Deprecated: strtolower(): Passing null to parameter #1 ($string) of type string is deprecated in /home/u302298408/domains/rishithepower.com/public_html/wp-content/plugins/taboola/simple_html_dom.php on line 712
ವಿಸ್ತೀರ್ಣದಲ್ಲಿ ನಮ್ಮ ಭಾರತ ದೇಶ ಏಳನೇ ಸ್ಥಾನದಲ್ಲಿ ಇದ್ದರೂ ಜನಸಂಖ್ಯೆಯಲ್ಲಿ ಮಾತ್ರ ಚೀನಾವನ್ನು ಕೂಡ ಹಿಂದಿಕ್ಕಿ ಮೊದಲನೇ ಪಟ್ಟದಲ್ಲಿದೆ. ಜನಸಂಖ್ಯೆ ಹೆಚ್ಚಾದಷ್ಟು ಇದರಿಂದ ಅನುಕೂಲ ಹಾಗೂ ಅನಾನುಕೂಲ ಎರಡು ರೀತಿಯ ಪರಿಣಾಮಗಳು ಕೂಡ ಉಂಟಾಗುತ್ತವೆ. ಅದರಲ್ಲಿ ಅನಾನುಕೂಲತೆಗಳ ಬಗ್ಗೆ ಮಾತನಾಡುವುದಾದರೆ ಮೂಲಭೂತ ಸೌಕರ್ಯಗಳಿಗೆ ಕೊರತೆ ಉಂಟಾಗುತ್ತದೆ ಎನ್ನುವುದೇ ಮೊದಲನೆಯದು.
ಜನರ ಸಂಖ್ಯೆ ಹೆಚ್ಚಾದಷ್ಟು ಸಮರ್ಪಕವಾಗಿ ಎಲ್ಲರಿಗೂ ಎಲ್ಲ ಸೌಲಭ್ಯಗಳನ್ನು ದೊರಕಿಸಿಕೊಡಲು ಆಗುವುದಿಲ್ಲ. ಜನ ಹೆಚ್ಚಾದಷ್ಟು ಭೂಮಿಯು ದೊಡ್ಡದಾಗದ ಕಾರಣ ಖಂಡಿತವಾಗಿಯೂ ಭೂಮಿ ಕೊರತೆ ಕಾಡುತ್ತದೆ ಭಾರತದ ಮಟ್ಟಿಗೆ ಇದು ಬಹಳ ವರ್ಷಗಳಿಂದಲೂ ಇರುವ ಸಮಸ್ಯೆ ಆಗಿದೆ.
ಈ ಸುದ್ದಿ ಓದಿ:- ಅರಣ್ಯ ಇಲಾಖೆಯಲ್ಲಿ ಬೃಹತ್ ಉದ್ಯೋಗವಕಾಶ, 1000ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿ, ವೇತನ 50,000/- ಆಸಕ್ತರು ಅರ್ಜಿ ಸಲ್ಲಿಸಿ.!
ಭೂಪ್ರದೇಶಗಳ ಕೊರತೆ ಪ್ರತಿಯೊಂದು ಕುಟುಂಬಕ್ಕೂ ಇದೇ ನಮ್ಮ ದೇಶದಲ್ಲಿ ಕೂಡ ಇನ್ನೂ ಲಕ್ಷಾಂತರ ಕುಟುಂಬಗಳಿಗೆ ತಮ್ಮ ಸ್ವಂತ ಜಮೀನು ಇಲ್ಲದೆ ಕೃಷಿಗಾಗಿ, ವಸತಿಗಾಗಿ ಜಮೀನಿಗೆ ಗೇಣಿ ಹಾಗೂ ಮನೆಗಳಿಗೆ ಬಾಡಿಗೆ ಕಟ್ಟಿಕೊಂಡು ಬದುಕುತ್ತಿದ್ದಾರೆ.
