ಪ್ರತಿಯೊಬ್ಬರ ಮನೆಯಲ್ಲೂ ಒಂದು ಅಥವಾ ಎರಡು ವಾಹನಗಳು ಇದ್ದೇ ಇರುತ್ತವೆ. ಇವುಗಳು ಮುಂದೆ ಚಲಿಸಬೇಕಂದ್ರೆ, ಪೆಟ್ರೋಲ್ ಬೇಕೇ ಬೇಕು. ಪೆಟ್ರೋಲ್ ಬೆಲೆ ಒಂದೇ ರೀತಿ ಇರೋದಿಲ್ಲ. ಇದರ ಬೆಲೆ ಪ್ರತೀ ದಿನವೂ ಏರುಪೇರಾಗುತ್ತಲೇ ಇರುತ್ತದೆ. ಬೆಲೆ ಎಷ್ಟೇ ಏರಿಕೆಯಾದ್ರೂ ಜನ ವಾಹನಗಳಲ್ಲಿ ಓಡಾಡೋದನ್ನ ಕಡಿಮೆ ಮಾಡಿಲ್ಲ. ತುರ್ತು ಪರಿಸ್ಥಿತಿ ಸಂದರ್ಭಗಳಲ್ಲಿ ಇರಲಿ ಬೇಕಾಗುತ್ತೆ ಅಂತಾ ಪೆಟ್ರೋಲ್ ಹಾಕಿಸುತ್ತಾರೆ. ನೀವು ಪೆಟ್ರೋಲ್ ಹಾಕಿಸಿದಾಗ ಕೇವಲ ಅದಕ್ಕೆ ಬೆಲೆಯನ್ನಷ್ಟೇ ಅಲ್ಲ ಅದಕ್ಕೆ ಟ್ಯಾಕ್ಸ್ ಕೂಡ ಕಟ್ಟುತ್ತೀರ ಎಂಬುದು ನೆನಪಿರಲಿ.
ಹೌದು, ನೀವು ಒಂದು ಲೀಟರ್ ಪೆಟ್ರೋಲ್ಗೆ ಎಷ್ಟು ಟ್ಯಾಕ್ಸ್ ಕಟ್ತೀರಾ ಅಂತ ಯಾವಾತ್ತಾದ್ರೂ ಯೋಚಿಸಿದ್ದೀರಾ? ಇಷ್ಟು ಹಣ ಒಂದು ಲೀಟರ್ಗೆ ನೀವು ತೆರಿಗೆ ಕಟ್ತೀರಾ ಅಂತ ಗೊತ್ತಾದ್ರೆ ನಿಜಕ್ಕೂ ನಿಮಗೆ ಶಾಕ್ ಆಗುತ್ತೆ. ಸಾಮಾನ್ಯವಾಗಿ ಪೆಟ್ರೋಲ್ ಬಂಕ್ಗೆ ಹೋದಾಗ ಐವತ್ತೋ, ನೂರೋ ಪೆಟ್ರೋಲ್ ಹಾಕಿಸುತ್ತೇವೆ. ಹೆಚ್ಚೆಂದರೆ 500-1000 ರೂಪಾಯಿ ಫುಲ್ ಟ್ಯಾಂಕ್ ಮಾಡಿಸುತ್ತೇವೆ
ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 101.94 ಆಸುಪಾಸಿನಲ್ಲಿದೆ. ಇದು ಮೂಲ ಬೆಲೆ ಅಲ್ಲ. ಆದರೆ, ವಿವಿಧ ತೆರಿಗೆಗಳು ಮತ್ತು ಶುಲ್ಕಗಳನ್ನು ಸೇರಿಸಿದ ನಂತರ ಮೊತ್ತವು ಗ್ರಾಹಕರಿಗೆ ತಲುಪುತ್ತದೆ. ಕಳೆದ ವರ್ಷ ಮಾರ್ಚ್ನಲ್ಲಿ ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಪ್ರಾರಂಭವಾದ ನಂತರ, ದೇಶದಲ್ಲಿ ಇಂಧನ ಬೆಲೆ ತೀವ್ರವಾಗಿ ಏರಿದೆ. ಕಚ್ಚಾ ತೈಲ ಬೆಲೆ ಏರಿಕೆಯಿಂದಾಗಿ ದೇಶದ ತೈಲ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಿಸಬೇಕಾಯಿತು.
