ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ (Labour Card scholarship) ಕರ್ನಾಟಕ ಸರ್ಕಾರವು ಪ್ರತಿ ವರ್ಷವೂ ಕಾರ್ಮಿಕ ಮಂಡಳಿಯಿಂದ ವಿದ್ಯಾರ್ಥಿ ವೇತನ ಬಿಡುಗಡೆ ಮಾಡುತ್ತದೆ. ಮಂಡಳಿಯಲ್ಲಿ ನೋಂದಣಿಯಾಗಿರುವ ನರ್ಸರಿಯಿಂದ ಸ್ನಾತಕೋತರ ಪದವಿವರೆಗೆ ವಿದ್ಯಾಭ್ಯಾಸ ಮಾಡುತ್ತಿರುವ ಕಾರ್ಮಿಕರ ಮಕ್ಕಳುಗಳು ಈ ಪ್ರಯೋಜನವನ್ನು ಪಡೆದುಕೊಳ್ಳಬಹುದು.
ಅಂತೆಯೇ 2022-23ನೇ ಶೈಕ್ಷಣಿಕ ವರ್ಷದಲ್ಲಿ ಕೂಡ ಈ ರೀತಿ ಸ್ಕಾಲರ್ಶಿಪ್ ಗಾಗಿ ಅರ್ಹರಿಂದ ಅರ್ಜಿ ಆಹ್ವಾನ ಮಾಡಲಾಗಿತ್ತು. ಮಾನ್ಯ ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ (Minister santhosh Lad) ಅವರ ನೇತೃತ್ವದಲ್ಲಿ 9ನೇ ನವೆಂಬರ್ 2023ರಂದು ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಸಹಾಯಧನ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಂಡು ಹಣ ಬಿಡುಗಡೆ ಮಾಡಲಾಗಿದೆ.
ಕಾರ್ಮಿಕ ಇಲಾಖೆ ನೀಡಿರುವ ಅಂಕಿ ಅಂಶಗಳ ಪ್ರಕಾರ 9.61 ಲಕ್ಷ ಕಟ್ಟಡ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ 225.98 ಕೋಟಿ ಶೈಕ್ಷಣಿಕ ಸಹಾಯಧನವನ್ನು ಫಲಾನುಭವಿಗಳ ಖಾತೆಗೆ DBT ಮೂಲಕ ವರ್ಗಾವಣೆ ಮಾಡಿದೆ. ನೀವು ಕೂಡ ಅರ್ಜಿ ಸಲ್ಲಿಸಿದ್ದರೆ ನಿಮ್ಮ ಖಾತೆಗೆ ಹಣ ವರ್ಗಾವಣೆ ಆಗಿದೆಯೇ ಇಲ್ಲವೇ ಅಥವಾ ನಿಮ್ಮ ಸ್ಟೇಟಸ್ (Status Check) ಏನಾಗಿದೆ ಎಂದು ಈಗ ನಾವು ಹೇಳುವ ಈ ವಿಧಾನದ ಮೂಲಕ ಚೆಕ್ ಮಾಡಿ ತಿಳಿದುಕೊಳ್ಳಿ.
* 1 ರಿಂದ 10ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳು https://ssp.karnataka.gov.in ವೆಬ್ ಸೈಟ್ ಗೆ ಭೇಟಿ ನೀಡಿ
* State Scholarship Portal ನಲ್ಲಿ Labour students Scholarship report ಎನ್ನುವ ಪೇಜ್ ಓಪನ್ ಆಗುತ್ತದೆ. ಅದರಲ್ಲಿ ಮೊದಲಿಗೆ Enter Students SATS ID ಎನ್ನುವುದರಲ್ಲಿ ಸರಿಯಾಗಿ ವಿದ್ಯಾರ್ಥಿಯ ಮಾಹಿತಿ ಭರ್ತಿ ಮಾಡಿ.
* financial year ಎನ್ನುವ ಆಪ್ಷನ್ ಇರುತ್ತದೆ ಅದರಲ್ಲಿ ನೀವು ಅರ್ಜಿ ಸಲ್ಲಿಸಿರುವ ಶೈಕ್ಷಣಿಕ ವರ್ಷವನ್ನು ಅಂದರೆ 2022-23 ಸೆಲೆಕ್ಟ್ ಮಾಡಿ Search ಕೊಡಿ.
