ರಾಜ್ಯ ಸರ್ಕಾರ ನೀಡಿದ ಗ್ಯಾರಂಟಿ ಯೋಜನೆಗಳಲ್ಲಿ (Guaranty Scheme) ಅನ್ನಭಾಗ್ಯ ಯೋಜನೆ ಗೃಹಲಕ್ಷ್ಮಿ ಯೋಜನೆ ಹಾಗೂ ಯುವನಿಧಿ ಯೋಜನೆಯು ಧನ ಸಹಾಯ ಮಾಡುವಂತಹ ಯೋಚನೆಗಳಾಗಿವೆ. ಸರ್ಕಾರ ಕೊಟ್ಟಿದ್ದ ಮಾತಿನಂತೆ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಅನ್ನ ಭಾಗ್ಯ ಯೋಜನೆಯಡಿ (Annabhagya Scheme) 10 Kg ಪಡಿತರ ನೀಡಬೇಕಿತ್ತು.
ಆದರೆ ದಾಸ್ತಾನು ಕೊರತೆ ಆಗಿರುವ ಕಾರಣದಿಂದಾಗಿ 5Kg ಅಕ್ಕಿ ಹಾಗೂ ಉಳಿದ 5Kg ಅಕ್ಕಿ ಬದಲಾಗಿ ಪ್ರತಿ ಸದಸ್ಯನಿಗೆ 170 ಹಣವನ್ನು ಆ ಕುಟುಂಬದ ಮುಖ್ಯಸ್ಥರ ಖಾತೆಗೆ (HOF Account) ವರ್ಗಾವಣೆ ಮಾಡಲಾಗುತ್ತಿದೆ. ಈವರೆಗೆ 7 ಕಂತಿನ ಹಣವನ್ನು ಅರ್ಹ ಫಲಾನುಭವಿಗಳು ಪಡೆದಿದ್ದಾರೆ.
ಅನ್ನ ಭಾಗ್ಯ ಯೋಜನೆ ಹಣ ಪಡೆಯಲಾಗದೆ ಇರುವವರ ಸಮಸ್ಯೆ ಬಗ್ಗೆ ಹರಿಸಲು ಪಡಿತರ ಅಂಗಡಿಗಳಲ್ಲಿ (fareprice shop) ಶಿಬಿರ ಏರ್ಪಡಿಸಲಾಗುತ್ತಿದೆ ಪಾಲ್ಗೊಂಡು ಸಮಸ್ಯೆ ಪರಿಹರಿಸಿಕೊಳ್ಳಬಹುದು. ಗೃಹಲಕ್ಷ್ಮಿ ಯೋಜನೆಯಡಿ (Gruhalakshmi) ಕರ್ನಾಟಕದ ಪ್ರತಿ ಕುಟುಂಬದ ಮುಖ್ಯಸ್ಥೆ ಖಾತೆಗೂ ಕೂಡ ಕುಟುಂಬ ನಿರ್ವಹಣೆಗಾಗಿ ರೂ.2000 ಸಹಾಯಧನವನ್ನು ನೀಡಲಾಗುತ್ತಿದೆ.
ಈ ಸುದ್ದಿ ಓದಿ:- ಸಾರ್ವಜನಿಕರ ಗಮನಕ್ಕೆ, ಮಾರ್ಚ್ 1 ರಿಂದ 5 ಹೊಸ ರೂಲ್ಸ್ ಜಾರಿ.!
ಆಗಸ್ಟ್ ತಿಂಗಳ ಕೊನೆಯ ದಿನದಂದು ಮೊದಲನೆ ಕಂತಿನ ಹಣ ಬಿಡುಗಡೆ ಆಗಿದ್ದು ಇಲ್ಲಿಯವರೆಗೆ ಯಶಸ್ವಿಯಾಗಿ ಆರು ಕಂತುಗಳ ಹಣವನ್ನು ಅರ್ಹ ಫಲಾನುಭವಿಗಳು ಪಡೆದಿದ್ದಾರೆ. ಈ ಯೋಜನೆಗೆ ನೋಂದಾಯಿಸಿಕೊಂಡಿದ್ದ 1.17 ಕೋಟಿ ಮಹಿಳೆಯರ ಪೈಕಿ 90% ಮಹಿಳೆಯರು ಮಾತ್ರ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪ್ರತಿ ತಿಂಗಳು ಪಡೆಯುತ್ತಿದ್ದಾರೆ.
ಈ ಯೋಜನೆಗೆ ಅರ್ಹರಾಗಿತ್ತು ಅರ್ಜಿ ಸಲ್ಲಿಸಿಯು ಇನ್ನು ಹಣ ಪಡೆಯಲು ಸಮಸ್ಯೆ ಆಗುತ್ತಿದೆ ಅಥವಾ ಒಂದೆರಡು ಕಂತು ಬಂದು ನಿಂತು ಹೋಗಿದೆ ಎಂದರೆ ಆಯಾ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗೃಹಲಕ್ಷ್ಮಿ ಕ್ಯಾಂಪ್ ಗಳು (Gruhalakshmi Camp) ನಡೆಯುತ್ತಿದೆ, ಪಾಲ್ಗೊಂಡು ಸಮಸ್ಯೆ ಬಗೆಹರಿಸಿಕೊಳ್ಳಬಹುದು.
