ನಮ್ಮ ದೇಶದಲ್ಲಿ ಕೃಷಿಯನ್ನೇ ನಂಬಿ ಹೆಚ್ಚಿನ ಪ್ರಮಾಣದ ಜನರು ಬದುಕುತ್ತಿದ್ದಾರೆ ಆದರೆ ಕೃಷಿಯಲ್ಲಿ ಆದಾಯ ನಿರೀಕ್ಷೆಯಷ್ಟು ಸಿಗುತ್ತಿಲ್ಲ, ಖರ್ಚುಗಳೇ ಹೆಚ್ಚು, ಭೂಮಿ ಚಿಕ್ಕದಾಗಿರುವುದರಿಂದ ಆದಾಯ ಉತ್ಪತ್ತಿ ಆಗುತ್ತಿಲ್ಲ, ಕೃಷಿ ಮಾಡಲು ಕೂಲಿ ಕಾರ್ಮಿಕರು ಸಿಗುತ್ತಿಲ್ಲ ಇನ್ನು ಮುಂತಾದ ಕಂಪ್ಲೆಂಟ್ ಗಳೇ ಹೆಚ್ಚು.
ಆದರೆ ಅಸಲಿ ವಿಚಾರ ಏನೆಂದರೆ ಕಡಿಮೆ ಆಳುಕಾಳಿನ ಖರ್ಚಿದೊಂದಿಗೆ ಅಥವಾ ಮನೆ ಜನರೇ ಕೆಲಸ ಮಾಡಿಕೊಂಡು ಸಾವಯವ ಕೃಷಿ ಅನುಸರಿಸಿ ಯಾವುದೇ ಬಂಡವಾಳ ಇಲ್ಲದೆ ಇರುವ ಒಂದು ಎಕರೆ ಭೂಮಿಯಲ್ಲಿ ಕೂಡ ವರ್ಷಕ್ಕೆ ಕನಿಷ್ಠ ರೂ.25 ಲಕ್ಷ ಹಣ ದುಡಿಯಬಹುದು ಎನ್ನುತ್ತಿದ್ದಾರೆ ಪ್ರಗತಿಪರ ರೈತರೊಬ್ಬರು.
ಈ ಸುದ್ದಿ ಓದಿ:- KPSC ನೇಮಕಾತಿ, ಜಲಸಂಪನ್ಮೂಲ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ, ವೇತನ 62,600, ಆಸಕ್ತರು ಅರ್ಜಿ ಸಲ್ಲಿಸಿ…
ಅವರು ನೀಡಿದ ಕೆಲ ಸಲಹೆಗಳೊಂದಿಗೆ ಕೃಷಿಗೆ ಪೂರಕವಾದ ಕೆಲವು ಉಪಯುಕ್ತ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸುತ್ತಿದ್ದೇವೆ. ಇವರು ಹೇಳುವುದೇನೆಂದರೆ ರೈತ ಮಾಡುವ ಕೆಲ ಸಣ್ಣ ತಪ್ಪುಗಳಿಂದಲೇ ಆತನಿಗೆ ಸರಿಯಾದ ಆದಾಯ ಸಿಗುತ್ತಿಲ್ಲ. ಅದೇನೆಂದರೆ, ಉದಾಹರಣೆಗೆ ಹೇಳುವುದಾದರೆ ತೆಂಗಿನ ಮರಕ್ಕೆ ನೀರು ಬೇಕು ಎಂದು ಅದಕ್ಕೆ 100% ನೀರು ಹರಿಸಿದರೆ ಅದು ಇಳುವರಿ ಕೊಡುವುದಿಲ್ಲ ಅಥವಾ 100% ಅದಕ್ಕೆ ಗೊಬ್ಬರ ಹಾಕಿದರೆ ಆಗಲೂ ಮರ ಇಳುವರಿ ಕೊಡದೆ ಬಿದ್ದು ಹೋಗಿದ್ದೂ ಇದೆ.
ಇದು ಆಶ್ಚರ್ಯ ಎನಿಸಬಹುದು ಆದರೆ ಸರಿಯಾದ ಪದ್ಧತಿ ಏನೆಂದರೆ 50% ನೀರು 50% ತಂಪಾದ ವಾತಾವರಣ ಇದ್ದರೆ ಸಾಕು 100% ನೀರೇ ಇರಬೇಕಾದ ಅವಶ್ಯಕತೆ ಇಲ್ಲ. ಇನ್ನು ಗೊಬ್ಬರ ಹಾಕುವ ವಿಚಾರ ಬಂದರೆ ರಾಸಾಯನಿಕ ಗೊಬ್ಬರಗಳಿಗೆ ಹಣ ಸುರಿದು ಇಂದು ರೈತ ಕಂಗಲಾಗುತ್ತಿರುವುದು, ಜೊತೆಗೆ ಇದರಿಂದ ಪರೋಕ್ಷವಾಗಿ ಆರೋಗ್ಯಕ್ಕೆ ಹಾನಿಯೂ ಕೂಡ.
ಈ ಸುದ್ದಿ ಓದಿ:- ಬೇಸಿಗೆಯಲ್ಲಿ ನೀರಿನ ಲೋಡಿಂಗ್ ಸಮಸ್ಯೆಗೆ ತನ್ನದೇ ಆದ ಐಡಿಯಾ ಮೂಲಕ ಪರಿಹಾರ ಕಂಡುಕೊಂಡ ರೈತ.!
