ಪರಿಸರ ಪ್ರೇಮಿಗಳಿಗೆ ಸರ್ಕಾರದ ಕಡೆಯಿಂದ ಒಂದು ಸಿಹಿ ಸುದ್ದಿ ಇದೆ. ಅದೇನೆಂದರೆ, ಕರ್ನಾಟಕ ಅರಣ್ಯ ಇಲಾಖೆ ವತಿಯಿಂದ ಸಾವಿರಾರು ಹುದ್ದೆಗಳಿಗೆ ನೋಟಿಫಿಕೇಶನ್ ಆಗಿದೆ. ರಾಜ್ಯದಾದ್ಯಂತ ಇರುವ ಯಾವುದೇ ಪುರುಷ ಅಥವಾ ಮಹಿಳಾ ಅಭ್ಯರ್ಥಿಯು ನೋಟಿಫಿಕೇಶನ್ ಅಲ್ಲಿ ನೀಡಿರುವ ಮಾನದಂಡಗಳನ್ನು ಪೂರೈಸುವುದಾದರೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಹುದ್ದೆ ಪಡೆಯಲು ಪ್ರಯತ್ನಿಸಬಹುದು.
ಅರಣ್ಯ ಸಂಪತ್ತನ್ನು ರಕ್ಷಿಸಿದ ಹೆಮ್ಮೆಯ ಜೊತೆಗೆ ಪ್ರಕೃತಿಯೊಂದಿಗೆ ಕಾಲ ಕಳೆಯುವ ಅದೃಷ್ಟ ಸಿಗುವುದರಿಂದ ಲಕ್ಷಾಂತರ ಅಭ್ಯರ್ಥಿಗಳಿಗೆ ಈ ಬಗ್ಗೆ ಒಲವಿರುತ್ತದೆ ಹಾಗಾಗಿ ಇವರಿಗೆಲ್ಲ ಅರ್ಜಿ ಸಲ್ಲಿಸಲು ಅನುಕೂಲತೆ ಆಗಲಿ ಎನ್ನುವ ಉದ್ದೇಶದಿಂದ ನೋಟಿಫಿಕೇಶನ್ ನಲ್ಲಿ ಹುದ್ದೆ ಕುರಿತಂತೆ ಸೂಚಿಸಿರುವ ಎಲ್ಲ ಪ್ರಮುಖ ಮಾಹಿತಿಯನ್ನು ಕೂಡ ಈ ಲೇಖನದಲ್ಲಿ ಹಂಚಿಕೊಳ್ಳುತ್ತಿದ್ದೇವೆ. ತಪ್ಪದೆ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.
ಈ ಸುದ್ದಿ ಓದಿ:- ಮಹಿಳೆಯರಿಗಾಗಿ ಮೋದಿ ಹೊಸ ಯೋಜನೆ 5000 ಸಹಾಯಧನ ಸಿಗಲಿದೆ.!
ನೇಮಕಾತಿ ಸಂಸ್ಥೆ:- ಕರ್ನಾಟಕ ಅರಣ್ಯ ಇಲಾಖೆ
ಹುದ್ದೆ ಹೆಸರು:- ಅರಣ್ಯಾಧಿಕಾರಿ ಹುದ್ದೆಗಳು
ಒಟ್ಟು ಹುದ್ದೆಗಳ ಸಂಖ್ಯೆ:- 1000+
ಉದ್ಯೋಗ ಸ್ಥಳ:- ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ
ವೇತನ ಶ್ರೇಣಿ:- ಈ ಹುದ್ದೆಗಳಿಗೆ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಮಾಸಿಕವಾಗಿ ರೂ.40,000 – ರೂ.50,000 ವರೆಗೆ ವೇತನ ಇರುತ್ತದೆ ಮತ್ತು ಇದರೊಂದಿಗೆ ಇನ್ನಿತರ ಸರಕಾರಿ ಸೌಲಭ್ಯಗಳು ಕೂಡ ಸಿಗುತ್ತವೆ.
ಈ ಸುದ್ದಿ ಓದಿ:- ಜಮೀನಿನಲ್ಲಿ ಲೈಟ್ ಕಂಬ ಅಥವಾ TC ಇದ್ದರವರಿಗೆ ಹೊಸ ರೂಲ್ಸ್.!
ಶೈಕ್ಷಣಿಕ ವಿದ್ಯಾರ್ಹತೆ:-
ಈ ಮೇಲೆ ತಿಳಿಸಿದ ಅರಣ್ಯಾಧಿಕಾರಿಗಳು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಮಾನ್ಯತೆ ಪಡೆದ ಯಾವುದೇ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಕೃಷಿ ವಿಜ್ಞಾನ / ಅರಣ್ಯಶಾಸ್ತ್ರ / ಸಸ್ಯಶಾಸ್ತ್ರ / ಪ್ರಾಣಿಶಾಸ್ತ್ರ ಅಥವಾ ಪರಿಸರ ವಿಜ್ಞಾನದಲ್ಲಿ ಕನಿಷ್ಠ ಶೇಕಡಾ 50 ಅಂಕಗಳೊಂದಿಗೆ ಪದವಿ ಪಡೆದಿರಬೇಕು.
