“ಲೇಬರ್ ಕಾರ್ಡ್” ರಿನಿವಲ್ ಮಾಡುವ ವಿಧಾನ.! ಲೇಬರ್ ಕಾರ್ಡ್ ಇದ್ದವರು ತಪ್ಪದೆ ಈ ಕೆಲಸ ಮಾಡಿ ಇಲ್ಲದಿದ್ದರೆ ನಿಮ್ಮ ಕಾರ್ಡ್ ರದ್ದು ಆಗುತ್ತೆ ಎಚ್ಚರ.!

 

WhatsApp Group Join Now
Telegram Group Join Now

ಇಂದಿನ ಲೇಖನದಲ್ಲಿ ನಾವು ಕಾರ್ಮಿಕರ ಕಾರ್ಡ್ ಅಥವಾ ಲೇಬರ್ ಕಾರ್ಡ್ ರಿನಿವಲ್ ಮಾಡುವುದು ಹೇಗೆ? ‌ಎಂಬುದರ ಬಗ್ಗೆ ನೋಡೋಣ ಬನ್ನಿ… ನೀವು ಮೊದಲು ಏನಾದರೂ ತಪ್ಪುಗಳನ್ನು ಮಾಡಿದ್ದರೆ ಅದರ ತಿದ್ದುಪಡಿಯನ್ನು ಮಾಡುವುದು ಹೇಗೆ? ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ.

ಯಾವ ರೀತಿಯಾಗಿ ಲೇಬರ್ ಕಾರ್ಡ್ ನಲ್ಲಿ ತಪ್ಪುಗಳಾಗಿದ್ದರೆ ಅದರ ತಿದ್ದುಪಡಿ ಮಾಡಿ ಹೊಸ ಲೇಬರ್ ಕಾರ್ಡನ್ನು ಪಡೆಯುವುದು ಹೇಗೆ ಎಂಬುದನ್ನು ನೋಡುವುದಾದರೆ,
ಲೇಬರ್ ಅಥವಾ ಕಾರ್ಮಿಕರ ಕಾರ್ಡನ್ನು ನೀವು ಮಾಡಿಸುವಾಗ ಏನಾದರೂ ತಪ್ಪುಗಳನ್ನು ಮಾಡಿದ್ದರೆ ಅಥವಾ ನೀವು ತಪ್ಪು ಮಾಹಿತಿಯನ್ನು ನೀಡಿ ಲೇಬರ್ ಕಾರ್ಡ್ ಪಡೆದುಕೊಂಡಿದ್ದರೆ ಅದರ ತಿದ್ದುಪಡಿಗೆ ನಿಮಗೆ ಎರಡು ಆಯ್ಕೆಗಳನ್ನು ನೀಡಲಾಗುತ್ತದೆ.

* ಮೊದಲನೇ ಆಯ್ಕೆ ಏನೆಂದರೆ ನೀವು ಪಡೆದುಕೊಂಡಂತಹ ಲೇಬರ್ ಕಾರ್ಡ್ ಗೆ ವ್ಯಾಲಿಡಿಟಿ ಅಥವಾ ಸೀಮಿತ ಅವಧಿ ಇರುತ್ತದೆ. ಈ ಸೀಮಿತ ಅವಧಿಯು ಒಂದು ವರ್ಷ ಆಗಿರಬಹುದು ಅಥವಾ ಮೂರು ವರ್ಷ ಆಗಿರಬಹುದು.
* ಒಂದು ವರ್ಷ ವ್ಯಾಲಿಡಿಟಿ ಹೊಂದಿದ ಲೇಬರ್ ಕಾರ್ಡುಗಳನ್ನು ಅದರ ಅವಧಿ ಮುಗಿದ ನಂತರ ರಿನಿವಲ್ (renewal) ಮಾಡಿಸಿಕೊಳ್ಳಬಹುದು.
* ಏನಾದರೂ ನಿಮ್ಮ ಲೇಬರ್ ಕಾರ್ಡ್ ನ ವ್ಯಾಲಿಡಿಟಿ ಮೂರು ವರ್ಷದ್ದಾಗಿದ್ದರೆ ಅದರ ತಿದ್ದುಪಡಿಗೆ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ.
* ನಕಲಿ ಲೇಬರ್ ಕಾರ್ಡಿಗೆ ಅರ್ಜಿಯನ್ನು ಸಲ್ಲಿಸಿ ನಿಮ್ಮ ತಪ್ಪುಗಳನ್ನು ತಿದ್ದುಪಡಿ ಮಾಡಬಹುದು.

