬರೆದು ಕೊಟ್ಟಿದ್ದೇನೆ ಎಂದು ಹೆದರಿಕೊಳ್ಳುವ ಅಥವಾ ಮುಚ್ಚಳಿಕೆಯಲ್ಲಿ ಬರೆದುಕೊಟ್ಟಿದ್ದೇನೆ ಎಂದು ಹೆದರದೆ ಇರುವ ಎರಡು ಕೂಡ ತಪ್ಪಾಗುತ್ತದೆ. ಇದು ಕೇವಲ ಸಂಧಾನಕ್ಕಾಗಿ ಸಮಾಧಾನ ಪಡಿಸುವ ಕಾರ್ಯ ಆಗಿರುತ್ತದೆ ಯಾವುದೇ ಪ್ರಕರಣದ ತೀರ್ಪು ಆಗಿದ್ದರು ಜಡ್ಜ್ಮೆಂಟ್ ಕೋರ್ಟ್ ನಿಂದ ಬರಬೇಕು.