LIC ಜೀವನ್ ಅಕ್ಷಯ್ ಮತ್ತು LIC ಜೀವನ್ ಶಾಂತಿ ಯೋಜನೆ.! ಒಂದು ಸಲ ಹಣ ಡೆಪಾಸಿಟ್ ಮಾಡಿದರೆ ಸಾಕು ವರ್ಷ ಪೂರ್ತಿ ಪಡೆಯಬಹುದು ರೂ.26,000

 

WhatsApp Group Join Now
Telegram Group Join Now

LIC (Life Insurance Corporation) ಕಂಪನಿಯು ಜೀವ ವಿಮೆಗಳ (Insurances) ಜೊತೆಗೆ ಅನೇಕ ಉಳಿತಾಯ ಯೋಜನೆಗಳನ್ನು ಕೂಡ ಪರಿಚಯಿಸಿದೆ(Small Saving Schemes). ಈ ಯೋಜನೆಗಳಲ್ಲಿ ಹೂಡಿಕೆ ಮಾಡುವ ಮೂಲಕ ಹೆಚ್ಚಿನ ಲಾಭಗಳನ್ನು ಪಡೆಯಬಹುದು. ಈ ರೀತಿಯ LIC ಹಲವು ಯೋಜನೆಗಳಲ್ಲಿ ಪ್ರಮುಖವಾಗಿ ಈ ಅಂಕಣದಲ್ಲಿ LIC ಅಕ್ಷಯ ಯೋಜನೆ ಮತ್ತು LIC New ಜೀವನ ಶಾಂತಿ ಯೋಜನೆ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸುತ್ತಿದ್ದೇವೆ…

* ಈ ಎರಡು ಯೋಜನೆಗಳು ಕೂಡ One time Deposite ಯೋಜನೆಗಳಾಗಿವೆ.
* ಈ ಎರಡೂ ಯೋಜನೆಗಳೊಂದಿಗೆ Life time Pension ಅಂದರೆ ಜೀವನ ಪರ್ಯಂತ ಪಿಂಚಣಿ ಮತ್ತು ನಾಮಿನಿ (Nominee) ಫೆಸಿಲಿಟಿ ಲಭ್ಯವಿದ್ದು ಪಿಂಚಣಿದಾರನು ಮೃ’ತ ಪಟ್ಟರೆ ಹೂಡಿಕೆ ಮಾಡಿದ ಪೂರ್ತಿ ಹಣವು ಗ್ರಾಹಕನು ಸೂಚಿಸಿದ ನಾಮಿನಿಗೆ ಹೋಗುತ್ತದೆ.
* 30 ವರ್ಷ ಮೇಲ್ಪಟ್ಟವರು ಮಾತ್ರ ಈ ಯೋಜನೆಗಳನ್ನು ಖರೀದಿಸಬಹುದು.

* ಗರಿಷ್ಠ ವಯೋಮಿತಿಯು LIC ಜೀವನ್ ಶಾಂತಿ ಯೋಜನೆ ಖರೀದಿಸುವವರಿಗೆ 79 ವರ್ಷಗಳು, LIC Jeevan Akshyay -7 ಯೋಜನೆ ಖರೀದಿಸುವವರಿಗೆ 80 ವರ್ಷಗಳು ಇದರಲ್ಲಿಯೂ LIC Jeevan Akshyay-7 (F&J) ಆಪ್ಷನ್ ಸೆಲೆಕ್ಟ್ ಮಾಡಿದರೆ ನೂರು ವರ್ಷ ವಯಸ್ಸಿನವರು ಕೂಡ ಈ ಯೋಜನೆ ಮಾಡಿಸಬಹುದು.

* LIC ಜೀವನ್ ಶಾಂತಿ ಯೋಜನೆಯಲ್ಲಿ ಕನಿಷ್ಠ 12 ವರ್ಷಗಳ deffered period ಇರುತ್ತದೆ ಇದು ಮುಗಿದ ಬಳಿಕ ಪೆನ್ಷನ್ ಶುರು ಆಗುತ್ತದೆ. LIC ಜೀವನ್ ಅಕ್ಷಯ್ -7 ಯೋಜನೆಯಲ್ಲಿ ನೀವು ಯೋಜನೆ ಖರೀದಿಸುವ ಸಮಯದಿಂದಲೇ ಪೆನ್ಷನ್ ಶುರು ಆಗುತ್ತದೆ.

