ಗ್ಯಾರೆಂಟಿ ಯೋಜನೆಗಳಾದ ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆಯ (Annabhagya and Gruhalakshmi Schemes) ಧನಸಹಾಯ ಪಡೆಯುವುದರಿಂದ ಹಿಡಿದು ಸರ್ಕಾರ ರೂಪಿಸುವ ಅನೇಕ ಯೋಜನೆಗಳ ಪ್ರಯೋಜನ ಪಡೆಯಬೇಕು ಎಂದರು ರೇಷನ್ ಕಾರ್ಡ್ (Rationcard mandatory) ಇರಲೇಬೇಕು.
ರೇಷನ್ ಕಾರ್ಡ್ ಈಗ ಒಂದು ಕಡ್ಡಾಯ ದಾಖಲೆಯಾಗಿದೆ ಅದರಲ್ಲೂ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು ತಮಗೆ ಸಿಗುವ ವಿಶೇಷ ರಿಯಾಯಿತಿಗಳು ಹಾಗೂ ಅನುಕೂಲತೆಗಳನ್ನು ಪಡೆಯಲು ರೇಷನ್ ಕಾರ್ಡ್ ನಲ್ಲಿ ಹೆಸರನ್ನು ಹೊಂದಿರುವುದು ಅತ್ಯಗತ್ಯ. ಆದರೆ ಇನ್ನೂ ಅನೇಕರು ಕಾರಣಾಂತರಗಳಿಂದ ರೇಷನ್ ಕಾರ್ಡ್ ನಲ್ಲಿ ಹೆಸರನ್ನು ಸೇರ್ಪಡೆ ಮಾಡಿಲ್ಲ.
ಕೆಲವರ ಹೆಸರಿನಲ್ಲಿ ವ್ಯತ್ಯಾಸ ಆಗಿದೆ ಮತ್ತು ಕೆಲವರು ರೇಷನ್ ಕಾರ್ಡ್ ಮಾಡಿಸಿಕೊಂಡೆ ಇಲ್ಲ ಇಂತವರು ಈಗ ಇದರ ಅಗತ್ಯತೆ ಮತ್ತು ಮಾನ್ಯತೆ ಅರಿತು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಮತ್ತು ರೇಷನ್ ಕಾರ್ಡ್ ನಲ್ಲಿರುವ ಸಮಸ್ಯೆಗಳನ್ನು ತಿದ್ದುಪಡಿ ಮಾಡಿಸಿಕೊಳ್ಳಲು ಕಾಯುತ್ತಿದ್ದಾರೆ.
ಸರ್ಕಾರವು ಕಳೆದ ಆರು ತಿಂಗಳಿಂದ ಅನೇಕ ಬಾರಿ ಈ ತಿದ್ದುಪಡಿಗೆ ಅವಕಾಶ ಮಾಡಿಕೊಟ್ಟಿದೆ ಆದರೆ ಇನ್ನೂ ಕೂಡ ಅನೇಕರು ಮತ್ತೆ ಮತ್ತೆ ಅನುಮತಿ ಕೋರಿ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಲೇ ಇದ್ದಾರೆ ಇದನ್ನು ಮನಗಂಡ ಸರ್ಕಾರವು ಈಗ ಮತ್ತೊಮ್ಮೆ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ಮಾಡಿಕೊಟ್ಟಿದೆ.
ಈ ಬಾರಿ ಯಾವುದೇ ಪ್ರೈವೇಟ್ ನವರಿಗೆ ಅವಕಾಶ ಇಲ್ಲ ಬದಲಾಗಿ ಗ್ರಾಮ ಒನ್, ಕರ್ನಾಟಕ ಒನ್ ಅಥವಾ ಬೆಂಗಳೂರು ಒನ್ ಕೇಂದ್ರಗಳಲ್ಲಿ ಮಾತ್ರ ಹೋಗಿ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು ಅಥವಾ ರೇಷನ್ ಕಾರ್ಡ್ ನಲ್ಲಿ ರುವ ಸಮಸ್ಯೆಯನ್ನು ತಿದ್ದುಪಡಿ (application to new rationcard or correction) ಮಾಡಿಸಿಕೊಳ್ಳಬಹುದು. ಈ ಕುರಿತು ವಿವರ ಹೀಗಿದೆ ನೋಡಿ.
ಡಿಸೆಂಬರ್ 3, 2023 ಭಾನುವಾರದಂದು ಮತ್ತೊಮ್ಮೆ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಹಾಗೂ ರೇಷನ್ ಕಾರ್ಡ್ ನಲ್ಲಿರುವ ಸಮಸ್ಯೆಗಳನ್ನು ತಿದ್ದುಪಡಿ ಮಾಡಿಸಿಕೊಳ್ಳಲು ಸರ್ಕಾರ ಅನುಮತಿ ನೀಡಿದೆ ಎನ್ನುವುದು ಸರ್ಕಾರ ಅಧಿಕೃತ ವೆಬ್ಸೈಟ್ ಗಳನ್ನು ಕೂಡ ಪ್ರಸಾರವಾಗಿದೆ.
