ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಎಂದಿಗೂ ಅಜರಾಮರವಾಗಿರಿ ಇರುವ ಸಾಕಷ್ಟು ನಾಯಕರ ಹೆಸರಿದೆ. ಇವುಗಳ ಸಾಲಿನಲ್ಲಿ ಕೆಲ ಇನ್ನಿತರ ಚಟುವಟಿಕೆಗಳಿಂದ ರಾಜಕೀಯದಲ್ಲಿ ಗುರುತಿಸಿಕೊಂಡ ಕೆಲ ಮಹನೀಯರ ಹೆಸರು ಸಹ ಇದೆ. ಆ ಪಟ್ಟಿಯಲ್ಲಿ ಕರ್ನಾಟಕದಲ್ಲಿ ಗಣಿ ಧಣಿ ಎಂದು ಕುಖ್ಯಾತಿ ಹೊಂದಿರುವ ಜನಾರ್ಧನ ರೆಡ್ಡಿ ಅಲಿಯಾಸ್ ಗಾಲಿ ಜನಾರ್ಧನ ದೊಡ್ಡಿ ಅವರ ಹೆಸರು ಸಹ ಇದ್ದೇ ಇರುತ್ತದೆ.
ಸದ್ಯಕ್ಕೆ ಎಲ್ಲ ಶಿ.ಕ್ಷೆಗಳನ್ನು ಮುಗಿಸಿ ಮತ್ತೆ ಸಹಜ ಜೀವನದತ್ತ ಮುಖ ಮಾಡಿದ ಜನಾರ್ಧನ ರೆಡ್ಡಿ ಅವರು ಸಹ ಮುಂದಿನ ಎಲೆಕ್ಷನ್ ಸಲುವಾಗಿ ಬಾರಿ ತಯಾರು ಮಾಡಿಕೊಳ್ಳುತ್ತಿರುವ ರೀತಿ ಕಾಣುತ್ತಿದೆ. ಅದಕ್ಕಾಗಿ ಸಮಾರಂಭ ಒಂದರ ವೇದಿಕೆ ಮೇಲೆ ನಿಂತು ಸಾಕಷ್ಟು ರಾಜಕೀಯದ ಬಗ್ಗೆ ಮಾತನ್ನು ಆಡಿದ್ದಾರೆ. ಹಾನಗಲ್ ಪಟ್ಟಣದಲ್ಲಿ ನಡೆದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಮುಂದಿನ ಚುನಾವಣೆಯಲ್ಲಿ ಗೆದ್ದರೆ ತಾವು ತರುವ ಯೋಜನೆ ಕುರಿತು ಜನರೊಂದಿಗೆ ಹಂಚಿಕೊಂಡಿದ್ದಾರೆ.
ಒಂದು ತರದಲ್ಲಿ ಇವರು ಚುನಾವಣಾ ಪ್ರಣಾಳಿಕೆಯನ್ನು ಬಿಟ್ಟಿದ್ದಾರೆ ಎಂದೇ ಹೇಳಬಹುದು. ಉತ್ತರ ಕರ್ನಾಟಕ ಅಭಿವೃದ್ಧಿ ಮಾಡುವುದೇ ನನ್ನ ಜೀವನದ ಗುರಿ ಎಂದು ಹೇಳಿದ ಇವರು ಅದರಂತೆ ತಾವು ಹಾಕಿಕೊಂಡಿರುವ ಇನ್ನಿತರ ಯೋಜನೆಗಳ ಬಗ್ಗೆ ಕೂಡ ಜನರೊಂದಿಗೆ ವಿಷಯ ಹಂಚಿಕೊಂಡಿದ್ದಾರೆ. ಜನರು 2008 ರಲ್ಲಿ ಯಡಿಯೂರಪ್ಪನವರನ್ನು ಸಿಎಂ ಮಾಡಿದ್ದು ನಾನು ಎಂದು ಮಾತನಾಡಿಕೊಂಡರು.
ಜೊತೆಗೆ ಶಿವಮೊಗ್ಗದಲ್ಲಿ ನಾನು ಸ್ಥಾಪನೆ ಮಾಡಿದ ವಿಮಾನ ನಿಲ್ದಾಣ ಉದ್ಘಾಟನೆಗೆ ಮೋದಿ ಬಂದ್ರು ಅದಕ್ಕೂ ಕಾರಣ ನಾನೇ ಎಂದು ಮಾತನಾಡಿಕೊಂಡರು. ಮತ್ತೊಮ್ಮೆ ನಾನು ಅಧಿಕಾರಕ್ಕೆ ಬಂದರೆ ಅದಕ್ಕಿಂತ ಹೆಚ್ಚಿನದನ್ನು ಮಾಡುತ್ತೇನೆ. ಅದರಲ್ಲೂ ರೈತರಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತೇನೆ. ಪ್ರತಿ ವರ್ಷ ಬಡತನ ರೇಖೆಗಿಂತ ಕಡಿಮೆ ಇರುವ ರೈತರಿಗೆ 15,000ಗಳನ್ನು ಸಹಾಯಧನವಾಗಿ ಕೊಡುತ್ತೇನೆ. ಜೊತೆಗೆ ರೈತರಿಗೆ ಗೊಬ್ಬರ, ಬಿತ್ತನೆ ಬೀಜಗಳು ಅವರ ಮನೆ ಬಾಗಿಲಿಗೆ ಹೋಗಬೇಕು ಆ ರೀತಿ ನಾನು ನೋಡಿಕೊಳ್ಳುತ್ತೇನೆ.
