ನಮ್ಮ ದೇಶವು ಕೃಷಿ ಪ್ರಧಾನ ದೇಶವಾಗಿದೆ. ಹಳ್ಳಿಗಳಿಂದಲೇ ಕೂಡಿರುವ ದೇಶವಾದ ಭಾರತದಲ್ಲಿ ಗ್ರಾಮೀಣ ಭಾಗದಲ್ಲಿ ಕೃಷಿ ನಂಬಿಕೊಂಡು ಸಂಸಾರ ಸಾಗುತ್ತಿರುವ ಕುಟುಂಬಗಳು ಕೋಟ್ಯಾಂತರ ಸಂಖ್ಯೆಯಲ್ಲಿವೆ. ನಮ್ಮ ದೇಶದಲ್ಲಿ ಕೃಷಿಗೆ ಎದುರಾಗುವ ಸವಾಲಿನ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ ಬಹಳ ಚಿಕ್ಕ ಹಿಡುವಳಿಗಳು ಅಕಾಲಿಕ ಮಳೆ, ಕನಿಷ್ಠ ಬೆಂಬಲ ಬೆಲೆ ಇಲ್ಲದೆ ಇರುವುದು ಇತ್ಯಾದಿ ಇತ್ಯಾದಿ ತರಹೇವಾರಿ ಸಮಸ್ಯೆಗಳು ರೈತನನ್ನು ಕಂಗಾಲಾಗಿಸಿ ಆ ಕುಟುಂಬದ ಮಕ್ಕಳು ಉದ್ಯೋಗ ಅರಸಿ ಪಟ್ಟಣದ ಕಡೆಗೆ ವಲಸೆ ಹೋಗುವಂತಹ ಪರಿಸ್ಥಿತಿ ಸೃಷ್ಟಿ ಮಾಡುತ್ತಿವೆ.
ಇದನ್ನು ತಪ್ಪಿಸಲು ರೈತನಿಗೆ ಗ್ರಾಮೀಣ ಭಾಗದಲ್ಲಿ ಉದ್ಯೋಗ ಖಾತರಿ ಭದ್ರತೆ ನೀಡಲು ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆ (MNREGA) ಅಡಿ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದರಿಂದ ಗ್ರಾಮ ಪಂಚಾಯಿತಿ ಮೂಲಕವಾಗಿ ವಾರ್ಷಿಕವಾಗಿ ಕನಿಷ್ಠ ನೂರು ದಿನಗಳ ಉದ್ಯೋಗ ಸಿಗುವುದು ಮಾತ್ರವಲ್ಲದೆ ಕೃಷಿಗೆ ಪೂರಕವಾದ ಕಸುಬುಗಳನ್ನು ಅನುಸರಿಸಲು ಇಚ್ಛಿಸುವ ರೈತರಿಗೆ ಪ್ರೋತ್ಸಾಹ ನೀಡಲು ಮತ್ತು ಅವರಿಗೆ ಆರ್ಥಿಕ ಬೆಂಬಲ ದೊರಕಿಸಿಕೊಡಲು ಹಲವು ಯೋಜನೆಗಳನ್ನು ಕೂಡ ಈ ಕಾರ್ಯಕ್ರಮ ಒಳಗೊಂಡಿದೆ, ಈ ಮೂಲಕ ರೈತರಿಗೆ ಹೆಚ್ಚಿನ ಅನುಕೂಲ ಮಾಡಿಕೊಡುತ್ತಿದೆ.
ಈ ಸುದ್ದಿ ಓದಿ:- 30% ಗ್ಯಾಸ್ ಉಳಿತಾಯ 100% ಸೇಫ್ಟಿ, ಮನೆ ಗೃಹಿಣಿಯರ ಬಗ್ಗೆ ಕಾಳಜಿ ಇರುವವರು ಈ ಮಾಹಿತಿ ತಿಳಿದುಕೊಳ್ಳಿ.!
