ದೇಶದ ನಾಗರಿಕರಿಗಾಗಿ ಕೇಂದ್ರ ಸರ್ಕಾರವು (for Indian Citizens Central government ) ಅನೇಕ ಯೋಜನೆಗಳನ್ನು ಪರಿಚಯಿಸಿದೆ. ಇದರಲ್ಲಿ ಹೆಣ್ಣು ಮಕ್ಕಳಿಗೆ (girl child) ವಿಶೇಷವಾಗಿ ಜಾರಿಗೆ ತಂದಿರುವ ಯೋಜನೆ ಎಂದರೆ ಸುಕನ್ಯಾ ಸಮೃದ್ಧಿ ಯೋಜನೆ (Sukanya Samruddi Yojane).
2015 ರಲ್ಲಿ ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ (Nagendra Modi) ಯವರು ಭೇಟಿ ಪಡಾವೋ ಭೇಟಿ ಬಚಾವೋ ಎನ್ನುವ ಧ್ಯೇಯದೊಂದಿಗೆ ಸುಕನ್ಯಾ ಸಮೃದ್ಧಿ ಯೋಜನೆ ಯನ್ನು ಲಾಂಚ್ ಮಾಡಿದ್ದರು.
ಈ ಯೋಜನೆ ಸದ್ಯಕ್ಕೆ ಇರುವ ಎಲ್ಲಾ ಯೋಜನೆಗಳಿಗಿಂತ ಹೆಚ್ಚು ಬಡ್ಡಿದರ ಪಡೆಯುತ್ತಿರುವ ಯೋಜನೆಯಾಗಿದ್ದು ಹೆಣ್ಣು ಮಕ್ಕಳ ಪೋಷಕರು ಪ್ರತಿ ಹೆಣ್ಣು ಮಕ್ಕಳ ಹೆಸರಿನಲ್ಲಿ ಈ ಯೋಜನೆಯನ್ನು ತಪ್ಪದೇ ಮಾಡಿಸಲೇಬೇಕಾದ ಯೋಜನೆಯಾಗಿದೆ ಎಂದು ಹೇಳಬಹುದು.
ಯಾಕೆಂದರೆ ಹೆಣ್ಣು ಮಕ್ಕಳ ಭವಿಷ್ಯವನ್ನು ದೂರ ದೃಷ್ಟಿಯಿಂದ ಸಣ್ಣ ಸಣ್ಣ ಉಳಿತಾಯವನ್ನು ಮಾಡಿ ಅವರ ಮದುವೆ ಅಥವಾ ವಿದ್ಯಾಭ್ಯಾಸ ಅಥವಾ ಮುಂದೆ ಹೆಣ್ಣು ಮಕ್ಕಳು ಸ್ವಂತ ಉದ್ದಿಮೆ ಆರಂಭಿಸುವುದಾದರೆ ಯಾರ ಮುಂದೆಯೂ ಕೈ ಚಾಚದೇ ಸ್ವಂತ ಬಂಡವಾಳ ಹೊಂದುವಂತೆ ಮಾಡುವ ಯೋಜನೆಯಾಗಿದೆ.
ಹಾಗಾಗಿ ಈ ಯೋಜನೆ ಬಗ್ಗೆ ಕೆಲ ಪ್ರಮುಖ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ಅದರ ವಿವರ ಹೀಗಿದೆ.
* ಅಂಚೆ ಕಚೇರಿಗಳಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ ಖಾತೆ ತೆರೆಯಬಹುದು ಮತ್ತು ಒಂದು ಅಂಚೆ ಕಚೇರಿಯಿಂದ ಮತ್ತೊಂದು ಅಂಚೆ ಕಚೇರಿಗೆ ವರ್ಗಾಯಿಸಬಹುದು.
* ಮೊದಲ ಎರಡು ಹೆಣ್ಣುಮಕ್ಕಳ ಹೆಸರಿನಲ್ಲಿ ಮಾತ್ರ ಸುಕನ್ಯಾ ಸಮೃದ್ಧಿ ಯೋಜನೆ ಖಾತೆ ತೆರೆಯಬಹುದು. ಒಂದು ವೇಳೆ ಎರಡನೇ ಹೆಣ್ಣು ಮಗುವಿನ ಜನನದ ಸಮಯದಲ್ಲಿ ಅವಳಿ ಹೆಣ್ಣು ಮಕ್ಕಳಾಗಿದ್ದಲ್ಲಿ ಮಾತ್ರ ಮೂರು ಹೆಣ್ಣು ಮಕ್ಕಳ ಹೆಸರಿನಲ್ಲೂ ಸುಕನ್ಯಾ ಸಮೃದ್ಧಿ ಯೋಜನ ಖಾತೆ ತೆರೆಯಬಹುದು ಮತ್ತು ಪ್ರತಿ ಹೆಣ್ಣು ಮಗುವಿಗೂ ಪ್ರತ್ಯೇಕ ಖಾತೆ ತೆರೆಯಬೇಕು.
