ನಿಮ್ಮ ಜಮೀನು ಅಥಾವ ಮನೆ ಒತ್ತುವರಿ ಆಗಿದ್ಯಾ.? ಒತ್ತುವರಿ ಆಗಿರುವ ಜಾಗವನ್ನು ಹಿಂಪಡೆಯುವ ವಿಧಾ‌ನ.!

 

WhatsApp Group Join Now
Telegram Group Join Now

ಜಮೀನು ಒತ್ತುವರಿ ಅಥವಾ ಅತಿಕ್ರಮಣ ಎಂದರೆ ಏನು ಎಂದು ನೋಡುವುದಾದರೆ ಒಬ್ಬ ವ್ಯಕ್ತಿಗೆ ಸಂಬಂಧಿಸಿದ ಆಸ್ತಿಯನ್ನು ಮತ್ತೊಬ್ಬ ವ್ಯಕ್ತಿಯು ಅತಿಕ್ರಮಣವಾಗಿ ಪ್ರವೇಶ ಮಾಡಿ ಅದರ ಮೇಲೆ ತನ್ನ ಹಕ್ಕನ್ನು ಸ್ಥಾಪಿಸುವುದು. ಈ ರೀತಿ ಮಾಲೀಕನ ವಿರುದ್ಧವಾಗಿ ಯಾರಾದರೂ ಆತನ ಆಸ್ತಿಯಲ್ಲಿ ಈ ರೀತಿ ಅನಧಿಕೃತವಾಗಿ ಪ್ರವೇಶ ಮಾಡಿ ಅದರ ಭೂಮಿಯನ್ನು ಅಥವಾ ಜಾಗವನ್ನು ತನ್ನ ಸುಪರ್ದಿಗೆ ತೆಗೆದುಕೊಂಡರೆ ಅದಕ್ಕೆ ಒತ್ತುವರಿ ಅಥವಾ ಅತಿಕ್ರಮಣ ಎಂದು ಕರೆಯುತ್ತಾರೆ.

ಭಾರತದ ಕಾನೂನು ಒತ್ತುವರಿಯನ್ನು ನಿಷೇಧಿಸುತ್ತದೆ. ವ್ಯಕ್ತಿಯೊಬ್ಬನಿಗೆ ಈ ರೀತಿ ಸಮಸ್ಯೆ ಉಂಟಾದಾಗ ಆತ ನ್ಯಾಯಾಲಯದಲ್ಲಿ ದಾವೆ ಹೂಡಿ ನ್ಯಾಯ ಪಡೆದುಕೊಳ್ಳಬಹುದು ಅವಕಾಶ ಕಲ್ಪಿಸಲಾಗಿದೆ ಮತ್ತು ಕಾನೂನು ಪ್ರಕಾರವಾಗಿ ಹೋಗಿ ಈ ರೀತಿ ಅತಿಕ್ರಮಣವನ್ನ ಮಾಡಿದ ವ್ಯಕ್ತಿ ಶಿಕ್ಷೆ ಅನುಭವಿಸುವಂತೆ ಮಾಡಬಹುದಾಗಿದೆ. ಈ ರೀತಿ ಒತ್ತುವರಿ ಆಗಿದ್ದ ಜಮೀನನ್ನು ಕಾನೂನು ಮೂಲಕ ಮರಳಿ ಪಡೆದುಕೊಳ್ಳಲು ಇರುವ ವಿಧಾನಗಳು ಯಾವುವು ಎನ್ನುವುದನ್ನು ಈ ಅಂಕಣದಲ್ಲಿ ನಾವು ತಿಳಿಸಿಕೊಡುತ್ತಿದ್ದೇವೆ.

ಪ್ರತಿಯೊಬ್ಬ ಜಮೀನು ಹೊಂದಿರುವ ಮಾಲೀಕನು ಕೂಡ ಈ ವಿಷಯವನ್ನು ತಿಳಿದುಕೊಂಡಿರಲೇಬೇಕು. ಯಾಕೆಂದರೆ ಹಳ್ಳಿಗಳಲ್ಲಿ ಮತ್ತು ಪಟ್ಟಣ ಪ್ರದೇಶದಲ್ಲೂ ಕೂಡ ಈ ರೀತಿ ತಮ್ಮ ಜಮೀನುಗಳ ಅಥವಾ ಜಾಗಗಳ ಬಾಜುದಾರರು ಮತ್ತೊಬ್ಬರ ಜಮೀನನ್ನು ಅತಿಕ್ರಮಣ ಮಾಡುವುದು ಸರ್ವೇಸಾಮಾನ್ಯವಾಗುತ್ತಿದೆ. ಆದರೆ ಇದಕ್ಕೆ ಮಾತಿನಲ್ಲಿ ಪರಿಹಾರ ಹುಡುಕಲು ಸಾಧ್ಯವಿಲ್ಲ, ಕಾನೂನು ಮೂಲಕವೇ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬೇಕು.

ಅದಕ್ಕಾಗಿ ನೀವು ಈ ವಿಧಾನವನ್ನು ಅನುಸರಿಸಬೇಕು. ಜಾಗದ ಮಾಲೀಕನು ಸ್ಥಳೀಯ ನ್ಯಾಯಾಲಯದಲ್ಲಿ ಶಾಶ್ವತ ನಿಬಂಧಕಾಜ್ಞೆ ಕೋರಿ ನ್ಯಾಯಾಲಯದಲ್ಲಿ ದಾವೇ ಹೂಡಿ ಒತ್ತುವರಿ ಆಗಿದ್ದ ತನ್ನ ಜಮೀನನ್ನು ಮರಳಿ ಪಡೆದು ಶಾಶ್ವತ ಪರಿಹಾರ ಕಂಡುಕೊಳ್ಳಬಹುದು. ಈ ಕುರಿತು ಒತ್ತುವರಿಯಾದ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಬೇಕು.