ಒಂದು ಲೀಟರ್ ಪೆಟ್ರೋಲ್ ಬೆಲೆಯ ಸುಮಾರು 50 ಪ್ರತಿಶತದಷ್ಟು ತೆರಿಗೆಯನ್ನು ಹೊಂದಿದೆ ಅಂತ ನಿಮಗೆ ಗೊತ್ತಿದ್ಯಾ? ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ತೆರಿಗೆ ವಿಧಿಸುತ್ತವೆ. ಇದು ಸರ್ಕಾರದ ಬೊಕ್ಕಸಕ್ಕೆ ಹಣವನ್ನು ತರುತ್ತದೆ. ದೇಶದ ಪ್ರಮುಖ ತೈಲ ಕಂಪನಿಗಳಾದ ಹಿಂದೂಸ್ತಾನ್ ಪೆಟ್ರೋಲಿಯಂ, ಇಂಡಿಯನ್ ಆಯಿಲ್ ಮತ್ತು ಭಾರತ್ ಪೆಟ್ರೋಲಿಯಂ ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ನಿರ್ಧರಿಸುತ್ತವೆ.
ಪೆಟ್ರೋಲ್-ಡೀಸೆಲ್ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆದಾಯದ ಪ್ರಮುಖ ಮೂಲವಾಗಿದೆ. ಸರ್ಕಾರದ ಅಂಕಿಅಂಶಗಳ ಪ್ರಕಾರ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 2022-23ರ 9 ತಿಂಗಳಲ್ಲಿ ಪೆಟ್ರೋಲಿಯಂ ಉತ್ಪನ್ನಗಳಿಂದ ರೂ 545,002 ಕೋಟಿ ಗಳಿಸಿವೆ. 2021-22ನೇ ಹಣಕಾಸು ವರ್ಷದಲ್ಲಿ ಸರ್ಕಾರಗಳು 774,425 ಕೋಟಿ ರೂ., 2020-21ರಲ್ಲಿ 672,719 ಕೋಟಿ ರೂ.ಗಳನ್ನು ಗಳಿಸಿವೆ.
ಒಂದು ಲೀಟರ್ ಪೆಟ್ರೋಲ್ಗೆ 35.61 ರೂಪಾಯಿ ತೆರಿಗೆ ವಿಧಿಸಲಾಗಿತ್ತು. ಇದರಲ್ಲಿ 19.90 ರೂಪಾಯಿ ಕೇಂದ್ರ ಸರ್ಕಾರದ ಖಜಾನೆಗೆ ಮತ್ತು 15.71 ರೂಪಾಯಿ ರಾಜ್ಯ ಸರ್ಕಾರಕ್ಕೆ ಹೋಗುತ್ತದೆ. ಇದಲ್ಲದೇ ಒಂದು ಲೀಟರ್ ಪೆಟ್ರೋಲ್ ಮೇಲೆ ಡೀಲರ್ ಕಮಿಷನ್ 3.76 ರೂ. ಸಾಗಣೆಗೆ 0.20 ಪೈಸೆ ಸೇರಿಸಲಾಗುತ್ತದೆ. ಇನ್ನೂ, ಸಾಮಾನ್ಯವಾಗಿ ಎಲ್ಲರೂ 100, 200, 500, 2000 ಸಾವಿರ ರೂಪಾಯಿಗಳಿಗೆ ಪೆಟ್ರೋಲ್-ಡೀಸೆಲ್ ಹಾಕಿಸುತ್ತಾರೆ. ಹೀಗೆ ಮಾಡಬೇಡಿ. 100ರ ಬದಲು 110 ರೂಪಾಯಿ ಹಾಕಿಸಿ. ಯಾಕೆಂದ್ರೆ ಮುಂಚೆಯೇ ಮೀಟರ್ನಲ್ಲಿ 100, 200, 300, 500 ಫಿಕ್ಸ್ ಆಗಿರುತ್ತೆ. ಹೀಗೆ ಮಾಡುವುದರಿಂದ ಪೆಟ್ರೋಲ್ ನಿಮಗೆ ಕಡಿಮೆ ಬರುತ್ತೆ ಅಂತ ಹೇಳಲಾಗುತ್ತೆ.