ಗ್ಯಾರಂಟಿ ಯೋಜನೆಗಳ ಕೊನೆಯ ಯೋಜನೆಯಾಗಿ ಯುವನಿಧಿ ಯೋಜನೆ (Yuvanidhi Scheme) ಕೂಡ ಜನವರಿ ತಿಂಗಳಿನಿಂದ ರಾಜ್ಯದಲ್ಲಿ ಜಾರಿಯಲ್ಲಿದೆ. ಈಗ ಯುವನಿಧಿ ಯೋಜನೆ ಎರಡನೇ ಕಂತಿನ ಹಣವು ಬಿಡುಗಡೆ ಆಗುತ್ತಿದೆ.
ಈ ಸುದ್ದಿ ಓದಿ:-ಸಾರ್ವಜನಿಕರಿಗೆ ಸಿಹಿ ಸುದ್ದಿ, ವಿದ್ಯುತ್ ದರ ಮತ್ತಷ್ಟು ಇಳಿಕೆ ಎಷ್ಟು ಅಂತ ನೋಡಿ.!
ಪದವಿ ವಿದ್ಯಾಭ್ಯಾಸ ಮಾಡಿ ಕಳೆದ ಆರು ತಿಂಗಳದಿಂದ ಖಾಸಗಿ ಅಥವಾ ಸರ್ಕಾರಿ ವಲಯದ ಯಾವುದೇ ಉದ್ಯೋಗ ಪಡೆಯಲಾಗದ ಅಭ್ಯರ್ಥಿಗಳು ರೂ.3000 ಮತ್ತು ಡಿಪ್ಲೋಮೋ ಪದವೀಧರರು ರೂ.1500 ಪಡೆಯುತ್ತಿದ್ದಾರೆ. ಈ ಹಣ ಕೂಡ DBT ಮೂಲಕ ವರ್ಗಾವಣೆ ಆಗುತ್ತಿದೆ ಆದರೆ ಹಣ ಪಡೆಯಲು ಅನೇಕರಿಗೆ ಸಮಸ್ಯೆಯಾಗುತ್ತಿದೆ ಎನ್ನುವುದು ತಿಳಿದು ಬಂದಿದೆ.
ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆ ಹಣ ಬರದೆ ಇರಲು ರೇಷನ್ ಕಾರ್ಡ್ ಆಕ್ಟಿವ್ ಇಲ್ಲದೆ ಇರುವುದು, ಬ್ಯಾಂಕ್ ಖಾತೆಗಳು ಆಕ್ಟಿವ್ ಆಗಿ ಇಲ್ಲದೆ ಇರುವುದು ಅಥವಾ ಬ್ಯಾಂಕ್ ಖಾತೆಗಳಿಗೆ ಆಧಾರ್ ಸೀಟಿಂಗ್ NPCI ಮ್ಯಾಪಿಂಗ್ ಆಗಿರದಿರುವುದು ನೀಡಿರುವ ದಾಖಲೆಗಳಲ್ಲಿ ಒಂದೊಂದು ದಾಖಲೆಗಳಲ್ಲಿ ಒಂದೊಂದು ರೀತಿಯ ಹೆಸರು ಇದ್ದು ಈ ರೀತಿ ಹೆಸರು ಹೊಂದಾಣಿಕೆ ಆಗದೆ ಇರುವುದೇ ಮುಖ್ಯ ಕಾರಣ ಎಂದು ತಿಳಿದು ಬಂದಿದೆ.
ಕೂಡಲೇ ಈ ಸಮಸ್ಯೆಗಳನ್ನು ಪರಿಹರಿಸಿಕೊಂಡರೆ ಒಟ್ಟಿಗೆ ಪೆಂಡಿಂಗ್ ಉಳಿದಿರುವ ಎಲ್ಲಾ ತಿಂಗಳುಗಳ ಹಣವು ಕೂಡ ವರ್ಗಾವಣೆಯಾಗಲಿದೆ. ಒಂದು ವೇಳೆ ಇನ್ನು ಸಮಸ್ಯೆ ಬಗ್ಗೆ ತಿಳಿಯುತಿಲ್ಲ ಎಂದರೆ ತಾಲ್ಲೂಕಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿಗೆ ಹೋಗಿ CDPO ಅಧಿಕಾರಿಗೆ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಹಾಗೂ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದ ಪ್ರತಿ ಜೊತೆ ಹೋಗಿ ಅರ್ಜಿ ಸಲ್ಲಿಸಿದರೆ ಸಮಸ್ಯೆ ಬಗೆಹರಿಸಿ ಕೊಡಲಿದ್ದಾರೆ.
ಈ ಸುದ್ದಿ ಓದಿ:-ರೈತರ ಖಾತೆಗೆ ಇಂದು 2,000 ಜಮೆ ಆಗಿದೆ.! ನಿಮ್ಮ ಖಾತೆಗೂ ಹಣ ಬಂದಿದೆಯೇ ಎಂದು ಈ ರೀತಿ ಚೆಕ್ ಮಾಡಿ.!
ಅದಕ್ಕೂ ಮುನ್ನ ಒಮ್ಮೆ DBT ಮೂಲಕ ಹಣ ಪಡೆಯಲು ಸಮಸ್ಯೆ ಆಗಿದ್ದರೆ ಈ ಮೂರು ಯೋಜನೆಗಳ ಫಲಾನುಭವಿಗಳು ತಮ್ಮ ಬ್ಯಾಂಕ್ ಶಾಖೆಗಳಿಗೆ ಹೋಗಿ ಆಧಾರ್ ಸೀಡಿಂಗ್ NPCI ಆಗಿದೆ ಎಂದು ಪರಿಶೀಲಿಸಿಕೊಂಡು ಆಗದೆ ಇದ್ದಲ್ಲಿ ಅರ್ಜಿ ಸಲ್ಲಿಸಿ ಸರಿಪಡಿಸಿಕೊಳ್ಳಿ.