ಲೇಬಲ್ ಕಾರ್ಡ್ ಇದ್ದವರಿಗೆ ಶುಭ ಸುದ್ದಿ ನಿಮ್ಮ ಮಕ್ಕಳಿಗೆ ಸಿಗಲಿದೆ ಸ್ಕಾಲರ್ ಶಿಪ್ ಈಗಲೇ ಅರ್ಜಿ ಸಲ್ಲಿಸಿ.

 

WhatsApp Group Join Now
Telegram Group Join Now

ಇಷ್ಟು ದಿನ ಇಂಟರ್ನೆಟ್ ಅಲ್ಲಿ ಅನೇಕ ಜನರು ಅಪ್ಡೇಟ್ ಗಾಗಿ ದಿನ ಚೆಕ್ ಮಾಡುತ್ತಿದ್ದಂತಹ ಸಂತಸ ಸುದ್ದಿ ಎಂದು ಹೊರ ಬಿದ್ದಿದೆ. ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕ ಮತ್ತು ಇತರೆ ನಿರ್ಮಾಣ ಮಂಡಳಿಯಿಂದ ಇಂತಹ ಸಿಹಿ ಸುದ್ದಿಯ ಅಪ್ಡೇಟ್ ಹೊರಬಿದ್ದಿದ್ದು, ಎಲ್ಲರೂ ಈ ಬಗ್ಗೆ ದಿಲ್ ಖುಷ್ ಆಗಿದ್ದಾರೆ. ಅದೇನೆಂದರೆ ಲೇಬರ್ ಹೊಂದಿರುವವರ ಮಕ್ಕಳಿಗೆ ಸ್ಕಾಲರ್ಶಿಪ್ ಅಪ್ಲೈ ಮಾಡಲು ಲಿಂಕ್ ಓಪನ್ ಆಗಿದೆ.

ಕೆಲವು ದಿನಗಳಿಂದ ಅನೇಕ ಮಂದಿ ಇದರ ಫಲಾನುಭವಿಗಳ ಆಗಲು ಕಾಯುತ್ತಿದ್ದರೂ ಹಾಗೂ ಇದರ ಕುರಿತು ಮಾಹಿತಿ ಯಾವಾಗ ಹೊರ ಬೀಳುತ್ತದೆ ಎಂದು ಚೆಕ್ ಮಾಡುತ್ತಲೇ ಇದ್ದರು. ಈಗ ಸಂಬಂಧಪಟ್ಟ ಸಚಿವರು ಹಾಗೂ ಅಧಿಕಾರಿಗಳು ಸಭೆ ನಡೆಸಿರುವ ಪುರಾವೆಯೊಂದಿಗೆ ಮಾಹಿತಿ ಹೊರ ಬಿದ್ದದೆ. ಈಗಾಗಲೇ ಆನ್ಲೈನ್ ಅಲ್ಲಿ ಅರ್ಜಿ ಹಾಕಲು ಅವಕಾಶ ಮಾಡಲಾಗಿದೆ, ಇನ್ನು ಕೆಲವೇ ದಿನಗಳಲ್ಲಿ ಅಧಿಕೃತವಾಗಿ ಅದರ ಬಗ್ಗೆ ಸುತ್ತೋಲೆಯನ್ನು ಹೊರಡಿಸಲಿದ್ದಾರೆ.

ಯಾರು ಇದರ ಉಪಯೋಗ ಪಡೆಯಬಹುದು ಎಂದರೆ ಲೇಬರ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬ ಕಾರ್ಮಿಕನ ಇಬ್ಬರು ಮಕ್ಕಳುಗಳು ಈ ಯೋಜನೆಯಿಂದ ಅನುಕೂಲ ಪಡೆಯಬಹುದು. ಒಂದನೇ ತರಗತಿಯಿಂದ ಪದವಿ ,ಸ್ನಾತಕೋತ್ತರ ಪದವಿ, ಇಂಜಿನಿಯರಿಂಗ್, ಮೆಡಿಕಲ್, ಪಿ ಎಚ್ ಡಿ ಎಲ್ ಎಲ್ ಬಿ ಈ ರೀತಿ ಯಾವುದೇ ಶಿಕ್ಷಣ ಕೋರ್ಸ್ ಆಯ್ಕೆ ಮಾಡಿಕೊಂಡು ಅವರು ಈ ಶೈಕ್ಷಣಿಕ ವರ್ಷದಲ್ಲಿ ಅಭ್ಯಾಸ ಮಾಡುತ್ತಿದ್ದರೆ ಅವರು ಈ ಸ್ಕಾಲರ್ಶಿಪ್ ಫಲಾನುಭವಿಗಳಾಗಬಹುದು.

