KSRTC ಬಸ್ ನಂತೆ ಇನ್ಮುಂದೆ KSRTC ಲಾರಿಗಳು ಬರಲಿದೆ, ಇನ್ನೊಂದು ತಿಂಗಳಲ್ಲಿ ಪಾರ್ಸಲ್ ಸೇವೆ ಆರಂಭ.! ಸಾರಿಗೆ ಸಚಿವ ರಾಮಲಿಂಗ ರೆಡ್ಡಿಯಿಂದ ಸ್ಪಷ್ಟನೆ.!

 

WhatsApp Group Join Now
Telegram Group Join Now

ಕೋವಿಡ್ ಲಾಕ್ ಡೌನ್ (lockdown effect) ನಲ್ಲಿ ನಷ್ಟಕ್ಕೆ ಒಳಗಾಗಿದ್ದ KSRTC ನಿಧಾನವಾಗಿ ಚೇತರಿಸಿಕೊಳ್ಳುತ್ತಿತ್ತು. ಆದರೆ ಈಗ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆ (Guarantee Scheme) ಜಾರಿ ಮಾಡಿ ಮಹಿಳೆಯರಿಗೆ KSRTC ನಾಲ್ಕು ನಿಗಮದ ಬಸ್ ಗಳಲ್ಲಿ ಉಚಿತ ಪ್ರಯಾಣದ (free travel for Women) ಅವಕಾಶ ಮಾಡಿ ಕೊಟ್ಟಿದೆ. ಹೀಗಾಗಿ KSRTC ಆರ್ಥಿಕವಾಗಿ ಸದೃಢಗೊಳ್ಳಲು ಹೊಸ ಆದಾಯ ಮೂಲವನ್ನು (Source) ಹುಡುಕಿದ್ದು ಸಾರಿಗೆ ಅಧಿಕಾರಿಗಳು (transport department) ಈ ಹೊಸ ಯೋಜನೆಯ ಪ್ರಸ್ತಾವನೆಯನ್ನು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ( Minister Ramalinga Reddy) ಅವರ ಎದುರಿಗೆ ಇಟ್ಟಿದ್ದಾರೆ.

ಇಂದು ಸಚಿವರು ಇದನ್ನು ಪರಿಶೀಲಿಸಿ ಅನುಮತಿಯ ಸಹಿ ನೀಡಿದ್ದಾರೆ. ಅದೇನೆಂದರೆ, ವ್ಯವಸ್ಥಿತ ಮತ್ತು ಸಮರ್ಪಕವಾದ ಕಾರ್ಗೊ (Parcel service) ಸೇವೆ ಒದಗಿಸಲು  ಟ್ರಕ್ (truck) ಗಳನ್ನು ಖರೀದಿಸಲು ಸಾರಿಗೆ ಸಚಿವರ ಅನುಮತಿ ಕೇಳಿದ್ದಾರೆ. 100 ಕೋಟಿ ಆದಾಯ ಗಳಿಸುವ ಗುರಿ ಇಟ್ಟುಕೊಂಡು ಈ ಯೋಜನೆ ಆರಂಭಿಸಲಾಗಿದೆ. ಆದರೆ ಈ ಹಿಂದೆಯೇ ವರ್ಷಗಳ ಹಿಂದೆ KSRTC ಯಲ್ಲಿ ಸಣ್ಣ ಪ್ರಮಾಣದ ಪಾರ್ಸೆಲ್ ವ್ಯವಸ್ಥೆ ಇತ್ತು, ಆರಂಭದಲ್ಲಿ 109 ಕೇಂದ್ರದಿಂದ ಶುರು ಮಾಡಿ ನಂತರ ರಾಜ್ಯದ ಎಲ್ಲಾ ನಿಲ್ದಾಣಕ್ಕೂ ಕೂಡ ಇದನ್ನು ವಿಸ್ತರಿಸಲಾಗಿತ್ತು.

ರಾಜ್ಯದಲ್ಲಿ 195 ಬರಪೀಡಿತ ತಾಲೂಕುಗಳ ಪಟ್ಟಿ ಬಿಡುಗಡೆ.! ಈ ತಾಲೋಕಿನ ರೈತರಿಗೆ ಸರ್ಕಾರದಿಂದ ಸಿಗಲಿದೆ ನೆರವು.! ಏನೆಲ್ಲಾ ಸಿಗಲಿದೆ ನೋಡಿ.!

ಆದರೆ ಆಗ ಪ್ರತ್ಯೇಕ ವ್ಯವಸ್ಥೆ ಮಾಡದೆ ಬಸ್ ನಲ್ಲಿದ್ದ ಲಗೇಜ್ ಬಾಕ್ಸ್ (luggage box) ನಲ್ಲಿಯೇ ಪಾರ್ಸಲ್ ಗಳನ್ನು ಸಾಗಿಸಲಾಗುತ್ತಿತ್ತು. ಇದರಿಂದ ವಾರ್ಷಿಕವಾಗಿ ನಿಗಮಕ್ಕೆ 4 ಕೋಟಿಯಷ್ಟು ಆದಾಯ ಸಿಗುತ್ತಿತ್ತು. ಆದರೆ ಕೆಲ ದಿನಗಳ ಬಳಿಕ ಇದನ್ನು ಮಾರ್ಪಾಡು ಮಾಡಿ
ಬಿಸಿನೆಸ್‌ ಸ್ಟ್ಯಾಟಿಕ್‌ ಪಾರ್ಟನರ್‌ (buisness statics partner) ಎಂದು ಬದವಾವಣೆ ಮಾಡಿಕೊಂಡು ಸೇವೆ ನೀಡಲು ಆರಂಭಿಸಲಾಯಿತು. ಈ ಸಹಭಾಗಿತ್ವದ ಸೇವೆಯಡಿ ಬಂದ ಹಣದಲ್ಲಿ 80%ರಷ್ಟು KSRTC ಗೆ ಮತ್ತು 20% ರಷ್ಟು ಪಾರ್ಟ್‌ನರ್‌ಗೆ ಪಾಲು ನೀಡಲಾಗುತಿತ್ತು. ಈ ವೇಳೆ ವಾರ್ಷಿಕ ಆದಾಯ 30 ಕೋಟಿ ರೂ.ಗೆ ಹೆಚ್ಚಿತ್ತು.

ಆದ್ದರಿಂದ ಅದಕ್ಕೆ ಹೊಸ ರೂಪ ನೀಡಿ ಅಧಿಕೃತವಾಗಿ ಕಾರ್ಗೊ ಸೇವೆ ಒದಗಿಸಿದರೆ ಆದಾಯ ಹೆಚ್ಚಳವಾಗುತ್ತದೆ ಎಂದು KSRTC ತಾನೇ ಈ ಸೇವೆ ಆರಂಭಿಸಲು ಟ್ರಕ್ ಗಳ ಖರೀದಿಗೆ ಮುಂದಾಗಿದೆ. ಆರಂಭಿಕವಾಗಿ 6 ಟನ್‌ ಸಾಮರ್ಥ್ಯದ ಸಂಪೂರ್ಣ ನಿರ್ಮಿತ 20 ಟ್ರಕ್‌ಗಳನ್ನು ಖರೀದಸಿಲು ಮುಂದಾಗಿದ್ದು, ಒಂದು ಟ್ರಕ್‌ ಖರೀದಿಗೆ 22 ಲಕ್ಷ ರೂ. ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ಇದರ ಸಂಬಂಧ ಆಗಸ್ಟ್‌ನಲ್ಲಿ ಸಭೆ ನಡೆದು ಅನುಮೋದನೆಯೂ ಸಿಕ್ಕಿದೆ.

ಕೃಷಿ ಇಲಾಖೆಯಿಂದ ರೈತರಿಗೆ ಟಾರ್ಪಲಿನ್ ವಿತರಣೆ.! ಆಸಕ್ತ ರೈತರು ಅರ್ಜಿ ಸಲ್ಲಿಸಿ ಟಾರ್ಪಲ್ ಪಡೆಯಿರಿ.!

ಬಸ್‌ಗಳಲ್ಲಿ ಹೆಚ್ಚಿನ ಸ್ಥಳಾವಕಾಶ ಇರದ ಕಾಲಣ ಪಾರ್ಸೆಲ್‌ ಸೇವೆ ಒದಗಿಸಲು ಸಮಸ್ಯೆಯಾಗಿತ್ತು. ಹೀಗಾಗಿ ಅಧಿಕ ಪ್ರಮಾಣದ ಪಾರ್ಸೆಲ್‌ ಇರುವ ಮಾರ್ಗ ಗುರುತಿಸಿ ಟ್ರಕ್‌ಗಳ ಸಂಚಾರದ ಮೂಲಕ ವ್ಯವಸ್ಥೆ ಮಾಡಲಾಗುತ್ತದೆ. ಟ್ರಕ್‌ಗಳು ಹೋಗದ ರೂಟ್ ಗಳಲ್ಲಿ ಎಂದಿನಂತೆ ಬಸ್‌ಗಳ ಸೇವೆ ಇರಲಿದೆ ಎನ್ನುವ ಮಾಹಿತಿ ಸಿಕ್ಕಿದೆ. KSRTC ಯ ಈ ಪಾರ್ಸಲ್ ಸೇವೆ ಇನ್ನೂ ಒಂದು ತಿಂಗಳಲ್ಲಿ ರಾಜ್ಯದಾತ್ಯಂತ ಲಭ್ಯವಾಗಲಿದೆ ಎಂದು ಹೇಳಲಾಗುತ್ತಿದೆ.

ಇದು ನಿಖರವಾದ ಆದಾಯ ತಂದಿದ್ದೇ ಆದಲ್ಲಿ ಮುಂದೆ ಈ ಟ್ರಕ್ ಗಳ ಸಂಖ್ಯೆ ಇನ್ನೂ ಕೂಡ ಅಧಿಕವಾಗುವ ಸಾಧ್ಯತೆ ಇದೆ ಎಲ್ಲವೂ ಸಹ ಯೋಜನೆ ಆರಂಭ ಆದ ಮೇಲೆ ಎದುರಾಗುವ ಸಾಧಕ ಬಾಧಕಗಳ ಮೇಲೆ ನಿರ್ಧಾರವಾಗುತ್ತದೆ. ಭಾರತದಲ್ಲಿ ಮಾತವಲ್ಲದೆ ಏಷ್ಯಾದಲ್ಲಿಯೇ ಬೆಸ್ಟ್ ಸೇವೆ ನೀಡುತ್ತಿರುವ ಸಾರಿಗೆ ನಿಗಮ ಎನ್ನುವ ಖ್ಯಾತಿಗೆ ಒಳಗಾಗಿರುವ KSRTC ಈಗ ಮತ್ತೊಂದು ಪ್ರಯತ್ನದ ಮೂಲಕ ಸುದ್ದಿಯಲ್ಲಿದೆ. ಈ ಸುದ್ದಿ ವರದಿಯಾಗುತ್ತಿದ್ದಂತೆ ನಾಡಿನಾದ್ಯಂತ ನಾಗರಿಕರಿಂದ ಉತ್ತಮ ಪ್ರಕ್ರಿಯೆ ವ್ಯಕ್ತವಾಗಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ.

2023ರ ಈ ವರ್ಷದಲ್ಲಿ 2BHK ಮನೆ ಕಟ್ಟಿಸಲು ಎಷ್ಟು ಖರ್ಚಾಗುತ್ತೆ.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now