ಟೆರೆಸ್ ಗಾರ್ಡನ್ ಅಥವಾ ತಾರಸಿ ತೋಟ ಎಂದ ತಕ್ಷಣ ಹೋ ಮನೆ ಮೇಲೆ ಪಾಟ್ ನಲ್ಲಿ ಒಂದೆರಡು ಅಲಂಕಾರಿಕ ಸಸ್ಯ ಅಥವಾ ಒಂದೆರಡು ಹೂವಿನ ಗಿಡ ಮನ ಮದ್ದಿಗಾಗಿ ಒಂದೆರಡು ಔಷಧಿ ಸಸ್ಯ, ಪೂಜೆ ಮಾಡಲು ತುಳಸಿ ಇವುಗಳನ್ನು ಹಾಕುವುದು ಎಂದೇ ಬಹುತೇಕರ ಅಭಿಪ್ರಾಯ.
ಆದರೆ ಇಂದು ಕಾಲ ಎಷ್ಟು ಬದಲಾಗಿದೆ ಹಾಗೂ ಜನ ಎಷ್ಟು ಮುಂದುವರೆದಿದ್ದಾರೆ ಎಂದರೆ ಜಮೀನು ಇದ್ದು ಅದು ಸಾಲುವುದಿಲ್ಲ ಎಂದು ಮೂಗು ಮರಿಯುವವರ ಮಧ್ಯೆ ತಮ್ಮ ಮನೆ ಮೇಲೆ ಇರುವ ತಾರಸಿ ಜಾಗವನ್ನೇ ಯಾವುದೇ ಕೈ ತೋಟಕ್ಕಿಂತ ಕಡಿಮೆ ಇಲ್ಲದಂತೆ ರೆಡಿ ಮಾಡಿಕೊಂಡು ಇದರಲ್ಲಿ ಮಲ್ಲಿಗೆ ಕೃಷಿ ಅಥವಾ ತರಕಾರಿ ಸೊಪ್ಪು ಬೆಳೆಯುವುದು, ಬೋನ್ಸಾಯ್ ಮರಗಳನ್ನು ಬೆಳೆಸುವುದು ಮುಂದುವರೆದು ಕಮರ್ಷಿಯಲ್ ಬೆಳೆಗಳನ್ನು ಕೂಡ ಬೆಳೆದು ಲಕ್ಷ ಆದಾಯ ಪಡೆಯುತ್ತಿರುವವರ ಉದಾಹರಣೆಗಳು ಕೂಡ ಇದೆ.
ಈ ಸುದ್ದಿ ಓದಿ:- ಖರ್ಚು ಸೊನ್ನೆ ಆದಾಯ ಒಂದು ಎಕರೆಗೆ 25 ಲಕ್ಷ, ಕೃಷಿ ಬಗ್ಗೆ ಆಸಕ್ತಿ ಇರುವ ರೈತರಿಗೆ ನ್ಯಾಚುರಲ್ ಫಾರ್ಮೆಟ್ ಕುರಿತು ಒಂದಿಷ್ಟು ಉಪಯುಕ್ತ ಮಾಹಿತಿ.!
ಈ ರೀತಿ ವಿಭಿನ್ನವಾಗಿ ಚಿಂತಿಸಿ ಈ ಕ್ಷೇತ್ರದಲ್ಲಿ ಸಕ್ಸಸ್ ಕೂಡ ಆಗಿ ಕೈ ತುಂಬಾ ಆದಾಯ ಗಳಿಸುವುದರ ಜೊತೆಗೆ ಹಲವಾರು ಅವಾರ್ಡ್ ಗಳನ್ನು ತಾರಸಿ ತೋಟ ಮಾಡಿರುವ ಕಾರಣಕ್ಕೆ ಗಿಟ್ಟಿಸಿಕೊಂಡಿರುವ ಪ್ರಗತಿಪರ ಪರಿಸರ ಪ್ರೇಮಿಯೊಬ್ಬರ ವಿಚಾರವನ್ನು ಈ ಲೇಖನದಲ್ಲಿ ತಿಳಿಸ ಬಯಸುತ್ತಿದ್ದೇವೆ.
ಮಂಗಳೂರು ಸಮೀಪದ ಭಾಗದಲ್ಲಿರುವ ಇವರು ತಮ್ಮ ಮನೆಯ ಮೇಲಿನ ಜಾಗದಲ್ಲಿ ಕಳೆದ ಹತ್ತಾರು ವರ್ಷಗಳಿಂದ ಈ ರೀತಿ ತಾರಸಿ ತೋಟ ಮಾಡಿಕೊಂಡು ಇಂದು ವಿದೇಶಗಳಿಂದ ಕೂಡ ಮರಗಳನ್ನು ತರಿಸಿ ಮನೆ ಟೆರೇಸ್ ಮೇಲೆ ಇವುಗಳನ್ನು ಹಾಕಿ ಅದ್ಬುತವಾಗಿ ಮೇನ್ಟೇನ್ ಮಾಡಿಕೊಂಡು ಬಂದು ಯಶಸ್ವಿಯಾಗಿ ಸಾಧಕನೆನಿಸಿದ್ದಾರೆ.
