ಕರ್ನಾಟಕ ಗೃಹ ಮಂಡಳಿಯು ರಾಜ್ಯದ ಹಲವು ಜಿಲ್ಲೆಗಳ ಬಡಾವಣೆ ಅಭಿವೃದ್ಧಿಗಾಗಿ ನಿವೇಶನ ಹಂಚಿಕೆ ಮಾಡಿದೆ. ಈಗಾಗಲೇ ಮೊದಲನೇ ಸುತ್ತಿನಲ್ಲಿ ಹಂಚಿಕೆ ಮಾಡಿ ಬಾಕಿ ಉಳಿದಿರುವ ನಿವೇಶನಗಳನ್ನು ಹಂಚಿಕೆ ಮಾಡಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಮತ್ತು ಸರ್ಕಾರ ಸೂಚಿಸುತ್ತಿರುವ ಜಿಲ್ಲೆಗಳ ಆಸಕ್ತ ಫಲಾನುಭವಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಆನ್ಲೈನ್ ಮೂಲಕ ಬುಕಿಂಗ್ ಸಹ ಮಾಡಬಹುದು.
ಕರ್ನಾಟಕ ಗೃಹ ಮಂಡಳಿಯು ಅಭಿವೃದ್ಧಿಪಡಿಸಿರುವ ನಿವೇಶನ ಹಂಚಿಕೆ ಕುರಿತು ವಿವರವಾದ ಮಾಹಿತಿಯನ್ನು ಮತ್ತು ಇದಕ್ಕೆ ಅರ್ಜಿ ಸಲ್ಲಿಸಲು ಯಾರು ಅರ್ಹರು ಹಾಗೂ ಯಾವ ವಿಧಾನದ ಮೂಲಕ ಅರ್ಜಿ ಸಲ್ಲಿಸಬೇಕು ಕೊನೆಯ ದಿನಾಂಕ ಯಾವಾಗ ಎನ್ನುವುದರ ಬಗ್ಗೆ ವಿವರ ಹೀಗಿದೆ ನೋಡಿ.
ಈ ಯೋಜನೆಯಡಿ ಸೈಟ್ ಲಭ್ಯವಿರುವ ಸ್ಥಳಗಳು:-
1. ಬಾಗಲಕೋಟೆ ಜಿಲ್ಲೆ – ಚಿಕ್ಕಬಾದವಾಡಗಿ , ಹುನಗುಂದ ತಾಲ್ಲೂಕು
2. ವಿಜಯನಗರ ಜಿಲ್ಲೆ – ಅನಂತನಹಳ್ಳಿ-ಮೆಳ್ಳೆಕಟ್ಟೆ, ಹರಪ್ಪನಹಳ್ಳಿ ತಾಲ್ಲೂಕು
3. ವಿಜಯಪುರ ಜಿಲ್ಲೆ – ಬಬಲೇಶ್ವರ, ಮುದ್ದೇಬಿಹಾಳ 2ನೇ ಹಂತ
4. ಬಳ್ಳಾರಿ ಜಿಲ್ಲೆ – ಮುಂಡರಗಿ, ಹಲಕುಂದಿ.
ನೋಂದಣಿ ಶುಲ್ಕ ಹಾಗೂ ಆರಂಭಿಕ ಠೇವಣಿ ವಿವರ:-
1. ಬಾಗಲಕೋಟೆ ಜಿಲ್ಲೆ:-
* ಹುನಗುಂದ ತಾಲೂಕು, ಚಿಕ್ಕದಾದಾವಾಡಗಿ ತಾಲೂಕು ಈ ಸ್ಥಳಗಳ ಮಂಡಳಿಯ ದರ ಪ್ರತಿ ಚದರ ಅಡಿಗೆ ರೂ. 500. ಇರುತ್ತದೆ.
