ಕೃಷಿ ಜಮೀನುಗಳಲ್ಲಿ ಮನೆ ಅಥವಾ ಕಟ್ಟಡ ನಿರ್ಮಿಸುವವರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಹೊಸ ರೂಲ್ಸ್ ಜಾರಿ ಸಿಟಿಯ ಅಕ್ಕಪಕ್ಕದ ರೈತರ ಜಮೀನುಗಳಲ್ಲಿ NA ಅಪ್ರೂಡ್ ಗಳಿಲ್ಲದೆ ಕೃಷಿ ಜಮೀನು ಗಳಲ್ಲಿ ರೈತರು ನಿವೇಷಗಳನ್ನಾಗಿ ರೈತರು ಫ್ಲಾಟ್ ಮಾರಾಟ ಮಾಡುತ್ತಾರೆ.
ಹಾಗೂ ಹಳ್ಳಿಗಳಲ್ಲಿ ಯಾವುದೇ ಲೇಔಟ್ ಮತ್ತು ನಿವೇಶಣೆ ಅಪ್ಪಣೆ ಪಡೆಯದೆ ಪಂಚಾಯಿತಿಯಿಂದ ಅಪ್ಪಣೆ ಪಡೆಯದೆ ರೈತರು ತಮ್ಮ ಜಮೀನುಗಳಲ್ಲಿ ಮಾರಾಟ ಮಾಡಿರುತ್ತಾರೆ. ಆದರೆ ಫ್ಲ್ಯಾಟ್ ಪಡೆದವರು ಕೃಷಿ ಜಮೀನುಗಳಲ್ಲಿ ಮನೆ ನಿರ್ಮಿಸಿರುತ್ತಾರೆ ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಹೊಸ ನಿಯಮವನ್ನು ಜಾರಿಗೊಳಿಸಿದ್ದು ಇದಕ್ಕೆ ಸಂಬಂಧಿಸಿದ ಇನ್ನೂ ಹಲವಾರು ಮಾಹಿತಿಗಳನ್ನು ಈ ದಿನ ತಿಳಿಯೋಣ.
ಕೃಷಿ ಜಮೀನುಗಳಲ್ಲಿ ಮನೆ ಕಟ್ಟುವವರಿಗೆ ಸರ್ಕಾರ ಯಾವೆಲ್ಲ ಹೊಸ ರೂಲ್ಸ್ ಗಳನ್ನು ಜಾರಿಗೊಳಿಸಿದೆ ಮತ್ತು ಹಾಗೇನಾದರೂ ಅವರು ಕೃಷಿ ಜಮೀನುಗಳಲ್ಲಿ ಮನೆ ಕಟ್ಟಬೇಕು ಎಂದರೆ ಯಾವುದೆಲ್ಲ ರೂಲ್ಸ್ ಗಳನ್ನು ಅನುಸರಿಸಬೇಕು ಹೀಗೆ ಎಲ್ಲ ವಿಷಯವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳನ್ನು ಈ ದಿನ ತಿಳಿಯೋಣ.
ಕೃಷಿ ಭೂಮಿಯನ್ನು ಮನೆ ನಿರ್ಮಾಣಕ್ಕೆ ಅಥವಾ ಇತರೆ ಕಟ್ಟಡ ನಿರ್ಮಾಣಕ್ಕೆ ಬಳಸಿಕೊಳ್ಳುವುದಾ ದರೆ ಅದರ ಹಿಂದೆ ಹಲವು ನಿಯಮಗಳು ಇದೆ. ಈ ಎಲ್ಲಾ ಪ್ರಕ್ರಿಯೆ ಯನ್ನು ಮುಗಿಸಿದ ಮೇಲೆ ಮಾತ್ರ ನಿಮಗೆ ಜಮೀನುಗಳಲ್ಲಿ ಮನೆಯನ್ನು ಕಟ್ಟುವುದಕ್ಕೆ ಅವಕಾಶಗಳು ಇರುತ್ತದೆ. ಒಂದು ವೇಳೆ ನೀವು ಸರ್ಕಾರದ ಯಾವುದೇ ನಿಯಮಗಳನ್ನು ತಿಳಿದುಕೊಳ್ಳದೆ ನೀವು ಮನೆಯನ್ನು ನಿರ್ಮಾಣ ಮಾಡಿದರೆ ಆ ಕಟ್ಟಡವನ್ನು ಕೆಡವುದಕ್ಕೆ ಸರ್ಕಾರದಿಂದ ಆದೇಶ ಬಂದರೂ ನೀವು ಆಶ್ಚರ್ಯ ಪಡುವಂತಿಲ್ಲ.
ಹೀಗೆ ಮೇಲೆ ಹೇಳಿದ ಮಾಹಿತಿಯು ನೀವು ಯಾವುದೇ ರೀತಿಯ ಅನುಮತಿ ಪಡೆಯದೆ ನೀವು ಮನೆ ನಿರ್ಮಾಣ ಮಾಡಿದರೆ ಯಾವ ಸಮಸ್ಯೆ ಬರಬಹುದು ಎಂದು ತಿಳಿದಿರಿ. ಅದೇ ರೀತಿಯಾಗಿ ಈ ಕೆಳಗೆ ಯಾವ ನಿಯಮಗಳನ್ನು ನಾವು ಅನುಸರಿಸಬೇಕು ಅಂದರೆ ಸರ್ಕಾರ ಯಾವ ರೂಲ್ಸ್ ಕೊಡುತ್ತದೆ ಎನ್ನುವುದರ ಬಗ್ಗೆ ತಿಳಿಯೋಣ.
