ಹೊಸ ರೇಷನ್ ಕಾರ್ಡ್ ಪಡೆಯಲು ಈ ಮೂರು ದಾಖಲೆಗಳು ಸಲ್ಲಿಸುವುದು ಕಡ್ಡಾಯ.!

ರೇಷನ್ ಕಾರ್ಡ್ (Ration Card) ಎನ್ನುವುದು ಪ್ರತಿಯೊಬ್ಬರಿಗೂ ಕೂಡ ಅಗತ್ಯವಾಗಿ ಬೇಕಾದ ಒಂದು ಪ್ರಮುಖ ದಾಖಲೆ. ಅದರಲ್ಲೂ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು BPL ರೇಷನ್ ಕಾರ್ಡ್ ಹೊಂದಿದ್ದಲ್ಲಿ ಅವರಿಗೆ ಸರ್ಕಾರ ಕಡೆಯಿಂದ ಅನೇಕ ಸವಲತ್ತು ಕೂಡ ಸಿಗುತ್ತದೆ.

WhatsApp Group Join Now
Telegram Group Join Now

ಈಗಂತೂ ಗ್ಯಾರಂಟಿ ಯೋಜನೆಗಳ ಕಾಲವಾಗಿದ್ದು, ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆಗಳ ಹಣ ಕೊಡಲು ರೇಷನ್ ಕಾರ್ಡ್ ಇರಲೇಬೇಕು ಆದರೆ ರೇಷನ್ ಕಾರ್ಡ್ ಗೆ ಸಂಬಂಧಿಸಿದಂತೆ ಜನಸಾಮಾನ್ಯರಿಂದ ಸಾಕಷ್ಟು ದೂರುಗಳಿವೆ. ಕರ್ನಾಟಕ ವಿಧಾನಸಭೆ ಚುನಾವಣೆ-2023ರ (Assembly Election – 2023) ವೇಳೆ ನೀತಿ ಸಂಹಿತೆ (Code of Conduct) ಕಾರಣಕ್ಕಾಗಿ ರೇಷನ್ ಕಾರ್ಡ್ ವಿತರಣೆ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವಿಕೆ ಮತ್ತು ತಿದ್ದುಪಡಿ ಮಾಡುವ ಕಾರ್ಯ ವನ್ನು ಸ್ಥಗಿತಗೊಳಿಸಲಾಗಿತ್ತು.

ಈ ಸುದ್ದಿ ಓದಿ:- ಈ ಲಿಸ್ಟ್ ನಲ್ಲಿ ಇರುವ ರೈತರಿಗೆ ಬರ ಪರಿಹಾರ ಹಣ ಬಿಡುಗಡೆಯಾಗಿದೆ ಈ ರೀತಿ ಚೆಕ್ ಮಾಡಿಕೊಳ್ಳಿ.!

ನಂತರ ಈ ಪ್ರಕ್ರಿಯೆಗೆ ಸರಿಯಾಗಿ ಕ್ರಮ ಕೈಗೊಂಡಿಲ್ಲ ಎನ್ನುವುದು ನಾಗರಿಕರ ದೂರು. ಆದರೆ ಕಾಂಗ್ರೆಸ್ ಸರ್ಕಾರ ಆಳ್ವಿಕೆ ಬಂದ ಮೇಲು ಕೂಡ ಕಡಿಮೆ ಅವಧಿಗೆ ನಾಲ್ಕೈದು ಬಾರಿ ಹೊಸದಾಗಿ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ತಿದ್ದುಪಡಿ ಮಾಡಲು ಅವಕಾಶ ನೀಡಿತ್ತು. ಸರ್ವರ್ ಹೊಡೆತ ಮತ್ತು ಇನ್ನಿತರ ತಾಂತ್ರಿಕ ಸಮಸ್ಯೆಗಳ ಕಾರಣದಿಂದಾಗಿ ಇನ್ನು ಅನೇಕರ ಸಮಸ್ಯೆಗಳು ಪರಿಹಾರವಾಗದೇ ಹಾಗೆ ಉಳಿದಿದೆ ಅವರಿಗೆಲ್ಲ ಒಂದು ಉಪಯುಕ್ತ ಮಾಹಿತಿಯನ್ನು ಈ ಅಂಕಣದ ಮೂಲಕ ತಿಳಿಸ ಬಯಸುತ್ತಿದ್ದೇವೆ.

