ಹಣ ಗಳಿಸುವುದು ಮಾತ್ರವಲ್ಲ ಹಣವನ್ನು ಹೂಡಿಕೆ ಮಾಡುವುದು ಹಾಗೂ ಹಣವನ್ನು ಉಳಿಸುವ ಕಲೆ ಕೂಡ ಮುಖ್ಯ. ಹಣವನ್ನು ಹೂಡಿಕೆ ಮಾಡುವಾಗ ಆರಿಸಿಕೊಳ್ಳುವ ಮಾರ್ಗಗಳಲ್ಲಿ ಹೂಡಿಕೆ ಮಾಡಿದ ಹಣಕ್ಕೆ ಲಾಭದಾಯಕವಾದ ಜೊತೆ ಭದ್ರತೆ ಕೂಡ ಇರಬೇಕು. ಇಂತಹ ಅನುಕೂಲವನ್ನು ಎಲ್ಲರೂ ಬಯಸುತ್ತಾರೆ. ಆ ಪೈಕಿ ಹೆಚ್ಚಿನ ಜನರು ಮೊರೆ ಹೋಗುವುದು ಸರ್ಕಾರದ ಅಡಿಯಲ್ಲಿ ಬರುವ ಅಂಚೆ ಕಚೇರಿ ಯೋಜನೆಗಳಿಗೆ, ಇನ್ನು ಕೆಲವರು ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಹೂಡಿಕೆ ಮಾಡಿದರೆ ಹಣ ಸುಭದ್ರ ಎಂದು ನಂಬಿಕೆ ಇಟ್ಟು ನಿಶ್ಚಿತ ಠೇವಣಿಗಳಲ್ಲಿ ಹಣ ಇಟ್ಟು ಲಾಭ ಕಂಡುಕೊಳ್ಳಲು ನೋಡುತ್ತಾರೆ.
ಈಗಾಗಲೇ ಆಕರ್ಷಿತ ಯೋಜನೆಗಳ ಮೂಲಕ ಇವುಗಳು ಸಹಾ ಗ್ರಾಹಕರನ್ನು ಸೆಳೆದಿವೆ. ಸರ್ಕಾರಿ ವಲಯದ ಸಂಸ್ಥೆಯಾದ LIC ಕೂಡ ಈಗ ಗ್ರಾಹಕರಿಗೆ ಕೆಲವೊಂದು ಯೋಜನೆಗಳ ಮೂಲಕ ಹೂಡಿಕೆಗೆ ಹೆಚ್ಚಿನ ಲಾಭವನ್ನು ಕೊಡುತ್ತಿವೆ. ಆದ್ದರಿಂದ LIC ಯೋಜನೆಗಳ ಖರೀದಿಗೂ ಜನ ಮುಗಿ ಬೀಳುತ್ತಿದ್ದಾರೆ. ಈಗ LIC ಇನ್ನೊಂದು ಹೊಸ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ನೀವು ವರ್ಷಾಸನ ರೂಪದಲ್ಲಿ ನೀವು ಹೂಡಿಕೆ ಮಾಡಿದ ಹಣಕ್ಕೆ ಆದಾಯವನ್ನು ಮಾಸಿಕವಾಗಿ ಅಥವಾ ವಾರ್ಷಿಕವಾಗಿ ಪಡೆಯಬಹುದು.
ಈ ಯೋಜನೆ ಹೆಸರು LIC ಜೀವನ ಶಾಂತಿ ಯೋಜನೆ. LIC ಜೀವನ ಶಾಂತಿ ಯೋಜನೆ ಬಗ್ಗೆ ಹೇಳುವುದಾದರೆ ಈ ಯೋಜನೆಯಲ್ಲಿ ನೀವು ಒಂದು ನಿಶ್ಚಿತ ಮೊತ್ತದ ಹಣವನ್ನು ಒಂದು ಕಾಲದ ಘಟ್ಟದವರೆಗೆ ಠೇವಣಿ ಇರಬೇಕು. ನಿಮ್ಮ ಆಯ್ಕೆ ಅನುಸಾರವಾಗಿ ಒಂದು ವರ್ಷದಿಂದ 12 ವರ್ಷ ಅವಧಿಯವರೆಗೂ ಕೂಡ ನೀವು ಹಣವನ್ನು ಠೇವಣಿ ಇಡಬಹುದು. ಆ ಹಣಕ್ಕೆ ನಿಮಗೆ ಮಾಸಿಕವಾಗಿ ಬಡ್ಡಿ ರೂಪದ ಆದಾಯ ಪ್ರತಿ ತಿಂಗಳ ನಿಮ್ಮ ಖಾತೆಗೆ ಬರುತ್ತಿರುತ್ತದೆ.