* ಮೊದಲನೆಯದಾಗಿ ಕೃಷಿ ಭೂಮಿಯ ಮಾಲೀಕನು ಕೂಡ ಕೃಷಿ ಭೂಮಿಯಲ್ಲಿ ಮನೆ ಅಥವಾ ಕಟ್ಟಡ ನಿರ್ಮಾಣ ಮಾಡುವ ಹಾಗಿಲ್ಲ. ವಿಶೇಷವಾದ ಪರವಾನಗಿಯನ್ನು ಪಡೆದುಕೊಳ್ಳಬೇಕು. ಹಾಗೇನಾದರೂ ನೀವು ಯಾವುದೇ ರೀತಿಯ ಪರವಾನಗಿಯನ್ನು ಪಡೆದುಕೊಳ್ಳಲಿಲ್ಲ ಎಂದರೆ ಕಟ್ಟಿದ ಮನೆಯಲ್ಲಿ ವಾಸ ಮಾಡುವುದಕ್ಕೂ ಕೂಡ ಸಾಧ್ಯ ವಾಗುವುದಿಲ್ಲ.
* ಪ್ರತಿ ವರ್ಷ ಫಸಲು ನೀಡುವ ಬೆಳೆಯನ್ನು ನೀವು ಭೂಮಿಯಲ್ಲಿ ನೆಡುತ್ತಿದ್ದರೆ ಅದನ್ನು ಚಾಲ್ತಿಯಲ್ಲಿರುವ ಖುಷಿ ಭೂಮಿ ಎಂದು ಕರೆಯಲಾಗುತ್ತದೆ. ಇಂತಹ ಜಮೀನಿನಲ್ಲಿ ರೈತರು ಪ್ರತಿ ವರ್ಷ ಬೆಳೆ ಬೆಳೆದು ಲಾಭಗಳಿಸ ಬಹುದು. ಹಾಗಾಗಿ ಅನ್ನ ಕೊಡುವಂತಹ ಭೂಮಿಯನ್ನು ಬರಡು ಮಾಡಿ ಅಲ್ಲಿ ಕಟ್ಟಡ ನಿರ್ಮಾಣ ಮಾಡುವುದಕ್ಕೆ ಆ ಜಮೀನಿನ ಮಾಲೀಕನಿಗೂ ಕೂಡ ಅಧಿಕಾರ ಇರುವುದಿಲ್ಲ.
ಹಾಗಾದರೆ ಅನಿವಾರ್ಯ ಸಂದರ್ಭದಲ್ಲಿ ಕೃಷಿ ಭೂಮಿಯಲ್ಲಿ ಮನೆ ನಿರ್ಮಾಣ ಮಾಡುವುದು ಹೇಗೆ ಎಂದು ನೋಡುವುದಾದರೆ. ನೀವು ಪ್ರತ್ಯೇಕವಾದ ಶುಲ್ಕವನ್ನು ಪಾವತಿ ಮಾಡಬೇಕು. ಬಳಿಕ ಗ್ರಾಮ ಪಂಚಾಯಿತಿ ಅಥವಾ ಮುನ್ಸಿಪಾಲಿಟಿ ಯಲ್ಲಿ NOC ಪ್ರಮಾಣ ಪತ್ರ ಪಡೆದುಕೊಳ್ಳಬೇಕು.
ಕೃಷಿ ಭೂಮಿಯನ್ನು ಮನೆ ಕಟ್ಟುವ ಯೋಗ್ಯ ಭೂಮಿಯನ್ನಾಗಿ ಬದಲಾವಣೆ ಮಾಡಿಕೊಳ್ಳುವುದಕ್ಕೆ ತಮ್ಮ ಜಮೀನಿನ ಮಾಲೀಕತ್ವದ ಪತ್ರವನ್ನು ಸಲ್ಲಿಸಬೇಕು. ಜೊತೆಗೆ ಬೆಳೆಯ ರೆಕಾರ್ಡ್ ಹಾಗೂ ಜಮೀನಿನ ಸರ್ವೆ ನಕ್ಷೆಯನ್ನು ನೀಡಬೇಕು. ಜಮೀನಿನಲ್ಲಿ ಅಷ್ಟಾಗಿ ಬೆಳೆಯಲು ಸಾಧ್ಯವಾಗುತ್ತಿಲ್ಲ ಎನ್ನುವುದರ ಬಗ್ಗೆ ಆದಾಯ ಪ್ರಮಾಣ ಪತ್ರವನ್ನು ಕೂಡ ಸಲ್ಲಿಸಬೇಕಾಗುತ್ತದೆ.
ಈ ಎಲ್ಲ ದಾಖಲಾತಿ ಗಳ ಮೂಲಕ ನೀವು ನಿಮ್ಮ ಕೃಷಿ ಭೂಮಿಯನ್ನು ವಾಸ ಯೋಗ್ಯ ಭೂಮಿಯನ್ನಾಗಿ ಮಾರ್ಪಾಡು ಮಾಡಿಕೊಳ್ಳಬಹುದು. ಹೀಗೆ ಈ ಎಲ್ಲ ವಿಧಾನಗಳನ್ನು ಅನುಸರಿಸಿದಾಗ ಮಾತ್ರ ನೀವು ನಿಮ್ಮ ಕೃಷಿ ಭೂಮಿಯಲ್ಲಿ ವಾಸ ಮಾಡುವುದಕ್ಕೆ ಕಾನೂನಿನ ಪರವಾನಗಿ ಸಿಗುತ್ತದೆ.