ರಾಜ್ಯದಾದ್ಯಂತ ಇರುವ ಎಲ್ಲಾ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಒಂದು ಸಿಹಿ ಸುದ್ದಿಯನ್ನು ಈ ಲೇಖನದ ಮೂಲಕ ತಿಳಿಸ ಬಯಸುತ್ತಿದ್ದೇನೆ. ಅದೇನೆಂದರೆ ನ್ಯಾಯಾಂಗ ಇಲಾಖೆಯ ಭಾಗವಾಗಿ ಕೋರ್ಟ್ ನಲ್ಲಿ ಹುದ್ದೆ ಮಾಡಬೇಕು ಎಂದು ನೀವು ಕನಸು ಕಂಡಿದ್ದರೆ ನಿಮ್ಮ ಕನಸು ನನಸಾಗುವ ಸಮಯ ಬಳ್ಳಾರಿ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ ಮಾಡಲಾಗಿದೆ.
ಈ ಸಂಬಂಧಿತ ಅಧಿಕೃತ ಅಧಿಸೂಚನೆ ಕೂಡ ಇಲಾಖೆ ಕಡೆಯಿಂದ ಬಿಡುಗಡೆಯಾಗಿದ್ದು, ಈ ಅರ್ಹತಾ ಮಾನದಂಡಗಳನ್ನು ಪೂರೈಸುವಂತಹ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಈ ಹುದ್ದೆಗಳನ್ನು ಪಡೆದುಕೊಳ್ಳಲು ಪ್ರಯತ್ನಿಸಬಹುದು. ಅರ್ಜಿ ಸಲ್ಲಿಸುವವರಿಗೆ ಅನುಕೂಲತೆ ಮಾಡಿ ಕೊಡುವ ಸಲುವಾಗಿ ಈ ಲೇಖನದಲ್ಲಿ ನೇಮಕಾತಿ ಕುರಿತಂತೆ ಇರುವ ಪ್ರಮುಖ ಅಂಶಗಳ ಬಗ್ಗೆ ಮಾಹಿತಿ ಕೊಡುತ್ತಿದ್ದೇವೆ. ತಪ್ಪದೆ ಈ ಉದ್ಯೋಗ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.
ಈ ಸುದ್ದಿ ಓದಿ:- ಮನೆ ಟೆರೇಸ್ ಮೇಲೆ ಹಣ್ಣು ಸಾಕಾಣಿಕೆ ಮಾಡಿ ಎಷ್ಟೆಲ್ಲಾ ಲಾಭ ಪಡೆಯುತ್ತಿದ್ದಾರೆ ಗೊತ್ತಾ.?
ನೇಮಕಾತಿ ಸಂಸ್ಥೆ:-ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಬಳ್ಳಾರಿ
ಹುದ್ದೆ ಹೆಸರು:-
* ಬೆರಳಚ್ಚುಗಾರರು
* ಬೆರಳಚ್ಚು ನಕಲುಗಾರರು
ಒಟ್ಟು ಹುದ್ದೆಗಳ ಸಂಖ್ಯೆ:- 21 ಹುದ್ದೆಗಳು
ಹುದ್ದೆಗಳ ವಿವರ:-
* ಬೆರಳಚ್ಚುಗಾರರು HK – 12 ಹುದ್ದೆಗಳು
* ಬೆರಳಚ್ಚು ನಕಲುಗಾರರು HK – 07 ಹುದ್ದೆಗಳು
* ಬೆರಳಚ್ಚುಗಾರರು NHK – 01 ಹುದ್ದೆ
* ಬೆರಳಚ್ಚು ನಕಲುಗಾರರು NHK – 01 ಹುದ್ದೆ
ಉದ್ಯೋಗ ಸ್ಥಳ:- ಬಳ್ಳಾರಿ
ವೇತನ ಶ್ರೇಣಿ:-
ಈ ಹುದ್ದೆಗಳಿಗೆ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಮಾಸಿಕವಾಗಿ ರೂ.21,400 ರಿಂದ ರೂ.42,000 ವೇತನ ನಿಗದಿಪಡಿಸಲಾಗಿದೆ.
