ಒಬ್ಬ ನಾಗರಿಕ ತನ್ನ ಸರ್ಕಾರದಿಂದ ಬಯಸಬೇಕಾದ ಮೂಲಭೂತ ಅವಶ್ಯಕತೆಯಲ್ಲಿ ಶಿಕ್ಷಣ ಹಾಗು ಆರೋಗ್ಯ ಅತ್ಯಂತ ಮಹತ್ವವಾದದ್ದು. ಈ ಎರಡು ಕೂಡ ಉತ್ತಮ ಗುಣಮಟ್ಟದಲ್ಲಿ ಸಿಕ್ಕಿದರೆ ಆದೇಶದ ಭವಿಷ್ಯ ಉಜ್ವಲರಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ ಆದರೆ ಸದ್ಯಕ್ಕೀಗ ನಮ್ಮ ರಾಜ್ಯವು ಸೇರಿದಂತೆ ಬಹುತೇಕ ರಾಜ್ಯಗಳಲ್ಲಿ ಹೇಗಿದೆ ಎಂದರೆ ಖಾಸಗಿ ಶಾಲೆಗಳಿಗೆ ಹೋಗಲಾರದಂತಹ ಮನಸ್ಥಿತಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಒಲ್ಲದ ಮನಸ್ಥಿತಿ.
ಇದಕ್ಕೆಲ್ಲ ಕಾರಣ ಸರ್ಕಾರ ಇವುಗಳ ಉದ್ದಾರದ ಕಡೆ ಮನಸು ಮಾಡದೆ ಇರುವುದು. ಯಾಕೆಂದರೆ ಎಲ್ಲಾ ಖಾಸಗಿ ಶಾಲೆ ಹಾಗೂ ಆಸ್ಪತ್ರೆಗಳ ಒಡೆತನವು ರಾಜಕಾರಣಿಗಳ ಮತ್ತು ದೊಡ್ಡ ಕುಳಗಳ ಸ್ವತ್ತಾಗಿರುವುದರಿಂದ ಅವರ ಆದಾಯಕ್ಕೆ ಅಡ್ಡಿಯಾಗದಿರಲಿ ಎಂದು ನಾಗರಿಕರ ಬದುಕಿಗೆ ಮಾರಕವಾಗಿದ್ದಾರೆ ಎಂದರೆ ಬಹುಶಃ ತಪ್ಪಾಗಲಾರದು.
ಆದರೆ ದೇಶದಲ್ಲಿ ದೆಹಲಿ ಆಡಳಿತವನ್ನು ಈ ವಿಷಯದಲ್ಲಿ ಒಪ್ಪಿಕೊಳ್ಳಲೇಬೇಕು. ಅಲ್ಲಿನ ಉಳಿದ ಪರಿಸ್ಥಿತಿಗಳು ಹೇಗಿದ್ದರೂ ಕೂಡ ಶಿಕ್ಷಣ ಮತ್ತು ಆರೋಗ್ಯವನ್ನು ಉಚಿತವಾಗಿ ನೀಡುವಲ್ಲಿ ಕ್ರೇಜಿವಾಲ್ ಸರ್ಕಾರ ಜನಮೆಚ್ಚುಗೆ ಗಳಿಸಿದೆ. ಈಗ ಅದೇ ಲಿಸ್ಟ್ ಗೆ ಆಂಧ್ರಪ್ರದೇಶ ಕೂಡ ಸೇರುತ್ತಿದೆ. ಆಂಧ್ರಪ್ರದೇಶದ ಮುಖ್ಯಮಂತ್ರಿಗಳಾದ ಜಗನ್ಮೋಹನ ರೆಡ್ಡಿ ಅವರು ಆಂಧ್ರಪ್ರದೇಶದಲ್ಲಿ ಈಗ ಅಕ್ಷರ ಕ್ರಾಂತಿಯನ್ನೇ ಸೃಷ್ಟಿಸಿದ್ದಾರೆ.
ಮೂರು ವರ್ಷಗಳಿಂದ ಆಂಧ್ರದಲ್ಲಿ 1 ರಿಂದ 12ನೇ ತರಗತಿವರೆಗೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳನ್ನು ಓದಿಸುವ ತಾಯಿಯ ಖಾತೆಗೆ ವಾರ್ಷಿಕವಾಗಿ 15,000 ರೂಗಳನ್ನು ನೀಡುವ ಜಗಣ್ಣ ಅಮ್ಮ ವೋಡಿ ಯೋಜನೆ ಆರಂಭಿಸಿದ್ದಾರೆ. ಇದರ ಜೊತೆಗೆ ನಾಡು ನೇಡು ಎನ್ನುವ ಯೋಜನೆಯಡಿಯಲ್ಲಿ ಆಂಧ್ರಪ್ರದೇಶದ ಬಹುತೇಕ ಸರ್ಕಾರಿ ಶಾಲೆಗಳನ್ನು ಆಂಗ್ಲ ಶಾಲೆಯಾಗಿ ಬದಲಿಸುವ ನಿರ್ಧಾರಕ್ಕೆ ಜಗನ್ಮೋಹನ್ ರೆಡ್ಡಿ ನೇತೃತ್ವದ ಸರ್ಕಾರ ಬಂದಿದೆ.