ಈಗಿನ ಕಾಲದಂತೆ ಸಾವಯುವ ಪದ್ಧತಿಯಲ್ಲಿ ಬೆಳೆದ ಆಹಾರ ಪದಾರ್ಥಗಳಿಗೆ ರಾಸಾಯನಿಗಳನ್ನು ಬಳಸಿ ಬೆಳೆದ್ದಕ್ಕಿಂತ ಹೆಚ್ಚಿನ ಬೆಲೆ ಇರುತ್ತದೆ ಇದನ್ನೇ ಅಡ್ವಾಂಟೇಜ್ ಆಗಿ ತೆಗೆದುಕೊಂಡು ರೈತ ಎರಡು ರೀತಿಯ ಉಪಯೋಗ ಮಾಡಿಕೊಳ್ಳಬಹುದು. ಹೊಲಗಳಲ್ಲಿ ನೈಟ್ರೋಜನ್ ಯಥೇಚ್ಛವಾಗಿರುವ ಗೊಬ್ಬರದ ಮರ ಬೆಳೆಸುವುದರಿಂದ ಅದನ್ನು ನಂತರ ಜೀವಾಮೃತ ಮಾಡಲು ಬಳಸಿಕೊಳ್ಳಬಹುದು ಇದೆ.
ಗೊಬ್ಬರವಾಗಿ ರೈತನ ಹಣ ಉಳಿಸಿ, ರೈತನ ಜಮೀನಿನ ಸುತ್ತ ರಕ್ಷಣೆಯು ಆಗಿರುತ್ತದೆ. ರೈತ ಮಾಡುವ ಮತ್ತೊಂದು ಮಿಸ್ಟೇಕ್ ಏನೆಂದರೆ ಗೊಬ್ಬರವನ್ನು ತಂದು ಗಿಡಗಳ ತಾಯಿಬೇರಿಗೆ ಹಾಕುತ್ತಾರೆ ಇದು ಕೂಡ ತಪ್ಪು. ತಾಯಿ ಬೇರು ಇರುವುದು ಆಳಕ್ಕೆ ಇಳಿದು ನೀರು ಹೀರಿಕೊಳ್ಳಲು, ತಂತು ಬೇರುಗಳು ಆಹಾರವನ್ನು ಹೀರಿಕೊಳ್ಳುತ್ತದೆ ಇದನ್ನು ಸರಿಯಾಗಿ ತಿಳಿದುಕೊಳ್ಳದೆ ತಾಯಿ ಬೇರಿಗೆ ಗೊಬ್ಬರ ಸುರಿದು ಮಿಸ್ಟೇಕ್ ಮಾಡಿಕೊಳ್ಳುತ್ತಾನೆ ಇಂತಹ ಹಲವಾರು ಪಾಯಿಂಟ್ ಇವೆ ಎನ್ನುತ್ತಾರೆ ಇವರು.
ಈ ಸುದ್ದಿ ಓದಿ:- ಒಂದು ಎಕರೆಗೆ 45 ಲಕ್ಷ ಲಾಭ ತಂದು ಕೊಟ್ಟ ಕೃಷಿ.! ಸಖತ್ ಲಾಭ ತಂದು ಕೊಡುವ ಸದಾಕಾಲವೂ ಬೇಡಿಕೆ ಇರುವ ಬೆಳೆ ಇದು.!
ಇನ್ನು ಎಕರೆಗೆ ರೂ.25 ಲಕ್ಷ ಉಳಿಸುವ ಐಡಿಯಾ ಕೊಡುವ ಇವರು 32 ಅಡಿ ಅಂತರದಲ್ಲಿ ಎರಡು ತೆಂಗು ಅದರ ಮಧ್ಯೆ ಮೂಸಂಬಿ ಹಾಗೂ 9 ಅಡಿ ಅಂತರದಲ್ಲಿ ಬಾಳೆ ಮರ ಹಾಗೂ ಮೆಣಸು ಹಬ್ಬಿಸಬೇಕು ಜೊತೆಗೆ ಕಾಫಿ ಕೂಡ ಬಳಸಬಹುದು ಕೆಳಗಡೆ ಶುಂಠಿ ಅರಿಶಿನ ಇತ್ಯಾದಿಗಳನ್ನು ಬೆಳೆದರೆ ಇದೆಲ್ಲವೂ ಸೇರಿ ಒಂದು ಎಕರೆ ಲೆಕ್ಕ ತೆಗೆದುಕೊಂಡರೆ ರೂ.25 ಲಕ್ಷಕ್ಕಿಂತ 4 ಪಟ್ಟು ಆಗುತ್ತದೆ.
ಅದರಲ್ಲಿ ಸರಾಸರಿ ಎಂದು ತೆಗೆದುಕೊಂಡರು ರೂ. 25 ಲಕ್ಷ ಗ್ಯಾರಂಟಿ ಆದಾಯ ಎನ್ನುವ ಸಲಹೆ ಕೊಡುತ್ತಾರೆ. ಇವರು ನೀಡಿದ ಈ ಮಾಹಿತಿ ಬಗ್ಗೆ ಇನ್ನೂ ವಿವರವಾಗಿ ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.