* 10 ವರ್ಷದೊಳಗೆ ಸುಕನ್ಯ ಸಮೃದ್ಧಿ ಯೋಜನೆ ಖಾತೆ ತೆರೆದಿರಬೇಕು. ಹೆಣ್ಣು ಮಗುವಿಗೆ 21 ವರ್ಷ ತುಂಬುವವರೆಗೆ ಗರಿಷ್ಠ 15 ವರ್ಷಗಳವರೆಗೆ ಹೂಡಿಕೆ ಮಾಡಲು ಅವಕಾಶ ನೀಡಲಾಗಿದೆ. 15 ವರ್ಷಗಳ ನಂತರ ಹೂಡಿಕೆದಾರರು ಪಡೆದ ಮೆಚ್ಯೂರಿಟಿ ಮೊತ್ತವನ್ನು ಆ ಹೆಣ್ಣು ಮಕ್ಕಳ ಶಿಕ್ಷಣದ ಖರ್ಚಿಗೆ ಅಥವಾ ಮದುವೆ ಖರ್ಚಿಗೆ ಬಳಸಬಹುದು.
* ಈ ಯೋಜನೆಯಿಂದ ಪಡೆಯುವ ಲಾಭವು 80C, ನಡಿ ತೆರಿಗೆ ಮುಕ್ತವಾಗಿದೆ.
* ಒಂದು ಆರ್ಥಿಕ ವರ್ಷದಲ್ಲಿ ಕನಿಷ್ಠ 250 ರೂ. ನಿಂದ ಗರಿಷ್ಠ 1.50 ಲಕ್ಷದವರೆಗೆ ಹೂಡಿಕೆ ಮಾಡಬಹುದು. ಇಂತಿಷ್ಟೇ ಹಣ ಕಟ್ಟಬೇಕು ಎನ್ನುವ ನಿಯಮವೂ ಇಲ್ಲ, ನಿಮ್ಮ ಕೈಲಾದಷ್ಟು ಹಣ ಕಟ್ಟಬಹುದು. ಕಂತುಗಳನ್ನು ಪ್ರತಿ ತಿಂಗಳು ಕಟ್ಟಬೇಕಾದ ನಿಯಮ ಇಲ್ಲ ವರ್ಷದಲ್ಲಿ ಒಂದು ಕಂತಾದರು ಕಟ್ಟಿದ್ದರೆ ಸಾಕು ಯೋಜನೆ ಜೀವಂತವಾಗಿರುತ್ತದೆ.
* ಪ್ರಸ್ತುತ 8% ಬಡ್ಡಿದರ ಅನ್ವಯವಾಗುತ್ತದೆ.
* ಹೆಣ್ಣು ಮಗು 18 ವರ್ಷ ವಯಸ್ಸನ್ನು ತಲುಪಿದ ನಂತರ ಅಥವಾ 10 ನೇ ತರಗತಿಯಲ್ಲಿ ಉತ್ತೀರ್ಣರಾದ ನಂತರ ಮಾತ್ರ ಯೋಜನೆಯ ಹಣ ಡ್ರಾ ಮಾಡಲು ಅವಕಾಶ.
* ಈ ಯೋಜನೆಯಿಂದ ಸಿಗಬಹುದಾದ ಗರಿಷ್ಠ ಲಾಭದ ಲೆಕ್ಕಾಚಾರ ಹೀಗಿದೆ. ಸುಕನ್ಯಾ ಸಮೃದ್ದಿ ಯೋಜನೆಯಲ್ಲಿ ಒಬ್ಬರು ಒಂದು ವರ್ಷಕ್ಕೆ ಗರಿಷ್ಠ 1.50 ಲಕ್ಷ ಹೂಡಿಕೆ ಮಾಡಬಹುದು, 15 ವರ್ಷಗಳಲ್ಲಿ ಗರಿಷ್ಠ ಹೂಡಿಕೆ ಮೊತ್ತ 22.50 ಲಕ್ಷ. ವಾರ್ಷಿಕವಾಗಿ 1.50 ಲಕ್ಷ ಹೂಡಿಕೆ ಎಂದರೆ ಮಾಸಿಕ ಹೂಡಿಕೆ ರೂ.12,500.
15 ವರ್ಷಗಳ ಹೂಡಿಕೆಗೆ ನಿಮಗೆ ಚಕ್ರಬಡ್ಡಿ ಸಮೇತ 47.3 ಲಕ್ಷ ಆದಾಯ ಸಿಗುತ್ತದೆ. ಒಟ್ಟಾರೆಯಾಗಿ ಕೊನೆಗೆ 69.80 ಲಕ್ಷ ಹಣ ಕೈ ಸೇರುತ್ತದೆ.