* ಇಷ್ಟಾಗುತ್ತಿದ್ದಂತೆ ನಿಮ್ಮ ಖಾತೆಗೆ ಎಷ್ಟು ಹಣ ವರ್ಗಾವಣೆ ಆಗಲಿದೆ ಮತ್ತು ಈಗಾಗಲೇ ಹಣ ವರ್ಗಾವಣೆ ಆಗಿದೆಯೇ ಅಥವಾ ಯಾವ ಸ್ಟೇಟಸ್ ನಲ್ಲಿ ಇದೆ ಎನ್ನುವುದರ ಪೂರ್ತಿ ವಿವರ ಸ್ಕ್ರೀನ್ ಮೇಲೆ ಬರುತ್ತದೆ.
* 10ನೇ ತರಗತಿ ಮೇಲ್ಪಟ್ಟು PUC, ITI, ಡಿಪ್ಲೋಮೋ, ಪದವಿ ಅಥವಾ ಸ್ನಾತಕೋತ್ತರ ಪದವಿ ಓದುತ್ತಿರುವ ವಿದ್ಯಾರ್ಥಿಗಳು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಿರುತ್ತೀರಿ. ಆಗ ನಿಮಗೆ ಒಂದು ರೆಫರೆನ್ಸ್ ನಂಬರ್ ಕೊಟ್ಟಿರುತ್ತಾರೆ. ಮತ್ತೆ ನೀವು ಸೇವಾ ಸಿಂಧು ಫೋಟೋಗೆ ಭೇಟಿಕೊಟ್ಟು ಸ್ಟೇಟಸ್ ಚೆಕ್ ಮಾಡುವ ವಿಭಾಗದಲ್ಲಿ ರೆಫರೆನ್ಸ್ ನಂಬರ್ ಹಾಕಿ ಸ್ಥಿತಿ ಏನಾಗಿದೆ ಎಂದು ನೋಡಬಹುದು.
* ಅಥವಾ ಸರ್ಕಾರದ ಅಧಿಕೃತ ವೆಬ್ಸೈಟ್ ಆದ ಸಕಾಲ ವೆಬ್ಸೈಟ್ನಲ್ಲಿ ಕೂಡ ಚೆಕ್ ಮಾಡಬಹುದು. https://sakala.kar.nic.in/ ವೆಬ್ ಸೈಟ್ ಗೆ ಭೇಟಿ ಕೊಡಿ.
* ಮುಖಪುಟವನ್ನು ಸ್ಕ್ರೋಲ್ ಮಾಡುತ್ತಾ ಬಂದಾಗ ಸಕಾಲ ಸ್ಥಿತಿಯಲ್ಲಿ ಸಹಾಯ ಎನ್ನುವ ಆಪ್ಷನ್ ಕಾಣುತ್ತದೆ ಅದರಲ್ಲಿ ನಿಮ್ಮ ರೆಫರೆನ್ಸ್ ನಂಬರ್ ಹಾಕಿ, ಪಕ್ಕದಲ್ಲಿರುವ ಸಲ್ಲಿಸುವುದು ಎನ್ನುವ ಆಯ್ಕೆಯನ್ನು ಕ್ಲಿಕ್ ಮಾಡಿ.
* ತಕ್ಷಣ ಸ್ಕ್ರೀನ್ ಮೇಲೆ ಮತ್ತೊಂದು ಪೇಜ್ ಓಪನ್ ಆಗುತ್ತದೆ ಅದರಲ್ಲಿ ನಿಮ್ಮ ಅರ್ಜಿಯ ಸ್ಟೇಟಸ್ ಏನಾಗಿದೆ ಎನ್ನುವ ಪೂರ್ತಿ ಮಾಹಿತಿ ಇರುತ್ತದೆ. ಕರ್ನಾಟಕದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವ ಮಾಹಿತಿ ಇದಾಗಿದ್ದು ಈ ಕಾರಣಕ್ಕಾಗಿ ತಪ್ಪದೇ ಈ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರೊಡನೆ ಶೇರ್ ಮಾಡಿ.