Deprecated: strtolower(): Passing null to parameter #1 ($string) of type string is deprecated in /home/u302298408/domains/rishithepower.com/public_html/wp-content/plugins/taboola/simple_html_dom.php on line 712
ಕೃಷಿ ಎನ್ನುವುದು ಒಂದು ವ್ಯಾಪಾರ ಅಲ್ಲದೆ ಬದುಕುವ ರೀತಿ ಎಂದು ಹೇಳಬಹುದು. ಯಾಕೆಂದರೆ ಉಳಿದ ಎಲ್ಲಾ ಕ್ಷೇತ್ರಕ್ಕಿಂತ ನಾವು ಹೆಚ್ಚು ಒಲವು ಕೊಟ್ಟು ಮನಸಾರೆಯಾಗಿ ಪ್ರಕೃತಿ ಜೊತೆಗೆ ಜೀವರಾಶಿಗಳ ಜೊತೆಗೆ ಬದುಕುವ ಸಂಸ್ಕೃತಿ. ಇದನ್ನು ಅರಿತ ಯುವಜನತೆ ಈಗ ನಿಧಾನವಾಗಿ ಹಳ್ಳಿಗಳಲ್ಲಿ ವಾಸಿಸಲು ಹೆಚ್ಚಿಸುತ್ತಿದ್ದಾರೆ. ಓದು ಮತ್ತು ಉದ್ಯೋಗ ಅರಸಿ ಸಿಟಿ ಗೆ ಯಹೋಗಿದ್ದವರು ಪಟ್ಟಣಗಳಿಂದ ಹಳ್ಳಿಗೆ ಹಿಂತಿರುಗಲು ಮನಸ್ಸು ಮಾಡುತ್ತಿದ್ದಾರೆ.
ಈ ರೀತಿ ಬಂದವರು ಕೃಷಿ ಜೊತೆಗೆ ಕೃಷಿ ಪೂರಕ ಚಟುವಟಿಕೆಗಳಲ್ಲಿ ಕೂಡ ತೊಡಗಿಕೊಂಡು ಯಾವುದೇ ಬಿಸಿನೆಸ್ ಮ್ಯಾನ್ ಗಿಂತ ಕಡಿಮೆ ಇಲ್ಲದಂತೆ ಕೈ ತುಂಬಾ ಆದಾಯ ಪಡೆಯುತ್ತಿದ್ದಾರೆ. ಅದೇ ರೀತಿಯಾಗಿ ತಾವು ಮಾಡುತ್ತಿದ್ದ ಟೀಚರ್ ಉದ್ಯೋಗ ಬಿಟ್ಟು ಸಮಗ್ರ ಕೃಷಿ ಅಳವಡಿಸಿಕೊಂಡು ಇಂದು ಕುರಿ ಮೇಕೆ ಸಾಕಾಣಿಕೆಯಲ್ಲಿ ಕೈತುಂಬ ಆದಾಯ ಪಡೆದುಕೊಂಡಿರುವ ಚಿತ್ರದುರ್ಗ ಜಿಲ್ಲೆಯ ಹೊಸಕೋಟೆ ಸಮೀಪದ ಹಳ್ಳಿ ಯುವತಿ ಸಾಧನೆ ಬಗ್ಗೆ ಮತ್ತು ಅವರು ಈ ವಿಚಾರವಾಗಿ ತಿಳಿಸಿಕೊಟ್ಟ ಕೆಲ ಪ್ರಮುಖ ಮಾಹಿತಿ ಬಗ್ಗೆ ಇಂದಿನ ಅಂಕಣದಲ್ಲಿ ವಿವರಿಸುತ್ತಿದ್ದೇವೆ.
ಈ ಸುದ್ದಿ ಓದಿ:- ಬೋರ್ ವೆಲ್ ನಲ್ಲಿ ನೀರು ಕಡಿಮೆ ಆಗಿದ್ದರೆ ಈ ಟಿಪ್ಸ್ ಫಾಲೋ ಮಾಡಿ ಮತ್ತೆ ಮೊದಲಿನಂತೆ ನೀರು ಜಾಸ್ತಿ ಬರುತ್ತೆ.!
