ಕೆಎಂಎಫ್ ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಲಿಮಿಟೆಡ್ ನಲ್ಲಿ ಖಾಲಿ ಇರುವ ಕೆಲಸಗಳನ್ನು ಭರ್ತಿ ಮಾಡಲು ಆದೇಶ ನೀಡಲಾಗಿತ್ತು, ಈ ಕೆಲಸಕ್ಕೆ ಅರ್ಜಿ ಸಲ್ಲಿಸಲು 2023ರ ಏಪ್ರಿಲ್ 17 ಕೊನೆಯ ದಿನಾಂಕ ಆಗಿತ್ತು. ಆದರೆ, ಈಗ ದಿನಾಂಕವನ್ನು 2023ರ ಜೂನ್ 6ಕ್ಕೆ ವಿಸ್ತರಿಸಲಾಗಿದೆ. ಒಟ್ಟಾರೆಯಾಗಿ 219 ಅಸಿಸ್ಟಂಟ್ ಮ್ಯಾನೇಜರ್, ಜ್ಯೂನಿಯರ್ ಟೆಕ್ನಿಷಿಯನ್ ಹುದ್ದೆಗಳು ಖಾಲಿ ಇದೆ ಆಸಕ್ತಿ ಇರುವವರು ಅರ್ಜಿ ಸಲ್ಲಿಸಬಹುದು. ಕೆಲಸದ ಬಗ್ಗೆ ಪೂರ್ತಿ ಮಾಹಿತಿಯನ್ನು ಇಂದಿನ ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಕೊನೆವರೆಗೂ ಓದಿ ಮಾಹಿತಿ ತಿಳಿದುಕೊಳ್ಳಿ.
ಖಾಲಿ ಇರುವ ಹುದ್ದೆಗಳ ವಿವರ
* ಅಸಿಸ್ಟೆಂಟ್ ಮ್ಯಾನೇಜರ್- 28
* ಮೆಡಿಕಲ್ ಆಫೀಸರ್- 1
* ಅಡ್ಮಿನಿಸ್ಟ್ರೇಟಿವ್ ಆಫೀಸರ್- 1
* ಪರ್ಚೇಸ್/ ಸ್ಟೋರ್ಕೀಪರ್- 3
* MIS/ ಸಿಸ್ಟಂ ಆಫೀಸರ್- 1
* ಅಕೌಂಟ್ಸ್ ಆಫೀಸರ್- 2
* ಮಾರ್ಕೆಟಿಂಗ್ ಆಫೀಸರ್- 3
* ಟೆಕ್ನಿಕಲ್ ಆಫೀಸರ್- 14
* ಟೆಕ್ನಿಷಿಯನ್- 1, ಎಕ್ಸ್ಟೆನ್ಷನ್ ಆಫೀಸರ್- 22
* MIS ಅಸಿಸ್ಟೆಂಟ್ (ಗ್ರೇಡ್ 1)- 2
* ಅಡ್ಮಿನಿಸ್ಟ್ರೇಟಿವ್ ಅಸಿಸ್ಟೆಂಟ್ (ಗ್ರೇಡ್ 2)- 13
* ಅಕೌಂಟ್ಸ್ ಅಸಿಸ್ಟೆಂಟ್ (ಗ್ರೇಡ್ 2)- 12
* ಮಾರ್ಕೆಟಿಂಗ್ ಅಸಿಸ್ಟೆಂಟ್ (ಗ್ರೇಡ್ 2)- 18
* ಪರ್ಚೇಸಿಂಗ್ ಅಸಿಸ್ಟೆಂಟ್ (ಗ್ರೇಡ್ 2)- 6
* ಕೆಮಿಸ್ಟ್ (ಗ್ರೇಡ್ 2)- 4
* ಜೂನಿಯರ್ ಸಿಸ್ಟಂ ಆಪರೇಟರ್- 10
* ಕೋ- ಆರ್ಡಿನೇಟರ್ (ಪ್ರೊಟೆಕ್ಷನ್)- 2
* ಟೆಲಿಫೋನ್ ಆಪರೇಟರ್- 2
* ಜೂನಿಯರ್ ಟೆಕ್ನಿಷಿಯನ್- 64
* ಡ್ರೈವರ್ಸ್- 8
* ಲ್ಯಾಬ್ ಅಸಿಸ್ಟೆಂಟ್- 2 ಇಷ್ಟು ಹುದ್ದೆಗಳು ಖಾಲಿ ಇದೆ.