ನರೇಗಾ ಯೋಜನೆಯಡಿ ಕುರಿ, ಕೋಳಿ ಸಾಕಾಣಿಕೆಗೆ, ಪಶುಸಂಗೋಪನೆ, ಮೀನುಗಾರಿಕೆ ಹೈನುಗಾರಿಕೆ ಮುಂತಾದ ಕೃಷಿಗೆ ಪೂರಕವಾದ ಕಸುಬುಗಳಿಗೆ ಇದಕ್ಕೆ ಬೇಕಾದ ವಾತಾವರಣ ಸೃಷ್ಟಿಸಿಕೊಳ್ಳಲು ಅನುಕೂಲತೆಯನ್ನೇ ಮಾಡಿಕೊಡಲಾಗುತ್ತಿದೆ. ತಮ್ಮ ಜಮೀನಿಗೆ ಇಂತಹ ಸೌಲಭ್ಯಗಳನ್ನು ಪಡೆಯಲು ಬಯಸುವ ರೈತರು ಹತ್ತಿರದಲ್ಲಿರುವ ಗ್ರಾಮ ಪಂಚಾಯಿತಿಗೆ ಭೇಟಿಕೊಟ್ಟು ಅರ್ಜಿ ಸಲ್ಲಿಸಿ ನೋಂದಾಯಿಸಿಕೊಳ್ಳಬೇಕು ಇವರಿಗೆ ಸರ್ಕಾರದಿಂದ ಸಹಾಯ ಸಿಗುತ್ತದೆ.
ಅದರಲ್ಲಿ ಮುಖ್ಯವಾಗಿ ಹೆಚ್ಚಿನ ರೈತರು ಅನುಸರಿಸುವ ಪಶುಸಂಗೋಪನೆಗೆ ಶೆಡ್ ನಿರ್ಮಾಣ ಮಾಡಿಕೊಳ್ಳಲು ಎಷ್ಟು ಸಹಾಯಧನ ಸಿಗುತ್ತದೆ? ಇದಕ್ಕೆ ಯಾರು ಅರ್ಹರು? ಹೇಗೆ ಅರ್ಜಿ ಸಲ್ಲಿಸಬೇಕು? ಏನೆಲ್ಲಾ ದಾಖಲೆಗಳನ್ನು ನೀಡಬೇಕು ಎನ್ನುವ ಪ್ರಮುಖ ಮಾಹಿತಿ ಬಗ್ಗೆ ಈ ಲೇಖನದಲ್ಲಿ ವಿವರ ನೀಡುತ್ತಿದ್ದೇವೆ.
ಈ ಸುದ್ದಿ ಓದಿ:- PUC ಪಾಸ್ ಆದವರಿಗೆ ಕೋರ್ಟ್ ನಲ್ಲಿ ಉದ್ಯೋಗವಕಾಶ, ವೇತನ 42,000 ಆಸಕ್ತರು ಅರ್ಜಿ ಸಲ್ಲಿಸಿ.!
ಹೈನುಗಾರಿಕೆ ಅಥವಾ ಪಶುಸಂಗೋಪನೆಯಲ್ಲಿ ತೊಡಗಿರುವ ರೈತರು ಸಾಕುವ ಹಸುಗಳಿಗೆ ಒಂದು ವ್ಯವಸ್ಥಿತವಾದ ಸುರಕ್ಷತಾ ಸ್ಥಳದ ಅವಶ್ಯಕತೆ ಇರುತ್ತದೆ. ಅವುಗಳಿಗೆ ಶೆಡ್ ನಿರ್ಮಾಣ ಮಾಡುವುದರಿಂದ ಮಳೆಬಿಸಿಲಿಗೆ ಹಿತಕರವಾದ ಸೂರು, ಪ್ರತಿಯೊಂದು ಹಸುವಿಗೂ ಕೂಡ ಪ್ರತ್ಯೇಕವಾಗಿ ಮೇವನ್ನು ಹಾಕಲು ವ್ಯವಸ್ಥೆ, ಕಾಡು ಪ್ರಾಣಿಗಳ ದಾಳಿಯಿಂದ ರಕ್ಷಣೆ ಮತ್ತು ಆರೋಗ್ಯಕರ ವಾತಾವರಣ ಇರುವುದರಿಂದ ಹಸುಗಳು ನೀಡುವ ಹಾಲಿನ ಇಳುವರಿ ಕೂಡ ಹೆಚ್ಚಾಗುತ್ತದೆ.
