ಈ ತಿಂಗಳು ಲೇಬರ್ ಕಾರ್ಡ್ ಇದ್ದವರಿಗೆ ಸರ್ಕಾರಿಂದ ಸಿಗಲಿದೆ 6000ರೂ. ಸಹಾಯಧನ ಪಡೆಯುವುದು ಹೇಗೆ ಅಂತ ನೋಡಿ.

 

WhatsApp Group Join Now
Telegram Group Join Now

ಕರ್ನಾಟಕ ಸರ್ಕಾರವು ಲೇಬರ್ ಕಾರ್ಡ್ ಹೊಂದಿರುವ ಮಹಿಳೆಯರಿಗೆ ಕಾರ್ಮಿಕ ಇಲಾಖೆ ಮಾಹಿತಿಯಿಂದ ಹೊಸ ಯೋಜನೆ ಯನ್ನು ಜಾರಿಗೆ ತಂದಿದೆ. ಈಗಾಗಲೇ ಲೇಬರ್ ಕಾರ್ಡ್ ಹೊಂದಿರುವ ಕಟ್ಟಡ ಕಾರ್ಮಿಕ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಪಾಲಿಗೆ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದು ಅನುಕೂಲ ಮಾಡಿಕೊಟ್ಟಿರುವ ಸರ್ಕಾರವು.

ಈ ಬಾರಿ ಬಾಣಂತಿ ಮಹಿಳೆಯರ ಮತ್ತು ಶಿಶುವಿನ ಆರೋಗ್ಯದ ಹಿತ ದೃಷ್ಟಿಯಿಂದ ಲೇಬರ್ ಕಾರ್ಡ್ ನೊಂದಿಗೆ ನೋಂದಣಿ ಆಗಿರುವ ಮಹಿಳೆಯರಿಗಾಗಿಯೇ ಮತ್ತೊಂದು ಯೋಜನೆಯನ್ನು ಜಾರಿಗೆ ತಂದಿದೆ. ತಾಯಿ ಮಗು ಸಹಾಯ ಹಸ್ತ ಎನ್ನುವ ಹೆಸರಿನೊಂದಿಗೆ ಈ ಯೋಜನೆ ಜಾರಿಗೆ ತರಲಾಗಿದೆ. ಈ ಯೋಜನೆಯ ಫಲಾನುಭವಿಗಳಾಗುವ ಮಹಿಳೆಯರಿಗೆ ವಾರ್ಷಿಕವಾಗಿ 6,000 ಸಹಾಯಧನ ಸಿಗಲಿದೆ.

ಕಟ್ಟಡ ಕಾರ್ಮಿಕ ಮತ್ತು ಇತರೆ ನಿರ್ಮಾಣ ಕಾರ್ಮಿಕ ಮಂಡಳಿಯಿಂದ ಕೊಡಲಾಗುವ ಲೇಬರ್ ಕಾರ್ಡ್ ಹೊಂದಿ, ನೋಂದಣಿ ಆಗಿರುವ ಮಹಿಳಾ ಫಲಾನುಭವಿಯು ಈ ತಾಯಿ ಮಗು ಸಹಾಯ ಹಸ್ತ ಯೋಜನೆಗೆ ಫಲಾನುಭವಿ ಆಗಬಹುದು. ಈ ಮಹಿಳಾ ಫಲಾನುಭವಿಯು ಮಗುವಿಗೆ ಜನ್ಮ ನೀಡಿದ ಸಮಯದಲ್ಲಿ ಮಗುವಿನ ಶಾಲಾ ಪೂರ್ವ ಶಿಕ್ಷಣ ಮತ್ತು ಪೌಷ್ಟಿಕತೆಗಾಗಿ ಮಗುವಿಗೆ ಮೂರು ವರ್ಷ ತುಂಬುವ ತನಕ ಮಂಡಳಿಯಿಂದ ವಾರ್ಷಿಕವಾಗಿ 6,000ಗಳ ಸಹಾಯಧನ ಸಿಗಲಿದೆ.

ಇಂತಹ ಒಂದು ಉತ್ತಮವಾದ ಯೋಜನೆಯನ್ನು ಮಗುವಿಗೆ ಜನ್ಮ ನೀಡಿದ ಕಾರ್ಮಿಕ ಮಹಿಳೆಯರಿಗಾಗಿ ಜಾರಿಗೆ ತಂದಿದ್ದರ ಬಗ್ಗೆ ಕಳೆದ ವರ್ಷ ಆಗಸ್ಟ್ 25,2022 ರಲ್ಲಿಯೇ ಇಲಾಖೆಯು ತನ್ನ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಅನೌನ್ಸ್ ಮಾಡಿ ಎಲ್ಲಾ ಮಹಿಳಾ ಕಾರ್ಮಿಕರುಗಳು ಕೂಡ ತಾಯಿ ಮಗು ಸಹಾಯ ಹಸ್ತ ಯೋಜನೆಯ ಪ್ರಯೋಜನ ಪಡೆದುಕೊಳ್ಳಿ, ಮಗು ಜನಿಸಿದ ಆರು ತಿಂಗಳ ಒಳಗೆ ಇದಕ್ಕಾಗಿ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿತ್ತು.