ಈ ಹುದ್ದೆಗಳಿಗೆ ಬೇಕಿರುವ ವಿದ್ಯಾರ್ಹತೆ
* ಅಸಿಸ್ಟೆಂಟ್ ಮ್ಯಾನೇಜರ್- ಬಿ.ವಿ.ಎಸ್ಸಿ & AH, ಎಂಜಿನಿಯರಿಂಗ್, ಎಂ.ಎಸ್ಸಿ. * ಮೆಡಿಕಲ್ ಆಫೀಸರ್- ಎಂಬಿಬಿಎಸ್. ಅಡ್ಮಿನಿಸ್ಟ್ರೇಟಿವ್ ಆಫೀಸರ್- ಎಲ್ಎಲ್ಬಿ, ಬಿಎಎಲ್, ಎಂಬಿಎ, MSW. ಪರ್ಚೇಸ್/ ಸ್ಟೋರ್ಕೀಪರ್- ಬಿಬಿಎಂ, ಬಿಬಿಎ, ಎಂಕಾಂ, ಎಂಬಿಎ, ಸ್ನಾತಕೋತ್ತರ ಪದವಿ.
* MIS/ ಸಿಸ್ಟಂ ಆಫೀಸರ್- ಬಿಇ (CS/IS/E&C), ಎಂಸಿಎ.
* ಅಕೌಂಟ್ಸ್ ಆಫೀಸರ್- ಎಂ.ಕಾಂ, ಎಂಬಿಎ (ಫೈನಾನ್ಸ್).
* ಮಾರ್ಕೆಟಿಂಗ್ ಆಫೀಸರ್- ಬಿ.ಎಸ್ಸಿ, ಎಂಬಿಎ (ಮಾರ್ಕೆಟಿಂಗ್).
* ಟೆಕ್ನಿಕಲ್ ಆಫೀಸರ್- ಬಿ.ಟೆಕ್ (ಡಿ.ಟಿ).
* ಟೆಕ್ನಿಷಿಯನ್- ಮೆಕ್ಯಾನಿಕಲ್, ಸಿವಿಲ್ನಲ್ಲಿ ಬಿಇ, ಎಂ.ಎಸ್ಸಿ.
* ಎಕ್ಟೆನ್ಶನ್ ಆಫೀಸರ್- ಯಾವುದೇ ಪದವಿ.
* MIS ಅಸಿಸ್ಟೆಂಟ್ (ಗ್ರೇಡ್ 1)- ಬಿ.ಎಸ್ಸಿ, ಬಿಸಿಎ, ಬಿಇ(CS).
* ಅಡ್ಮಿನಿಸ್ಟ್ರೇಟಿವ್ ಅಸಿಸ್ಟೆಂಟ್ (ಗ್ರೇಡ್ 2)- ಯಾವುದೇ ಪದವಿ.
ಮಾಸಿಕ ವೇತನ ಹೀಗಿದೆ..
