ಸರ್ಕಾರವು ಈಗಾಗಲೇ ರೈತರಿಗಾಗಿ ಅನೇಕ ಅನುಕೂಲಗಳನ್ನು ಮಾಡಿಕೊಟ್ಟಿದೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ಸೇರಿ ರೈತರ ಏಳಿಗೆಗಾಗಿ ಶ್ರಮಿಸುತ್ತಿವೆ. ರೈತರಿಗೆ ಕೇಂದ್ರ ಸರ್ಕಾರದಿಂದ ಕಿಸಾನ್ ಸಮ್ಮನ್ ಯೋಜನೆ, ಫಸಲ್ ಭೀಮಾ ಯೋಜನೆ, ಪಿಎಮ್ ಕಿಸಾನ್ ಮಂದನ್ ಯೋಜನೆ ಇನ್ನು ಮುಂತಾದ ಯೋಜನೆಗಳ ಮೂಲಕ ಸಹಾಯಧನ ಬೆಳೆ ವಿಮೆ ಮುಂತಾದ ಅನುಕೂಲತೆಗಳು ಸಿಗುತ್ತಿವೆ.
ಮತ್ತು ರಾಜ್ಯ ಸರ್ಕಾರದ ಕಡೆಯಿಂದಲೂ ಕೂಡ ಸಿಎಂ ಕಿಸಾನ್ ಸಮ್ಮಾನ್ ಯೋಜನೆ, ಗಂಗಾ ಕಲ್ಯಾಣ ಯೋಜನೆ, ಬಡ್ಡಿ ರಹಿತ ಬೆಳೆ ಸಾಲ ಯೋಜನೆ, ಕೃಷಿ ಅಭಿವೃದ್ಧಿ ಯೋಜನೆ, ಕೃಷಿ ಸಂಜೀವಿನಿ ಯೋಜನೆ ಇನ್ನು ಮುಂತಾದ ಅನೇಕ ಯೋಜನೆಗಳು ಜಾರಿಗೆ ಬಂದಿವೆ. ಇವೆಲ್ಲದರ ಜೊತೆಗೆ ಅನೇಕ ಸಹಾಯ ಧನಗಳು, ಕೃಷಿ ಯಂತ್ರೋಪಕರಣಗಳು ಮುಂತಾದವುಗಳ ಖರೀದಿಗೆ ಸಹಾಯಧನ ಮತ್ತು ಸಬ್ಸಿಡಿ ರೂಪದ ಸಾಲದ ಸಹಾಯ ಹಸ್ತವೂ ಸಿಗುತ್ತಿದೆ.
ಜೊತೆಗೀಗ ಸರ್ಕಾರದಿಂದ ಮತ್ತೊಂದು ಸಿಹಿ ಸುದ್ದಿ ರೈತರ ಸಲುವಾಗಿ ಸಿಕ್ಕಿದೆ. ಅದೇನೆಂದರೆ ಕೃಷಿ ಹೊಂಡ ನಿರ್ಮಾಣ ಮಾಡುವ ರೈತರಿಗೆ ಸಹಾಯಧನ ಬಿಡುಗಡೆ ಆಗುತ್ತಿದೆ. ಸದ್ಯಕ್ಕೆ ಜಿಲ್ಲಾ ವಾರು ಸಹಾಯಧನ ಬಿಡುಗಡೆ ಆಗುತ್ತಿದ್ದು, ಶೀಘ್ರದಲ್ಲೇ ರಾಜ್ಯದ ಎಲ್ಲಾ ಜಿಲ್ಲೆಗಳ ರೈತರಿಗೂ ಕೂಡ ಅವರ ಖಾತೆಗೆ ಈ ಕೃಷಿ ಹೊಂಡ ನಿರ್ಮಾಣದ ಸಹಾಯಧನ ತಲುಪಲಿದೆ.
ಈ ಅಂಕಣದಲ್ಲಿ ಮೊದಲ ಹಂತದಲ್ಲಿ ಯಾವ ಯಾವ ಜಿಲ್ಲೆಯ ರೈತರುಗಳಿಗೆ ಈ ಕೃಷಿ ಹೊಂಡ ನಿರ್ಮಾಣದ ಸಹಾಯಧನ ಬಿಡುಗಡೆ ಆಗಿದೆ, ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳೇನು, ಯಾವೆಲ್ಲಾ ರೈತರು ಈ ಸಹಾಯಧನ ಪಡೆಯಲು ಅರ್ಹರು, ಈ ಪ್ರಕ್ರಿಯೆ ಹೇಗಿರುತ್ತದೆ, ಯಾರನ್ನು ಸಂಪರ್ಕಿಸಬೇಕು ಎನ್ನುವ ಮಾಹಿತಿಗಳನ್ನು ನೀಡಲಾಗಿದೆ ಈ ಉಪಯುಕ್ತ ಮಾಹಿತಿಯನ್ನು ಹೆಚ್ಚಿನ ರೈತರ ಜೊತೆ ಹಂಚಿಕೊಂಡು ಎಲ್ಲರಿಗೂ ಮಾಹಿತಿ ತಲುಪುವಂತೆ ಮಾಡಿ.
ಯೋಜನೆಯ ಹೆಸರು :- ರಾಷ್ಟ್ರೀಯ ತೋಟಗಾರಿಕಾ ಮಿಷನ್ 2022-23.
ಯಾರು ಅರ್ಹರು:- ಸ್ವಂತ ಜಮೀನು ಹೊಂದಿ, ತೋಟಗಾರಿಕೆಯಲ್ಲಿ ಆಸಕ್ತಿ ಇರುವ ತೋಟಗಾರಿಕೆ ಮಾಡುತ್ತಿರುವ ರೈತರು.
ಯಾವ ಕೃಷಿ ಚಟುವಟಿಕೆಗೆ ದೊರೆಯಲಿದೆ:-
● ವೈಯಕ್ತಿಕ ಕೃಷಿ ಹೊಂಡ
● ಸಾಮೂಹಿಕ ಕೃಷಿ ಹೊಂಡ
● ಯಾಂತ್ರೀಕರಣ
● ಪ್ಯಾಕ್ ಹೌಸ್
● ಒಣದ್ರಾಕ್ಷಿ ಘಟಕ
● ತಳ್ಳುವ ಗಾಡಿ
● ಈರುಳ್ಳಿ ಶೇಖರಣ ಘಟಕ
● ಅರಿಶಿನ ಸಂಸ್ಕರಣ ಘಟಕ
ಸಹಾಯಧನಕ್ಕೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:-
● ಆಧಾರ್ ಕಾರ್ಡ್
● ರೇಷನ್ ಕಾರ್ಡ್
● ಖಾತೆ ಉತಾರ
● ಇತ್ತೀಚಿನ ಭಾವಚಿತ್ರ
● ಜಾತಿ ಪ್ರಮಾಣ ಪತ್ರ
● ಬ್ಯಾಂಕ್ ಖಾತೆ ಪುಸ್ತಕ
● ಜಮೀನಿನ ಪಹಣಿ ಪತ್ರ
● ಮೊಬೈಲ್ ಸಂಖ್ಯೆ
ಅರ್ಜಿ ಸಲ್ಲಿಸುವ ಪ್ರಕ್ರಿಯೆ:-
● ಅರ್ಹ ಆಸಕ್ತ ರೈತರು ಆಯಾ ಜಿಲ್ಲೆಯ ತೋಟಗಾರಿಕಾ ಇಲಾಖೆಯಲ್ಲಿ ಅರ್ಜಿ ಸಲ್ಲಿಸಬೇಕು
● ಅರ್ಜಿ ಫಾರಂ ಭರ್ತಿ ಮಾಡಿ ಈ ಮೇಲೆ ತಿಳಿಸಿದ ಎಲ್ಲಾ ದಾಖಲೆಗಳನ್ನು ಅರ್ಜಿ ಫಾರಂ ಜೊತೆ ಸಲ್ಲಿಸಬೇಕು
● ಹೆಚ್ಚಿನ ಮಾಹಿತಿಗೆ ರೈತರು ಹತ್ತಿರದ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕಾ ಅಧಿಕಾರಗಳನ್ನು ಅಥವಾ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರನ್ನು ಸಂಪರ್ಕಿಸಿ ಈ ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯಡಿ ಬರುವ ಸೌಲಭ್ಯಗಳ ಬಗ್ಗೆ ಮಾಹಿತಿ ಕೇಳಿ ಪಡೆದುಕೊಳ್ಳಬಹುದು.
● ಮೊದಲ ಹಂತದಲ್ಲಿ ಕಲಬುರ್ಗಿ, ತುಮಕೂರು ಮತ್ತು ಗದಗ ಜಿಲ್ಲೆಯ ರೈತರುಗಳಿಗೆ ಈ ಯೋಜನೆ ಅನುಕೂಲ ಸಿಗಲಿದೆ ಶೀಘ್ರದಲ್ಲೇ ರಾಜ್ಯದ ಎಲ್ಲಾ ಜೆಲ್ಲೆಯ ರೈತರುಗಳಿಗೂ ಈ ಯೋಜನೆಯ ಸೌಲಭ್ಯ ಪಡೆಯುವ ಅವಕಾಶ ಸಿಗಲಿದೆ.