ಹಾಗಾಗಿ ಶೆಡ್ ನಿರ್ಮಿಸುವ ರೈತರಿಗೆ ನರೇಗಾ ಯೋಜನೆಯಡಿ ಕನಿಷ್ಠ ರೂ. 2 ಲಕ್ಷದವರೆಗೆ ಸರ್ಕಾರದಿಂದ ಅನುದಾನ ಸಿಗುತ್ತದೆ. ಇದನ್ನು ಪಡೆದುಕೊಳ್ಳಲು ಬಯಸುವ ರೈತರು ಹತ್ತಿರದಲ್ಲಿರುವ ಯಾವುದೇ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಹೋಗಿ ಅರ್ಜಿ ಸಲ್ಲಿಸಬೇಕು ಮತ್ತು ಅದಕ್ಕೆ ಕೇಳುವ ಪೂರಕ ದಾಖಲೆಗಳಾದ.
ಈ ಸುದ್ದಿ ಓದಿ:- ಒಂದು ಲೀಟರ್ ಪೆಟ್ರೋಲಿಗೆ ನೀವು ಎಷ್ಟು ಟ್ಯಾಕ್ಸ್ ಕಟ್ಟುತ್ತಿದ್ದಿರಾ ಅಂತಾ ನಿಮಗೆ ಗೊತ್ತಾ.? ಈ ಹಣ ಯಾರ ಕೈ ಸೇರಲಿದೆ ನೋಡಿ
ಆಧಾರ್ ಕಾರ್ಡ್, ಪಾನ್ ಕಾರ್ಡ್, ರೇಷನ್ ಕಾರ್ಡ್, ಇತ್ತೀಚಿನ ಭಾವಚಿತ್ರ ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ ಬ್ಯಾಂಕ್ ಪಾಸ್ ಬುಕ್ ವಿವರ, ಜಮೀನಿಗೆ ಸಂಬಂಧಪಟ್ಟ ದಾಖಲೆಗಳು, ಪಶುಸಂಗೋಪನೆಯಲ್ಲಿ ತೊಡಗಿರುವ ಬಗ್ಗೆ ಸಂಬಂಧಪಟ್ಟ ಪ್ರಾಧಿಕಾರದಿಂದ ನೀಡುವ ದೃಢೀಕರಣ ಪತ್ರ, ಪಶು ವೈದ್ಯರಿಂದ ಪಡೆದ ಪ್ರಮಾಣ ಪತ್ರ, ಇನ್ನಿತರ ದಾಖಲೆಗಳನ್ನು ಕೂಡ ಒದಗಿಸಬೇಕು.
ಬ್ಯಾಂಕ್ ನಿಂದ ನೀಡುವ ಸರ್ಟಿಫಿಕೇಟ್ ತಂದು ಗ್ರಾಮ ಪಂಚಾಯಿತಿಯಲ್ಲಿ ಸಲ್ಲಿಸಿ ನೋಂದಾಯಿಸಿಕೊಳ್ಳಬೇಕು. ಈ ರೀತಿ ಅರ್ಜಿ ಸಲ್ಲಿಸಿ ನೋಂದಾಯಿಸಿಕೊಂಡಿದ್ದೇ ಆದಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿಗಳಿಂದ ಅರ್ಜಿ ಪರಿಶೀಲನೆ ನಡೆದು ಅನುಮೋದನೆ ಆದಾಗ ನೇರವಾಗಿ ಬ್ಯಾಂಕ್ ಖಾತೆಗೆ ಹಣ ಬರುತ್ತದೆ ಇದನ್ನು ಉಪಯೋಗಿಸಿಕೊಂಡು ಶೆಡ್ ನಿರ್ಮಾಣ ಮಾಡಿಕೊಳ್ಳಬಹುದು. ಈ ವಿಚಾರವಾಗಿ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ನಿಮ್ಮ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಮಾಹಿತಿ ಪಡೆಯಿರಿ.