ಪ್ರತಿಮನೆಯ ಅಡುಗೆ ಕೋಣೆಯಲ್ಲಿ ದೊಡ್ಡ ಯಜಮಾನ ರೀತಿ ಜಾಗ ಕೆಟ್ಟಸಿಕೊಂಡಿರುವ ಒಂದು ವಸ್ತು ಎಂದರೆ ಅದು ಮನೆಯ ಕುಕ್ಕರ್. ಮನೆಯಲ್ಲಿ ಎಷ್ಟೇ ಪಾತ್ರೆಗಳು ಇದ್ದರೂ ಈ ಕುಕ್ಕರ್ ಗೆ ಇರುವ ಬೆಲೆಯೇ ಬೇರೆ. ಯಾಕೆಂದರೆ ಅನ್ನ ಮಾಡಲು, ಬೇಳೆ ತರಕಾರಿ ಬೇಯಿಸಲು, ಕಾಳುಗಳನ್ನು ಬೇಯಿಸಲು ಈ ಕುಕ್ಕರ್ ಬೇಕೇ ಬೇಕು.
ಕಡಿಮೆ ಸಮಯದಲ್ಲಿ ನಮಗೆ ಬೇಕಾದ ಹದಕ್ಕೆ ಕಡಿಮೆ ಗ್ಯಾಸ್ ಬಳಕೆಯಲ್ಲಿ ಒಂದು ಸಾರಿ ಹಾಕಿ ಮುಚ್ಚಳ ಮುಚ್ಚಿ ಕೂಗಿಸಿ ಬಿಡುವ ಆ ಸಮಯದಲ್ಲಿ ಬೇರೆ ಕೆಲಸ ಮಾಡಿಕೊಳ್ಳುವ ಅವಕಾಶವನ್ನು ಕುಕ್ಕರು ಮಾಡಿಕೊಡುವುದರಿಂದ ಎಲ್ಲರಿಗೂ ಕುಕ್ಕರ್ ಗೆಳತಿಯಾಗಿ ಬಿಟ್ಟಿದ್ದಾರೆ. ಜೊತೆಗೆ ಆ ಮನೆಯ ಕುಕ್ಕರ್ ಅವರ ಒಡತಿ ಮಾತಷ್ಟೇ ಕೇಳುವುದು ಎನ್ನುವುದು ಇತ್ತೀಚಿಗೆ ಜನಪ್ರಿಯವಾಗಿರುವ ಮಾತು.
ಯಾಕೆಂದರೆ ಅವರಿಗೆ ಅದು ಚೆನ್ನಾಗಿ ಒಗ್ಗಿಕೊಂಡಿರುತ್ತದೆ. ಬೇರೆಯವರು ಅದರಲ್ಲಿ ಅಡುಗೆ ಮಾಡಲು ಹೋದರೆ ಅದು ಕೆಲಸ ಮಾಡದೆ ತೊಂದರೆ ಕೊಡುವ ಉದಾಹರಣೆಯೂ ಇರುವುದರಿಂದ ಈ ಮಾತು ಜನಪ್ರಿಯವಾಗಿದೆ.
ಚಿತ್ರನ್ನ ಮಾಡುವುದರಿಂದ ಹಿಡಿದು ಬಿಸಿಬೇಳೆ ಬಾತ್ ವರೆಗೆ ಕುಕ್ಕರ್ ಬಳಕೆ ಬೇಕೇ ಬೇಕು. ಇಂತಹ ಕುಕ್ಕರ್ ಬಳಸುವಾಗ ಸ್ವಲ್ಪ ನಾವು ಎಚ್ಚರ ತಪ್ಪಿದರೂ ಕುಕ್ಕರ್ ನಲ್ಲಿರುವ ಪದಾರ್ಥಗಳು ಆಚೆ ಸುರಿದು ಕ್ಲೀನಿಂಗ್ ಕೆಲಸ ಜಾಸ್ತಿ ಆಗುತ್ತದೆ, ಕುಕ್ಕರ್ ಬ್ಲಾಸ್ಟ್ ಆಗಿ ಅಡುಗೆ ಮನೆಯಲ್ಲಿ ಇದ್ದವರನ್ನು ಸುಡಬಹುದು, ಸಾ’ವು-ನೋವು ಸಂಭವಿಸಬಹುದು ಅಥವಾ ಮನೆ ಸೇಫ್ಟಿಗೂ ಕೂಡ ಇದು ಡೇಂಜರಸ್ ಆಗಬಹುದು.
ಹಾಗಾಗಿ ಕುಕ್ಕರ್ ಮಾಡುವಾಗ ಎಷ್ಟು ಖುಷಿಯಲ್ಲಿ ಇಟ್ಟು ಕೆಲಸ ಬೇಗ ಮಾಡುತ್ತೇವೋ ಅಷ್ಟು ಜಾಗ್ರತೆಯಲ್ಲಿ ಮಾಡುವುದು ಕೂಡ ಮುಖ್ಯವಾಗುತ್ತದೆ. ಅದರಲ್ಲೂ ಪ್ರತಿ ಬಾರಿ ಕುಕ್ಕರ್ ನಲ್ಲಿ ಅಡುಗೆ ಮಾಡುವಾಗಲೂ ಕೂಡ ನಾಲ್ಕು ವಿಷಯಗಳಂತೂ ಗಮನದಲ್ಲಿ ಇಟ್ಟುಕೊಳ್ಳಲೇಬೇಕು.