ಇನ್ನು ಕೆಲವರು ಸರ್ಕಾರದ ಭೂಮಿಗಳನ್ನೇ ಆಕ್ರಮಿಸಿ ಆ ಪ್ರದೇಶದಲ್ಲಿ ತಲತಲಾಂತರದಿಂದ ಕೃಷಿ ಮಾಡಿಕೊಂಡು ಬರುತ್ತಿದ್ದಾರೆ. ಇದು ಅರಣ್ಯಕ್ಕೆ ಸೇರಿದ ಭೂಮಿಯಾಗಿದ್ದರೆ ಅಥವಾ ಗೋಮಾಳ ಅಥವಾ ಸರ್ಕಾರವು ತನ್ನ ಯಾವುದು ಯೋಜನೆಗೆ ನಿಗದಿಪಡಿಸಿದ್ದ ಜಮೀನಾಗಿದ್ದರೆ ರೈತನಿಗೆ ಇಂದಲ್ಲ ನಾಳೆ ಕೈ ತಪ್ಪುತ್ತದೆ ಎನ್ನುವ ಅಭದ್ರತೆ ಇದ್ದೇ ಇರುತ್ತದೆ.
ಈ ಸುದ್ದಿ ಓದಿ:- ಮಹಿಳೆಯರಿಗಾಗಿ ಮೋದಿ ಹೊಸ ಯೋಜನೆ 5000 ಸಹಾಯಧನ ಸಿಗಲಿದೆ.!
ಆದರೆ ಕಂದಾಯ ಇಲಾಖೆಯು ಆಗೊಮ್ಮೆ ಈಗೊಮ್ಮೆ ಇವುಗಳನ್ನು ಪರಿಶೀಲನೆ ನಡೆಸಿ ರೈತರ ಪರಿಸ್ಥಿತಿ ಅರಿತು ಅಕ್ರಮ ಸಕ್ರಮಕ್ಕೆ ಅವಕಾಶ ಮಾಡಿಕೊಡುತ್ತಿದೆ. ಇಂತಹ ಅವಕಾಶಗಳು ಸಿಕ್ಕಾಗ ರೈತರು ಅರ್ಜಿ ಸಲ್ಲಿಸಿ ಇದಕ್ಕೆ ಪೂರಕವಾದ ದಾಖಲೆಗಳನ್ನು ನೀಡಿ ಆತನ ಕುಟುಂಬ ಜೀವನೋಪಾಯಕ್ಕಾಗಿ ಹತ್ತಿಪ್ಪತ್ತು ವರ್ಷಗಳ ಹಿಂದಿನಿಂದ ಕೃಷಿ ಮಾಡಿಕೊಂಡು ಬಂದಿದ್ದ ಸರ್ಕಾರಿ ಜಮೀನು ಆಗಿದ್ದರೂ ಕೂಡ ತಮ್ಮ ಹೆಸರಿಗೆ ಮಾಡಿಕೊಳ್ಳಬಹುದು.
ಅದರಲ್ಲಿ ಗೋಮಾಳ ಅಂದರೆ ಗೋವುಗಳಿಗೆ ಮೇವಿನ ಉದ್ದೇಶಕ್ಕಾಗಿ ಗ್ರಾಮಗಳಲ್ಲಿ ಬಿಟ್ಟಿದ್ದ ಜಮೀನಾಗಿದ್ದರೆ ಅಂತಹ ಜಮೀನುಗಳು ಕೂಡ ಅಕ್ರಮ ಸಕ್ರಮದಡಿ ರೈತನ ಹೆಸರಿಗೆ ಆಗುತ್ತದೆಯೇ ಎನ್ನುವ ಅನುಮಾನ ಅನೇಕರಿಗೆ ಕಾಡುತ್ತದೆ ಅದಕ್ಕೆ ಉತ್ತರ ಹೀಗಿದೆ ನೋಡಿ.
ಈ ಸುದ್ದಿ ಓದಿ:- ಈಗ ನಿಮ್ಮ ಮನೆಯಲ್ಲಿ 5 ನಿಮಿಷಗಳಲ್ಲಿ ಶುದ್ಧವಾದ ಅಡುಗೆ ಎಣ್ಣೆ ತಯಾರಿಸಿಕೊಳ್ಳಬಹುದು. ಆರೋಗ್ಯಕ್ಕೂ ಒಳ್ಳೆಯದು, ಸಾವಿರಾರು ರೂಪಾಯಿ ಹಣ ಉಳಿತಾಯ ಕೂಡ.!