* ಎರಡು ಯೋಜನೆಗಳಿಗೂ Joint Life ಆಪ್ಷನ್ ಗಳಿದ್ದು ನೀವು ನಿಮ್ಮ ಪತ್ನಿ ಅಥವಾ ಮಕ್ಕಳು ಯಾರನ್ನಾದರೂ ಒಬ್ಬರನ್ನು ಸೆಲೆಕ್ಟ್ ಮಾಡಬಹುದು. ನಿಮ್ಮ ನಂತರ ನಿಮಗೆ ಸಿಗುತ್ತಿದ್ದ ಫೆಸಿಲಿಟಿಗಳು ಅವರಿಗೆ ಮುಂದುವರೆಯುತ್ತದೆ ಅವರ ಮರಣದ ನಂತರ ನೀವು ಸೂಚಿಸುವ ನಾಮಿನಿಗೆ ಹಣ ಹೋಗುತ್ತದೆ.

* ಈ ಎರಡು ಯೋಜನೆಗಳಲ್ಲೂ ಯೋಜನೆ ಖರೀದಿಸಿ ಮೂರು ತಿಂಗಳಾದ ನಂತರ ನಿಮ್ಮ ಹೂಡಿಕೆ ಆಧಾರದ ಮೇಲೆ ಸಾಲ ಕೂಡ ಪಡೆಯಬಹುದು
* ನೀವೇನಾದರೂ ಯೋಜನೆಯನ್ನು ರದ್ದುಪಡಿಸಲು ಇಚ್ಛಿಸಿದರೆ ಯೋಜನೆ ಖರೀದಿಸಿದ ಮೂರು ತಿಂಗಳ ನಂತರ ಹಿಂತಿರುಗಿಸಬಹುದು (Surrender).

* ಉದಾಹರಣೆಯೊಂದಿಗೆ ಹೇಳುವುದಾದರೆ 40 ವರ್ಷದ ವ್ಯಕ್ತಿಯು ಈ ಯೋಜನೆ ಖರೀದಿಸಿದ್ದಾನೆ ಎಂದುಕೊಳ್ಳೋಣ, Single Life option ಆರಿಸಿಕೊಂಡಿದ್ದರೆ ಲಾಭದ ವಿಚಾರವನ್ನು ಲೆಕ್ಕ ಹಾಕುವುದಾದರೆ ಆ ಪಟ್ಟಿ ಹೀಗಿದೆ ನೋಡಿ.

1. 5ಲಕ್ಷ ಹೂಡಿಕೆಗೆ Jeevan Akshyay-7 ಯೋಜನೆಯಲ್ಲಿ ರೂ.26,225 ಮತ್ತು LIC Jeevan Shanthi ಯೋಜನೆಯಾದರೆ ರೂ.26,500 ವಾರ್ಷಿಕವಾಗಿ ಸಿಗುತ್ತದೆ.
* ಒಂದು ವೇಳೆ ಯೋಜನೆ ಖರೀದಿಸುವಾಗ Joint Life ಆಪ್ಷನ್ ಸೆಲೆಕ್ಟ್ ಮಾಡಿದರೆ ಇದೆ 5 ಲಕ್ಷ ಹೂಡಿಕೆಗೆ LIC Jeevan Akshyay-7 ಯೋಜನೆಯಾದರೆ ರೂ.26,165 LIC Jeevan Shanthi ಯೋಜನೆಯಾದರೆ ರೂ.26,600 ಸಿಗುತ್ತದೆ.

* ಮತ್ತೊಂದು ಮುಖ್ಯವಾದ ವಿಚಾರವೇನೆಂದರೆ LIC New Jeevan Shanthi ಯೋಜನೆಯಲ್ಲಿ 2 ಆಪ್ಷನ್ಗಳಿವೆ, LIC Jeevan Akshyay-7 ಯೋಜನೆಯಲ್ಲಿ 10 ಆಪ್ಷನ್ ಗಳಿವೆ. ಇದರಲ್ಲಿ ನೀವು ಆರಿಸುವ ಆಪ್ಷನ್ ಮೇಲೆ ನಿಮ್ಮ ಲಾಭ ನಿರ್ಧಾರ ಆಗುತ್ತದೆ ಹಾಗಾಗಿ ಖರೀದಿಸುವ ಮುನ್ನ ಎಲ್ಲಾ ಆಪ್ಷನ್ಗಳ ಬಗ್ಗೆ ಸರಿಯಾದ ಮಾಹಿತಿ ಪಡೆದುಕೊಂಡು ಸೆಲೆಕ್ಟ್ ಮಾಡಿ ಹೆಚ್ಚಿನ ವಿವರಕ್ಕಾಗಿ ಹತ್ತಿರದ LIC ಶಾಖೆಗೆ ಭೇಟಿ ಕೊಡಿ ಅಥವಾ LIC ಅಧಿಕೃತ ವೆಬ್ಸೈಟ್ನಲ್ಲಿ ಮಾಹಿತಿ ಪಡೆಯಿರಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now