ರೇಷನ್ ಕಾರ್ಡ್ ಗೆ ಬೇಕಾದ ಅಗತ್ಯ ದಾಖಲೆಗಳನ್ನು ನೀವು ಸಿದ್ಧಪಡಿಸಿಕೊಂಡಿದ್ದರೆ ಸರ್ಕಾರ ಅನುಮತಿ ನೀಡಿದ ತಕ್ಷಣವೇ ಹೋಗಿ ಅರ್ಜಿ ಸಲ್ಲಿಸಬಹುದು, ಇಲ್ಲವಾದಲ್ಲಿ ಸರ್ವರ್ ಇದ್ದರೂ ನಿಮ್ಮ ಬಳಿ ದಾಖಲೆ ಇಲ್ಲದೆ ಇದ್ದಾಗ ಮತ್ತೆ ತೊಂದರೆಗೆ ಸಿಲುಕುತ್ತೀರಿ. ಶೀಘ್ರದಲ್ಲೇ ಸರ್ಕಾರ ಮತ್ತೊಮ್ಮೆ ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸುವುದಕ್ಕೆ ಮತ್ತು ರೇಷನ್ ಕಾರ್ಡ್ ತಿದ್ದುಪಡಿ ಮಾಡಿಕೊಳ್ಳುವುದಕ್ಕೆ ಅನುಮತಿ ನೀಡಿ ಈಗಾಗಲೇ ಅನುಮೋದನೆ ನೀಡಿರುವ ವಿತರಣೆ ಮಾಡಲು ಕೂಡ ಚಿಂತನೆ ನಡೆಸುತ್ತಿದೆ.

ಈ ಸುದ್ದಿ ಓದಿ:- CCTV ಕ್ಯಾಮೆರಾ ಇನ್ಸ್ಟಾಲೇಶನ್ ಹಾಗೂ ಸರ್ವಿಸ್ ಮಾಡಲು ಉಚಿತ ತರಬೇತಿ ಕೊಡಲಾಗುತ್ತದೆ ಆಸಕ್ತರು ಭಾಗವಾಹಿಸಿ.!

ಹಾಗಾದರೆ ಏನೆಲ್ಲಾ ದಾಖಲೆಗಳು ಬೇಕು? ಯಾರಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ ಮತ್ತು ಎಲ್ಲಿ ಅರ್ಜಿ ಸಲ್ಲಿಸಬೇಕು ಎನ್ನುವ ಮಾಹಿತಿಯ ವಿವರ ಹೀಗಿದೆ ನೋಡಿ.

ಬೇಕಾಗುವ ದಾಖಲೆಗಳು:-

* ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್ ಮತ್ತು ಬಯೋಮೆಟ್ರಿಕ್ ಮಾಹಿತಿ (ಕಳೆದ 10 ವರ್ಷಗಳಿಂದ ಒಮ್ಮೆ ಕೂಡ ಆಧಾರ್ ಅಪ್ಡೇಟ್ ಮಾಡಿಸಿಲ್ಲ ಅಪ್ಡೇಟ್ ಮಾಡಿಸಿ ನಂತರ ಅರ್ಜಿ ಸಲ್ಲಿಸಿ ಇಲ್ಲವಾದಲ್ಲಿ ಅರ್ಜಿ ಸಲ್ಲಿಸುವ ವೇಳೆ ಸಮಸ್ಯೆ ಆಗುತ್ತದೆ)
* ಕುಟುಂಬದ ಮುಖ್ಯಸ್ಥರ ಹೆಸರಿನಲ್ಲಿ ಅಥವಾ ಕುಟುಂಬದ ಯಾವುದಾದರೂ ಒಬ್ಬ ಸದಸ್ಯನ ಹೆಸರಿನಲ್ಲಿ ಆದಾಯ ಪ್ರಮಾಣ ಪತ್ರ
* ಐದು ವರ್ಷದ ಒಳಗಿನ ಮಕ್ಕಳಾಗಿದ್ದರೆ ಜನನ ಪ್ರಮಾಣ ಪತ್ರ

ಅರ್ಜಿ ಸಲ್ಲಿಸಲು ಕಂಡಿಷನ್ ಗಳು:-

* ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು
* ರೇಷನ್ ಕಾರ್ಡ್ ಹೊಂದಿರದ ಕುಟುಂಬವಾಗಿರಬೇಕು ಅಥವಾ ಈಗ ಹೊಸದಾಗಿ ಮದುವೆ ಆದವರು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು
* B ರೇಷನ್ ಕಾರ್ಡ್ ಬಯಸಿ ಅರ್ಜಿ ಸಲ್ಲಿಸುವುದು ಬಡತನ ರೇಖೆಗಿಂತ ಕೆಳಗಿರುವವರಾಗಿರಬೇಕು ಅಂದರೆ ವಾರ್ಷಿಕವಾಗಿ 3 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರಬೇಕು

ಅರ್ಜಿ ಸಲ್ಲಿಸುವ ವಿಧಾನ:-

ಸರ್ಕಾರವು ಹೊಸ ರೇಷನ್ ಕಾರ್ಡಿಗೆ ಅರ್ಜಿ ಆಹ್ವಾನ ಮಾಡಿದ ತಕ್ಷಣ ಹತ್ತಿರದಲ್ಲಿರುವ ಯಾವುದೇ ಗ್ರಾಮ ಒನ್, ಕರ್ನಾಟಕ ಒನ್ ಅಥವಾ ಬೆಂಗಳೂರು ಒನ್ ಅಥವಾ ಬಾಪೂಜಿ ಸೇವಾ ಕೇಂದ್ರಗಳಿಗೆ ಹೋಗಿ ಅರ್ಜಿ ಸಲ್ಲಿಸಬಯಹುದು. ಖಾಸಗಿಯವರಿಗೆ ಅವಕಾಶ ಇರುವುದಿಲ್ಲ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now