ಉಳಿತಾಯ ಎನ್ನುವುದು ಪ್ರತಿಯೊಬ್ಬರಿಗೂ ಮುಖ್ಯ. ಉಳಿತಾಯ ಮಾಡುವುದು ಮಾತ್ರವಲ್ಲದೆ ಉಳಿತಾಯ ಮಾಡಿದ ಹಣಕ್ಕೆ ಲಾಭ ಕೂಡ ಪಡೆಯುವುದು ಜಾಣತನ. ಹೀಗೆ ಮಾಡುವ ಸಣ್ಣ ಪ್ರಮಾಣದ ಉಳಿತಾಯ ಯೋಜನೆಯನ್ನು ಮಾಡಲು ಬಯಸಿದರೆ ಹಣದ ಸುರಕ್ಷಿತ ಬಗ್ಗೆ ಕೂಡ ಹೆಚ್ಚು ಗಮನ ಕೊಡಬೇಕು.
ಈ ರೀತಿ ಚಿಂತೆ ಮಾಡುವವರಿಗೆ ಅಂಚೆ ಕಚೇರಿಯ (Post Office) ಯೋಜನೆಯು ಹೆಚ್ಚು ಅನುಕೂಲತೆ ನೀಡುತ್ತವೆ. ಸದ್ಯದ ಪರಿಸ್ಥಿತಿಯಲ್ಲಿ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಯಾವುದೇ ಅಪಾಯವಿಲ್ಲದೆ ಖಚಿತ ಲಾಭ ನೀಡುವ ಸಂಸ್ಥೆಗೆ ಕೇಂದ್ರ ಸರ್ಕಾರದ ಒಡೆತನಕ್ಕೆ ಸೇರಿದ ಅಂಚೆ ಕಛೇರಿ ಆಗಿದೆ.
ಈ ಸುದ್ದಿ ಓದಿ:- ಕ್ರಯ ಮಾಡಿದ ಮಾರಾಟ ಪತ್ರವನ್ನು ರದ್ದುಗೊಳಿಸುವುದು ಹೇಗೆ ನೋಡಿ.!
ಪ್ರಸ್ತುತವಾಗಿ ಅಂಚೆ ಕಚೇರಿಯಲ್ಲಿ 12ಕ್ಕೂ ಹೆಚ್ಚು ಉಳಿತಾಯ ಯೋಜನೆಗಳಿದ್ದು, ಈ ಯೋಜನೆಗಳು ಒಂದಕ್ಕಿಂತ ಒಂದು ಉತ್ತಮವಾದ ಯೋಜನೆಗಳಾಗಿವೆ. ಇವುಗಳಲ್ಲಿ ತಿಂಗಳಿಗೆ ರೂ.5,000 ಹೂಡಿಕೆ ಮಾಡಿ 5 ಲಕ್ಷ ಗಳಿಸಬಹುದಾದ ಅಂಚೆ ಕಚೇರಿ ಮಾಸಿಕ ಉಳಿತಾಯ ಯೋಜನೆ (Post Office Monthly Income Scheme) ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಿದ್ದೇವೆ.
* ಅಂಚೆ ಕಚೇರಿ ಮಾಸಿಕ ಉಳಿತಾಯ ಯೋಜನೆ ಎಂದರೆ ಒಂದು ಬಾರಿ ಹೂಡಿಕೆ ಮಾಡಿ ಪ್ರತಿ ತಿಂಗಳು ಹೆಸರೇ ಸೂಚಿಸುವಂತೆ ಆದಾಯ ಪಡೆಯುವ ಯೋಚನೆ ಆಗಿದೆ ಈ ಯೋಜನೆಯ ಮೆಚುರಿಟಿ ಅವಧಿ 5 ವರ್ಷಗಳಾಗಿದ್ದು, ನೀವು ಕೂಡ ಸಣ್ಣ ವಯಸ್ಸಿನಿಂದಲೇ ಹೂಡಿಕೆಯನ್ನು ಪ್ರಾರಂಭಿಸಿದರೆ ಈ ಯೋಜನೆ ಅಡಿಯಲ್ಲಿ 5 ವರ್ಷಗಳಲ್ಲಿ ಲಕ್ಷಗಟ್ಟಲೆ ಹಣವನ್ನು ಸಂಪಾದಿಸಿಕೊಳ್ಳಬಹುದು.
ಈ ಸುದ್ದಿ ಓದಿ:-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನೇಮಕಾತಿಗೆ ಅರ್ಜಿ ಆಹ್ವಾನ ವೇತನ 61,500/- ಆಸಕ್ತರು ಅರ್ಜಿ ಸಲ್ಲಿಸಿ.!
* ಈ ಯೋಜನೆಯಲ್ಲಿ ನೀವು ವೈಯಕ್ತಿಕವಾಗಿ ಹಾಗೂ ಜಂಟಿಯಾಗಿ ಖಾತೆಯನ್ನು(Personal And Joint Account) ಕೂಡ ಖಾತೆ ತೆರೆಯಬಹುದು.