ಗೋಮಾಳದ ಜಮೀನು ಎಂದರೆ ಸರ್ಕಾರ ಪ್ರತಿಯೊಂದು ಗ್ರಾಮಗಳಲ್ಲಿ ದನಕರುಗಳು ಮೇವಿಗಾಗಿ ಮಿಸಲಾಗಿರಿಸಿದಂತಹ ಜಾಗ ಎನ್ನುವುದು ನಿಜ. ಈ ಗೋಮಾಳದ ಜಮೀನನ್ನು ಕರ್ನಾಟಕದಲ್ಲಿಯೇ ಸಾಕಷ್ಟು ರೈತರು ಒತ್ತುವರಿ ಮಾಡಿಕೊಂಡು ಸಾಕಷ್ಟು ವರ್ಷಗಳಿಂದ ಕೃಷಿ ವ್ಯವಸಾಯ ಮಾಡಿಕೊಂಡು ಬರುತ್ತಿದ್ದಾರೆ ಇದು ಅಕ್ರಮ ಒತ್ತುವರಿಯಾಗಿರುತ್ತದೆ ಆದರೆ ಸಕ್ರಮಕ್ಕೆ ಖಂಡಿತ ಅವಕಾಶವಿದೆ,
ಆದರೆ ಸುಲಭವಲ್ಲ ಇದಕ್ಕೆ ಕೆಲವು ಕಂಡಿಷನ್ ಗಳು ಮತ್ತು ಸಾಕಷ್ಟು ದಾಖಲೆಗಳ ಅವಶ್ಯಕತೆ ಇರುತ್ತದೆ. ಗೋವುಗಳಿಗೆ ಮೀಸಲಾದ ಈ ಗೋಮಾಳ ಜಾಗದಲ್ಲಿ ಯಾವುದೆ ಕಾರಣಕ್ಕೂ ಅಕ್ರಮ ಗಣಿಗಾರಿಕೆ ನಡೆಸಲು ಅನುಮತಿ ಇರುವುದಿಲ್ಲ, ರೈತನ ಕುಟುಂಬ ನಿರ್ವಹಣೆಗೆ ಕೃಷಿ ಮಾಡುವುದು ಬಿಟ್ಟು ಬೇರೆ ಏನನ್ನು ಕೂಡ ಅಲ್ಲಿ ಮಾಡಲು ಅಥವಾ ಅದನ್ನು ತನ್ನ ಹೆಸರಿಗೆ ಆದ ನಂತರ ಮಾರಾಟ ಮಾಡಲು, ಕೈಗಾರಿಕೆ ನಿರ್ವಹಿಸಲು ಗುತ್ತಿಗೆ ಕೊಡಲು ಅವಕಾಶ ಇರುವುದಿಲ್ಲ.
ಈ ಸುದ್ದಿ ಓದಿ:- ಸರ್ಕಾರದಿಂದ ಸಿಗಲಿದೆ 3 ಲಕ್ಷದವರೆಗೆ ಬಡ್ಡಿ ಇಲ್ಲದೆ ಸಾಲ.!
ಇವುಗಳನ್ನು ತಮ್ಮ ಹೆಸರಿಗೆ ಮಾಡಿಕೊಳ್ಳುವುದು ಹೇಗೆಂದರೆ ಮೊದಲಿಗೆ ರೈತರು ಆಯಾ ಭಾಗಕ್ಕೆ ಸಂಬಂಧಿಸಿದ ತಹಶೀಲ್ದಾರರನ್ನು ಭೇಟಿಯಾಗಿ ಗೋಮಾಳದ ಅಕ್ರಮ ಒತ್ತುವರಿ ಭೂಮಿಯನ್ನು ತಮ್ಮ ಹೆಸರಿಗೆ ಸಕ್ರಮ ಮಾಡಿಕೊಡಲು ಕೋರಿಕೆಯನ್ನು ಸಲ್ಲಿಸಬೇಕು. ಸಂಬಂಧಿಸಿದ ದಾಖಲೆಗಳನ್ನು ನೀಡಬೇಕು.
ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲಿಸಿದ ನಂತರ ಸರ್ಕಾರ ಗೋಮಾಳದ ಜಮೀನನ್ನು ಕೃಷಿ ಮಾಡಿಕೊಂಡು ಜೀವನ ಮಾಡುತ್ತಿರುವ ರೈತನ ಹೆಸರಿಗೆ ಸಕ್ರಮ ಮಾಡಿಕೊಡುತ್ತದೆ, ಹೀಗೆ ಗೋಮಾಳ ಜಮೀನನ್ನು ರೈತರು ಸಕ್ರಮ ಮಾಡಿಕೊಳ್ಳಬಹುದು.