ದೇಶದಲ್ಲಿ ಪ್ರತಿ ವರ್ಷವೂ ಕೂಡ ಲಕ್ಷಾಂತರ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸವನ್ನು ಪೂರೈಸುತ್ತಾರೆ ಆದರೆ ಎಲ್ಲರಿಗೂ ಕೂಡ ಸರ್ಕಾರಿ ಉದ್ಯೋಗ ಅಥವಾ ಖಾಸಗಿ ಕಂಪನಿಗಳಲ್ಲಿ ಉದ್ಯೋಗ ಸಿಗುವುದಿಲ್ಲ. ಸಿಕ್ಕರೂ ಈ ಬಗ್ಗೆ ಆಸಕ್ತಿ ಇಲ್ಲದೆ ಹಲವರಿಗೆ ತಾವೆ ಸ್ವಂತ ಉದ್ಯಮ ಆರಂಭಿಸಬೇಕು ಎನ್ನುವ ಕನಸಿರುತ್ತದೆ. ಈ ರೀತಿಯಾಗಿ ನೀವು ಕೂಡ ಆಲೋಚಿಸುತ್ತಿದ್ದರೆ ನಿಮಗೆ ಸ್ವಂತ ಉದ್ಯಮ ಆರಂಭಿಸಲು ಬೇಕಾದ ತರಬೇತಿ ಮತ್ತು ಸೂಕ್ತವಾದ ಮಾರ್ಗದರ್ಶನವನ್ನು ಅನೇಕ ಕಂಪನಿಗಳು ನೀಡುತ್ತವೆ.
ಆದರೆ ಎಲ್ಲರಿಗೂ ಈ ರೀತಿ ಹಣ ತೆತ್ತು ಅವಕಾಶ ಸೃಷ್ಟಿಸಿಕೊಳ್ಳುವ ಅನುಕೂಲತೆ ಇರುವುದಿಲ್ಲ ಇಂತವರಿಗೆ ಪ್ರತಿ ಜಿಲ್ಲೆಯಲ್ಲೂ ಕೂಡ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಗಳ ಮೂಲಕ ಸರ್ಕಾರ ಹಾಗೂ ದೇಶದ ಪ್ರತಿಷ್ಠಿತ ಕಂಪನಿಗಳ ಸಹಯೋಗದೊಂದಿಗೆ ಉಚಿತವಾಗಿ ವಸತಿ ಊಟ ಸೌಲಭ್ಯದೊಂದಿಗೆ ತರಬೇತಿ ನೀಡಲಾಗುತ್ತದೆ.
ಈ ಸುದ್ದಿ ಓದಿ:- ವಸತಿ ಶಾಲೆ ಪ್ರವೇಶಕ್ಕೆ ಅರ್ಜಿ ಆಹ್ವಾನ.! ಯಾವುದೇ ಪರೀಕ್ಷೆ ಇಲ್ಲ ನೇರ ಆಯ್ಕೆ.!
ಕೃಷಿ, ಕಂಪ್ಯೂಟರ್, ಡ್ರೈವಿಂಗ್, ಟೈಲರಿಂಗ್, ಫೋಟೋಗ್ರಾಫಿ, ಬ್ಯೂಟಿ ಪಾರ್ಲರ್ ಸೇರಿದಂತೆ ಹಲವಾರು ಬಗೆಯ ತರಬೇತಿಗಳನ್ನು ಇಂತಹ ಸಂಸ್ಥೆಗಳಿಂದ ಪಡೆದುಕೊಂಡು ಬಳಿಕ ಫಲಾನುಭವಿಗಳು ತಮ್ಮ ಕಾಲ ಮೇಲೆ ತಾವೇ ನಿಂತು ದುಡಿಮೆ ಆರಂಭಿಸಿ ಕುಟುಂಬವನ್ನು ಕಾಯ್ದುಕೊಳ್ಳಬಹುದು ಈ ರೀತಿ ಆಸಕ್ತಿ ಹೊಂದಿರುವವರಿಗೆ ಸದ್ಯಕ್ಕೆ ಒಂದು ಗುಡ್ ನ್ಯೂಸ್ ಇದೆ.
ಅದೇನೆಂದರೆ, ಈಗಿನ ಕಾಲದಲ್ಲಿ ಮನೆ, ಅಂಗಡಿ, ಕಚೇರಿ, ಜಮೀನು, ಶಾಲಾ-ಕಾಲೇಜು ಇತ್ಯಾದಿ ಜಾಗಗಳಲ್ಲಿ ಬೇಕಾಗಿರುವ ಅವಶ್ಯಕ ಸಾಧನವಾದ CCTV ಅಳವಡಿಕೆ ಮತ್ತು ಇದನ್ನು ಸರ್ವಿಸ್ ಮಾಡುವ ಬಗ್ಗೆ ತರಬೇತಿಯನ್ನು ಈ ಸ್ವ ಉದ್ಯೋಗ ತರಬೇತಿ ಸಂಸ್ಥೆ ಮೂಲಕ ಕೊಡಲಾಗುತ್ತಿದೆ. ಇದಕ್ಕೆ ಅರ್ಜಿ ಸಲ್ಲಿಸಲು ಯಾರು ಅರ್ಹರು? ಎಷ್ಟು ದಿನಗಳ ತರಬೇತಿ? ಅರ್ಜಿ ಹೇಗೆ ಸಲ್ಲಿಸಬೇಕು ಎನ್ನುವ ಎಲ್ಲಾ ಮಾಹಿತಿಯ ವಿವರ ಹೀಗಿದೆ ನೋಡಿ.