* ಯೋಜನೆಗೆ ಗರಿಷ್ಠ ಶೇ. 7.4% ಬಡ್ಡಿ ದರವನ್ನು ನಿಗದಿಪಡಿಸಲಾಗಿದ್ದು, ಪ್ರತಿ ತ್ರೈಮಾಸಿಕಕ್ಕೂ ಇದು ಪರಿಷ್ಕೃತಗೊಳ್ಳುತ್ತಿರುತ್ತದೆ.
* ಅಂಚೆ ಕಚೇರಿ ಮಾಸಿಕ ಉಳಿತಾಯ ಯೋಜನೆಯಲ್ಲಿ ವೈಯಕ್ತಿಕವಾಗಿ 9 ಲಕ್ಷದವರೆಗೂ ಮತ್ತು ಜಂಟಿಯಾಗಿ 15 ಲಕ್ಷದವರೆಗೂ ಹೂಡಿಕೆಯನ್ನು ಮಾಡಬಹುದು.
* ನೀವು 9 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಲು ಇಚ್ಛಿಸಿದರೆ ನೀವು ಪ್ರತಿ ತಿಂಗಳು 5,500 ರೂಪಾಯಿಗಳನ್ನು ಗಳಿಸಬಹುದು. ಅಂದರೆ ವರ್ಷಕ್ಕೆ 66,600 ರೂಪಾಯಿ ಗಳಂತೆ 5 ವರ್ಷಗಳಲ್ಲಿ 3,33,000 ರೂಪಾಯಿಗಳನ್ನು ಗಳಿಸುತ್ತೀರಿ. ನಿಮಗೆ 5 ವರ್ಷಗಳಲ್ಲಿ ಸಿಕ್ಕಿರುವ ಹಣವನ್ನು ನೀವು ಈ ಯೋಜನೆಯಲ್ಲಿ ಗಳಿಸುವ ಲಾಭವನ್ನು ಅಂಚೆ ಕಚೇರಿಯಲ್ಲಿ ಇರುವ RD ಯೋಚನೆಯಲ್ಲಿ ಮರು ಹೂಡಿಕೆ ಮಾಡಬಹುದು.
ಈ ಸುದ್ದಿ ಓದಿ:-14 ಕೋಟಿ ರೈತರಿಗೆ ಬರ ಪರಿಹಾರ ಹಣ ಜಮಾ.! ನಿಮ್ಮ ಹೆಸರಿದೇಯೇ ಈ ರೀತಿ ಚೆಕ್ ಮಾಡಿ.!
RD ಯೋಜನೆಯು ಕೂಡ ಗರಿಷ್ಠ ಬಡ್ಡಿದರವನ್ನು ಹೊಂದಿದ್ದು ನಿಮ್ಮ ಗಳಿಕೆ ಹಣದ ಮೇಲು ಕೂಡ ನಿಮಗೆ ಹೆಚ್ಚುವರಿಯಾಗಿ ಲಾಭ ಸಿಗುತ್ತದೆ. ಅಥವಾ FD / ಇನ್ನಿತರ ಯಾವುದೇ ಹೆಚ್ಚು ಲಾಭ ತರುವ ಯೋಜನೆಗಳಲ್ಲಿ ಮರು ಹೂಡಿಕೆ ಮಾಡಬಹುದು. ಒಂದು ವೇಳೆ ನೀವು ಈ ಮೇಲೆ ತಿಳಿಸಿದ ಆಪ್ಷನ್ ಗಳನ್ನು ಆಯ್ದುಕೊಂಡರೆ ಪ್ರತಿ ತಿಂಗಳು ಪಡೆಯುವ ರೂ.5000 ಬಡ್ಡಿ ದರದ ಮೇಲಿನ ಜಾಣತನದ ಹೂಡಿಕೆ ಸೇರಿ ಒಟ್ಟು ನಿಮ್ಮ 9ಲಕ್ಷ ಹಣಕ್ಕೆ ಐದು ವರ್ಷಕ್ಕೆ 5 ಲಕ್ಷದಷ್ಟು ಲಾಭವನ್ನು ಪಡೆದಿರುತ್ತೀರಿ.
* ಜಂಟಿ ಖಾತೆಯನ್ನು ಪ್ರಾರಂಭಿಸಲು ಬಯಸಿದರೆ. ಗಂಡ-ಹೆಂಡತಿ, ಮಾತ್ರವಲ್ಲದೇ ತಂದೆ-ಮಗಳು, ಸಹೋದರ-ಸಹೋದರಿ, ತಾಯಿ-ಮಕ್ಕಳು ಹೀಗೆ ಯಾರು ಬೇಕಾದರೂ ಜಂಟಿಯಾಗಿ ಖಾತೆಯನ್ನು ಪ್ರಾರಂಭಿಸಬಹುದು ಅಥವಾ ಮೂರು ಜನದ ಹೆಸರಿನಲ್ಲಿಯೂ ತೆರೆಯಬಹುದು.
* ನಾಮಿನಿ ಫೆಸಿಲಿಟಿ ಕೂಡ ಲಭ್ಯವಿದೆ. ಯೋಜನೆ ಕುರಿತ ಹೆಚ್ಚಿನ ಮಾಹಿತಿ ಮಾಹಿತಿಗಾಗಿ ಅಂಚೆ ಕಚೇರಿಗೆ ಭೇಟಿ ನೀಡಿ.