ಸಾಮಾನ್ಯವಾಗಿ ಬೇಸಿಗೆಕಾಲ ಬಂದಾಗ ಬೋರ್ವೆಲ್ ನಲ್ಲಿ ನೀರು ಕಡಿಮೆ ಆಗುತ್ತದೆ ಇದು ನಿರೀಕ್ಷಿತ. ಆದರೆ ಈ ವರ್ಷ ಬೇಸಿಗೆ ಮಾತ್ರ ಅಲ್ಲದೆ ಭೀಕರ ಒಂದು ವರ್ಷ ಬರಗಾಲ ಕೂಡ ಹೊಡೆದಿರುವುದು ರೈತರ ಪರಿಸ್ಥಿತಿಯನ್ನು ತೀರಾ ಹದಗೆಡಿಸಿದೆ. ಮಳೆ ಆಶ್ರಿತ ಜಮೀನು ಹೊಂದಿರುವ ರೈತರ ಕಷ್ಟ ಒಂದು ರೀತಿ ಆಗಿದ್ದರೆ ಪಂಪ್ಸೆಟ್ ಸೌಲಭ್ಯ ಹೊಂದಿರುವವರ ಪರಿಸ್ಥಿತಿ ಇದಕ್ಕೆ ಹೊರತೇನಿಲ್ಲ.
ಕೃಷಿ ಮಾಡಲು ಪ್ರತಿಯೊಬ್ಬರಿಗೂ ಕೂಡ ನೀರು ಬೇಕೇ ಬೇಕು ನೀರಿನ ಸೌಲಭ್ಯಕ್ಕಾಗಿ ಲಕ್ಷಾಂತರ ಹಣ ಖರ್ಚು ಮಾಡಿ ಬೋರ್ವೆಲ್ ಕೊರೆಸಿದ್ದರು ಕೂಡ ಮತ್ತೆ ಬೇಸಿಗೆ ಕಾರಣಕ್ಕೆ ಜಮೀನಿನಲ್ಲಿ ಸರಿಯಾಗಿ ನೀರು ಹರಿಯುತ್ತಿಲ್ಲ ಎಂದರೆ ಅದಕ್ಕಿಂತ ನೋವಿನ ಸಂಗತಿ ಮತ್ತೊಂದಿಲ್ಲ.
ಈ ಸುದ್ದಿ ಓದಿ:-ಎಲ್ಲರಿಗೂ ಗುಡ್ ನ್ಯೂಸ್ ಗ್ರಾಮ ಪಂಚಾಯಿತಿಯಿಂದ ಸಿಗಲಿದೆ 2 ಲಕ್ಷ ಅನುದಾನ.!
ಪಂಪ್ಸೆಟ್ ನೀರನ್ನು ನಂಬಿಕೊಂಡು ರೈತನು ಫಸಲು ಮಾಡಿರುತ್ತಾನೆ. ತರಕಾರಿ, ತೆಂಗು, ಬಾಳೆ, ಹೂವು-ಹಣ್ಣು ಹೀಗೆ ತೋಟಗಾರಿಕೆ ಕೃಷಿ ಮಾಡುವ ಪ್ರತಿಯೊಂದು ಫಸಲಿಗೂ ಪ್ರತಿನಿತ್ಯ ನೀರು ಬೇಕೇ ಬೇಕು. ಒಂದು ವೇಳೆ ಇದರಲ್ಲಿ ವ್ಯತ್ಯಾಸವಾದರೆ ಬಿತ್ತನೆಗಾಗಿ ಮಾಡಿದ್ದ ದೊಡ್ಡ ಮೊತ್ತದ ಬಂಡವಾಳವು ಕೂಡ ನೀರಿಗೆ ಹಾಕಿದ ರೀತಿ ಆಗಿ ಬಿಡುತ್ತದೆ. ಹಾಗಾಗಿ ಜಮೀನಿನಲ್ಲಿ ನೀರು ನಿಂತಿದೆ ಎಂದ ತಕ್ಷಣ ರೈತನ ಎದೆಯಲ್ಲಿ ಡವ ಡವ ಶುರು ಆಗುತ್ತದೆ.
ನೀವು ಕೂಡ ರೈತರಾಗಿದ್ದು ನಿಮ್ಮ ಜಮೀನಿನಲ್ಲಿ ಬರುತ್ತಿದ್ದ ನೀರು ಬೇಸಿಗೆ ಕಾರಣಕ್ಕೆ ವಿಪರೀತ ಕಡಿಮೆ ಆಗಿದೆ ಅಥವಾ ಅರ್ಧ ಗಂಟೆ ಬಂದು ನಿಂತು ಹೋಗುತ್ತಿದೆ ಇನ್ನು ಮುಂತಾದ ಸಮಸ್ಯೆಗಳು ಇದ್ದರೆ ಇಂದು ನಾವು ಈ ಲೇಖನದಲ್ಲಿ ಒಂದು ಟಿಪ್ಸ್ ಕೊಡುತ್ತಿದ್ದೇವೆ ನೀವೇನಾದರೂ ಇದನ್ನು ಪಾಲಿಸಿದ್ದೆ ಆದಲ್ಲಿ ನಿಮ್ಮ ಬೆಳೆಯನ್ನು ಬಚಾವ್ ಮಾಡಿಕೊಳ್ಳಬಹುದು.