ಈ ಸುದ್ದಿ ಓದಿ:- KPSC ನೇಮಕಾತಿ, ಜಲಸಂಪನ್ಮೂಲ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ, ವೇತನ 62,600, ಆಸಕ್ತರು ಅರ್ಜಿ ಸಲ್ಲಿಸಿ…
ಶೈಕ್ಷಣಿಕ ವಿದ್ಯಾರ್ಹತೆ:-
* ಬೆರಳಚ್ಚುಗಾರರು – ದ್ವಿತೀಯ PUC ಉತ್ತೀರ್ಣರಾಗಿರಬೇಕು ಮತ್ತು ಮೂರು ವರ್ಷಗಳ ಡಿಪ್ಲೋಮಾ ಕಮರ್ಷಿಯಲ್ ಪ್ರಾಕ್ಟೀಸ್ ಅಭ್ಯಾಸ ಮಾಡಿರಬೇಕು ಅಥವಾ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಹಿರಿಯ ಶ್ರೇಣಿ ಬೆರಳಚ್ಚು ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
* ಬೆರಳಚ್ಚು ನಕಲುಗಾರರು – ದ್ವಿತೀಯ PUC ಉತ್ತೀರ್ಣರಾಗಿರಬೇಕು ಮತ್ತು ಮೂರು ವರ್ಷಗಳ ಡಿಪ್ಲೋಮಾ ಕಮರ್ಷಿಯಲ್ ಪ್ರಾಕ್ಟೀಸ್ ಅಭ್ಯಾಸ ಮಾಡಿರಬೇಕು ಅಥವಾ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಕಿರಿಯ ಶ್ರೇಣಿ ಬೆರಳಚ್ಚು ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
ಈ ಸುದ್ದಿ ಓದಿ:- ಒಂದು ಎಕರೆಗೆ 45 ಲಕ್ಷ ಲಾಭ ತಂದು ಕೊಟ್ಟ ಕೃಷಿ.! ಸಖತ್ ಲಾಭ ತಂದು ಕೊಡುವ ಸದಾಕಾಲವೂ ಬೇಡಿಕೆ ಇರುವ ಬೆಳೆ ಇದು.!
ವಯೋಮಿತಿ:-
* ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 18 ವರ್ಷಗಳು
* ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 35 ವರ್ಷಗಳು
ವಯೋಮಿತಿ ಸಡಿಲಿಕೆ:-
* SC / ST / ಪ್ರವರ್ಗ – 1 ಅಭ್ಯರ್ಥಿಗಳಿಗೆ 05 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ
* 2A, 2B, 3A, 3B ಅಭ್ಯರ್ಥಿಗಳಿಗೆ 03 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ
ಅರ್ಜಿ ಸಲ್ಲಿಸುವ ವಿಧಾನ:-
* ಆನ್ಲೈನ್ ವಿಧಾನದ ಮೂಲಕ ಅರ್ಜಿ ಸಲ್ಲಿಸಬೇಕು
* ಅಧಿಕೃತ ವೆಬ್ ಸೈಟ್ ಗೆ ತೆರಳಿ ಅರ್ಜಿ ಫಾರಂ ಭರ್ತಿ ಮಾಡಿ ಪೂರಕ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
* ಅರ್ಜಿ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಕೆ ಯಶಸ್ವಿ ಆದಮೇಲೆ ತಪ್ಪದೇ ಅರ್ಜಿ ಸ್ವೀಕೃತಿ ಪ್ರತಿ ಮತ್ತು ಇ-ರಸೀದಿ ಪಡೆದುಕೊಳ್ಳಬೇಕು
ಆಯ್ಕೆ ವಿಧಾನ:-
ನಿಗದಿಪಡಿಸಿರುವ ವಿದ್ಯಾರ್ಹತೆ ಆಧಾರದ ಮೇಲೆ ಜೇಷ್ಠತಾ ಪಟ್ಟಿ ತಯಾರಿಸಿ ಆಯ್ದ ಅಭ್ಯರ್ಥಿಗಳಿಗೆ ಸ್ಕಿಲ್ ಟೆಸ್ಟ್ ಮತ್ತು ದಾಖಲೆಗಳ ಪರಿಶೀಲನೆ ಹಾಗೂ ಸಂದರ್ಶನ ನಡೆಸುವ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಈ ಸುದ್ದಿ ಓದಿ:- ಗೋಮಾಳ ಜಮೀನನ್ನು ಸಕ್ರಮ ಮಾಡಿಕೊಳ್ಳುವುದು ಹೇಗೆ.? ಇಲ್ಲಿದೆ ನೋಡಿ ಕಂಪ್ಲೀಟ್ ಮಾಹಿತಿ.!
ಅರ್ಜಿ ಶುಲ್ಕ:-
* ಸಾಮಾನ್ಯ ಮತ್ತು 2A, 2B, 3A, 3B ಅಭ್ಯರ್ಥಿಗಳಿಗೆ ರೂ.200
* SC / ST ಮತ್ತು ಪ್ರವರ್ಗ-1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ
ಪ್ರಮುಖ ದಿನಾಂಕಗಳು:-
* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 06 ಏಪ್ರಿಲ್, 2024
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಮೇ, 2024.