ಈ ಸುದ್ದಿ ಓದಿ:- KPSC ನೇಮಕಾತಿ, ಜಲಸಂಪನ್ಮೂಲ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ, ವೇತನ 62,600, ಆಸಕ್ತರು ಅರ್ಜಿ ಸಲ್ಲಿಸಿ…
ಈ ಸಾಧನೆ ಕುರಿತು ಮತ್ತು ತಾರಸಿ ತೋಟದ ಬಗ್ಗೆ ಇವರು ನೀಡಿದ ಕೆಲ ಸಲಹೆಗಳನ್ನು ಕೂಡ ಈ ಅಂಕಣದ ಮೂಲಕ ಎಲ್ಲರೊಡನೆ ಹಂಚಿಕೊಳ್ಳಲು ಬಯಸುತ್ತಿದ್ದೇವೆ. ಇವರು ಗಾರ್ಡನ್ ಮೇಲೆ ಯಾವ ರೀತಿಯ ಸಸ್ಯಗಳು ಇದೆ ಎನ್ನುವುದನ್ನು ನೋಡಿಬಿಟ್ಟರೆ ಎಲ್ಲರೂ ದಂಗಾಗಿ ಹೋಗುತ್ತಾರೆ.
ಯಾಕೆಂದರೆ ಅಡಿಕೆ ನಿಂಬೆಯಿಂದ ಹಿಡಿದು ಮಲ್ಲಿಗೆ ಸಂಪಿಗೆ ನೈದಿಲೆ ತಾವರೆ ಹೂ ವರೆಗೆ ಹಾಗೂ ಗಲ್ಫ್ ಇಂದ ತಂದ ಖರ್ಜೂರದಿಂದ ಚೀನಾದಿಂದ ತರುವ ಹಣ್ಣುಗಳವರೆಗೆ ಮಣ್ಣಿನಿಂದ ಬೆಳೆಯುವ ನೀರಿನಿಂದ ಬೆಳೆಯುವ ಎಲ್ಲ ರೀತಿಯ ಸಸ್ಯಗಳು ಕೂಡ ಸಿಗುತ್ತಿವೆ.
ಈ ಸುದ್ದಿ ಓದಿ:- ಬೇಸಿಗೆಯಲ್ಲಿ ನೀರಿನ ಲೋಡಿಂಗ್ ಸಮಸ್ಯೆಗೆ ತನ್ನದೇ ಆದ ಐಡಿಯಾ ಮೂಲಕ ಪರಿಹಾರ ಕಂಡುಕೊಂಡ ರೈತ.!
ಇತ್ತೀಚಿಗೆ ಹೆಚ್ಚು ಬೇಡಿಕೆಯಲ್ಲಿರುವ ಡ್ರ್ಯಾಗನ್ ಫ್ರೂಟ್ ಕೂಡ, ಒಂದೆಲಗ ಸೊಪ್ಪಿನಿಂದ ಹಿಡಿದು ಸ್ಟ್ರಾಬೆರಿ ಮಲ್ಬರಿ ಬನಾನ ಸಪೋಟವರೆಗೆ ಇವರ ತೋಟದಲ್ಲಿ ಬಹುತೇಕ ಎಲ್ಲಾ ಬಗೆಯ ಸೊಪ್ಪು ತರಕಾರಿ ಸಿಗುತ್ತದೆ.
ಪ್ರತಿಯೊಂದು ಗಿಡದ ಬಗ್ಗೆ ಕೂಡ ಚೆನ್ನಾಗಿ ಅರಿತಿರುವ ಇವರು ಯಾವುದು ಯಾವ ಸಮಯಕ್ಕೆ ಫಲ ಕೊಡುತ್ತದೆ ಯಾವುದಕ್ಕೆ ಯಾವುದನ್ನು ಮಿಶ್ರ ಮಾಡಿ ಬೆಳೆಯಬಹುದು ಎನ್ನುವುದೆಲ್ಲವನ್ನು ಕೂಡ ಚೆನ್ನಾಗಿ ಅರಿತಿದ್ದಾರೆ. ಇವರ ಈ ತೋಟ ನೋಡುವುದೇ ಒಂದು ಆನಂದ. ಕಣ್ಣಿಗೆ ತಂಪು, ಮನಸ್ಸಿಗೆ ಮುದ ನೀಡುವ ಇವರ ತಾರಸಿ ತೋಟದ ಬಗ್ಗೆ ಎಷ್ಟು ಮಾತನಾಡಿದರು ಕೂಡ ಕಡಿಮೆ.
ಈ ಸುದ್ದಿ ಓದಿ:- ಗೋಮಾಳ ಜಮೀನನ್ನು ಸಕ್ರಮ ಮಾಡಿಕೊಳ್ಳುವುದು ಹೇಗೆ.? ಇಲ್ಲಿದೆ ನೋಡಿ ಕಂಪ್ಲೀಟ್ ಮಾಹಿತಿ.!
ಸಮಯ ಕಳೆಯುವುದಕ್ಕೆ ಒಂದು ಒಳ್ಳೆಯ ಹವ್ಯಾಸ ಹಾಗೆ ಮನಸ್ಸಿಗೆ ಬಹಳ ಸಮಾಧಾನ ಮನೆಗೆ ಆದಾಗ ಎಲ್ಲವೂ ಕೂಡ ಈ ಟೆರೇಸ್ ಗಾರ್ಡನ್ ನಿಂದ ಸಿಗುತ್ತಿದೆ ಎನ್ನುವ ಇವರ ಮಾತುಗಳನ್ನು ಸಂಪೂರ್ಣವಾಗಿ ಕೇಳಲು ಮತ್ತು ಇದರ ಬಗ್ಗೆ ಅವರು ನೀಡಿರುವ ಟಿಪ್ ಗಳನ್ನು ಇನ್ನಷ್ಟು ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಶೇರ್ ಮಾಡಿ.