ಮೊನ್ನೆಯಷ್ಟೇ ಮದುವೆಯಾದ ಕಮಲಿ ಸೀರಿಯಲ್ ಅನಿಕಾ & ಶಂಭು ಜಾಲಿಮೂಡ್ ನಲ್ಲಿ ಹೇಗೆ ಕಾಲಕಳೆಯುತ್ತಿದ್ದಾರೆ ಈ ವಿಡಿಯೋ ನೋಡಿ

ಪ್ರೀತಿಸಿ ಮದುವೆಯಾದ ಹಲವಾರು ಕಲಾವಿದರ ಪೈಕಿ ಇದೀಗ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಾ ಇರುವಂತಹ ಕಮಲಿ ಧಾರಾವಾಹಿಯ ಶಂಬು ಮತ್ತು ಅನಿಕ ಇಬ್ಬರು ಸಹ ನಟರು ಸಹ ಈ ಒಂದು ಲಿಸ್ಟ್ ನಲ್ಲಿ ಸೇರ್ಪಡೆಯಾಗಿದ್ದಾರೆ ಹೌದು ಕಮಲಿ ಧಾರಾವಾಹಿಯ ಈ ಜೋಡಿ ಕೂಡ ರಿಯಲ್‌ ಲೈಫ್‌ನಲ್ಲಿ ಜೋಡಿಯಾಗಿದ್ದಾರೆ. ಜೀ ಕನ್ನಡ ವೀಕ್ಷಕರಿಗೆ ಧಾರಾವಾಹಿ ಗೊತ್ತೇ ಇರುತ್ತದೆ. ಈ ಧಾರಾವಾಹಿಗೆ ಸಾಕಷ್ಟು ಅಭಿಮಾನಿಗಳು ಇದ್ದಾರೆ ಹಳ್ಳಿಯಿಂದ ಓದಲು ನಗರಕ್ಕೆ ಬರುವ ಕಮಲಿ ಎಂಬ ಮುಗ್ಧ ಹೆಣ್ಣುಮಗಳು ಸಿಟಿಯಲ್ಲಿ ಏನೆಲ್ಲಾ ಸಮಸ್ಯೆ ಎದುರಿಸುತ್ತಾಳೆ ಎಂದು ಧಾರಾವಾಹಿಯಲ್ಲಿ ತೋರಿಸಲಾಗಿದೆ. ಇನ್ನು ಪ್ರತಿ ಧಾರಾವಾಹಿಯಲ್ಲಿ ಇರುವಂತೆ ಈ ಧಾರಾವಾಹಿಯಲ್ಲಿಯೂ ಕಮಲಿಗೆ ಅನಿಕಾ ಎಂಬ ಶತ್ರು ಇದ್ದಾಳೆ.

ಕಮಲಿಯ ಪ್ರತಿ ಕೆಲಸಕ್ಕೆ ಕಲ್ಲು ಹಾಕುವ ಅನಿಕಾ ಪಾತ್ರಕ್ಕೆ ಜನರು ಶಪಿಸಿರುವುದು ಉಂಟು. ಹಾಗೇ ಕಮಲಿಗೆ ಶಂಭು ಎಂಬ ಒಳ್ಳೆ ಸ್ನೇಹಿತ ಕೂಡ ಇದ್ದಾರೆ. ಕಮಲಿ ಸ್ನೇಹಿತ ಶಂಭು, ಅನಿಕಾಗೆ ಕೂಡ ಶತ್ರುವೇ ಆದರೆ ಇದೀಗ ಈ ಜೋಡಿ ರಿಯಲ್ ಲೈಫ್‌ನಲ್ಲಿ ಪ್ರೀತಿಯಲ್ಲಿದ್ದಾರೆ. ರಿಯಲ್‌ ಲೈಫ್‌ನಲ್ಲಿ ಅನಿಕಾ ಅವರ ಹೆಸರು ಗೇಬ್ರಿಯಾಲಾ ರಚನಾ ಸ್ಮಿತ್ ಹಾಗೂ ಶಂಭು ಅವರ ಹೆಸರು ಸುಹಾಸ್ ಆತ್ರೇಯ ಈ ಜೋಡಿ ಪ್ರೀತಿಯಲ್ಲಿ ಬಿದ್ದಿದ್ದು ಈಗಷ್ಟೇ ಮನೆಯವರ ಒಪ್ಪಿಗೆ ಪಡೆದು ಹಿರಿಯರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡು ನಿಶ್ಚಿತಾರ್ಥದ ಸಾಕಷ್ಟು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು ಜೊತೆಗೆ ಫೋಟೋಶೂಟ್, ವಿಡಿಯೋ ಶೂಟ್ ಕೂಡ ಇದೆ. ಆದರೆ ಇವರಿಬ್ಬರಿಗೂ ಲವ್ ಆಗಿರುವುದು ಈಗಲ್ಲ ಕಳೆದ 2019 ರಲ್ಲಿ ಇಬ್ಬರೂ ಒಟ್ಟಿಗೆ ತೆಗೆಸಿದ ಫೋಟೋಗಳನ್ನು ಸುಹಾಸ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.