ಈ ಸುದ್ದಿ ಓದಿ:- ಟೀಚರ್ ಕೆಲಸ ಬಿಟ್ಟು ಯಳಗ ಕುರಿ ಸಾಕಿ ಸಕ್ಸಸ್ ಆದ ಮಹಿಳೆ, ಒಂದು ಕುರಿಯಿಂದ 3000 ಲಾಭ.!
ತರಬೇತಿ ಕುರಿತು ಮಾಹಿತಿ:-
* ಕೆನರಾ ಬ್ಯಾಂಕ್ ಸಹಯೋಗದೊಂದಿಗೆ ದಕ್ಷಿಣ ಕನ್ನಡ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ಈ ತರಬೇತಿಯನ್ನು ಆಯೋಜಿಸಿದೆ
* ಆಸಕ್ತರು ಈ ಕೆಳಕಂಡ ವೆಬ್ ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ ನೋಂದಾಯಿಸಿಕೊಳ್ಳಬೇಕು
* ಅರ್ಜಿ ಸಲ್ಲಿಸುವ ವೆಬ್ಸೈಟ್ ವಿಳಾಸ:-
https://docs.google.com/forms/d/e/1FAIpQLSdTkb3WMVXPCsh7af0lLVlorgmmwZH_h1w8_OfD13hXPrH0cw/viewform
* ಮೊದಲು ಅರ್ಜಿ ಸಲ್ಲಿಸಿದವರಿಗೆ ಹಾಗೂ ಬಡತನ ರೇಖೆಗಿಂತ ಕೆಳಗಿರುವ BPL ಕುಟುಂಬಗಳ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ
* ಅರ್ಜಿ ಸಲ್ಲಿಸುವವರ ವಯಸ್ಸು 18 ವರ್ಷ ಮೇಲ್ಪಟ್ಟು 45 ವರ್ಷಗಳ ಒಳಗಿರಬೇಕು.
* ಕನಿಷ್ಠ 10ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿರಬೇಕು, ಕನ್ನಡ ಮತ್ತು ಇಂಗ್ಲಿಷ್ ಓದಲು ಬರೆಯಲು ಬಲ್ಲವರಾಗಿರಬೇಕು.
* ಉಚಿತ ಊಟ ಹಾಗೂ ವಸತಿ ಒಳಗೊಂಡ ತರಬೇತಿ ಆಗಿರುತ್ತದೆ. 13 ದಿನಗಳ ತರಬೇತಿ ಕಾರ್ಯಕ್ರಮ ಇದಾಗಿದ್ದು, ಭಾಗವಹಿಸುವ ಅಭ್ಯರ್ಥಿಗಳು ಆಸಕ್ತಿಯಿಂದ ಪಾಲ್ಗೊಂಡು ನಂತರ ಸ್ವಂತ ಉದ್ಯಮ ಆರಂಭಿಸಲು ಶಕ್ತರಾಗಿರಬೇಕು ಎನ್ನುವ ಕಂಡೀಶನ್ ಇದೆ.
ಈ ಸುದ್ದಿ ಓದಿ:- ಬೋರ್ ವೆಲ್ ನಲ್ಲಿ ನೀರು ಕಡಿಮೆ ಆಗಿದ್ದರೆ ಈ ಟಿಪ್ಸ್ ಫಾಲೋ ಮಾಡಿ ಮತ್ತೆ ಮೊದಲಿನಂತೆ ನೀರು ಜಾಸ್ತಿ ಬರುತ್ತೆ.!
ತರಬೇತಿ ನಡೆಯುವ ದಿನಾಂಕ:-
ಮೇ 27, 2024 ರಿಂದ ಜೂನ್ 08, 2024 ರವರೆಗೆ ಈ ತರಬೇತಿ ಕಾರ್ಯಕ್ರಮ ನಡೆಯುತ್ತದೆ.
ತರಬೇತಿ ನಡೆಯುವ ಸ್ಥಳ:-
ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ,
ಇಂಡಸ್ಟ್ರಿಯಲ್ ಏರಿಯಾ,
ಹೆಗಡೆ ರಸ್ತೆ,
ಕುಮುಟಾ,
ಉತ್ತರ ಕನ್ನಡ ಜಿಲ್ಲೆ.
ಈ ಸುದ್ದಿ ಓದಿ:- ಎಲ್ಲರಿಗೂ ಗುಡ್ ನ್ಯೂಸ್ ಗ್ರಾಮ ಪಂಚಾಯಿತಿಯಿಂದ ಸಿಗಲಿದೆ 2 ಲಕ್ಷ ಅನುದಾನ.!
ಬೇಕಾಗುವ ದಾಖಲೆಗಳು:-
* ಆಧಾರ್ ಕಾರ್ಡ್
* ರೇಷನ್ ಕಾರ್ಡ್
* ಬ್ಯಾಂಕ್ ಪಾಸ್ ಬುಕ್ ವಿವರ
* ಅಭ್ಯರ್ಥಿಯ 4 ಪಾಸ್ಪೋರ್ಟ್ ಅಳತೆಯ ಫೋಟೋ
* ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:-
9449860007, 9538281989, 9916783825, 8880444612.