ಈಗ ನಾವು ಆನ್ ಲೈನ್ ನಲ್ಲಿ ಲೇಬರ್ ಕಾರ್ಡ್ ತಿದ್ದುಪಡಿ ಮಾಡುವುದು ಹೇಗೆ ಮತ್ತು ಅದರ ಸಂಪೂರ್ಣ ಪ್ರಕ್ರಿಯೆಯನ್ನು ತಿಳಿದುಕೊಳ್ಳೋಣ.

* ಮೊದಲಿಗೆ ನೀವು ಸೇವಾ ಸಿಂಧು ಅಕೌಂಟ್ ಅನ್ನು ಹೊಂದಿರಬೇಕಾಗುತ್ತದೆ.
* ನೀವು ಸೇವಾ ಸಿಂದು ಪೋರ್ಟಲ್ ನಲ್ಲಿ ಲಾಗಿನ್ ಆದ ನಂತರ ಒಂದು ಮುಖಪುಟ ತೆರೆದುಕೊಳ್ಳುತ್ತದೆ. ಅದರಲ್ಲಿ ನಿಮಗೆ apply for services ಎಂಬ ಆಯ್ಕೆ ಕಾಣುತ್ತದೆ.
* ಅದರ ಮೇಲೆ ಕ್ಲಿಕ್ ಮಾಡಿ ಮುಂದುವರೆಯಬೇಕು.
* ನಂತರ ‘ಎಲ್ಲಾ ಸೇವೆಗಳನ್ನು ತೋರಿಸಿ’ (view all services) ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ ಮುಂದುವರೆದಾಗ ನಿಮಗೆ ಒಂದು ಸರ್ಚ್ ಬಾಕ್ಸ್ ಕಾಣುತ್ತದೆ.

* ಅದರಲ್ಲಿ ಲೇಬರ್ ಕಾರ್ಡ್ ಎಂದು ಸರ್ಚ್ ಮಾಡಿ ಸರ್ಚ್ ಮಾಡಿದಾಗ ನಿಮಗೆ ನಕಲಿ ಲೇಬರ್ ಕಾರ್ಡಿಗೆ ಅರ್ಜಿ ಸಲ್ಲಿಸಿ (application for duplicate labour card) ಎಂಬ ಆಯ್ಕೆ ಕಾಣುತ್ತದೆ.
* ಅದರ ಮೇಲೆ ಕ್ಲಿಕ್ ಮಾಡಿದಾಗ ಅರ್ಜಿಯ ನಮೂನೆ ತೆಗೆದುಕೊಳ್ಳುತ್ತದೆ. ಅಲ್ಲಿ ಕೇಳಿದಂತಹ ಮಾಹಿತಿಯ ವಿವರಗಳನ್ನು ತುಂಬಬೇಕಾಗುತ್ತದೆ. ನೀವು ಅಲ್ಲಿ ತಿದ್ದುಪಡಿ ಮಾಡಬೇಕೆಂದುಕೊಳ್ಳುವ ಸರಿಯಾದ ಮಾಹಿತಿಯನ್ನು ನೀಡಬೇಕು.
* ಪ್ರತೀ ತಿದ್ದುಪಡಿಗೆ ನಿಮಗೆ ಹತ್ತು ರೂಪಾಯಿಗಳ ಶುಲ್ಕವನ್ನು ವಿಧಿಸಲಾಗುತ್ತದೆ.
* ಎಲ್ಲಾ ಸರಿಯಾದ ಮಾಹಿತಿಯನ್ನು ತುಂಬಿದ ನಂತರ ಸಬ್ಮಿಟ್ ನೀಡಬೇಕಾಗುತ್ತದೆ. ಅದರಲ್ಲಿ ಕೆಲವು ದಾಖಲೆಗಳನ್ನು ಸಹ ಅಪ್ಲೋಡ್ ಮಾಡಬೇಕಾಗುತ್ತದೆ.