ಅದಕ್ಕಾಗಿ ಅಗತ್ಯ ದಾಖಲೆಗಳ ಜೊತೆ ಈ ಕೂಡಲೇ ಅಧಿಕೃತ ವೆಬ್ಸೈಟ್ ಗೆ ಹೋಗಿ ಅಪ್ಲೈ ಮಾಡಿ ಅವರು ತೆಗೆದುಕೊಂಡಿರುವ ಕೋರ್ಸ್ಗೆ ತಕ್ಕ ಹಾಗೆ ಅವರಿಗೆ ಶೈಕ್ಷಣಿಕ ಸಹಾಯಧನ ಪಡೆಯಬಹುದು. ಇನ್ನು ಇದಕ್ಕೆ ಬೇಕಾಗಿರುವ ಅಗತ್ಯ ದಾಖಲೆಗಳು ಏನು ಎಂದರೆ ಸ್ಕಾಲರ್ ಶಿಪ್ ಅಪ್ಲೈ ಮಾಡುವವರ ತಂದೆ ಅಥವಾ ತಾಯಿಯ ಹೆಸರಿನಲ್ಲಿ ಲೇಬರ್ ಕಾರ್ಡ್ ಹೊಂದಿರಬೇಕು, ಅದು ನೋಂದಣಿ ಆಗಿರಬೇಕು.

ಇದರ ಜೊತೆಗೆ ವಿದ್ಯಾರ್ಥಿಯ ಆಧಾರ್ ಕಾರ್ಡು ಮತ್ತು ಕಾಲೇಜಿನಲ್ಲಿ ಕೊಡುವ ಗುರುತಿನ ಚೀಟಿ ಮತ್ತು ಅವರು ಈ ವರ್ಷ ಕಟ್ಟಿರುವ ಶಿಕ್ಷಣದ ಶುಲ್ಕದ ರಶೀತಿ ಮತ್ತು ತಂದೆ ತಾಯಿಯ ಆಧಾರ್ ಕಾರ್ಡ್ ಇದಿಷ್ಟು ಮಾಹಿತಿಗಳನ್ನು ತೆಗೆದುಕೊಂಡು ಅಧಿಕೃತ ವೆಬ್ಸೈಟ್ಗೆ ಭೇಟಿ ಕೊಟ್ಟು ಎಲ್ಲ ಮಾಹಿತಿಗಳನ್ನು ಅಪ್ಲೋಡ್ ಮಾಡಿ ಅಪ್ಲೈ ಮಾಡಬಹುದು. ಹತ್ತಿರದ ಸಿ ಎಸ್ ಸಿ ಸೆಂಟರ್ ಅಥವಾ ಬೆಂಗಳೂರು ಒನ್ ಮುಂತಾದ ಕೇಂದ್ರಗಳಲ್ಲಿ ಈ ಕಟ್ಟಡ ಕಾರ್ಮಿಕ ಮತ್ತು ಇತರೆ ನಿರ್ಮಾಣ ಮಂಡಳಿ ಇಂದ ಸಿಗುವ ಧನ ಸಹಾಯಕ್ಕಾಗಿ ಅರ್ಜಿ ಹಾಕಬಹುದು.

ಇದುವರೆಗೂ ಕೂಡ ಲೇಬರ್ ಕಾರ್ಡ್ ಇದ್ದವರಿಗೆ ಬಸ್ ಪಾಸ್ ಉಚಿತ ಮತ್ತು ಲಾಕ್ ಡೌನ್ ಅವಧಿಯಲ್ಲಿ ಸಹಾಯಧನ ಮತ್ತು ಅವರ ಮಕ್ಕಳ ಮದುವೆ ಸಮಯಕ್ಕೆ ಉಚಿತವಾಗಿ 50,000 ವರೆಗೆ ಸಹಾಯಧನ ಇನ್ನು ಮುಂತಾದ ಅನುಕೂಲತೆಗಳು ಸಿಗುತ್ತಿದ್ದವು. ಈಗ ಅವರ ಮಕ್ಕಳ ಅನುಕೂಲತೆಗಾಗಿ ಸ್ಕಾಲರ್ಶಿಪ್ ಅನ್ನು ಸಹ ನೀಡಲಾಗುತ್ತಿದೆ. ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗೂ ಕುಟುಂಬಸ್ಥರ ಜೊತೆಗೆ ಹಂಚಿಕೊಂಡು ಇತರರಿಗೂ ಶೇರ್ ಮಾಡಿ ಇನ್ನಷ್ಟು ಜನರಿಗೆ ಇದರಿಂದ ಉಪಯೋಗ ಆಗಲು ಇದನ್ನು ತಲುಪಿಸಿ.

 

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now