ಈ ಸುದ್ದಿ ಓದಿ:-30% ಗ್ಯಾಸ್ ಉಳಿತಾಯ 100% ಸೇಫ್ಟಿ, ಮನೆ ಗೃಹಿಣಿಯರ ಬಗ್ಗೆ ಕಾಳಜಿ ಇರುವವರು ಈ ಮಾಹಿತಿ ತಿಳಿದುಕೊಳ್ಳಿ.!
ಬೇಸಿಗೆ ಬಂತು ಎಂದರೆ ಇದೇ ರೀತಿ ಸಮಸ್ಯೆಯನ್ನು ಹೆಚ್ಚಿನ ರೈತರ ಅನುಭವಿಸುತ್ತಾರೆ. ಈ ಮೇಲೆ ತಿಳಿಸಿದಂತೆ ನೀರಿನ ಹರಿವಿನ ಪ್ರಮಾಣ ಕಡಿಮೆ ಆಗುತ್ತದೆ ಜೊತೆಗೆ ನೀರು ಸ್ವಲ್ಪ ಸಮಯ ಬಂದು ಸಂಪೂರ್ಣವಾಗಿ ನಿಂತು ಹೋಗುತ್ತದೆ ಮೊದಲೇ ಪೈಪ್ಲೈನ್ ಕರೆಂಟ್ ಕೊಡುವುದು ಕಡಿಮೆ ಸಮಯ, ಆ ಸಮಯಕ್ಕೆ ಕಾದು ಹಗಲು ರಾತ್ರಿ ಎನ್ನದೆ ಎಚ್ಚರವಿದ್ದು ನೋಡಿಕೊಳ್ಳುವ ರೈತನಿಗೆ ಈ ರೀತಿ ಪಂಪ್ಸೆಟ್ ನಲ್ಲಿ ನೀರು ಹತ್ತುತ್ತಿಲ್ಲ ಎಂದು ಬಿಟ್ಟರೆ ವಿಪರೀತವಾಗಿ ಸಂಕಟವಾಗುತ್ತದೆ.
ತನ್ನ ಕಣ್ಣ ಎದುರಿಗೆ ಒಣಗುತ್ತಿರುವ ಪಸಲನ್ನು ಉಳಿಸಿಕೊಳ್ಳಲು ಆಗುತ್ತಿಲ್ಲ ಎನ್ನುವುದು ಆತ ಊಟ ನಿದ್ರೆ ಬಿಟ್ಟು ಚಿಂತೆ ಮಾಡುವ ರೀತಿ ಮಾಡಿಬಿಡುತ್ತದೆ. ಹೀಗೆ ರೈತನ ಕುಟುಂಬವು ದೊಡ್ಡ ಸಮಸ್ಯೆಯ ಸುಳಿಗೆ ಸಿಕ್ಕಿಬಿಡುತ್ತದೆ.
ಒಂದು ವೇಳೆ ಇಂತಹ ಪರಿಸ್ಥಿತಿ ಏನಾದರೂ ಎದುರಾದರೆ ಇನ್ನು ಮುಂದೆ ಒಂದು ಟೆಕ್ನಿಕ್ ಫಾಲೋ ಮಾಡಿ. ಅದೇನೆಂದರೆ, ನೀವು ಮೋಟರ್ ಕನೆಕ್ಷನ್ ಮಾಡುವಾಗ ಆರ್ ವೈ ಬಿ ಎಂದು ಕನೆಕ್ಟ್ ಮಾಡಿ ಮೋಟಾರ್ ರನ್ ಮಾಡುತ್ತಿರುತ್ತೀರಿ ಇದನ್ನು ರಿವರ್ಸ್ ಮಾಡಿ ಮೋಟಾರ್ ರನ್ ಮಾಡಬೇಕು.
ಈ ಸುದ್ದಿ ಓದಿ:-PUC ಪಾಸ್ ಆದವರಿಗೆ ಕೋರ್ಟ್ ನಲ್ಲಿ ಉದ್ಯೋಗವಕಾಶ, ವೇತನ 42,000 ಆಸಕ್ತರು ಅರ್ಜಿ ಸಲ್ಲಿಸಿ.!
ಈ ರೀತಿ ಮಾಡಿದರೆ ನಿರಂತರವಾಗಿ ನೀರು ಹರಿಯುತ್ತದೆ ನೀರಿನ ಪ್ರಮಾಣ ಕಡಿಮೆ ಇರಬಹುದು ಆದರೆ ಹೆಚ್ಚು ಹೊತ್ತು ನೀರು ಬರುತ್ತದೆ ಎನ್ನುವುದು ಹೆಚ್ಚು ಸಮಾಧಾನಕರ ಸಂಗತಿ ಆಗಿದೆ. ಅರ್ಧ ಇಂಚು ನೀರು ಬಂದರೂ ಕೂಡ ಅದು ನಿರಂತರವಾಗಿ ಬರುವುದರಿಂದ ಬಹಳ ಅನುಕೂಲವಾಗುತ್ತದೆ. ಹಾಗಾಗಿ ಇನ್ನು ಮುಂದೆ ಈ ರೀತಿ ಮಾಡಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಪರಿಚಯದ ರೈತರಿಗೂ ಕೂಡ ತಿಳಿಸಿಕೊಡಿ.