ಇನ್ನಿತರ ಅರ್ಹತೆಗಳು:-
* ಕನ್ನಡ ಭಾಷೆ ಓದಲು, ಬರೆಯಲು ಮತ್ತು ಮಾತನಾಡಲು ಬರಬೇಕು
* ಅಭ್ಯರ್ಥಿಯ ದೈಹಿಕ ಸ್ಥಿತಿ ಉತ್ತಮವಾಗಿರಬೇಕು ಯಾವುದೇ ರೀತಿಯ ಕಾಯಿಲೆಗಳಿಂದ ಮುಕ್ತರಾಗಿರಬೇಕು.
ಈ ಸುದ್ದಿ ಓದಿ:- ಲೇಬರ್ ಕಾರ್ಡ್ ಇದ್ದವರ ಇಬ್ಬರು ಮಕ್ಕಳ ಮದುವೆಗೂ ಸಿಗುತ್ತೆ ತಲಾ 50,000 ಸಹಾಯಧನ.!
ವಯೋಮಿತಿ:-
* ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 18 ವರ್ಷಗಳು
* ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 35 ವರ್ಷಗಳು
ವಯೋಮಿತಿ ಸಡಿಲಿಕೆ:-
* SC / ST / ಪ್ರವರ್ಗ -1ರ ಅಭ್ಯರ್ಥಿಗಳಿಗೆ 05 ವರ್ಷಗಳು
* OBC ಅಭ್ಯರ್ಥಿಗಳಿಗೆ 03 ವರ್ಷಗಳ ಸಡಿಲಿಕೆ ಇರುತ್ತದೆ
ಅರ್ಜಿ ಸಲ್ಲಿಸುವ ವಿಧಾನ:-
* https://kfdrecruitment.in/ ಇದು ಅರಣ್ಯ ಇಲಾಖೆಯ ಅಧಿಕೃತ ವೆಬ್ಸೈಟ್ ಆಗಿದೆ.
* ಈ ವೆಬ್ಸೈಟ್ ವಿಳಾಸಕ್ಕೆ ಭೇಟಿ ಕೊಟ್ಟು ಅರ್ಜಿ ಸಲ್ಲಿಸಲು ನೀಡಿರುವ ಲಿಂಕ್ ಕ್ಲಿಕ್ ಮಾಡಿ ವೈಯಕ್ತಿಕ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ ಪೂರಕ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು ಮತ್ತು ಆಯಾ ಕೆಟಗರಿಗೆ ಅನುಗುಣವಾಗಿ ಸೂಚಿಸಿರುವಷ್ಟು ಅರ್ಜಿ ಶುಲ್ಕವನ್ನು ಕ್ರೆಡಿಟ್ ಕಾರ್ಡ್ / ಡೆಬಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ / UPI ಆಧಾರಿತ ಸೇವೆಗಳ ಮೂಲಕ ಆನ್ಲೈನ್ ನಲ್ಲಿ ಪಾವತಿಸಿ ಅರ್ಜಿ ಸಲ್ಲಿಕೆ ಯಶಸ್ವಿ ಆದಮೇಲೆ ಪ್ರಿಂಟ್ ಔಟ್ ಪಡೆದುಕೊಳ್ಳಬೇಕು
ಆಯ್ಕೆ ವಿಧಾನ:-
* ವಸ್ತುನಿಷ್ಠ ಬಹು ಆಯ್ಕೆ ಪ್ರಶ್ನೆಗಳನ್ನು ಒಳಗೊಂಡ ಪರೀಕ್ಷೆ ಏರ್ಪಡಿಸಲಾಗುತ್ತದೆ
* ಆಯ್ಕೆ ಆದವರಿಗೆ ದೈಹಿಕ ಪರೀಕ್ಷೆ, ನೇರ ಸಂದರ್ಶನ ಮತ್ತು ದಾಖಲಾತಿ ಪರಿಶೀಲನೆ ನಡೆಸಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಈ ಸುದ್ದಿ ಓದಿ:- ಸರ್ಕಾರದಿಂದ ಸಿಗಲಿದೆ 3 ಲಕ್ಷದವರೆಗೆ ಬಡ್ಡಿ ಇಲ್ಲದೆ ಸಾಲ.!
ಪ್ರಮುಖ ದಿನಾಂಕಗಳು:-
* ಅರ್ಜಿ ಶುಲ್ಕ, ಅರ್ಜಿ ಸಲ್ಲಿಕೆ ಆರಂಭ ದಿನಾಂಕ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಇತ್ಯಾದಿ ಮಾಹಿತಿಗಳನ್ನು ಶೀಘ್ರದಲ್ಲಿಯೇ ಕರ್ನಾಟಕ ಅರಣ್ಯ ಇಲಾಖೆ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸಲಾಗುತ್ತದೆ.