ಈ ಜೋಡಿಯ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಅನೇಕ ಮಂದಿ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಗುರು ಹಿರಿಯರ ಸಮ್ಮುಖದಲ್ಲಿ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದು ಇವರಿಗೆ ಹಲವಾರು ಅಭಿಮಾನಿಗಳು ಶುಭ ಹಾರೈಕೆಯನ್ನು ಸಹ ತಿಳಿಸುತ್ತಾ ಇದ್ದಾರೆ. ಕಮಲಿ ಧಾರಾವಾಹಿಯ ಈ ಜೋಡಿ ಇದೀಗ ಹನಿಮೂನ್ ಗೆ ಥೈಲ್ಯಾಂಡ್ ಗೆ ತೆರಳಿದ್ದು ಅಲ್ಲಿ ತೆಗೆದಿರುವಂತಹ ಫೋಟೋ ಮತ್ತು ವಿಡಿಯೋ ಗಳನ್ನು ತಮ್ಮ instagram ಖಾತೆಯಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈ ಫೋಟೋಗಳನ್ನು ನೋಡಿದಂತಹ ಹಲವಾರು ಅಭಿಮಾನಿಗಳು ಇವರಿಗೆ ಶುಭ ಹಾರೈಕೆಯನ್ನು ಸಹ ತಿಳಿಸಿದ್ದಾರೆ.

ಧಾರವಾಹಿಯಲ್ಲಿ ಇಬ್ಬರೂ ಸಹ ಶತ್ರುಗಳಾಗಿದ್ದರೂ ನಿಜ ಜೀವನದಲ್ಲಿ ಇವರದು ಒಂದು ಒಳ್ಳೆಯ ಜೋಡಿ ಸುಮಾರು ಮೂರು ವರ್ಷಗಳ ಕಾಲ ಪ್ರೀತಿಯಲ್ಲಿ ಇದ್ದು ಇದೀಗ ವೈವಾಹಿಕ ಜೀವನಕ್ಕೆ ಕಾಲಿರಿಸಿರುವಂತಹ ಅನಿಕ ಮತ್ತು ಶಂಭು ಪ್ರವಾಸವನ್ನು ಕೈಗೊಂಡಿದ್ದಾರೆ ಇವರು ನಾಲ್ಕು ದಿನಗಳ ಕಾಲ ಹೊರ ದೇಶಕ್ಕೆ ಹಾರಿದ್ದು ಅಲ್ಲಿ ತಮ್ಮ ಹನಿಮೂನನ್ನು ಚೆನ್ನಾಗಿ ಎಂಜಾಯ್ ಮಾಡುತ್ತಿದ್ದಾರೆ ಹಾಗೆ ಹುಲಿಯ ಜೊತೆಗಿನ ಫೋಟೋ ಹಾಗೆಯೇ ಪಕ್ಷಿಯನ್ನು ಕೈ ಮೇಲೆ ಕೂರಿಸಿಕೊಂಡು ತೆಗೆದುಕೊಂಡಿರುವಂತಹ ಫೋಟೋವನ್ನು ನಾವು ನೋಡಬಹುದು. ಕೆಲ ದಿನಗಳ ಕಾಲ ತಮ್ಮ ಕೆಲಸದಿಂದ ಬ್ರೇಕ್ ತೆಗೆದುಕೊಂಡು ತಮ್ಮ ವೈವಾಹಿಕ ಜೀವನದ ಸುಂದರ ಕ್ಷಣಗಳನ್ನು ಈ ಜೋಡಿಯು ಥೈಲ್ಯಾಂಡ್ ನಲ್ಲಿ ಕಳೆಯುತ್ತಾ ಇದ್ದಾರೆ. ಈ ಮಾಹಿತಿ ಇಷ್ಟ ಆದ್ರೆ ತಪ್ಪದೇ ನಮಗೆ ಕಮೆಂಟ್ಸ್ ಮೂಲಕ ತಿಳಿಸಿ.

Leave a Comment

%d bloggers like this: