ಗೋಡೆಗಳಲ್ಲಿ ಚಕ್ಕೆ ಏಳುವಿಕೆ ಸಾಮಾನ್ಯವಾಗಿ ಮಳೆಗಾಲದಲ್ಲಿ ಕಾಣಿಸಿಕೊಳ್ಳುತ್ತದೆ. ಮಳೆಗಾಲದಲ್ಲಿ ಇದು ಆರಂಭವಾದರೂ ಚಳಿಗಾಲ ಮುಗಿಯುವವರೆಗೂ ಕೂಡ ಈ ರೀತಿ ಪದರ ಪದರವಾಗಿ ಮನೆಗೆ ಹಾಕಿರುವ ಪೈಂಟ್ ಉದುರುತ್ತೆ. ಇದರಿಂದ ಮನೆಯ ಸೌಂದರ್ಯ ಹಾಳಾಗುತ್ತದೆ. ಎಷ್ಟೇ ಹೊಸ ಮನೆ ಆದರೂ ಈ ರೀತಿ ಪೈಂಟ್ ಕಿತ್ತು ಬರುತ್ತಿದ್ದರೆ ಗೋಡೆಗಳು ಚಕ್ಕೆ ಏಳುತ್ತಿದ್ದರೆ ಲುಕ್ ಹಾಳಾಗಿ ಬಿಡುತ್ತದೆ.
ಮನೆಯಲ್ಲಿ ಇರುವವರಿಗೂ ಕೂಡ ಇದೊಂದು ಕಿರಿಕಿರಿ, ಗೃಹಣಿಯರಂತೂ ಇದನ್ನು ಪ್ಯಾಚ್ ಮಾಡಲು ಸಾಹಸ ಪಟ್ಟು ಸಾಕಾಗಿರುತ್ತಾರೆ. ಈ ರೀತಿ ಚಕ್ಕೆಗಳು ಬಿದ್ದಾಗಲೆಲ್ಲ ಪೇಂಟ್ ತೆಗೆದುಕೊಂಡು ಹೊಡೆಯುತ್ತಾ ಇರಲು ಸಾಧ್ಯವಾಗುವುದಿಲ್ಲ. ಯಾಕೆಂದರೆ ಇದು ಒಂದೇ ಬಾರಿಗೆ ಮುಗಿಯುವ ಕೆಲಸವಲ್ಲ. ಪದೇ ಪದೇ ಉದುರುತ್ತ ಇರುವುದರಿಂದ ವರ್ಷ ಪೂರ್ತಿ ಅದನ್ನು ಮಾಡಲು ಆಗುವುದಿಲ್ಲ.
ಇದಕ್ಕೆಲ್ಲ ಸೊಲ್ಯೂಷನ್ ಬೇಕು ಎಂದು ಅನೇಕರು ಕಾಯುತ್ತಿರುತ್ತಾರೆ. ಅಂತವರಿಗೆಲ್ಲ ಈ ಒಂದು ಉಪಾಯ ತಿಳಿಸಲು ಇಚ್ಛಿಸುತ್ತಿದ್ದೇವೆ. ಮಾರ್ಕೆಟ್ ಅಲ್ಲಿ ಈ ರೀತಿ ಸಮಸ್ಯೆ ಪರಿಹಾರ ಮಾಡಲು ಒಂದು ಸಲ್ಯೂಷನ್ ಸಿಗುತ್ತದೆ. ಡಾಕ್ಟರ್ ಫಿಕ್ಸಿಟ್ ಶ್ಯೂರ್ ಸೀಲ್ ಎನ್ನುವ ಡಾ. ಫಿಕ್ಸ್ ಇಟ್ ಕಂಪನಿಯ ಒಂದು ಸಲ್ಯೂಷನ್ ಸಿಗುತ್ತದೆ. ಇದೊಂದು ವಾಟರ್ ಪ್ರೂಫ್ ಪ್ರಾಡಕ್ಟ್ ಆಗಿದ್ದು ನೀರಿನ ಜೊತೆ ಬಳಸದೆ ಈ ಲಿಕ್ವಿಡ್ ಐಟಂ ಅನ್ನು ಬಳಸಬಹುದು.
ಒಂದು ಕೆಜಿ ಡಾ. ಫಿಕ್ಸಿಟ್ ಶ್ಯೂರ್ ಸೀಲ್ ಬೆಲೆ 200 ರೂಪಾಯಿ ಇರುತ್ತದೆ. ಇದನ್ನು 10×10 ಗೋಡೆಗೆ ಎರಡು ಕೋಟ್ ಗಳಾಗಿ ಬಳಸಬಹುದು . ಡಾ. ಫಿಕ್ಸಿಟ್ ಶ್ಯೂರ್ ಸೀಲ್ 1 ಕೆಜಿ, 5 ಕೆಜಿ ಮತ್ತು 20 ಕೆಜಿ ಪಾಕೆಟ್ಗಳಾಗಿ ಸಿಗುತ್ತವೆ. ಇವುಗಳನ್ನು ಗೋಡೆಗೆ ಹೊಡೆಯುವುದರಿಂದ ಈ ಸಮಸ್ಯೆಗೆ ಪೆರ್ಮನೆಂಟ್ ಸಲ್ಯೂಷನ್ ಸಿಗುತ್ತದೆ. ನಿಮ್ಮ ಮನೆಯ ಯಾವ ಗೋಡೆ ಈ ರೀತಿ ಚಕ್ಕೆ ಏಳುತ್ತಿದೆ ಆ ಗೋಡೆಗೆ ಬೇಕಾಗುವಷ್ಟು ಡಾ. ಫಿಕ್ಸಿಟ್ ಶ್ಯೂರ್ ಸೀಲ್ ಖರೀದಿಸಿ ತನ್ನಿ.