ಫಲಾನುಭವಿಗಳು ತಾವು ಯಾವ ರೀತಿ ತಿದ್ದುಪಡಿ ಮಾಡಿಸಿಕೊಳ್ಳಬೇಕು ಮತ್ತು ಅದಕ್ಕೆ ಏನು ದಾಖಲೆ ಬೇಕು ಎನ್ನುವುದನ್ನು ತಿಳಿದುಕೊಂಡು ಆ ಪ್ರಕಾರವಾಗಿ ಬೆಳಗ್ಗೆ 11:00 ರಿಂದ ಮಧ್ಯಾಹ್ನ 2:00ರ ಸಮಯದ ಒಳಗೆ ತಿದ್ದುಪಡಿ ಮಾಡಿಸಿಕೊಳ್ಳಬೇಕು. ಈ ವರ್ಷದಲ್ಲಿ ಸಿಗುತ್ತಿರುವ ಕೊನೆಯ ಅವಕಾಶ ಇದು ಎಂದರೆ ಕೂಡ ಇದು ತಪ್ಪಾಗಲಾರದು ಎಂದೇ ಊಹಿಸಬಹುದು, ಹಾಗಾಗಿ ಈ ಉಪಯುಕ್ತ ಮಾಹಿತಿ ಹೆಚ್ಚಿನ ಜನರಿಗೆ ತಲುಪುವಂತೆ ಶೇರ್ ಮಾಡಿ.
ಯಾವೆಲ್ಲ ತಿದ್ದುಪಡಿಗೆ ಅವಕಾಶ:-
* ಮರಣ ಹೊಂದಿರುವ ಸದಸ್ಯರ ಹೆಸರನ್ನು ತೆಗೆದುಹಾಕಿಸಲು
* ರೇಷನ್ ಕಾರ್ಡ್ ಗೆ ಹೊಸ ಸದಸ್ಯರನ್ನು ಸೇರ್ಪಡೆ ಮಾಡಲು
* ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥರ ಸ್ಥಾನ ಬದಲಾವಣೆ
* ರೇಷನ್ ಕಾರ್ಡ್ ಇ-ಕೆವೈಸಿ ಮಾಡಿಸಲು
* ರೇಷನ್ ಕಾರ್ಡ್ ನಲ್ಲಿ ಹೆಸರು ತಿದ್ದುಪಡಿ ಮಾಡಿಸಲು
* ರೇಷನ್ ಕಾರ್ಡ್ ನಲ್ಲಿ ನ್ಯಾಯಬೆಲೆ ಅಂಗಡಿ ಬದಲಾಯಿಸಲು
* ಇವುಗಳ ಜೊತೆಗೆ ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಬೇಕಾಗುವ ದಾಖಲೆಗಳು:-
1. ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಮತ್ತು ಹೊಸ ಸದಸ್ಯರ ಸೇರ್ಪಡೆಗೆ:-
* ವಾಸವಿರುವ ನಗರಸಭೆ ಅಥವಾ ಪುರಸಭೆ ಅಥವಾ ನಗರ ಪಾಲಿಕೆಯ ವಾರ್ಡ್ ಸಂಖ್ಯೆ, ಗ್ರಾಮದ ಹೆಸರು.
* ಮನೆ ವಿದ್ಯುತ್ ಬಿಲ್
* ಕುಟುಂಬ ಸದಸ್ಯರ ಮುಖ್ಯಸ್ಥರ ಆಧಾರ್ ಕಾರ್ಡ್ ಗಳು ಮತ್ತು ಅರ್ಜಿದಾರರೊಂದಿಗೆ ಹೊಂದಿರುವ ಸಂಬಂಧ, ಕುಟುಂಬ ಸದಸ್ಯರ ಹುಟ್ಟಿದ ದಿನಾಂಕ, ವೃತ್ತಿ ಮತ್ತು ವಾರ್ಷಿಕ ವರಮಾನ ಮಾಹಿತಿ
* ಮೊಬೈಲ್ ನಂಬರ್
* ನಿವಾಸದ ಪೂರ್ಣ ವಿಳಾಸ, ಅರ್ಜಿದಾರರು ಅವಿವಾಹಿತರಾಗಿದ್ದಲ್ಲಿ ಅವರ ಪೋಷಕರ ಪೂರ್ಣ ವಿಳಾಸ
* ಸ್ವಂತ ಮನೆಯಾಗಿದ್ದಲ್ಲಿ ಮನೆಯ ಆಸ್ತಿ ಸಂಖ್ಯೆ ವಿವರ ನೀಡಬೇಕು ಇತ್ಯಾದಿ ಅಪ್ಲಿಕೇಶನ್ ನಲ್ಲಿರುವ ಕೇಳಲಾಗುವ ಎಲ್ಲ ಪ್ರಶ್ನೆಗಳಿಗೂ ಸರಿಯಾದ ಮಾಹಿತಿಯನ್ನು ಭರ್ತಿ ಮಾಡಬೇಕು.
* ಕುಟುಂಬದ ಎಲ್ಲ ಸದಸ್ಯರ ಬಯೋಮೆಟ್ರಿಕ್ (5 ವರ್ಷದ ಮಕ್ಕಳಾಗಿದ್ದರೆ ಜನ ಪ್ರಮಾಣ ಪತ್ರ)
* 6 ವರ್ಷದ ಮೇಲ್ಪಟ್ಟ ಮಕ್ಕಳಾಗಿದ್ದರೆ ಪ್ರಸಕ್ತ ವರ್ಷದ ಆದಾಯ ಪ್ರಮಾಣ ಪತ್ರವನ್ನು ಸಲ್ಲಿಸಬೇಕು, ಈಗಾಗಲೇ ಹೋಗಿದ್ದರೆ ಅದು 5 ವರ್ಷದ ಒಳಗೆ ಪಡೆದಿರುವ ಆದಾಯ ಪ್ರಮಾಣ ಪತ್ರವಾಗಿರಬೇಕು.