ಮೂರು ರಾಜಕೀಯ ಪಕ್ಷಗಳು ಬಂದರೂ ಕೂಡ ಉತ್ತರ ಕರ್ನಾಟಕದ ಕಡೆ ಅಭಿವೃದ್ಧಿಗೆ ಗಮನ ಕೊಡಲು ಸಾಧ್ಯವಾಗಲಿಲ್ಲ ಆದರೆ ಇಲ್ಲಿರುವ ಪೂರ್ತಿ ಭೂಮಿಯನ್ನು ನೀರಾವರಿ ಭೂಮಿಯಾಗಿ ನಾನು ಪರಿವರ್ತನೆ ಮಾಡುತ್ತೇನೆ. ಆ ಮೂಲಕ ಈ ಭಾಗವನ್ನು ಉದ್ದರಿಸಿ ನನ್ನ ಕೊನೆ ಉಸಿರನ್ನು ಬಿಡುತ್ತೇನೆ ಎಂದಿದ್ದಾರೆ. ಇಲ್ಲಿಯವರೆಗೂ ಕೂಡ ನನ್ನ ಮೇಲೆ ನಿಮ್ಮೆಲ್ಲರ ಆಶೀರ್ವಾದ ಇದೆ. ಎಲ್ಲರಿಗೂ ತಿಳಿದಿರುವಂತೆ ನನ್ನನ್ನು ಷಡ್ಯಂತರ ರೂಪಿಸಿ ಈ ಸ್ಥಿತಿಗೆ ತಂದರು, 12 ವರ್ಷಗಳ ಕಾಲ ನಾನು ರಾಜಕೀಯ ಪ್ರವೇಶ ಮಾಡದಂತೆ ತಡೆದರು.
ನನ್ನನ್ನು ಇಂತಹ ಸ್ಥಿತಿಗೆ ದೂಡಿದವರು ಪ್ರತಿನಿತ್ಯ 20 ರಿಂದ 30 ಮಾತ್ರೆಗಳನ್ನು ತೆಗೆದುಕೊಂಡು ನರಳುತ್ತಿದ್ದಾರೆ ಆದರೆ ದೇವರ ಆಶೀರ್ವಾದದಿಂದ ನಾನು ಈ ರೀತಿ ಯಾವುದೇ ಕಷ್ಟ ಇಲ್ಲದೆ ಒಂದು ಮಾತ್ರೆಯನ್ನು ತೆಗೆದುಕೊಳ್ಳ ಬೇಕಾದ ಸ್ಥಿತಿಯಲ್ಲಿ ಇಲ್ಲ. ಈಗಲೂ ಸಹ ನಾನು ಬಹಳ ಕಡಿಮೆ ಸಮಯಕ್ಕೆ ರಾಜಕೀಯಕ್ಕೆ ಬಂದಿದ್ದೇನೆ ನನ್ನನ್ನು ಗೆಲ್ಲಿಸಿದರೆ ಜನಾರ್ಧನ ರೆಡ್ಡಿ ಆಡಳಿತ ಬರುತ್ತದೆ. 31 ಕ್ಷೇತ್ರಗಳಲ್ಲಿ ಕೂಡ ನನ್ನ ಅಭ್ಯರ್ಥಿಗಳು ನಿಲ್ಲುತ್ತಾರೆ ನಾನು ಅಭ್ಯರ್ಥಿಗಳನ್ನು ಘೋಷಿಸಿದರೆ ಅಲ್ಲಿ ಅವರು ಗೆಲ್ಲಬೇಕು ಆ ರೀತಿ ನಾನು ಪಕ್ಷ ಕಟ್ಟುತ್ತೇನೆ ಇದಕ್ಕೆಲ್ಲ ನಿಮ್ಮ ಸಹಾಯ ಆಶೀರ್ವಾದ ಸಹಕಾರ ಇದೆಲ್ಲವೂ ಬೇಕು. ದಯವಿಟ್ಟು ನನ್ನ ಮೇಲೆ ನಂಬಿಕೆ ವಿಶ್ವಾಸ ಇದೆ ಎಂದು ಕೇಳಿದ್ದಾರೆ.