ಇವರು ಹೇಳುವ ಪ್ರಕಾರವಾಗಿ ತಾನು ಕೂಡ ಕೃಷಿಯನ್ನೇ ಅನುಸರಿಸಬೇಕು ಎಂದು ನಿರ್ಧಾರ ಮಾಡಿದ ಮೇಲೆ ಇವರು ಸರ್ಕಾರದ ಕಡೆಯಿಂದ ಸಿಗುವ ಎರಡು ತರಬೇತಿ ಕೇಂದ್ರಗಳಲ್ಲಿ ಹೋಗಿ ಕೆಲವು ದಿನಗಳ ಕಾಲ ತರಬೇತಿ ಪಡೆದು ಬಂದರಂತೆ ನಂತರ ಕುರಿ ಮೇಕೆ ಸಾಕಾಣಿಕೆ ಬಗ್ಗೆ ಮನಸ್ಸು ಮಾಡಿ ಶೆಡಾ ಮಾಡಿ ಪ್ರತಿ ಬ್ಯಾಚ್ ನಲ್ಲಿ 60 ರಿಂದ 80 ಕುರಿಗಳನ್ನು ತಂದು ಸಾಕುತ್ತಾರಂತೆ.
ಇವರು ಕುರಿ ತರುವಾಗಲೇ 45 ದಿನ ಮೇಲ್ಪಟ್ಟ 3-4 ತಿಂಗಳು ಇರುವ ಕುರಿಗಳನ್ನು ತರುತ್ತಾರಂತೆ ಮತ್ತು ಅವುಗಳ ಕೊಂಬು ಹಾಗೂ ಕಾಲಿನ ಲಕ್ಷಣ ನೋಡಿ ತರುತ್ತಾರಂತೆ. ಇವು ತಮ್ಮ ಫಾರ್ಮ್ ಗೆ ಬಂದ ಬಳಿಕ 15 ದಿನಗಳವರೆಗೆ ಬೆಲ್ಲದ ನೀರು, ಗ್ಲುಕೋಸ್ ಈ ರೀತಿ ಈ ವಾತಾವರಣಕ್ಕೆ ಹೊಂದಿಕೊಳ್ಳುವ ತಂಪಾದ ಲಘು ಆಹಾರ ಕೊಟ್ಟು ಪುಷ್ಟಿ ಮಾಡಿ ನಂತರ ಶೇಂಗಾ ಹುಲ್ಲು ರಾಗಿ ಹುಲ್ಲು ಹುಳ್ಳಿ ಹುಲ್ಲು ಬಿಳಿ ಜೋಳದ ಕಡ್ಡಿ ಹುಲ್ಲು ಇತ್ಯಾದಿಗಳನ್ನು ಹಾಕುತ್ತೇವೆ ಎಂದು ಹೇಳುತ್ತಾರೆ ಇವರು.
ಈ ಸುದ್ದಿ ಓದಿ:- ಎಲ್ಲರಿಗೂ ಗುಡ್ ನ್ಯೂಸ್ ಗ್ರಾಮ ಪಂಚಾಯಿತಿಯಿಂದ ಸಿಗಲಿದೆ 2 ಲಕ್ಷ ಅನುದಾನ.!
ಇವರು ಕೊಡುವ ಟಿಪ್ ಏನಂದರೆ ಹಸಿ ಆಹಾರ ಕೊಟ್ಟಾಗ ಇನ್ಫೆಕ್ಷನ್ ಆಗುವ ಕಾಯಿಲೆ ಬೀಳುವ ಸಾಧ್ಯತೆ ಹೆಚ್ಚು ಹಾಗಾಗಿ ಒಣ ಆಹಾರ ಬೆಸ್ಟ್ ಒಂದು ಕುರಿಗೆ 400 ಗ್ರಾಂ ವರೆಗೂ ಕೂಡ ಮೇವು ಬೇಕಾಗುತ್ತದೆ ದಿನದಲ್ಲಿ ಎರಡು ಬಾರಿ ಫೀಡ್ ಮಾಡುತ್ತೇವೆ ಎಂದು ಹೇಳುತ್ತಾರೆ. ಇದರ ಜೊತೆಗೆ ನೀರು ಮತ್ತು ಆರೈಕೆಯೂ ಮುಖ್ಯ ಹಾಗಾಗಿ ಹೆಣ್ಣು ಮಕ್ಕಳಿಗೆ ಹೇಳಿ ಮಾಡಿಸಿದ ಬಿಸಿನೆಸ್ ಆಗಿದೆ ಎನ್ನುವುದು ಇವರ ಅಭಿಪ್ರಾಯ.