* ಅಸಿಸ್ಟೆಂಟ್ ಮ್ಯಾನೇಜರ್- ₹ 52,650-97,100,
* ಮೆಡಿಕಲ್ ಆಫೀಸರ್- ₹ 52,650-97,100,
* ಅಡ್ಮಿನಿಸ್ಟ್ರೇಟಿವ್ ಆಫೀಸರ್- ₹ 43,100- 83,900,
* ಪರ್ಚೇಸ್/ ಸ್ಟೋರ್ಕೀಪರ್- ₹ 43,100- 83,900,
* MIS/ ಸಿಸ್ಟಂ ಆಫೀಸರ್-₹ 43,100- 83,900,
* ಅಕೌಂಟ್ಸ್ ಆಫೀಸರ್- ₹ 43,100- 83,900,
* ಮಾರ್ಕೆಟಿಂಗ್ ಆಫೀಸರ್- ₹ 43,100- 83,900,
* ಟೆಕ್ನಿಕಲ್ ಆಫೀಸರ್-₹ 43,100- 83,900,
* ಟೆಕ್ನಿಷಿಯನ್- ₹ 43,100- 83,900,
* ಎಕ್ಟೆನ್ಶನ್ ಆಫೀಸರ್- ₹ 33,450- 62,600,
* MIS ಅಸಿಸ್ಟೆಂಟ್ (ಗ್ರೇಡ್ 1)- ₹ 33,450-62,600,
* ಅಡ್ಮಿನಿಸ್ಟ್ರೇಟಿವ್ ಅಸಿಸ್ಟೆಂಟ್ (ಗ್ರೇಡ್ 2)-₹ 27,650- 52,650,
* ಅಕೌಂಟ್ಸ್ ಅಸಿಸ್ಟೆಂಟ್ (ಗ್ರೇಡ್ 2)- ₹ 27,650- 52,650,
* ಮಾರ್ಕೆಟಿಂಗ್ ಅಸಿಸ್ಟೆಂಟ್ (ಗ್ರೇಡ್ 2)- ₹ 27,650- 52,650,
* ಪರ್ಚೇಸಿಂಗ್ ಅಸಿಸ್ಟೆಂಟ್ (ಗ್ರೇಡ್ 2)- ₹ 27,650- 52,650,
* ಕೆಮಿಸ್ಟ್ (ಗ್ರೇಡ್ 2)-₹ 27,650- 52,650,
* ಜೂನಿಯರ್ ಸಿಸ್ಟಂ ಆಪರೇಟರ್- ₹ 27,650- 52,650.
ಈ ಕೆಲಸಗಳಿಗೆ ಅಪ್ಲೈ ಮಾಡಲು ವಯೋಮಿತಿ ಹೀಗಿದೆ
ಕೆಎಂಎಫ್ ತುಮಕೂರು ಅವರ ಅಧಿಸೂಚನೆಯ ಪ್ರಕಾರ, 2023ರ ಜೂನ್ 6ಕ್ಕೆ ಕೆಲಸಕ್ಕೆ ಅಪ್ಲೈ ಮಾಡುವ ಅಭ್ಯರ್ಥಿಗಳ ವಯಸ್ಸು 18 ತುಂಬಿರಬೇಕು. ಹಾಗೆಯೇ 35 ಮೀರಿರಬಾರದು. ಇಲ್ಲಿ SC/ST ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ, ಪ್ರವರ್ಗ 2A/2B/3A & 3B ಅಭ್ಯರ್ಥಿಗಳಿಗೆ 3 ವರ್ಷ, PWD/ವಿಧವಾ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಇದೆ.
ಭರಿಸಬೇಕಾದ ಅರ್ಜಿ ಶುಲ್ಕ
SC/ST/ಪ್ರವರ್ಗ 1 ಅಭ್ಯರ್ಥಿಗಳಿಗೆ 500 ರೂಪಾಯಿ, ಬೇರೆ ಎಲ್ಲಾ ಅಭ್ಯರ್ಥಿಗಳಿಗೆ 1000 ರೂಪಾಯಿ. ಶುಲ್ಕವನ್ನು ಆನ್ಲೈನ್ ಪಾವತಿ ಮಾಡಬೇಕು. ಆಯ್ಕೆ ಪ್ರಕ್ರಿಯೆ ಲಿಖಿತ ಪರೀಕ್ಷೆ ಮತ್ತು ಇಂಟರ್ವ್ಯೂ ಮೂಲಕ ನಡೆಯುತ್ತದೆ. ಈ https://virtualofficeerp.com/tumkur_mul2023/instruction ಲಿಂಕ್ ಮೂಲಕ ಕೆಲಸಕ್ಕೆ ಆನ್ಲೈನ್ ಅಪ್ಲೈ ಮಾಡಿ