ತೆಲುಗು ಸರ್ಕಾರಿ ಶಾಲೆಗಳನ್ನು ಆಂಗ್ಲ ಶಾಲೆಗಳನ್ನಾಗಿ ಬದಲಾಯಿಸುತ್ತಿರುವ ಬಗ್ಗೆ ಅಲ್ಲಿನ ಜನತೆಯಿಂದ ಕೂಡ ವಿರೋಧವಿದೆ. ಆದರೆ ಸದ್ಯಕ್ಕಿರುವ ಕಾಂಪಿಟೇಶನ್ ಜಗತ್ತಿನಲ್ಲಿ ಇಂಗ್ಲಿಷ್ ಭಾಷೆ ಕಲಿಯದಿದ್ದರೆ ಬದುಕಲ ಸಾಧ್ಯವಿಲ್ಲ ಎನ್ನುವ ಪೂರ್ವಾಗ್ರಹ ಪೀಡಿತ ಮನೋಭಾವದಿಂದ ತಮ್ಮ ಪೋಷಕರು ತಮ್ಮ ಆದಾಯವನ್ನು ಮೀರಿ ಸಾಲ ಸೋಲ ಮಾಡಿಯಾದರೂ ಕೇಳಿದಷ್ಟು ಹಣ ತೆತ್ತು ಆಂಗ್ಲ ಶಾಲೆಗಳಿಗೆ ಮಕ್ಕಳನ್ನು ಸೇರಿಸುತ್ತಿದ್ದಾರೆ.
ಇದನ್ನು ತಪ್ಪಿಸುವ ಸಲುವಾಗಿ ಮಾತೃಭಾಷೆಯಾದ ತೆಲುಗನ್ನು ಪ್ರಥಮ ಭಾಷೆಯಾಗಿ ಕಲಿಸಿ ಉಳಿದ ಐದು ವಿಷಯಗಳನ್ನು ಕೂಡ ಆಂಗ್ಲ ಭಾಷೆಯಲ್ಲಿ ಬೋಧಿಸುವ ಯೋಜನೆ ತಂದಿದೆ. ಖಾಸಗಿ ಶಾಲೆಗಳಂತೆ ನುರಿತ ಶಿಕ್ಷಕರನ್ನು ನೇಮಕ ಮಾಡಿಕೊಂಡು ಜೊತೆಗೆ ಬೈಜೂಸ್ ನಂತಹ ಸಂಸ್ಥೆಗಳ ಜೊತೆ ಟೈ ಅಪ್ ಆಗಿ ಸರ್ಕಾರಿ ಶಾಲೆಗಳಲ್ಲೇ ಮಕ್ಕಳಿಗೆ ಟ್ಯೂಷನ್ ಕೂಡ ಕೊಡಿಸಿ ಯಾವುದೇ ಖಾಸಗಿ ಶಾಲೆಗಿಂತ ಕಡಿಮೆ ಇಲ್ಲದಂತೆ ಶಿಕ್ಷಣ ಕಲಿಸಲು ಆಂಧ್ರ ಸರ್ಕಾರ ಶ್ರಮಿಸುತ್ತಿದೆ.
ಇದರೊಂದಿಗೆ ಜಗಣ್ಣ ವಿದ್ಯಾ ಕಾನುಕಾ ಯೊಜನೆಯಡಿ ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಪುಸ್ತಕಗಳು, ಬ್ಯಾಗ್, ಶೂ, ಲ್ಯಾಪ್ಟಾಪ್, ಕಂಪ್ಯೂಟರ್ ಇನ್ನು ಮುಂತಾದ ಎಲ್ಲಾ ಸೌಲಭ್ಯಗಳನ್ನು ಕೂಡ ಉಚಿತವಾಗಿ ಕೊಡುತ್ತಿದೆ. ಇದೆಲ್ಲದರ ಪರಿಣಾಮವಾಗಿ ಇಂದು ಅಲ್ಲಿರುವ ವಿದ್ಯಾರ್ಥಿಗಳ ಪೋಷಕರು ಖಾಸಗಿ ಶಾಲೆಗೆ ಸೇರಿಸಿದ್ದ ಮಕ್ಕಳನ್ನು ಅಲ್ಲಿಂದ ಬಿಡಿಸಿ ಸರ್ಕಾರಿ ಶಾಲೆಗಳಿಗೆ ಸೇರಿಸುವ ಮನಸ್ಸು ಮಾಡಿದ್ದಾರೆ.
ಈ ಮೂಲಕ ಸರ್ಕಾರಿ ಶಾಲೆಗಳ ಮುಚ್ಚುವ ಪರಿಸ್ಥಿತಿಯನ್ನು ಬದಲಾಯಿಸಿ ಸರ್ಕಾರಿ ಶಾಲೆಗಳನ್ನು ಪುನಶ್ಚೇತನಗೊಳಿಸಿ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುತ್ತಿದ್ದಾರೆ. ನಿಧಾನವಾಗಿಯಾದರೂ ರಾಜ್ಯದಲ್ಲೂ ಕೂಡ ಇಂತಹ ಶಿಕ್ಷಣ ಪರ ಯೋಜನೆಗಳು ಜಾರಿಗೆ ಬರಬೇಕು, ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನು ತಪ್ಪದೇ ಕಮೆಂಟ್ ಮಾಡಿ ತಿಳಿಸಿ.