ವಾಸ್ತು ಶಾಸ್ತ್ರದಲ್ಲಿ ಮನೆಯೊಂದರ ಮುಖ್ಯದ್ವಾರಕ್ಕೆ ಬಹಳ ಪ್ರಾಶಸ್ತ್ಯ ನೀಡಲಾಗಿದೆ. ನಿಮ್ಮ ಮನೆಗೆ ಬರುವ ಅದೃಷ್ಟವೂ ಮುಖ್ಯ ದ್ವಾರದ ಮೂಲಕವೇ ಬರುತ್ತದೆ, ಹಾಗೇ ಎಡವಟ್ಟಾದರೆ ಅವಕಾಶಗಳು ಕೂಡ ಮುಖ್ಯ ದ್ವಾರದಲ್ಲಿಯೇ ಹೊರಹೋಗುತ್ತದೆ ಎಂದು ಹೇಳಲಾಗುತ್ತದೆ.
ಹಾಗಾಗಿ ಮುಖ್ಯದ್ವಾರವು ಹೀಗೆ ಇರಬೇಕು, ಇಂತಹ ದಿಕ್ಕಿಗೆ ಇರಬೇಕು ಎಂದು ಒಂದಷ್ಟು ನಿಯಮಗಳನ್ನು ಮಾಡಲಾಗಿದೆ. ಈ ಅಂಕಣದಲ್ಲಿ ಕೂಡ ಮನೆಯ ಮುಖ್ಯ ದ್ವಾರದ ಕುರಿತು ಕೆಲ ಟಿಪ್ಸ್ ಗಳನ್ನು ನೀಡುತ್ತಿದ್ದೇವೆ.
ಇವುಗಳನ್ನು ಪಾಲಿಸಿದರೆ ನಿಮ್ಮ ಬದುಕು ಸಕಾರಾತ್ಮಕವಾಗಿ ಬದಲಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ. ಒಂದು ವೇಳೆ ಮುಖ್ಯ ದ್ವಾರವು ಸರಿಯಾಗಿ ಇಲ್ಲ ಎಂದರೆ ಬಾಗಿಲ ಮೇಲೆ ಈ ಸಂಖ್ಯೆ ಬರೆದರೆ ಸಾಕು ಅದರ ದೋಷವೆಲ್ಲ ನಿವಾರಣೆ ಮಾಡುವ ಶಕ್ತಿಯು ಈ ಸಂಖ್ಯೆಗಿದೆ. ಇದರ ಬಗ್ಗೆ ಕೂಡ ಲೇಖನದಲ್ಲಿ ತಿಳಿಸುತ್ತಿದ್ದೇನೆ.
● ಮನೆ ನಿರ್ಮಾಣ ಮಾಡುವಾಗ ಅಥವಾ ಮನೆಯನ್ನು ಖರೀದಿಸಿದರು ಕೂಡ ವಾಸ್ತುವಿನ ಬಗ್ಗೆ ಗಮನ ಕೊಡಬೇಕು ಅದರಲ್ಲೂ ಮುಖ್ಯದ್ವಾರದ ಬಗ್ಗೆ ನಿರ್ಲಕ್ಷ ಮಾಡಿದಾಗ ಕುಟುಂಬಕ್ಕೆ ಮಾನಸಿಕ, ಆರ್ಥಿಕ, ಆರೋಗ್ಯ ಮುಂತಾದ ಎಲ್ಲಾ ರೀತಿಯ ಸಮಸ್ಯೆಗಳು ಕೂಡ ಆವರಿಸುತ್ತದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಮನೆಯ ಮುಖ್ಯ ದ್ವಾರ ಸರಿಯಾದ ದಿಕ್ಕಿನಲ್ಲಿ ವಾಸ್ತು ಪ್ರಕಾರ ಇದ್ದಾಗ ಕುಟುಂಬದ ಸದಸ್ಯರ ನಡುವೆ ಸಹಕಾರ ಇರುತ್ತದೆ, ಸಂತೋಷ ಇರುತ್ತದೆ, ಹಣಕಾಸಿನ ಕೊರತೆ ಇರುವುದಿಲ್ಲ.
● ಮನೆಯ ಮುಖ್ಯವಾದ ಎದುರು ಹಳೆಯದಾದ ಅಥವಾ ಒಡೆದು ಹೋದ ವಸ್ತುಗಳನ್ನು ಇಡಬಾರದು.
● ಮನೆಯ ಮುಖ್ಯದ್ವಾರದ ಬಳಿ ತುಳಸಿ ಗಿಡ ಇದ್ದರೆ ಒಳ್ಳೆಯದು ಮತ್ತು ಮುಖ್ಯ ದ್ವಾರದ ಮೇಲೆ ಇನ್ನಿತರ ಗಿಡಗಳ ನೆರಳು ಬಿದ್ದರೆ ಅದೂ ಒಳ್ಳೆಯದು.
● ಎರಡು ದಾರಿ ಕೂಡುವ ಕಡೆ ಗೊಂದಲ ಹೆಚ್ಚು ಎಂದು ಹೇಳಲಾಗುತ್ತದೆ ಹಾಗಾಗಿ ಇಂತಹ ಕಡೆ ಮನೆ ಇರುವುದು ಸೂಕ್ತವಲ್ಲ ಹಾಗೆಯೇ ಎರಡು ದಾರಿ ಕೂಡುವ ದಿಕ್ಕಿಗೂ ಕೂಡ ಮನೆಯ ಮುಖ್ಯದ್ವಾರ ಮುಖ ಮಾಡಿರಬಾರದು.