ಇದನ್ನು ಹಾಕುವ ಮೊದಲು ಆ ಗೋಡೆಯನ್ನು ಸ್ಟೀಲ್ ಚಗರೆಯಿಂದ ಅಥವಾ ಸ್ಟೀಲ್ ಬ್ರಷ್ ಇಂದ ಚೆನ್ನಾಗಿ ಉಜ್ಜಿ ಕ್ಲೀನ್ ಮಾಡಿಕೊಳ್ಳಿ ಮತ್ತು ಸ್ಟೀಲ್ ಬ್ರಷ್ ಬಳಸುವುದರಿಂದ ನಿಮ್ಮ ಗೋಡೆ ನೀಟಾಗಿ ಕ್ಲೀನ್ ಆಗುತ್ತದೆ ಮತ್ತು ಕೆಲಸ ಸುಲಭ ಆಗುತ್ತದೆ. ಇದಾದ ಮೇಲೆ ನಿಮ್ಮ ಗೋಡೆಯಲ್ಲಿ ಎಲ್ಲಾದರೂ ಕ್ರಾಕ್ ಗಳು ಉಂಟಾಗಿದೆಯಾ ಎಂದು ನೋಡಿ. ಈ ರೀತಿ ಬಿರುಕುಗಳು ಉಂಟಾಗಿದ್ದರೆ ಅದರ ಸಂಧಿಗಳನ್ನು ಕೂಡ ಸ್ಟೀಲ್ ಬ್ರಷ್ ಬಳಸಿ ಚೆನ್ನಾಗಿ ಕ್ಲೀನ್ ಮಾಡಿಕೊಳ್ಳಿ.
ನಂತರ ಇಡೀ ಗೋಡೆಯನ್ನು ನೀರಿನಿಂದ ಚೆನ್ನಾಗಿ ತೊಳೆಯಿರಿ. ಗೋಡೆಗಳ ತೇವ ಒಣಗಲು ಬಿಡಿ. ಈ ರೀತಿ ತೇವಾ ಒಣಗಿದ ಮೇಲೆ ಗೋಡೆಯಲ್ಲಿ ಬಿರುಕುಗಳು ಇದ್ದರೆ ಸ್ಪಷ್ಟವಾಗಿ ಕಾಣುತ್ತದೆ. ಆ ಬಿರುಕುಗಳಿಗೆ ಡಾಕ್ಟರ್ ಫಿಕ್ಸ್ ಇಟ್ ಕಂಪನಿಯ ಎಲಾಸ್ಟಿಕ್ ಕ್ರಾಕ್ಸ್ ಪೌಡರ್ ಎನ್ನುವ ಪ್ರಾಡಕ್ಟ್ ಸಿಗುತ್ತದೆ. ಇದನ್ನು ನೀರಿನ ಜೊತೆ ಕಲಸಿ ಅಥವಾ ಇದು ಕ್ರೀಮ್ ರೂಪದಲ್ಲಿ ಸಿಗುತ್ತದೆ ಅದನ್ನು ಹಚ್ಚಿ ಒಣಗಲು ಬಿಡಿ. ಒಂದು ವೇಳೆ ಇದು ಸಿಗದೇ ಇದ್ದರೆ ಬಿರ್ಲಾ ಅವರ ವೈಟ್ ಪುಟ್ಟಿ ಇತ್ಯಾದಿಗಳನ್ನು ಕೂಡ ಬಳಸಬಹುದು.
ಇದಾದಮೇಲೆ 1 Kg ಅನ್ನು ಎರಡು ಭಾಗಗಳಾಗಿ ಮಾಡಿಕೊಂಡು, 1/2 ಕೆಜಿ ಸಲ್ಯೂಷನ್ ಅನ್ನು ಮೊದಲಿಗೆ ಪೇಂಟ್ ಮಾಡಿ. ಅಡ್ಡವಾಗಿ ಮತ್ತು ಉದ್ದವಾಗಿ ಆ ಗೋಡೆಗೆ ಹೊಡೆಯಿರಿ. ಆದರೆ ಇದಕ್ಕೆ ಒಂದು ಕೋಟ್ ಮಾತ್ರ ಹೊಡೆದರೆ ಸಾಕಾಗುವುದಿಲ್. 2 ಕೋಟ್ ಹೊಡೆದರೆ ಬಾಳಿಕೆ ಹೆಚ್ಚು. ಅದನ್ನು ಯಾವಾಗ ಹೊಡೆಯಬೇಕು ಮತ್ತು ಈ ರೀತಿ ಶ್ಯೂರ್ ಸೀಲ್ ಹೊಡೆದ ಮೇಲೆ ಮತ್ತೇನು ಮಾಡಬೇಕು ಎನ್ನುವುದನ್ನು ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.