* ಸೈಟ್ ನಂ. LIG 44, MIG 78, HIG-1 19, HIG-26
2. ವಿಜಯನಗರ ಜಿಲ್ಲೆ:-
* ಹರಪನಹಳ್ಳಿ ತಾಲೂಕು, ಅನಂತನಹಳ್ಳಿ, ಮೆಳ್ಳೆಕಟ್ಟೆ ಮಂಡಳಿಯ ದರ ಪ್ರತಿ ಚದರ ಅಡಿಗೆ ರೂ. 650. ಇರುತ್ತದೆ.
* ಸೈಟ್ LIG 12, MIG 7, HIG-16, HIG-213
3. ವಿಜಯಪುರ ಜಿಲ್ಲೆ
* ಬಬಲೇಶ್ವರ, ಮಂಡಳಿಯ ದರ ಪ್ರತಿ ಚದರ ಅಡಿಗೆ ರೂ. 430.ಇರುತ್ತದೆ.
* ಸೈಟ್ LIG 54, MIG 65, HIG-1 45. ಆಗಿದೆ.
* ಮುದ್ದೇಬಿಹಾಳ 2ನೇ ಹಂತ ಸೈಟ್ EWS 17. LIG 57, MIG 108, HIG-1 51, HIG 16.
4. ಬಳ್ಳಾರಿ ಜಿಲ್ಲೆ:-
* ಮುಂಡರಗಿ ಮತ್ತು ಹಲಕುಂದಿ ಮಂಡಳಿಯ ದರ ಪ್ರತಿ ಚದರ ಅಡಿಗೆ 550 ರೂ.ಗಳು. ಆಗಿರುತ್ತದೆ.
* ಸೈಟ್ ನಂ. MIG 149.
ಅರ್ಜಿ ಸಲ್ಲಿಸಲು ಕೇಳಲಾಗಿರುವ ಅರ್ಹತೆಗಳು:-
* ಅರ್ಜಿ ಸಲ್ಲಿಸುವ ಅರ್ಜಿದಾರರು ಸುಮಾರು 10 ವರ್ಷಗಳಾದರು ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು.
* ಅರ್ಜಿದಾರರ ಪತಿ ಅಥವಾ ಪತ್ನಿ ಮತ್ತು ಅಪ್ರಾಪ್ತ ವಯಸ್ಸಿನ ಮಕ್ಕಳ ಹೆಸರಿನಲ್ಲಿ ಕರ್ನಾಟಕ ಗೃಹ ಮಂಡಳಿ ಅಥವಾ ಇನ್ನಿತರೆ ಯಾವುದೇ ಸ್ಥಳೀಯ ಸಂಸ್ಥೆ ಅಥವಾ ಪ್ರಾಧಿಕಾರದಿಂದಾಗಲಿ ಫ್ಲಾಟ್ ನ್ನು ಅಥವಾ ಮನೆ ನಿವೇಶನ ಪಡೆದಿರುವುದಿಲ್ಲ ಎಂದು ನೋಟರಿ ಮೂಲಕ ಪ್ರಮಾಣಿಕರಿಸಿದ ಪ್ರಮಾಣಪತ್ರ ನೀಡಬೇಕು.
* ಅರ್ಜಿ ಸಲ್ಲಿಸುವುದಕ್ಕೆ ಕರ್ನಾಟಕ ಗೃಹ ಮಂಡಳಿ ಸೂಚಿಸಿರುವ ಎಲ್ಲಾ ದಾಖಲೆಗಳನ್ನು ಕೂಡ ಅರ್ಜಿ ಸಲ್ಲಿಸುವ ಸಮಯದಲ್ಲಿ ಜೊತೆಗೆ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:- 27 ಡಿಸೆಂಬರ್, 2023.
ಹೆಚ್ಚಿನ ಮಾಹಿತಿಗಾಗಿ:-
* khb-its@karnataka.gov.in ಇ-ಮೇಲ್ ವಿಳಾಸ ಸಂಪರ್ಕಿಸಬಹುದು.
* 08022273511/12/13/14/15/16
EXTN 347 , 7975722878.