ನ್ಯಾಯಾಲಯದಲ್ಲಿ ವಿವಿಧ ಹಂತಗಳಲ್ಲಿ ವಿಚಾರಣೆ ನಡೆದು ಆದೇಶ ಹೊರಬೀಳುತ್ತದೆ, ಅದನ್ನು ಶಾಶ್ವತ ನಿರ್ಬಂಧಕಾಜ್ಞೆ ಎನ್ನುತ್ತಾರೆ. ಈ ರೀತಿ ಒಮ್ಮೆ ಆದೇಶ ಹೊರ ಬಿದ್ದ ಮೇಲೆ ಮತ್ತೆ ಅವರು ನಿಮ್ಮ ಜಮೀನಿನ ಕಡೆ ಬರುವುದಿಲ್ಲ. ತಾತ್ಕಾಲಿಕ ನಿರ್ಬಂಧಕಾಜ್ಞೆ ಎನ್ನುವ ಅವಕಾಶ ಕೂಡ ಇದೆ. ನ್ಯಾಯಾಲಯದಲ್ಲಿ ತಾತ್ಕಾಲಿಕ ನಿರ್ಬಂಧಕಾಜ್ಞೆ ದಾವೆ ಕೂಡ ಹಾಡುತ್ತಾರೆ. ತತ್ ಕ್ಷಣ ಆಗುವ ಒತ್ತುವರಿಯನ್ನು ತಡೆಯಲು, ಒತ್ತುವರಿ ಮೂಲಕ ಆಗುವ ನಷ್ಟವನ್ನು ತಡೆಯಲು ಈ ವಿಧಾನವನ್ನು ಬಳಸುತ್ತಾರೆ.

ಭಾರತ ನ್ಯಾಯಾಂಗ ವ್ಯವಸ್ಥೆ ಶ್ರೇಷ್ಠವಾಗಿದ್ದು ಸದಾ ಅನ್ಯಾಯಕ್ಕೆ ಒಳಬೇಕಾದವರ ಪರವಾಗಿ ನಿಲ್ಲುತ್ತದೆ. ಆದ್ದರಿಂದ ನ್ಯಾಯದಲ್ಲಿ ನಂಬಿಕೆ ಇಟ್ಟು ಈ ರೀತಿ ವಿಧಾನಗಳನ್ನು ಬಳಸಿ ನಿಮಗಾದ ಅನ್ಯಾಯಕ್ಕೆ ಪರಿಹಾರ ಕಂಡುಕೊಳ್ಳಬಹುದು. ಇದರ ಜೊತೆಗೆ ಅಕ್ರಮವಾಗಿ ಒತ್ತುವರಿ ಆದ ಸಂದರ್ಭದಲ್ಲಿ ಪ್ರಕರಣ ಕೂಡ ದಾಖಲಿಸಬಹುದು. IPS ಸೆಕ್ಷನ್ 447ರ ಅಡಿಯಲ್ಲಿ FIR ದಾಖಲಿಸಿ ನ್ಯಾಯಾಲಯದ ಮೂಲಕ ಅತಿಕ್ರಮಣದಾರರಿಗೆ 550 ದಂ.ಡ ವಿಧಿಸುವ ಮೂಲಕ ಅಥವಾ ಮೂರು ತಿಂಗಳ ಕಾಲ ಜೈಲು ಶಿಕ್ಷೆ ಕೊಡಿಸುವ ಮೂಲಕ ಈ ರೀತಿ ಅಕ್ರಮವಾಗಿ ಒತ್ತುವರಿ ಮಾಡುವವರಿಗೆ ಬುದ್ಧಿ ಕಲಿಸಬಹುದು.

ಅದಕ್ಕೆ ಅನುಗುಣವಾಗಿ ದಂಡವನ್ನು ವಿಧಿಸಲಾಗುತ್ತದೆ. ಈ ರೀತಿಯಾಗಿ ಯಾವುದೇ ತೊಡಕುಗಳು ಉಂಟಾದಾಗ ಕಾನೂನು ಮೂಲಕ ಅದಕ್ಕೆ ಪರಿಹಾರ ಕಂಡುಕೊಳ್ಳಿ. ನಿಮ್ಮ ಜಮೀನಿಗೆ ಸಂಬಂಧಪಟ್ಟ ಯಾವುದೇ ಸಮಸ್ಯೆ ಇದ್ದರೂ ಪರಿಚಯವಿರುವ ಕಾನೂನು ಸಲಹೆಗಾರರ ಬಳಿ ಸಲಹೆ ಪಡೆದುಕೊಂಡು ನಂತರ ಮುಂದುವರೆಯಿರಿ. ಮತ್ತು ಈ ಉಪಯುಕ್ತ ಮಾಹಿತಿ ಹೆಚ್ಚಿನ ಜನರಿಗೆ ತಲುಪುವಂತೆ ಮಾಡಲು ಎಲ್ಲರಿಗೂ ಶೇರ್ ಮಾಡಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now