ಅಗತ್ಯ ದಾಖಲೆಗಳು
• ಆಧಾರ್ ಕಾರ್ಡ್
• ರೇಷನ್ ಕಾರ್ಡ್
• ಲೇಬರ್ ಕಾರ್ಡ್
• ಇನ್ನಿತರ ದಾಖಲೆಗಳು.
* ನೀವು ಸಬ್ಮಿಟ್ ಮಾಡಿದ ಕೆಲವು ದಿನಗಳ ನಂತರ ನೀವು ಈ ಸೇವಾ ಸಿಂಧು ಪೋರ್ಟಲ್ ಗೆ ಬಂದು ಹೊಸ ಲೇಬರ್ ಕಾರ್ಡನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.

ನಿಮಗೆ ಲೇಬರ್ ಕಾರ್ಡ್ ತಿದ್ದುಪಡಿ ಮಾಡಲು ಕೇವಲ ಈ ಎರಡು ಆಯ್ಕೆಗಳನ್ನು ಮಾತ್ರ ನೀಡಲಾಗುತ್ತದೆ. ಲೇಬರ್ ಕಾರ್ಡ್ ಹೊಂದಿದವರು ಅಥವಾ ಲೇಬರ್ ಕಾರ್ಡ್ ತಿದ್ದುಪಡಿ ಮಾಡಬೇಕೆಂದುಕೊಳ್ಳುವರು ಈ ಬಹುಮುಖ್ಯ ಮಾಹಿತಿಯ ಸದುಪಯೋಗವನ್ನು ಪಡೆದುಕೊಂಡು ತಮ್ಮ ತಪ್ಪಾದ ಮಾಹಿತಿಯ ತಿದ್ದುಪಡಿಯನ್ನು ಮಾಡಿ ಹೊಸ ಲೇಬರ್ ಕಾರ್ಡನ್ನು ಪಡೆದುಕೊಳ್ಳಬಹುದು.

ಲೇಬರ್ ಕಾರ್ಡ್ ಎಂದರೇನು?
ಅಸಂಘಟಿತ ವಲಯದಲ್ಲಿ ಗೃಹ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಹಾಲು ಉತ್ಪಾದಕರು, ಬಡಗಿಗಳು, ಪೇಂಟರ್‌ಗಳು, ಪ್ಲಂಬರ್‌ಗಳು ಇತ್ಯಾದಿಯಾಗಿ ಕೆಲಸ ಮಾಡುವವರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರ್ಮಿಕ ಕಾರ್ಡ್ / ಇ-ಶ್ರಮ್ ಕಾರ್ಡ್ / ಶ್ರಮಿಕ್ ಕಾರ್ಡ್ ಅನ್ನು ಪರಿಚಯಿಸಿವೆ. ಪಟ್ಟಿ ಮಾಡಲಾದ ವೃತ್ತಿಗಳಲ್ಲಿ ತೊಡಗಿರುವ ವ್ಯಕ್ತಿಗಳು ಯುನಿವರ್ಸಲ್ ಅಕೌಂಟ್ ನಂಬರ್ (UAN) ಪಡೆಯಲು ತಮ್ಮನ್ನು ನೋಂದಾಯಿಸಿಕೊಳ್ಳಬೇಕು. ಹಾಗಾದರೆ ಶ್ರಮಿಕ್ ಕಾರ್ಡ್‌ನಿಂದ ಏನು ಪ್ರಯೋಜನ? ಕಾರ್ಮಿಕ ಕಾರ್ಡ್ ಪ್ರಯೋಜನಗಳು ಸರ್ಕಾರವು ವಿವಿಧ ಉದ್ಯೋಗ ಮತ್ತು ಸಮಾಜ ಕಲ್ಯಾಣ ಯೋಜನೆಗಳ ಮೂಲಕ ಅಸಂಘಟಿತ ವಲಯವನ್ನು ತಲುಪಲು ಅನುವು ಮಾಡಿಕೊಡುತ್ತದೆ. ಆ ರೀತಿಯಾಗಿ, ಕಾರ್ಮಿಕ ಕಾರ್ಡ್‌ನ ಪ್ರಯೋಜನಗಳು ಹಲವಾರು ಉದ್ಯಮ/ಯೋಜನೆಯ ವರ್ಗವನ್ನು ಆಧರಿಸಿವೆ.