ಶೆಡ್ ಮಾಡಲು ಕೂಡ ಹೆಚ್ಚಿನ ಬಂಡವಾಳ ಬೇಡ, ಕಾಂಪೌಂಡ್ ಬ್ಲಾಕ್ ಗಳನ್ನು ಹಾಕಿ ಮೇಲೆ ಶೀಟ್ ಮುಚ್ಚಿ ಕಡಿಮೆ ಬಂಡವಾಳದಲ್ಲಿ ಆರಂಭಿಸಿ ನಂತರ ಸಕ್ಸಸ್ ಆದ್ಮೇಲೆ ದೊಡ್ಡ ಪ್ರಮಾಣದಲ್ಲಿ ಪ್ಲಾನ್ ಮಾಡಿ ಯಾಕೆಂದರೆ ಆರಂಭದಲ್ಲಿ ಸ್ಟ್ರಗಲ್ ಇರುತ್ತದೆ ಎನ್ನುವ ಸಲಹೆಯನ್ನು ಕೊಡುತ್ತಾರೆ.
ಕುರಿಗಳನ್ನು ಮಾರುವ ವಿಚಾರಕ್ಕೆ ಬಂದರೆ ನಾವು ಯಾವುದೇ ಮಾರ್ಕೆಟಿಂಗ್ ಮಾಡುವುದಿಲ್ಲ ನಮ್ಮ ಫಾರಂ ಗೆ ಬಂದು ಖರೀದಿಸಿ ಹೋಗುತ್ತಾರೆ, ಜಾತ್ರೆಗಳು ಹಬ್ಬಗಳ ಸೀಸನ್ ನಲ್ಲಿ ವಿಪರೀತ ಬೇಡಿಕೆ ಇರುತ್ತದೆ. 35KG ಬಂದ ಮೇಲೆ ಆ ಕುರಿಯನ್ನು ಮಾರಾಟ ಮಾಡುತ್ತೇವೆ.
ಈ ಸುದ್ದಿ ಓದಿ:- 30% ಗ್ಯಾಸ್ ಉಳಿತಾಯ 100% ಸೇಫ್ಟಿ, ಮನೆ ಗೃಹಿಣಿಯರ ಬಗ್ಗೆ ಕಾಳಜಿ ಇರುವವರು ಈ ಮಾಹಿತಿ ತಿಳಿದುಕೊಳ್ಳಿ.!
ಒಂದು ಕುರಿಗೆ ಕಡಿಮೆ ಎಂದರೂ 3000 ಕ್ಕಿಂತ ಹೆಚ್ಚು ಲಾಭ ಬರುತ್ತದೆ ವರ್ಷಕ್ಕೆ ಎರಡು ಬ್ಯಾಚ್ ಎಂದುಕೊಂಡ ಈಗ ವರ್ಷಕ್ಕೆ 3 ಬ್ಯಾಚ್ ಮುಗಿದು ನಾಲ್ಕು ಬ್ಯಾಚ್ ಕೂಡ ಆಗುತ್ತದೆ ಅಷ್ಟು ಚೆನ್ನಾಗಿ ನಡೆಯುತ್ತಿದೆ ಎನ್ನುತ್ತಾರೆ ಇವರು ಈ ಬಗ್ಗೆ ಆಸಕ್ತರಾಗಿದ್ದರೆ ಹೆಚ್ಚಿನ ಮಾಹಿತಿ ಪಡೆಯಲು ವಿಡಿಯೋವನ್ನು ಪೂರ್ತಿಯಾಗಿ ನೋಡಿ.