LIC ಜೀವನ ಶಾಂತಿ ಯೋಜನೆಯಲ್ಲಿ ಯೋಜನೆ ಖರೀದಿಸುವಾಗಲೇ ನಿರ್ಧಾರ ಮಾಡಿ ನಿಮಗೆ ಅನುಕೂಲಕರವಾದ ಮೆಚುರಿಟಿ ಟೈಮ್ ಅನ್ನು ಆರಿಸಿಕೊಂಡರೆ ಅದನ್ನು ಮತ್ತೆ ಬದಲಾಯಿಸುವ ಅವಕಾಶ ಇರುವುದಿಲ್ಲ. ನೀವು ಎಷ್ಟು ಹಣ ಹೂಡಿಕೆ ಮಾಡುತ್ತೀರೋ ಆ ಹಣದ ಮೇಲೆ ವರ್ಷಾಸನ ನಿಗದಿ ಆಗುತ್ತದೆ. ನೀವು ಇದನ್ನು ಮೂರು ತಿಂಗಳಿಗೆ, ಆರು ತಿಂಗಳಿಗೆ ಅಥವಾ ವರ್ಷದವರೆಗೂ ಕೂಡ ತೆಗೆದುಕೊಳ್ಳಬಹುದು. ಕೆಲವರು ವಾರ್ಷಿಕವಾಗಿ ಈ ಹಣವನ್ನು ತೆಗೆದುಕೊಳ್ಳಲು ಬಯಸುತ್ತಾರೆ.
ಉದಾಹರಣೆ ಜೊತೆಗೆ ಹೇಳುವುದಾದರೆ ಒಬ್ಬ ವ್ಯಕ್ತಿ 25 ಲಕ್ಷ ರೂಗಳನ್ನು ಈ LIC ಜೀವನ ಶಾಂತಿ ಯೋಜನೆಯಲ್ಲಿ ಒಮ್ಮೆ ಠೇವಣಿ ಇಟ್ಟರೆ ವಾರ್ಷಿಕ ವರ್ಷಾಸನವಾಗಿ 3 ಲಕ್ಷದ ಪಡೆಯಲಿದ್ದಾರೆ, ಇದನ್ನು ಮಾಸಿಕವಾಗಿ ಪಡೆಯಲು ಬಯಸಿದರೆ 25,000ಗಳನ್ನು ಪ್ರತಿ ತಿಂಗಳು ತಾವು ಆರಿಸಿಕೊಂಡ ಅವಧಿಯವರೆಗೂ ಪಡೆಯಲಿದ್ದಾರೆ. ಕನಿಷ್ಠ 1.5ಲಕ್ಷದಿಂದ ಗರಿಷ್ಠ ಎಷ್ಟು ಹಣವನ್ನು ಬೇಕಾದರೂ ಈ ಯೋಜನೆಯಲ್ಲಿ ಠೇವಣಿ ಇಡಬಹುದು.
ಈ ಯೋಜನೆಯನ್ನು 30 ವರ್ಷದಿಂದ 70 ವರ್ಷದವರೆಗೆ ಯಾರು ಬೇಕಾದರೂ ಖರೀದಿಸಬಹುದು. ಯಾವುದೇ ವೈದ್ಯಕೀಯ ಪರೀಕ್ಷೆ ಅಥವಾ ವೈದ್ಯಕೀಯ ದೃಢೀಕರಣ ಪತ್ರಗಳ ಅವಶ್ಯಕತೆಯೂ ಇರುವುದಿಲ್ಲ. ಒಂದು ವೇಳೆ ಈ ಯೋಜನೆ ಖರೀದಿ ಮಾಡಿದ ಗ್ರಾಹಕರು ಮೃತ ಪಟ್ಟಲ್ಲಿ ಅವರ ನಾಮಿನಿಗೆ ಕಾನೂನು ಪ್ರಕಾರವಾಗಿ ಹಣ ಹಿಂದಿರುಗಿಸಲಾಗುವುದು. ಇಂತಹ ಉಪಯುಕ್ತ ಯೋಜನೆಯ ಪ್ರಯೋಜನವನ್ನು ನೀವು ಪಡೆದುಕೊಳ್ಳಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗೂ ಕುಟುಂಬದ ಜೊತೆಗೂ ಕೂಡ ಹಂಚಿಕೊಳ್ಳಿ.