ಭಾರತದಲ್ಲಿ ಲೇಬರ್ ಕಾರ್ಡ್‌ಗೆ ಯಾರು ಅರ್ಹರು?
ಅಧಿಕಾರಿಗಳು ಈ ಕೆಳಗಿನಂತೆ ಕಾರ್ಮಿಕ ಕಾರ್ಡ್‌ನ ಪ್ರಯೋಜನಗಳಿಗೆ ಅರ್ಹರಾಗಿರುವ ನಾಗರಿಕರ ವರ್ಗವನ್ನು ನಿರ್ದಿಷ್ಟಪಡಿಸಿದ್ದಾರೆ.
* ವಯಸ್ಸು 16-59 ವರ್ಷಗಳು.
* ಆದಾಯ ತೆರಿಗೆ ಪಾವತಿದಾರರಾಗಿರಬಾರದು.
* EPFO (ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ) ಅಥವಾ ESIC (ನೌಕರರ ರಾಜ್ಯ ವಿಮಾ ನಿಗಮ) ಫಲಾನುಭವಿಯಾಗಿರಬಾರದು

ಲೇಬರ್ ಕಾರ್ಡ್‌ನ ಪ್ರಯೋಜನಗಳೇನು?
ಕಾರ್ಮಿಕ ಕಾರ್ಡ್ ಪ್ರಯೋಜನಗಳ ಕಡೆಗೆ ಜಿಗಿಯುವ ಮೊದಲು, ಅಂತಹ ಆಡಳಿತಾತ್ಮಕ ಕಾರ್ಯಗಳ ಉದ್ದೇಶವನ್ನು ತಿಳಿದುಕೊಳ್ಳುವುದು ಒಳ್ಳೆಯದು. ಭಾರತದಲ್ಲಿ ಲೇಬರ್ ಕಾರ್ಡ್/ಶ್ರಾಮಿಕ್ ಕಾರ್ಡ್ ಅನ್ನು ಪರಿಚಯಿಸುವ ಹಿಂದಿನ ಗುರಿಗಳನ್ನು ಕೆಳಗೆ ನೀಡಲಾಗಿದೆ:

* ಕಾರ್ಮಿಕ ಯೋಜನೆಗಳ ಮಾಹಿತಿಗಾಗಿ ಅಸಂಘಟಿತ ವಲಯದ ಡೇಟಾಬೇಸ್ ತಯಾರಿಸಿ
* ಅಸಂಘಟಿತ ಕಾರ್ಮಿಕ ವರ್ಗಕ್ಕೆ ಉದ್ಯೋಗಾವಕಾಶಗಳು
* PMSBY ಯೋಜನೆಯಡಿ (ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ) ಮೊದಲ ವರ್ಷಕ್ಕೆ ಉಚಿತ ದಾಖಲಾತಿ
* ಸಾಂಕ್ರಾಮಿಕ (ಲಾಕ್‌ಡೌನ್‌ನಲ್ಲಿ ಕಾರ್ಮಿಕ ಕಾರ್ಡ್ ಪ್ರಯೋಜನಗಳು) ಮುಂತಾದ ಅಭೂತಪೂರ್ವ ಅನಿಶ್ಚಯತೆಗಳಲ್ಲಿ UAN ಮೂಲಕ ನೇರ ಪ್ರಯೋಜನಗಳು.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now