ಇದು ಗೊತ್ತಿದ್ದಾಗ ಮಾತ್ರ ಇಂತಹ ಅವಘಡಗಳನ್ನು ತಪ್ಪಿಸಲು ಸಾಧ್ಯವಾಗುವುದು. ಹಾಗಾಗಿ ಇಂದು ಈ ಅಂಕಣದಲ್ಲಿ ಕುಕ್ಕರ್ ಕುರಿತಾದ ಕೆಲ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದೇವೆ. ಪ್ರತಿ ಬಾರಿಯೂ ಇವುಗಳ ಬಗ್ಗೆ ಎಚ್ಚರ ಇರಲಿ.
* ಕುಕ್ಕರ್ ಬೆಲ್ಟ್ ಸರಿಯಾಗಿ ಇದ್ದರೆ ಮಾತ್ರ ಅದು ಸರಿಯಾಗಿ ಕಾರ್ಯ ಮಾಡುವುದು ಹಾಗಾಗಿ ಬಹಳ ಹಳೆಯದಾದ ಅಥವಾ ಡ್ಯಾಮೇಜ್ ಆದ ಬೆಲ್ಟ್‌ಗಳನ್ನು ಬಳಸಬೇಡಿ ಮತ್ತು ಅಡುಗೆ ಮಾಡುವ ಸ್ವಲ್ಪ ಹೊತ್ತಿನ ಮುಂಚೆ ಬೆಲ್ಟ್ ನೀರಿನಲ್ಲಿ ಇಟ್ಟು ನಂತರ ಅದನ್ನು ತೆಗೆದುಕೊಂಡು ಕುಕ್ಕರಿಗೆ ಹಾಕಿ ಇಡಿ ಇದನ್ನು ನಿರ್ಲಕ್ಷಿಸಿದಾಗ ಅ’ಪಾ’ಯವಾಗಿರುವ ಉದಾಹರಣೆಗಳು ಇವೆ.
* ದಿನದ ಮೂರು ಹೊತ್ತು ಕೂಡ ಕುಕ್ಕರ್ ನಲ್ಲಿ ಏನಾದರೂ ಮಾಡುತ್ತಲೇ ಇರುತ್ತೇವೆ. ಆ ಸಮಯದಲ್ಲಿ ವಿಷಲ್ ನಲ್ಲಿ ಅಕ್ಕಿ, ಬೆಳೆ, ಸೊಪ್ಪು ಸಿಕ್ಕಿಕೊಂಡಿರುವ ಸಾಧ್ಯತೆ ಇರುತ್ತದೆ. ಅದನ್ನು ಕ್ಲೀನ್ ಮಾಡದೇ ಹಾಕಿದಾಗ ತೊಂದರೆಗಳಾಗುತ್ತವೆ ಹಾಗಾಗಿ ವಿಷಲ್ ಕೂಡ ಕ್ಯಾಪ್ ಬಿಚ್ಚಿ ನೀಟಾಗಿ ಕ್ಲೀನ್ ಮಾಡಿ ಬಳಸಬೇಕು
* ಕುಕ್ಕರ್ ನಲ್ಲಿ ಇಟ್ಟಿರುವ ಪದಾರ್ಥಕ್ಕೆ ಸಮನಾದ ನೀರನ್ನು ಹಾಕದೆ ಇದ್ದಾಗ ಅಥವಾ ಅಗತ್ಯಕ್ಕಿಂತ ಹೆಚ್ಚು ಬಾರಿ ಕುಕ್ಕರ್ ಸೀಟಿ ಹೊಡಿಸಿದಾಗ ಕೂಡ ಬ್ಲಾ’ ಸ್ಟ್ ಆಗುವ ಸಾಧ್ಯತೆ ಇರುತ್ತದೆ
* ಕುಕ್ಕರ್ ಖರೀದಿಸುವಾಗ ಯಾವಾಗಲೂ ಉತ್ತಮ ಗುಣಮಟ್ಟದ ಒಳ್ಳೆಯ ಕಂಪನಿ ಕುಕ್ಕರ್ ಖರೀದಿಸಿ ಇದರಿಂದ ಕೂಡ ಅಪಾಯದ ಪ್ರಮಾಣ ಕಡಿಮೆ ಇರುತ್ತದೆ. ISI ಮಾರ್ಕ್ ಇರುವ ಕುಕ್ಕರ್ ಗಳನ್ನು ಮಾತ್ರ ಬಳಸಿ. ಒಂದು ವೇಳೆ ಯಾವುದೇ ಕಾರಣದಿಂದ ನಿಮ್ಮ ಮನೆ ಕುಕ್ಕರ್ ಸ್ಫೋ’ಟಗೊಂಡರೆ ತಕ್ಷಣ 1800114000 (ಅಥವಾ) 1915 ಗೆ ಕರೆ ಮಾಡಿ ಮತ್ತು ದೂರು ದಾಖಲಿಸಿ.