● ಮನೆಯ ಮುಖ್ಯದ್ವಾರವು ಮನೆಯಲ್ಲಿರುವ ಇತರ ದ್ವಾರಗಳಿಗಿಂತ ದೊಡ್ಡದಾದ ಹಾಗೆ ಎತ್ತರವಾದ ಬಾಗಿಲಾಗಿರಬೇಕು. ಮನೆಯ ಮುಖ್ಯದ್ವಾರವು ಗಟ್ಟಿಮುಟ್ಟಾದ ಒಳ್ಳೆಯ ಕ್ವಾಲಿಟಿಗಿಂತ ಕೂಡಿದ ಉತ್ತಮ ಮರದಿಂದ ಮಾಡಿದ ಬಾಗಿಲಾಗಿರಬೇಕು. ಬಾಗಿಲು ಮತಕ ಪಟ್ಟಿಗೆ ಯಾವುದೇ ಲೋಹವನ್ನು ಬಳಸಬಾರದು, ಜೊತೆಗೆ ಬಾಗಿಲು ಕೂಡ ಬಿರುಕು ಬಿಟ್ಟಿರಬಾರದು. ಮನೆಯ ಒಟ್ಟು ಬಾಗಿಲು ಹಾಗೂ ಕಿಟಕಿಗಳ ಸಂಖ್ಯೆ ಸಮ ಸಂಖ್ಯೆಯಲ್ಲಿ ಇರಬೇಕು ಎಂದು ವಾಸ್ತು ಶಾಸ್ತ್ರದಲ್ಲಿ ತಿಳಿಸಲಾಗಿದೆ.
● ಕೆಲವರು ಮನೆ ಮುಖ್ಯ ದ್ವಾರದ ಬಳಿ ಮೆಟ್ಟಿಲುಗಳನ್ನು ಕೂಡ ಮಾಡಿಸುತ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ ಈ ರೀತಿ ಮನೆಯ ಒಳಗೆ ಹೋಗಲು ಇರುವ ಮೆಟ್ಟಿಲುಗಳು ಬೆಸ ಸಂಖ್ಯೆಯಲ್ಲಿ ಇರಬೇಕು.
● ಮುಖ್ಯ ದ್ವಾರದ ಬಾಗಿಲು ಬಹಳ ಹಳೆಯದಾತ ಅಥವಾ ಇನ್ನೇನು ಬಿದ್ದೆ ಹೋಗುತ್ತದೆ ಎನ್ನುವ ರೀತಿ ಇರುವ ಮನೆಗಳ ಕಡೆಗೆ ಮುಖ ಮಾಡಿರಬಾರದು.
● ನೆರೆಹೊರಿಯರ ಮುಖ್ಯ ದ್ವಾರದ ಎದುರಿಗೆ ನಿಮ್ಮ ಮನೆಯ ಮುಖ್ಯದ್ವಾರ ಇರಬಾರದು.
● ಮನೆಯ ಮುಖ್ಯದ್ವಾರದ ಎದುರು ಕನ್ನಡಿ ಹಾಕಬಾರದು
● ಪ್ರಖರವಾದ ಗಾಢವಾದ ಬಣ್ಣದ ಲೈಟ್ ಗಳನ್ನು ಮುಖ್ಯದ್ವಾರದ ಮುಂದೆ ಹಾಕಬೇಡಿ, ಸಾಧ್ಯವಾದರೆ ಬೆಳಿಗ್ಗೆ ಹಾಗೂ ಸಂಜೆ ಮುಖ್ಯದ್ವಾರದ ಎದುರು ದೀಪವನ್ನು ಹಚ್ಚಿ.
● ಮನೆಯ ಮುಖ್ಯದ್ವಾರದ ಮೇಲೆ ಅಷ್ಟ ಗಂಧದಲ್ಲಿ ಸ್ವಸ್ತಿಕ್ ಚಿಹ್ನೆ ಬರೆಯುವುದರಿಂದ ಜೊತೆಗೆ ಮುಖ್ಯ ದ್ವಾರದ ಮೇಲೆ ಆ ಕುಟುಂಬದ ಹಿರಿಯರ ಭಾಗ್ಯ ಸಂಖ್ಯೆಯನ್ನು ಬರೆಯುವುದರಿಂದ ಕುಟುಂಬದ ಎಲ್ಲರಿಗೂ ಒಳ್ಳೆಯದು ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ಆ ಸಂಖ್ಯೆಯನ್ನು ನಮಸ್ಕರಿಸಬೇಕು ಹಾಗೂ ಮನೆಯಿಂದ ಹೊರ ಹೋಗುವಾಗ ಒಳ ಹೋಗುವಾಗ ಅದನ್ನು ಮುಟ್ಟುವುದರಿಂದ ಅದೃಷ್ಟ ಬರುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ.
ಹುಟ್ಟಿದ ದಿನಾಂಕ ತಿಂಗಳು ಹಾಗೂ ವರ್ಷವನ್ನು ಕೂಡಿದರೆ ಅದು ಭಾಗ್ಯ ಸಂಖ್ಯೆಯಾಗುತ್ತದೆ. ಉದಾಹರಣೆಗೆ 02+02+1992=7 ಇಲ್ಲಿ 7 ಭಾಗ್ಯಸಂಖ್ಯೆಯಾಗಿದೆ.