ಈ ಅಂಕಣದಲ್ಲೂ ಸಹ ಈ ತಾಯಿ ಮಗು ಸಹಾಯ ಹಸ್ತ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಅದಕ್ಕೆ ಏನೇನು ದಾಖಲೆಗಳನ್ನು ನೀಡಬೇಕು, ಆ ಪ್ರಕ್ರಿಯೆ ಹೇಗೆ ಇರುತ್ತದೆ ಎನ್ನುವುದರ ಬಗ್ಗೆ ಕೆಲ ಪ್ರಮುಖ ಅಂಶಗಳನ್ನು ತಿಳಿಸಿಕೊಡುವ ಪ್ರಯತ್ನ ಮಾಡಲಾಗಿದೆ.

ಅರ್ಜಿ ಸಲ್ಲಿಸಲು ಮಹಿಳೆಗೆ ಇರಬೇಕಾದ ಅರ್ಹತೆಗಳು :-
● ಮಹಿಳೆಯ ಲೇಬರ್ ಕಾರ್ಡ್ ಇರಬೇಕು ಮತ್ತು ಕಾರ್ಮಿಕರ ಇಲಾಖೆಯಲ್ಲಿ ನೋಂದಣಿ ಆಗಿರಬೇಕು.
● ಮೊದಲ ಎರಡು ಹೆರಿಗೆಯಲ್ಲಿ ಮಾತ್ರ ಈ ಯೋಜನೆಯ ಸಹಾಯ ಸಿಗಲಿದೆ
● ಅರ್ಜಿ ಸಲ್ಲಿಸಲು ಜನನ ನೋಂದಣಿ ಅಧಿಕಾರಿಂದ ಪಡೆದ ಮಗುವಿನ ಜನನ ಪ್ರಮಾಣ ಪತ್ರ ಕಡ್ಡಾಯ ದಾಖಲೆಯಾಗಿರುತ್ತದೆ.
● ಹೆರಿಗೆ ಆದ ನಂತರ ಆರು ತಿಂಗಳ ಒಳಗೆ ಮಂಡಳಿಯ ತಂತ್ರಾಂಶದ ಮೂಲಕ ಮಹಿಳೆಯರು ಅರ್ಜಿ ಹಾಕಿ ಈ ಯೋಜನೆಯ ಫಲಾನುಭವಿಗಳಾಗಬಹುದು.
● ವಾರ್ಷಿಕವಾಗಿ 6 ಸಾವಿರದಂತೆ ಅಂದರೆ ತಿಂಗಳಿಗೆ 500 ರೂ. ಮೂರು ವರ್ಷಗಳವರೆಗೆ ಮಹಿಳೆಯ ಖಾತೆಗೆ ಮಂಡಳಿಯ ವತಿಯಿಂದ ಸಹಾಯಧನವಾಗಿ ಜಮೆ ಆಗುತ್ತದೆ.
● ಮೂರು ವರ್ಷದವರೆಗೆ ಪ್ರತಿ ವರ್ಷ ಕೂಡ ಅರ್ಜಿ ಸಲ್ಲಿಸಬೇಕು

ಬೇಕಾದ ಪ್ರಮುಖ ದಾಖಲೆಗಳು :-
● ಮಂಡಳಿ ನೀಡಿರುವ ಗುರುತಿನ ಚೀಟಿ ಅಥವಾ ಸ್ಮಾರ್ಟ್ ಕಾರ್ಡ್ (ಧೃಡೀಕೃತ)
● ಮಗುವಿನ ಛಾಯಾಚಿತ್ರ
● ಉದ್ಯೋಗ ಧೃಡೀಕರಣ ಪತ್ರ
● ಬ್ಯಾಂಕ್ ಖಾತೆ ಪುರಾವೆ
● ಡಿಸ್ಚಾರ್ಜ್ ಸಮ್ಮರಿ
● ಆಧಾರ್ ಕಾರ್ಡ್
● ಮಗುವಿನ ಜನನ ಪ್ರಮಾಣ ಪತ್ರ
● ಮಗುವಿನ ಜೀವಿತ ಕುರಿತು ಅಂದರೆ ಮೊದಲನೇ ಅಥವಾ ಎರಡನೇ ಮಗು ಎನ್ನುವುದರ ಬಗ್ಗೆ ಅಫಿಡವಿಟ್ ಸಲ್ಲಿಸಬೇಕು

ಅನ್ವಯಿಸುವ ವಿಧಾನ :-
● ಅರ್ಜಿ ಸಲ್ಲಿಸಿದ ನಂತರ ನೋಂದಣಾಧಿಕಾರಿಗಳಾದ ಹಿರಿಯ ಅಧಿಕಾರಿಗಳು ಇದನ್ನು ಪರಿಶೀಲನೆ ನಡೆಸಿ ಅನುಮೋದನೆ ನೀಡಿದ ನಂತರ ನಿಮ್ಮ ಖಾತೆಗೆ ಹಣ ಜಮೆ ಆಗುತ್ತದೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now